ಮುಪ್ಪು ತಡೆಯಲು ಗೂಗಲ್‌ ಆಪಲ್‌ನಿಂದ ಹೊಸ ಕಂಪೆನಿ!

By Ashwath
|

ಮುಪ್ಪು ಆವರಿಸಿದರೆ ಸಾಕು ಒಂದೊಂದೆ ರೋಗಳು ದೇಹಕ್ಕೆ ಬರತೊಡಗುತ್ತವೆ.ಮುಪ್ಪು ಬಂದಾಗ ಕಿರಿಯರಿಗೆ ಹಿರಿಯರ ಆರೋಗ್ಯವನ್ನು ನೋಡಿಕೊಳ್ಳುವುದು ಹೇಗಪ್ಪಾ ಎನ್ನುವ ಸಮಸ್ಯೆ ಕಾಡಲಾರಂಭಿಸುತ್ತದೆ. ಒಟ್ಟಿನಲ್ಲಿ ವಿಶ್ವದಲ್ಲಿ ಏನೆಲ್ಲಾ ಸಂಶೋಧನೆಗಳು ನಡೆದರು ಮುಪ್ಪನ್ನು ತಡೆಯವುದು ಹೇಗೆ ಎನ್ನುವುದಕ್ಕೆ ಇದುವರೆಗೂ ಯಾರಿಂದಲೂ ಕಂಡು ಹಿಡಿಯಲು ಸಾಧ್ಯವಾಗಿಲ್ಲ.

ಸರ್ಚ್‌ ಇಂಜಿನ್‌ ದೊಡ್ಡಣ್ಣ ಗೂಗಲ್‌ನಲ್ಲಿ ಮುಪ್ಪನ್ನು ತಡೆಯುವುದು ಹೇಗೆ ಎಂದು ಪ್ರಶ್ನಿಸಿದರೆ ಅದರಲ್ಲೂಉತ್ತರ ದೊರೆಯಲಾರದು.ಆದರೆ ಇನ್ನು ಮುಂದೆ ಗೂಗಲ್‌ ಸರ್ಚ್‌ ಇಂಜಿನ್‌ಲ್ಲಿ ಈ ಪ್ರಶ್ನೆಗೆ ಉತ್ತರ ದೊರೆಯಬಹುದೇನೋ.? ಸ್ವತಃ ಗೂಗಲ್‌ ಈಗ ಈ ಮುಪ್ಪಿನ ಸಮಸ್ಯೆ ಪರಿಹಾರಕ್ಕಾಗಿ ಮುಂದಾಗಿದೆ. ವಿಶ್ವದ ಸ್ಮಾರ್ಟ್‌ಫೋನ್‌,ಟ್ಯಾಬ್ಲೆಟ್‌ ತಯಾರಕ ಕಂಪೆನಿ ಆಪಲ್‌ ಜೊತೆ ಗೂಗಲ್‌ ಈಗ ಕೈ ಜೋಡಿಸಿ ಸಮಾಜ ಸೇವೆಗಾಗಿ ಒಂದಾಗಿವೆ. ಟೆಕ್‌ ಕ್ಷೇತ್ರದ ನಂಬರ್‌ ಒನ್‌,ನಂಬರ್‌ ಎರಡು ಕಂಪೆನಿಗಳು ಮುಪ್ಪು ತಡೆಯಲು ಹೊಸ ಕಂಪೆನಿಯನ್ನು ಆರಂಭಿಸಿದ್ದು ಸದ್ಯದಲ್ಲಿ ಸಂಶೋಧನೆ ಆರಂಭವಾಗಲಿದೆ.

ಹೀಗಾಗಿ ಎಲ್ಲಿ ಆರಂಭವಾಗುತ್ತದೆ?ಯಾರು ಇದರ ಮುಖ್ಯಸ್ಥರು ಇದ್ದಕ್ಕಿದ್ದಂತೆ ಗೂಗಲ್‌ಗೆ ಈ ಸಮಸ್ಯೆ ಅರಿವಾಗಿದ್ದು ಯಾಕೆ?ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿ ನೀಡಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.ಈ ನಂತರ ಯೋಜನೆಗೆ ನಿಮ್ಮ ಅಭಿಪ್ರಾಯವನ್ನು ದಾಖಲಿಸಿ.

