ಸ್ಯಾಮ್ಸಂಗ್ 'ಗ್ಯಾಲೆಕ್ಸಿ C7 ಪ್ರೊ' ಸ್ಮಾರ್ಟ್‌ಫೋನಿನ ಮೇಲೆ 5,500 ರೂ.ಬೆಲೆ ಕಡಿತ!!

|

ಚೀನಾ ಮೊಬೈಲ್ ಕಂಪೆನಿಗಳಿಗೆ ಸೆಡ್ಡು ಹೊಡೆಯಲು ಸ್ಯಾಮ್‌ಸಂಗ್ ಕಂಪೆನಿ ನಿರ್ಧರಿಸಿದ್ದು, ತನ್ನ ಪ್ರಮುಖ ಮಧ್ಯಮ ಬೆಲೆಯ ಸ್ಮಾರ್ಟ್‌ಪೋನ್ ಮೇಲೆ ಭಾರೀ ಬೆಲೆ ಕಡಿತ ಮಾಡಿದೆ. ಸ್ಯಾಮ್‌ಸಂಗ್ ಕಳೆದ ವರ್ಷ ಬಿಡುಗಡೆ ಮಾಡಿದ್ದ ಅತ್ಯುತ್ತಮ ಸ್ಯಾಮ್ ಸಂಗ್ ಗ್ಯಾಲೆಕ್ಸಿ C7 ಪ್ರೊ ಸ್ಮಾರ್ಟ್‌ಫೋನಿನ ಮೇಲೆ ಇದೀಗ 5,500 ರೂಪಾಯಿಗಳ ಬೆಲೆ ಕಡಿತವಾಗಿದೆ.

5.7 ಇಂಚಿನ (1920 x 1080 p) FHD ಸೂಪರ್ ಅಮೋಲೈಡ್ ಡಿಸ್ ಪ್ಲೇ, ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 626 14nm ಪ್ರೋಸೆಸರ್‌ನಂತಹ ಅತ್ಯುತ್ತಮ ಫೀಚರ್ಸ್ ಹೊಂದಿರುವ ಸ್ಯಾಮ್ ಸಂಗ್ ಕಂಪೆನಿಯ ಪ್ರಮುಖ 'ಗ್ಯಾಲೆಕ್ಸಿ C7 ಪ್ರೊ' ಸ್ಮಾರ್ಟ್‌ಪೋನ್ ಅನ್ನು ಮೊಬೈಲ್ ಪ್ರಿಯರು ಇದೀಗ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು ಎಂದು ಸ್ಯಾಮ್ಸಂಗ್ ತಿಳಿಸಿದೆ.!

ಸ್ಯಾಮ್ಸಂಗ್ 'ಗ್ಯಾಲೆಕ್ಸಿ C7 ಪ್ರೊ' ಸ್ಮಾರ್ಟ್‌ಫೋನಿನ ಮೇಲೆ 5,500 ರೂ.ಬೆಲೆ ಕಡಿತ

ಈ ಮೊದಲು 27,990 ರೂಪಾಯಿಗಳ ಬೆಲೆಯನ್ನು ಹೊಂದಿದ್ದ ಸ್ಯಾಮ್‌ಸಂಗ್ 'ಗ್ಯಾಲೆಕ್ಸಿ C7 ಪ್ರೊ' ಸ್ಮಾರ್ಟ್‌ಪೋನ್ ಬೆ 5,500 ರೂಪಾಯಿಗಳು ಕಡಿತವಾಗಿದ್ದು, ಇದೀಗ ಕೇವಲ 22,400 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಹಾಗಾದರೆ, 22,400 ರುಪಾಯಿಗಳ ಬೆಲೆ ಹೊಂದಿರುವ 'ಗ್ಯಾಲೆಕ್ಸಿ C7 ಪ್ರೊ' ಸ್ಮಾರ್ಟ್‌ಫೋನಿನ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ತಿಳಿಯಿರಿ.!

ಡಿಸ್‌ಪ್ಲೆ ಮತ್ತು ವಿನ್ಯಾಸ!!

ಡಿಸ್‌ಪ್ಲೆ ಮತ್ತು ವಿನ್ಯಾಸ!!

