80 ವರ್ಷ ಪೂರೈಸಿದ ಆಕಾಶವಾಣಿ; ತಿಳಿಯಲೇಬೇಕಾದ 8 ಮಾಹಿತಿಗಳು

By Suneel
|

ಭಾರತದ ರಾಷ್ಟ್ರೀಯ ಸಾರ್ವಜನಿಕ ರೇಡಿಯೋ ಪ್ರಸಾರ ಇಲಾಖೆ ನೆನ್ನೆತಾನೆ (ಬುಧವಾರ 8) "ಆಲ್‌ ಇಂಡಿಯಾ ರೇಡಿಯೋ(All India Radio)" 80 ನೇ ವಾರ್ಷಿಕೋತ್ಸವವನ್ನು ಆಚರಿಸಿತು. 'ಆಕಾಶವಾಣಿ' ಎಂದೇ ಪ್ರಖ್ಯಾತವಾದ 'ಆಲ್‌ ಇಂಡಿಯಾ ರೇಡಿಯೋ', 'Voice from the Sky' ಎಂಬ ಹಿನ್ನೆಲೆಯಿಂದ ಆಕಾಶವಾಣಿ ಎಂದು ಹೆಸರು ಪಡೆದಿದೆ.

ಅಂದಹಾಗೆ 'ಆಲ್‌ ಇಂಡಿಯಾ ರೇಡಿಯೋ' ವಿಶ್ವದ ಪ್ರಮುಖ ಮತ್ತು ಹಳೆಯ ರೇಡಿಯೋ ನೆಟ್‌ವರ್ಕ್‌ ಆಗಿದೆ. ಆಕಾಶವಾಣಿ 'ಪ್ರಸಾರ್‌ ಭಾರತಿ'ಯ ವಿಭಾಗವಾಗಿದ್ದು, ದೆಹಲಿಯ ಆಕಾಶ್‌ವಾಣಿ ಭವನ್‌ನಲ್ಲಿ ತನ್ನ ಕೇಂದ್ರ ಕಾರ್ಯಾಲಯ ಹೊಂದಿದೆ.

ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಉಚಿತ ಟಿವಿ ಸೇವೆ ಆರಂಭಿಸಿದ ದೂರದರ್ಶನ

'ಆಲ್‌ ಇಂಡಿಯಾ ರೇಡಿಯೋ' ತನ್ನ 80 ನೇ ವಾರ್ಷಿಕೋತ್ಸವ ಆಚರಿಸಿಕೊಂಡರೂ ಸಹ ಇಂದಿಗೂ 'ಆಲ್‌ ಇಂಡಿಯಾ ರೇಡಿಯೋ' ಲವರ್‌ಗಳಿಗೆ ಅದರ ಬಗ್ಗೆ ಕೆಲವು ಸತ್ಯಾಂತಗಳು ತಿಳಿದಿಲ್ಲ. ಅಂತಹ ಪ್ರಮುಖ ವಿಷಯಗಳು ಏನು ಎಂದು ಮುಂದೆ ಓದಿ.

ಭಾರತದ ಟೆಕ್‌ ಕ್ಷೇತ್ರ ಬೆಳವಣಿಗೆಗೆ ಕಾರಣವಾದ 11 ಹೀರೋಗಳು

1

1

ಭಾರತೀಯ ರಾಜ್ಯ ಪ್ರಸಾರ ಸೇವೆ 'ಆಲ್‌ ಇಂಡಿಯಾ ರೇಡಿಯೊ' ಆದ ನಂತರ ರೇಡಿಯೋ ಸ್ಟೇಷನ್‌ 1936 ರಲ್ಲಿ ಲಾಂಚ್‌ ಆಯಿತು.
ಫೋಟೋ ಕೃಪೆ:AIR/Twitter

2

2

'ಆಲ್‌ ಇಂಡಿಯಾ ರೇಡಿಯೋ' ಎಂಬು ಹೆಸರು ಹೇಗ್‌ ಬಂತು ಅಂತ ಯಾರಿಗಾದ್ರು ಗೊತ್ತಾ. ಬಹುಶಃ ಗೊತ್ತಿರಲ್ಲ. 1936 ರ ಜೂನ್‌ 8 ರಂದು 'ಸರ್‌ ಲಿಯೋನೆಲ್‌ ಫೀಲ್‌ಡೆನ್‌'ಎಂಬುವವರು 'ಆಲ್‌ ಇಂಡಿಯಾ ರೇಡಿಯೋ' ಎಂಬ ಟರ್ಮ್‌ ನೀಡಿದರು.
ಫೋಟೋ ಕೃಪೆ: The Hindu Archives

3

3

ಆಕಾಶವಾಣಿಯ ಮೊದಲ ಬುಲೆಟಿನ್‌ ಜನವರಿ 19, 1936 ರಂದು ಪ್ರಸಾರವಾಯಿತು.
ಫೋಟೋ ಕೃಪೆ:www.hramakrishnan.com

4

4

ಮೊದಲ ರಾಷ್ಟ್ರೀಯ ಮ್ಯೂಸಿಕ್‌ ಪ್ರೋಗ್ರಾಮ್‌ ಆಕಾಶವಾಣಿಯಲ್ಲಿ ಜುಲೈ 20, 1952 ರಲ್ಲಿ ಪ್ರಸಾರವಾಯಿತು.