ಮುಪ್ಪು ತಡೆಯಲು ಗೂಗಲ್‌ ಆಪಲ್‌ನಿಂದ ಹೊಸ ಕಂಪೆನಿ!

ಮುಪ್ಪು ತಡೆಯಲು ಗೂಗಲ್‌ ಆಪಲ್‌ನಿಂದ ಹೊಸ ಕಂಪೆನಿ!

ಮುಪ್ಪು ತಡೆಯಲು ಗೂಗಲ್‌ ಮತ್ತು ಆಪಲ್‌ ಸೇರಿ‌ ಕ್ಯಾಲಿಕೋ(Calico) ಹೆಸರಿನ ಹೊಸ ಕಂಪೆನಿಯನ್ನು ಆರಂಭಿಸಲು ಮುಂದಾಗಿವೆ. ಮನುಷ್ಯನ ವಯಸ್ಸಿನಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳನ್ನು ತಡೆಯಲು ಈ ಕಂಪೆನಿ ಸಂಶೋಧನೆ ಆರಂಭಿಸಲಿದೆ.

ಮುಪ್ಪು ತಡೆಯಲು ಗೂಗಲ್‌ ಆಪಲ್‌ನಿಂದ ಹೊಸ ಕಂಪೆನಿ!

ಮುಪ್ಪು ತಡೆಯಲು ಗೂಗಲ್‌ ಆಪಲ್‌ನಿಂದ ಹೊಸ ಕಂಪೆನಿ!

ಮುಪ್ಪಿನಲ್ಲಿ ಎದುರಾಗುವ ಮಾನಸಿಕ,ಶಾರೀರಿಕ ತೊಂದರೆಗಳನ್ನು ನಿವಾರಿಸಲು ಮತ್ತು ಕ್ಯಾನ್ಸರ್‌ನಂತಹ ಮಾರಕ ರೋಗಗಳನ್ನು ನಿಯಂತ್ರಿಸಲು ಕಂಪನಿ ನೂತನ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಲಿದೆ.

ಮುಪ್ಪು ತಡೆಯಲು ಗೂಗಲ್‌ ಆಪಲ್‌ನಿಂದ ಹೊಸ ಕಂಪೆನಿ!

ಮುಪ್ಪು ತಡೆಯಲು ಗೂಗಲ್‌ ಆಪಲ್‌ನಿಂದ ಹೊಸ ಕಂಪೆನಿ!

ಆ್ಯಪಲ್‌ ಕಂಪನಿ ಹಾಗೂ ಗ್ರೀನ್‌ಟೆಕ್‌ ಕಂಪನಿಯ ಮುಖ್ಯಸ್ಥ ಆರ್ಟ್‌ ಲೆವಿನ್ಸನ್‌(Arthur Levinson) ಅವರು ಕ್ಯಾಲಿಕೋ ನೇತೃತ್ವ ವಹಿಸಲಿದ್ದಾರೆ. ಆದರೆ ಈ ಹೊಸ ಕಂಪೆನಿಗೆ ಮತ್ತು ಗೂಗಲ್‌ಗೆ ಯಾವುದೇ ಸಂಬಂಧವಿರುವುದಿಲ್ಲ ಎಂದು ಗೂಗಲ್‌ ಕಾರ್ಯನಿರ್ವಹಣಾಧಿಕಾರಿ ಲ್ಯಾರಿ ಪೇಜ್‌ ಗೂಗಲ್‌ಬ್ಲಾಗ್‌ನಲ್ಲಿ ಹೇಳಿದ್ದಾರೆ.

ಮುಪ್ಪು ತಡೆಯಲು ಗೂಗಲ್‌ ಆಪಲ್‌ನಿಂದ ಹೊಸ ಕಂಪೆನಿ!

ಮುಪ್ಪು ತಡೆಯಲು ಗೂಗಲ್‌ ಆಪಲ್‌ನಿಂದ ಹೊಸ ಕಂಪೆನಿ!

