Subscribe to Gizbot

ಭಾರತೀಯರಿಗೆ ವರದಾನವಾಗಿರುವ ಟಾಪ್ ಭಾರತೀಯ ಅಪ್ಲಿಕೇಶನ್‌ಗಳು

Written By:

ನಿತ್ಯದ ಜೀವನದಲ್ಲಿ ಫೋನ್‌ಗಳು ಹೇಗೆ ಪ್ರಮುಖ ಪಾತ್ರವನ್ನು ವಹಿಸುತ್ತವೆಯೋ ಅಂತೆಯೇ ಅಪ್ಲಿಕೇಶನ್‌ಗಳೂ ಫೋನ್‌ನ ಜೀವಾಳವಾಗಿವೆ. ಬ್ಯಾಟರಿ ಉಳಿಸುವ ಅಪ್ಲಿಕೇಶನ್‌ನಿಂದ ಹಿಡಿದು ಸಂದೇಶ, ಅಂತರ್ಜಾಲ ಕರೆ, ಹಣದ ಅಪ್ಲಿಕೇಶನ್, ಫೋನ್‌ನ ದೀರ್ಘ ಬಾಳ್ವಿಕೆಗಾಗಿ ಅಪ್ಲಿಕೇಶನ್‌ಗಳು, ಹಾಡುಗಳ, ಚಲನ ಚಿತ್ರಗಳ ಅಪ್ಲಿಕೇಶನ್‌ಗಳು ಹೀಗೆ ಪಟ್ಟಿ ಮಾಡುತ್ತಾ ಸಾಗಿದರೆ ಅಪ್ಲಿಕೇಶನ್‌ಗಳ ಮಹಾಪೂರವೇ ಹರಿದು ಬರಬಹುದು. [2014 ರ ಹೆಚ್ಚು ಪ್ರಚಲಿತ ಉಪಯೋಗಕಾರಿ ಅಪ್ಲಿಕೇಶನ್‌ಗಳು]

ಇಂತಹುದೇ ನಿತ್ಯಬಳಕೆಗೆ ಪರಿಣಾಮಕಾರಿ ಎಂದೆನಿಸಿರುವ ಅಂತೆಯೇ ಭಾರತದಲ್ಲಿ ತಯಾರಾಗಿರುವ ಕೆಲವೊಂದು ಭಾರತೀಯ ಅಪ್ಲಿಕೇಶನ್‌ಗಳ ಬಗ್ಗೆ ಇಂದು ಗಮನಿಸೋಣ. ಈ ಅಪ್ಲಿಕೇಶನ್‌ಗಳು ಹೆಚ್ಚು ಪರಿಣಾಮಕಾರಿ ಎಂದೆನಿಸಿದ್ದು ನಿಮ್ಮ ನಿತ್ಯದ ಬಳಕೆಗೆ ಸಹಕಾರಿಯಾಗಿದೆ. [ಪೋಲಾಗುವ ದುಡ್ಡಿಗೆ ಬ್ರೇಕ್ ಹಾಕುವ ಸೂಪರ್ ಅಪ್ಲಿಕೇಶನ್]

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೈಕ್

ಟಾಪ್ ಭಾರತೀಯ ಅಪ್ಲಿಕೇಶನ್‌ಗಳು

ಈ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಟ್ರೆಂಡಿಂಗ್ ಆಗಿ ಸ್ಮಾರ್ಟ್‌ಫೋನ್‌ಗಳಲ್ಲಿ ಹರಿದಾಡುತ್ತಿದೆ. ಸಂವಹನ ಅಪ್ಲಿಕೇಶನ್ ಎಂದೆನಿಸಿರು ಹೈಕ್ ಅಪ್ಲಿಕೇಶನ್ ಅನ್ನು ಭಾರತಿ ಸಾಫ್ಟ್‌ಬ್ಯಾಂಕ್ ಅಭಿವೃದ್ಧಿಪಡಿಸಿದೆ. ಜಪಾನ್ ಮತ್ತು ಭಾರತೀ ಟೆಲಿಕಾಮ್‌ನ ಒಪ್ಪಂದದಲ್ಲಿ ಈ ಅಪ್ಲಿಕೇಶನ್ ಇದೆ.

ಕ್ಯಾಮೆರಾ ಪ್ಲಸ್

ಟಾಪ್ ಭಾರತೀಯ ಅಪ್ಲಿಕೇಶನ್‌ಗಳು

120 ರೂಗೆ ಕ್ಯಾಮೆರಾ ಪ್ಲಸ್ ಒಂದು ಅದ್ಭುತ ಅಪ್ಲಿಕೇಶನ್ ಆಗಿದ್ದು ನಿಮ್ಮ ಫೋಟೋಗಳನ್ನು ಕ್ಲಿಕ್ಕಿಸಿ ಸಂಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ನೇರವಾಗಿ ಕೂಡ ಇದರಲ್ಲಿ ಫೋಟೋಗಳನ್ನು ತೆಗೆಯಬಹುದಾಗಿದೆ.