5

5

ವಿವಿಧ್‌ ಭಾರತಿ ಸೇವೆಯನ್ನು 'ಆಲ್‌ ಇಂಡಿಯಾ ರೇಡಿಯೋ' ಅಕ್ಟೋಬರ್‌ 3,1957 ರಲ್ಲಿ ಉದ್ಘಾಟನೆ ಮಾಡಿತು.
ಫೋಟೋ ಕೃಪೆ:thenewstrack

6

6

'ಛೆ ಗೆವರ' ಅರ್ಜೆಟಿನಾದ ಕ್ರಾಂತಿಕಾರಿ ಮಾರ್ಕ್ಸ್‌ವಾದಿ, ವೈದ್ಯ, ಲೇಖಕ, ಗೆರಿಲ್ಲಾ ನಾಯಕ, ರಾಜತಾಂತ್ರಿಕ ಮತ್ತು ಸೇನಾ ಸಿದ್ಧಾಂತಿ. ಇವರು ಮೊದಲ ಬಾರಿಗೆ 1959 ರಲ್ಲಿ ಭಾರತಕ್ಕೆ ಭೇಟಿ ನೀಡಿದಾಗ 'ಕೆ.ಪಿ. ಭಾನುಮತಿ' ಎಂಬುವವರು ಆಕಾಶವಾಣಿಯಲ್ಲಿ ಸಂದರ್ಶನ ಮಾಡಿದ್ದರು.
ಫೋಟೋ ಕೃಪೆ:Om Thanvi/The Hindu

7

7

ಮೊಟ್ಟ ಮೊದಲ ಬಾರಿಗೆ ಜುಲೈ 23,1977 ರಂದು ಮದ್ರಾಸ್‌ನಲ್ಲಿ(ಚೆನ್ನೈ) FM ಸೇವೆ ಪ್ರಾರಂಭಿಸಲಾಯಿತು.
ಫೋಟೋ ಕೃಪೆ: The Hindu Archives

8

8

ಪ್ರಸ್ತುತದಲ್ಲಿ ಹಲವು ಖಾಸಗಿ ಮನರಂಜನೆಯ FM ಸ್ಟೇಷನ್‌ಗಳಿದ್ದರೂ ಸಹ 80 ವರ್ಷ ಹಳೆಯ 'ಆಲ್‌ ಇಂಡಿಯಾ ರೇಡಿಯೋ' ಪ್ರಖ್ಯಾತಿ ಅದೇ ಎತ್ತರದಲ್ಲಿದೆ. ವಿಶೇಷ ಅಂದ್ರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ'ರವರ 'ಮನ್‌ ಕೀ ಬಾತ್‌' ಸಹ ಪ್ರಸಾರವಾಗುವುದು ಆಕಾಶವಾಣಿಯಲ್ಲೇ.
ಫೋಟೋ ಕೃಪೆ:Zee Media Bureau

9

9

ಮತ್ತೊಮ್ಮೆ 'ಆಲ್‌ ಇಂಡಿಯಾ ರೇಡಿಯೋ'ಗೆ ಲೇಟೆಸ್ಟ್‌ ಆಗಿ ಹುಟ್ಟಿದ ದಿನದ ಶುಭಾಷಯಗಳನ್ನು ತಿಳಿಸಿ.

ಗಿಜ್‌ಬಾಟ್‌

ಗಿಜ್‌ಬಾಟ್‌

ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಉಚಿತ ಟಿವಿ ಸೇವೆ ಆರಂಭಿಸಿದ ದೂರದರ್ಶನಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಉಚಿತ ಟಿವಿ ಸೇವೆ ಆರಂಭಿಸಿದ ದೂರದರ್ಶನ

ಭಾರತದ ಟೆಕ್‌ ಕ್ಷೇತ್ರ ಬೆಳವಣಿಗೆಗೆ ಕಾರಣವಾದ 11 ಹೀರೋಗಳು ಭಾರತದ ಟೆಕ್‌ ಕ್ಷೇತ್ರ ಬೆಳವಣಿಗೆಗೆ ಕಾರಣವಾದ 11 ಹೀರೋಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Most Read Articles
Best Mobiles in India

Read more about:
English summary
8 Things You Didn't Know About All India Radio, That Completes 80 Years. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X