ಗೂಗಲ್‌ ಮುಖ್ಯಸ್ಥ ಲಾರಿ ಪೇಜ್‌ಗೆ ಕಳೆದ ಮೇ ತಿಂಗಳಿನಲ್ಲಿ ಗಂಟಲ ಸಮಸ್ಯೆ ಕಾಡಿತ್ತು. ಇದರಿಂದಾಗಿ ಕೆಲ ದಿನಗಳಿಂದ ಸಾರ್ವಜನಿಕ ಭಾಷಣಗಳಿಂದ ದೂರ ಉಳಿದಿದ್ದರು. ಇದೇ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಲಾರಿ ಪೇಜ್‌ ಆಪಲ್‌ ಜೊತಗೂಡಿ ಈ ಕಂಪೆನಿಯನ್ನು ಆರಂಭಿಸಲು ಮುಂದಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಪ್ಪು ತಡೆಯಲು ಗೂಗಲ್‌ ಆಪಲ್‌ನಿಂದ ಹೊಸ ಕಂಪೆನಿ!

ಮುಪ್ಪು ತಡೆಯಲು ಗೂಗಲ್‌ ಆಪಲ್‌ನಿಂದ ಹೊಸ ಕಂಪೆನಿ!

ಸದ್ಯದಲ್ಲೇ ಗೂಗಲ್‌ನ ಕೇಂದ್ರ ಸ್ಥಳ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಸಮೀಪ ಕ್ಯಾಲಿಕೋ ಕಂಪೆನಿ ಸ್ಥಾಪನೆಯಾಗಲಿದೆ.

ಮುಪ್ಪು ತಡೆಯಲು ಗೂಗಲ್‌ ಆಪಲ್‌ನಿಂದ ಹೊಸ ಕಂಪೆನಿ!

ಮುಪ್ಪು ತಡೆಯಲು ಗೂಗಲ್‌ ಆಪಲ್‌ನಿಂದ ಹೊಸ ಕಂಪೆನಿ!

ಗೂಗಲ್‌ ಸಾಮಾಜಿಕ ಕಾರ್ಯ‌ಕ್ರಮದಲ್ಲಿ ತೊಡಗುವುದು ಇದು ಮೊದಲೇನಲ್ಲ.ಈ ಹಿಂದೆ ಬಲೂನ್‌ನಿಂದ ಇಂಟರ್‌ನೆಟ್‌,ವೇಗವಾಗಿ ಇಂಟರ್‌ನೆಟ್‌ ಪಡೆಯುವ ಸೈಬರ್‌ ಕೇಬಲ್‌‌ನಂತಹ ಯೋಜನೆಗಳನ್ನು ಆರಂಭಿಸಿದೆ.

ಗೂಗಲ್ ಟಾಪ್‌ 8 ಪ್ರೊಡಕ್ಟ್‌ಗಳನ್ನು ತಿಳಿದಿದ್ದೀರಾ?ಗೂಗಲ್ ಟಾಪ್‌ 8 ಪ್ರೊಡಕ್ಟ್‌ಗಳನ್ನು ತಿಳಿದಿದ್ದೀರಾ?

ಮುಪ್ಪು ತಡೆಯಲು ಗೂಗಲ್‌ ಆಪಲ್‌ನಿಂದ ಹೊಸ ಕಂಪೆನಿ!

ಮುಪ್ಪು ತಡೆಯಲು ಗೂಗಲ್‌ ಆಪಲ್‌ನಿಂದ ಹೊಸ ಕಂಪೆನಿ!

ಗೂಗಲ್‌ ಪ್ರತಿಸ್ಪರ್ಧಿ ಮೈಕ್ರೋಸಾಫ್ಟ್‌ ಸಹ ಸಮಾಜಿಕ ಕಾರ್ಯ‌ದಲ್ಲಿ ತೊಡಗಿಸಿಕೊಂಡಿದೆ.ಶಿಕ್ಷಣ,ಆರೋಗ್ಯ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಜಗತ್ತಿನ ಬಡ ರಾಷ್ಟಗಳ ಅಭಿವೃದ್ಧಿಗೆ ಮುಂದಾಗಿರುವ ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ ಫೌಂಡೇಶನ್‌ ಹೊಸ ಯುಗದ ಕಾಂಡೋಮ್‌ ಆವಿಷ್ಕಾರಕ್ಕೆ ಮಾರ್ಚ್‌ ತಿಂಗಳಿನಲ್ಲಿ ಭಾರೀ ಬಹುಮಾನ ಘೋಷಿಸಿತ್ತು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X