ರಿಯಲ್ ಕ್ರಿಕೆಟ್ -- 14

ಟಾಪ್ ಭಾರತೀಯ ಅಪ್ಲಿಕೇಶನ್‌ಗಳು

ಮೊಬೈಲ್‌ನಲ್ಲೇ ಕ್ರಿಕೆಟ್ ಆಸ್ವಾದಿಸುವ ವ್ಯವಸ್ಥೆಯನ್ನು ಈ ಅಪ್ಲಿಕೇಶನ್ ದಯಪಾಲಿಸುತ್ತದೆ. ಇದೊಂದು ಗೇಮಿಂಗ್ ಅಪ್ಲಿಕೇಶನ್ ಆಗಿದ್ದು ನೈಜ ಬಾಲ್‌ಗಳು, ಅನನ್ಯ ಆಟವಾಡುವ ಕಲೆಯನ್ನು ಇದು ಒಸಗಿಸುತ್ತದೆ.

ಸೈನ್ ಈಸಿ

ಟಾಪ್ ಭಾರತೀಯ ಅಪ್ಲಿಕೇಶನ್‌ಗಳು

ಮೈಕ್ರೋಸಾಫ್ಟ್‌ನ ಮಾಜಿ ಉದ್ಯೋಗಸ್ಥ ಸುನಿಲ್ ಪಾತ್ರೊ ಈ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದು ಐಪ್ಯಾಡ್‌ನಲ್ಲಿ ಹೆಚ್ಚು ಡೌನ್‌ಲೋಡ್ ಮಾಡಿದ ಅಪ್ಲಿಕೇಶನ್ ಆಗಿ ಗಮನ ಸೆಳೆಯುತ್ತದೆ.

ಫ್ಲಿಕ್ ಟೆನ್ನೀಸ್

ಟಾಪ್ ಭಾರತೀಯ ಅಪ್ಲಿಕೇಶನ್‌ಗಳು

ಫ್ಲಿಕ್ ಟೆನ್ನಿಸ್ ಅದ್ಭುತ ಮನರಂಜನೆಯನ್ನು ನೀಡುವ ಗೇಮ್ ಅಪ್ಲಿಕೇಶನ್ ಆಗಿದ್ದು ಬಹು ಆಟಗಾರರು ಇದರಲ್ಲಿ ಆಡಬಹುದಾಗಿದೆ.

ಪಾರ್ಕಿಂಗ್ ಫ್ರೆಂಜಿ

ಟಾಪ್ ಭಾರತೀಯ ಅಪ್ಲಿಕೇಶನ್‌ಗಳು

ಈ ಗೇಮ್ ಅಪ್ಲಿಕೇಶನ್ ರಸ್ತೆಗಳಲ್ಲಿ ಕಾರು ಓಡಾಟದ ಮಜವನ್ನು ನಿಮಗೆ ಒದಗಿಸುತ್ತದೆ.

ಗೇಮ್ ಯುವರ್ ವೀಡಿಯೊ

ಟಾಪ್ ಭಾರತೀಯ ಅಪ್ಲಿಕೇಶನ್‌ಗಳು

ಇದು ರಿಯಲ್ ಟೈಮ್ ಎಡಿಟಿಂಗ್, ಹಂಚಿಕೆ ಮತ್ತು ವೀಡಿಯೊ ರೆಕಾರ್ಡಿಂಗ್ ಅನ್ನು ಒಳಗೊಂಡಿದೆ. ಐಪೋಡ್ ಟಚ್ ಮತ್ತು ಐಫೋನ್‌ಗೆ ವಿಶೇಷವಾಗಿ ಇದನ್ನು ವಿನ್ಯಾಸಪಡಿಸಲಾಗಿದೆ. ಇದು ಉಚಿತ ಅಪ್ಲಿಕೇಶನ್ ಆಗಿದೆ.

ಡೆಕ್

ಟಾಪ್ ಭಾರತೀಯ ಅಪ್ಲಿಕೇಶನ್‌ಗಳು

ಈ ಅಪ್ಲಿಕೇಶನ್ ಬಳಸಿಕೊಂಡು ಪ್ರಸಂಟೇಶನ್‌ಗಳನ್ನು ಬಳಕೆದಾರರಿಗೆ ತಯಾರಿಸಬಹುದಾಗಿದೆ. ಗ್ರಾಫಿಕ್ಸ್, ಟೈಪೊಗ್ರಫಿ ಮತ್ತು ಅನಿಮೇಶನ್ ಅನ್ನು ಬಳಸಿ ಪ್ರಸಂಟೇಶನ್ ಅನ್ನು ತಯಾರಿಸಬಹುದಾಗಿದೆ.

ಶಿಫು

ಟಾಪ್ ಭಾರತೀಯ ಅಪ್ಲಿಕೇಶನ್‌ಗಳು

ಭಾರತದಲ್ಲಿ ತಯಾರಿಸಲಾದ ಟಾಸ್ಕ್ ಮ್ಯಾನೇಜ್‌ಮೆಂಟ್ ಅಪ್ಲಿಕೇಶನ್ ಇದಾಗಿದ್ದು ಬಳಕೆದಾರರು ತಮ್ಮ ಫೋನ್ ಅನ್ನು ಹೇಗೆ ಬಳಸುತ್ತಾರೆ ಎಂಬುದನ್ನು ತಿಳಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
These applications are made in India and giving good experience for users. Considered as one of the daily basic application doing all the works in a single phase.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot