ಪುಸ್ತಕದ ಮೇಲೆ ನೀವೆಷ್ಟು ಪದ ಬರೆದಿದ್ದೀರೆಂದು ಎಣಿಸಿ ಹೇಳುವ 'ಪೆನ್' ತಯಾರಿಸಿದ 9ರ ಪೋರ!!

|

ಕಂಪ್ಯೂಟರ್‌ನಲ್ಲಿ ನಾವು ಬರೆದ ಪದಗಳೆಷ್ಟು ಎಂಬುದನ್ನು ಲೆಕ್ಕ ಹಾಕುವುದು ಎಷ್ಟು ಸುಲಭ ಅಲ್ಲವೆ.? ಅದೇ ರೀತಿಯಲ್ಲಿ ಪುಸ್ತಕರ ಮೆಲೆ ನಾವು ಬರೆದ ಪದಗಳೆಷ್ಟು ಎಂಬುದನ್ನು ಸುಲಭವಾಗಿ ಲೆಕ್ಕ ಹಾಕುವಂತಿದ್ದರೆ?. ಹೌದು, ಪುಸ್ತಕದಲ್ಲಿ ಬರೆದ ಅಕ್ಷರಗಳನ್ನು ಲೆಕ್ಕಹಾಕುವ ಇಂತಹದೊಂದು ಪೆನ್ನು ತಯಾರಾಗಿ ಇದೀಗ ಮಾರುಕಟ್ಟೆಗೆ ಬರುತ್ತಿದೆ.

ಆದರೆ, ಇದೇನು ವಿಶೇಷವಲ್ಲ ಎಂದು ಅಂದುಕೊಳ್ಳಬೆಡಿ. ಏಕೆಂದರೆ, ಈ ಡಿಜಿಟಲ್ ಪೆನ್ ಅನ್ನು ತಯಾರಿಸಿರುವುದು ಒಂಬತ್ತನೇ ತರಗತಿ ಓದುತ್ತಿರುವ ಬಾಲಕ. ಜಮ್ಮು ಕಾಶ್ಮೀರದ ಗುರೇಝ್ ಕಣಿವೆ ಪ್ರದೇಶದ 9 ವರ್ಷದ ಬಾಲಕ ಮುಜಾಫರ್ ಅಹ್ಮದ್ ಖಾನ್ ಎಂಬ ಬಾಲಕ ನೂತನ ಪೆನ್ ಒಂದನ್ನು ಆವಿಷ್ಕರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾನೆ.

ನೀವೆಷ್ಟು ಪದ ಬರೆದಿದ್ದೀರೆಂದು ಎಣಿಸಿ ಹೇಳುವ 'ಪೆನ್' ತಯಾರಿಸಿದ 9ರ ಪೋರ!!

ಪುಸ್ತಕದಲ್ಲಿ ನೀವೇನು ಬರೆದರೂ ಸಹ ಈ ಪೆನ್ ನೀವು ಬರೆದ ಪದಗಳೆಷ್ಟು ಎನ್ನುವುದನ್ನು ಎಣಿಕೆ ಮಾಡಿ ಹೇಳಲಿದೆ. ಪೆನ್ನಿನ ಹಿಂಭಾಗದಲ್ಲಿ ಮಾನಿಟರ್ ಇದ್ದು ಯಾರೇ ಆಗಲಿ ಬರೆಯಲಾರಂಭಿಸಿದಾಗ ಅವರು ಬರೆದ ಪದಗಳ ಎಣಿಕೆಗೆ ತೊಡಗುತ್ತದೆ. ಪೆನ್ನಿನಲ್ಲಿ ಕಾಣುವ ಪದಗಳ ಸಂಖ್ಯೆಯನ್ನು ಮೊಬೈಲ್ ಫೋನ್ ನ ಸಂದೇಶದ ಮೂಲಕವೂ ಕಾಣಬಹುದಾಗಿದೆ.

How to Send a WhatsApp Message Without Saving the Contact in Your Phone - GIZBOT KANNADA

ತರಗತಿಯ ಪರೀಕ್ಷೆಯೊಂದರಲ್ಲಿ ನನಗೆ ಕಡಿಮೆ ಅಂಕ ಬಂದಿತ್ತು. ಶಿಕ್ಷಕರು ನೀನು ಕಡಿಮೆ ಬರೆದಿದ್ದೀಯೆ ಅದಕ್ಕೆ ಕಡಿಮೆ ಅಂಕ ಬಂದಿದೆ ಎಂದಿದ್ದರು. ಎಂದು ಹೀಗಾಗಿತ್ತೋ ಅಂದಿನಿಂದಲೂ ನನಗೆ ಈ ಪದಗಳ ಎಣಿಕೆ ಪೆನ್ ಬಗ್ಗೆ ಯೋಚನೆ ಪ್ರಾರಂಭವಾಗಿತ್ತು. ನಾನು ಇದನ್ನು ಆವಿಷ್ಕರಿಸಲು ಅದೇ ಕಾರಣವಾಗಿದೆ ಎಂದು ಮುಜಾಫರ್ ಅಹ್ಮದ್ ಖಾನ್ ಹೇಳಿದ್ದಾನೆ.

ನೀವೆಷ್ಟು ಪದ ಬರೆದಿದ್ದೀರೆಂದು ಎಣಿಸಿ ಹೇಳುವ 'ಪೆನ್' ತಯಾರಿಸಿದ 9ರ ಪೋರ!!

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ (ಎನ್ಐಎಫ್) ಆಯೋಜಿಸಿದ ಫೆಸ್ಟಿವಲ್ ಆಫ್ ಇನ್ನೋವೇಶನ್ ಅಂಡ್ ಎಂತ್ರಪನ್ನರ್ಶಿಪ್ ಕಾರ್ಯಕ್ರಮದಲ್ಲಿ ಈ ಬಾಲಕನ ಪೆನ್ ಪ್ರದರ್ಶನಗೊಂಡಿತ್ತು.ಅಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಮೆಚ್ಚುಗೆಯನ್ನು ಸಹ ಪಡೆದುಕೊಂಡಿತ್ತು.

ಓದಿರಿ: ಜಾಗತಿಕ ಸೈಬರ್ ದಾಳಿ ಬೆದರಿಕೆಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?!..ನೀವೆಷ್ಟು ಸುರಕ್ಷಿತ?

ಓದಿರಿ: ಸ್ಯಾಮ್ಸಂಗ್ 'ಗ್ಯಾಲೆಕ್ಸಿ C7 ಪ್ರೊ' ಸ್ಮಾರ್ಟ್‌ಫೋನಿನ ಮೇಲೆ 5,500 ರೂ.ಬೆಲೆ ಕಡಿತ!!

Best Mobiles in India

English summary
9-yr-old boy in Kashmir's Gurez invents pen that counts words while writing. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X