ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಉಚಿತ ಟಿವಿ ಸೇವೆ ಆರಂಭಿಸಿದ ದೂರದರ್ಶನ

By Suneel
|

ಸ್ಮಾರ್ಟ್‌ಫೋನ್‌ ಎಲ್ಲರನ್ನೂ ಆಕರ್ಷಿಸುತ್ತದೆ ಅಂತ ಹೇಳೋದು ನಿಜ. ಈಗ ಸ್ಮಾರ್ಟ್‌ಫೋನ್‌ ಬಳಕೆದಾರರನ್ನು ಆಕರ್ಷಿಸುವ ಗುರಿಯನ್ನು ಪ್ರಸಾರ ಭಾರತಿ ಮಾಲೀಕತ್ವದ 'ದೂರದರ್ಶನ' ಹೊಂದಿದೆ. ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಸಿಹಿ ಸುದ್ದಿ ಏನು ಅಂದ್ರೆ, ದೂರದರ್ಶನ ಉಚಿತ ಟಿವಿ ಸೇವೆಯನ್ನು ಮೊಬೈಲ್‌ ಬಳಕೆದಾರರಿಗೆ ನೀಡುತ್ತಿದೆ. ಈ ಸೇವೆ 16 ನಗರಗಳು ಸೇರಿದಂತೆ 4 ಮೆಟ್ರೊಗಳಿಗೂ ಸಹ ಉಚಿತ ದೂರದರ್ಶನ ಸೇವೆ ಆರಂಭವಾಗಿದೆ. ದೂರದರ್ಶನದ ಉಚಿತ ಟಿವಿ ಸೇವೆ ಮೊಬೈಲ್‌ ಬಳಕೆದಾರರಿಗೆ ಸಿಗುವ ಆ 16 ನಗರಗಳು ಯಾವುವು ಮತ್ತು 4 ಮೆಟ್ರೊಗಳು ಯಾವುವು, ಸ್ಮಾರ್ಟ್‌ಫೋನ್‌ನಲ್ಲಿ ಉಚಿತ ದೂರದರ್ಶನ ಟಿವಿ ಸೇವೆ ಪಡೆಯುವುದು ಹೇಗೆ ಎಂಬುದನ್ನು ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ. ಈ ಮಾಹಿತಿಯ ಸುದ್ದಿ ಮೂಲ 'ಪಿಟಿಐ'.

1

1

ದಿನದಿಂದ ದಿನಕ್ಕೆ ಸ್ಮಾರ್ಟ್‌ಫೋನ್‌ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದ್ದು, ಅವರನ್ನು ಆಕರ್ಷಿಸುವ ಗುರಿಯನ್ನು ದೂರದರ್ಶನ ಹೊಂದಿದೆ. ಆದ್ದರಿಂದ ಈಗ ದೂರದರ್ಶನ ಉಚಿತ ಟಿವೆ ಸೇವೆಯನ್ನು ಆರಂಭಿಸುತ್ತಿದೆ. ನವದೆಹಲಿಯಲ್ಲಿ ಪ್ರಸರಣಾಕಾರರು ದೂರದರ್ಶನದ 'ಡಿಜಿಟಲ್ ಟೆರೆಸ್ಟ್ರಿಯಲ್ ದೂರದರ್ಶನ ಸೇವೆ" ಫೆಬ್ರವರಿ 25 ರಿಂದಲೇ 16 ನಗರಗಳಲ್ಲಿ ಆರಂಭವಾಗಿದ್ದು, ಈಗ ಮೊಬೈಲ್‌ ಟಿವಿ'ಯನ್ನು ಬಳಕೆದಾರರಿಗೆ ಒದಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.

2

2

ಉಚಿತ ಮೊಬೈಲ್‌ ಟಿವಿ ಸೇವೆ ಪಡೆದಿರುವ 16 ನಗರಗಳೆಂದರೆ 'ದೆಹಲಿ, ಮುಂಬೈ, ಕೊಲ್ಕತ್ತಾ, ಚೆನ್ನೈ, ಗುವಾಹಟಿ, ಪಾಟ್ನಾ, ರಾಂಚಿ, ಕಟಕ್, ಲಕ್ನೋ, ಜಲಂಧರ್, ರಾಯ್‌ಪುರ್‌, ಇಂಡೋರ್, ಔರಂಗಾಬಾದ್, ಭೋಪಾಲ್, ಬೆಂಗಳೂರು ಮತ್ತು ಅಹಮದಾಬಾದ್.