ಭಾರತೀಯ ಮಧ್ಯಮ ವರ್ಗದ ಮೊಬೈಲ್ ಗ್ರಾಹಕರನ್ನು ಸೆಳೆಯುವ ಸಲುವಾಗಿ ಸ್ಯಾಮ್‌ಸಂಗ್ ಪರಿಚಯಿಸಿದ್ದ ಸ್ಯಾಮ್‌ಸಂಗ್ 'ಗ್ಯಾಲೆಕ್ಸಿ C7 ಪ್ರೊ' ಸ್ಮಾರ್ಟ್‌ಪೋನ್- 5.7 ಇಂಚಿನ (1920 x 1080 p) FHD ಸುಪರ್ ಅಮೋಲೈಡ್ ಡಿಸ್ ಪ್ಲೇ ಹೊಂದಿದೆ. ಮುಂಭಾಗದಲ್ಲಿ ಫಿಂಗರ್ ಪ್ರಿಂಟ್ ಆಯ್ಕೆ ಹೊಂದಿರುವ ಸ್ಮಾರ್ಟ್‌ಫೋನ್ ವಿನ್ಯಾಸ ಅತ್ಯುತ್ತಮವಾಗಿದೆ.

ಪ್ರೋಸೆಸರ್ ಮತ್ತು ಒಎಸ್!!

ಪ್ರೋಸೆಸರ್ ಮತ್ತು ಒಎಸ್!!

ಸ್ಯಾಮ್‌ಸಂಗ್ 'ಗ್ಯಾಲೆಕ್ಸಿ C7 ಪ್ರೊ' ಸ್ಮಾರ್ಟ್‌ಪೋನ್ 2.2 GHz ಆಕ್ಟಾ ಕೋರ್ ಸ್ನ್ಯಾಪ್ ಡ್ರಾಗನ್ 626 14nm ಪ್ರೊಸೆಸರ್ ಹೊಂದಿದೆ. ಆಂಡ್ರಿನೋ 506 GPU, 4 GB RAM64GB ಇಂಟರ್ನಲ್ ಮೆಮೊರಿ ಹೊಂದಿರುವ ಪೋನಿನಲ್ಲಿ, ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 256 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾದ ಆಯ್ಕೆ ಇದೆ.!!

ಅದ್ಬುತ ಕ್ಯಾಮೆರಾಗಳು!!

ಅದ್ಬುತ ಕ್ಯಾಮೆರಾಗಳು!!

ಸ್ಯಾಮ್‌ಸಂಗ್ 'ಗ್ಯಾಲೆಕ್ಸಿ C7 ಪ್ರೊ' ಸ್ಮಾರ್ಟ್‌ಪೋನ್ 16 MP ಹಿಂಭಾಗದ ಕ್ಯಾಮೆರಾ ಹಾಗೂ 16 MP ಮುಂಭಾಗದ ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿದೆ. ಹಿಂಬದಿಯ ಕ್ಯಾಮರಾ f / 1.9 ಅಪಾರ್ಚರ್ ಮತ್ತು ದ್ವಿ-ಎಲ್ಇಡಿ (ಡ್ಯೂಯಲ್ ಟೋನ್) ಫ್ಲಾಶ್‌ ತಂತ್ರಜ್ಞಾನಗಳನ್ನು ಒಳಗೊಮಡಿದ್ದು, ಕ್ಯಾಮೆರಾ ಗುಣಮಟ್ಟ ಅತ್ಯುತ್ತಮವಾಗಿದೆ ಎನ್ನಬಹುದು.!

How to Send a WhatsApp Message Without Saving the Contact in Your Phone - GIZBOT KANNADA
ಬ್ಯಾಟರಿ ಮತ್ತು ಇತರೆ ಫೀಚರ್ಸ್ !!

ಬ್ಯಾಟರಿ ಮತ್ತು ಇತರೆ ಫೀಚರ್ಸ್ !!

ಸ್ಯಾಮ್‌ಸಂಗ್ ಕಂಪೆನಿಯ ಸ್ಮಾರ್ಟ್‌ಫೋನುಗಳಲ್ಲಿಯೇ ಅತ್ಯುತ್ತಮ ಬ್ಯಾಟರಿ ಶಕ್ತಿಯನ್ನು 'ಗ್ಯಾಲೆಕ್ಸಿ C7 ಪ್ರೊ' ಸ್ಮಾರ್ಟ್‌ಪೋನ್ 3300 mAh ಬ್ಯಾಟರಿಯನ್ನು ಹೊಂದಿದೆ.ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ, ಹೈಬ್ರಿಡ್ ಡ್ಯುಯಲ್ ಸಿಮ್, ಫಿಂಗರ್ ಪ್ರಿಂಟ್ ಸ್ಕ್ಯಾನರ್, 4G LTE ನಂತಹ ಫೀಚರ್ಸ್‌ಗಳನ್ನು 'ಗ್ಯಾಲೆಕ್ಸಿ C7 ಪ್ರೊ ಸ್ಮಾರ್ಟ್‌ಪೋನಿನಲ್ಲಿವೆ.!!

Best Mobiles in India

English summary
In April last year, Samsung launched the Galaxy C7 Pro in India for Rs 27,990. The smartphone is targeted towards the selfie-centric audience.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X