3

3

ಮೊಬೈಲ್‌ ಟಿವಿ ಸೇವೆಯನ್ನು ಹಿಂದಿನ ಸ್ಲೈಡರ್‌ನಲ್ಲಿ ತಿಳಿಸಿದ ನಗರಗಳಲ್ಲಿ ಸ್ವೀಕರಿಸಬಹುದಾಗಿದ್ದು, OTG ಯಲ್ಲಿ DVB-T2 ಡಾಂಗಲ್ಸ್‌ ಅನ್ನು ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್ಲೆಟ್‌ಗಳಲ್ಲಿ ಎನೇಬಲ್‌ ಮಾಡಬೇಕು. ಹಾಗೂ ವಾಹನಗಳಲ್ಲಿ ಬಳಸುವವರು ವೈಫೈ ಡಾಂಗಲ್ಸ್‌ಗಳನ್ನು ಬಳಸ ಬೇಕು, ಟಿವಿ ಸೆಟ್ಸ್ ಪಕ್ಕದಲ್ಲಿ DVB-T2 ಅನ್ನು ಹೊಂದಬೇಕು. ಇದನ್ನು ಇಂಟಿಗ್ರೇಟೆಡ್‌ ಡಿಜಿಟಲ್‌ ಟಿವಿ ಎಂದು ಕರೆಯಲಾಗುತ್ತದೆ.

4

4

DVB-T2- ವಿಸ್ತರಣಾ ರೂಪ "Digital Video Broadcasting - Second Generation Terrestrial". ಇದು ಟೆಲಿವಿಷನ್‌ ಮಾದರಿಯ ವಿಸ್ತರಣೆ.
OTG- USB OTG ಎಂಬುದು on-the-go ವಿಸ್ತರಣೆ. ಇದನ್ನು ಮೊಟ್ಟ ಮೊದಲಿಗೆ 2001 ರಲ್ಲಿ ಬಳಸಲಾಯಿತು. ಇದು ಯುಎಸ್‌ಬಿ ಡಿವೈಸ್‌ಗಳಾಗಿ ಡಿಜಿಟಲ್‌ ಆಡಿಯೋ ಪ್ಲೇಯರ್‌ ಮತ್ತು ಮೊಬೈಲ್‌ ಅನ್ನು ಬಳಸಲು ಅವಕಾಶ ನೀಡುತ್ತದೆ.

5

5

ಇಂಟಿಗ್ರೇಟೆಡ್‌ ಡಿಜಿಟಲ್‌ ಟಿವಿ (iDTV), ಸೋನಿ, ಎಲ್‌ಜಿ, ಪ್ಯಾನಾಸಾನಿಕ್, ಸ್ಯಾಮ್‌ಸಂಗ್‌ ಡಿವೈಸ್‌ಗಳಿಗೆ ಲಭ್ಯವಿದೆ. ಡಾಂಗಲ್ಸ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ. ಫ್ಲಿಪ್‌ಕಾರ್ಟ್, eBay, ಸ್ಮಾಪ್‌ಡೀಲ್‌ಗಳಲ್ಲಿ ಪಡೆಯಬಹುದು ಎಂದು ಹೇಳಿಕೆಯಲ್ಲಿ ಮಾಹಿತಿ ನೀಡಲಾಗಿದೆ.

6

6

ಮೊಬೈಲ್‌ ಬಳಕೆದಾರರು ಮೊದಲಿಗೆ ಸಾಫ್ಟ್‌ವೇರ್‌ ಅನ್ನು ಡೌನ್‌ಲೋಡ್‌ ಮಾಡಿ ನಂತರ ಡಾಂಗಲ್‌ಗಳನ್ನು ಸಂಪರ್ಕಸಿ ಡಿಡಿ ಸಿಗ್ನಲ್‌ ಅನ್ನು ಪಡೆಯಬೇಕಾಗಿದೆ.

7

7

ಡಿಡಿ ಚಾನೆಲ್ ಅನ್ನು ವೀಕ್ಷಿಸಲು ಯಾವುದೇ ಚಾರ್ಜ್‌ ಇಲ್ಲ. ಹಾಗೂ ಸಾಫ್ಟ್‌ವೇರ್‌ ಇನ್‌ಸ್ಟಾಲ್‌ ಮಾಡಿದ ನಂತರ ಯಾವುದೇ ಇಂಟರ್ನೆಟ್‌ ಸಂಪರ್ಕ ಸಹ ಬೇಕಿಲ್ಲ.

8

8

ಪ್ರಸ್ತುತದಲ್ಲಿ ಡಿಡಿ ನ್ಯಾಷನಲ್‌, ಡಿಡಿ ನ್ಯೂಸ್‌, ಡಿಡಿ ಭಾರತಿ, ಡಿಡಿ ಸ್ಫೋಟ್ಸ್‌, ಡಿಡಿ ರೀಜಲನಲ್‌/ಡಿಡಿ ಕಿಸಾನ್‌ಗಳು ಪ್ರಸಾರವಾಗುತ್ತಿವೆ. ಕೇವಲ ಒಮ್ಮೆ ಸ್ಮಾರ್ಟ್‌ಫೋನ್‌ ಬಳಕೆದಾರರು ಡಾಂಗಲ್‌ ಅನ್ನು ಖರೀದಿಸಿದರೆ ನಂತರದಲ್ಲಿ ಯಾವುದೇ ಇಂಟರ್ನೆಟ್‌ ಚಾರ್ಜ್‌ ಸಹ ಇಲ್ಲದೆ, ಉಚಿತ ಟಿವಿ ಸೇವೆಯನ್ನು ಪಡೆಯಬಹುದಾಗಿದೆ.

9

9

ಟಿವಿಯ ಪ್ರಸಾರ ಯಾವುದೇ ಸಮಸ್ಯೆ ಇಲ್ಲದೇ ಹಿಮ ಬೀಳುವ ಸಂದರ್ಭದ ಸಮಸ್ಯೆಯು ಇಲ್ಲದೇ ಇರುತ್ತದೆ.

10

10

OTG ಆಡಾಪ್‌ಟರ್ ಅನ್ನು ಅಮೆಜಾನ್‌ ನಿಂದ ಎರಡು ಬೆಲೆಗಳಲ್ಲಿ ಖರೀದಿಸಿರಿ
ಬೆಲೆ ರೂ 99

ಬೆಲೆ ರೂ 428

DVB-T2 ಬೆಲೆ ರೂ 310

DVB-T2 ಬೆಲೆ ರೂ 4,872

DVB-T2 ಬೆಲೆ ರೂ 2,712

ಗಿಜ್‌ಬಾಟ್‌

ಗಿಜ್‌ಬಾಟ್‌

ಕಾಲ್ಪನಿಕ ವಿಜ್ಞಾನದಿಂದ ಸಂಶೋಧನೆಗೊಂಡ ಪ್ರಖ್ಯಾತ ಟೆಕ್ನಾಲಜಿಗಳುಕಾಲ್ಪನಿಕ ವಿಜ್ಞಾನದಿಂದ ಸಂಶೋಧನೆಗೊಂಡ ಪ್ರಖ್ಯಾತ ಟೆಕ್ನಾಲಜಿಗಳು

ಪ್ರಪಂಚಕ್ಕೆ ಕೊಡುಗೆ ನೀಡಿದ ಭಾರತೀಯರ ಪ್ರಖ್ಯಾತ ಆವಿಷ್ಕಾರಗಳುಪ್ರಪಂಚಕ್ಕೆ ಕೊಡುಗೆ ನೀಡಿದ ಭಾರತೀಯರ ಪ್ರಖ್ಯಾತ ಆವಿಷ್ಕಾರಗಳು

ಕಾಣೆಯಾದ ಶೇಕ್ಸ್‌ಪಿಯರ್‌ ತಲೆಬುರುಡೆ: ಪತ್ತೆ ಮಾಡಿದ ತಂತ್ರಜ್ಞಾನಕಾಣೆಯಾದ ಶೇಕ್ಸ್‌ಪಿಯರ್‌ ತಲೆಬುರುಡೆ: ಪತ್ತೆ ಮಾಡಿದ ತಂತ್ರಜ್ಞಾನ

Best Mobiles in India

English summary
Doordarshan starts free TV service without internet on smartphones in 16 cities. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X