Home
ಸುದ್ದಿಜಾಲ

ಜಿಯೋ ಧನ್ ಧನಾ ಧನ್ ಗೆ ಎದಿರೇಟು ನೀಡಿದ ಏರ್‌ಟೆಲ್: 399 ರೂ.ಗೆ 70GB 4G..!!

ಜಿಯೋ ಮಾದರಿಯಲ್ಲೇ 70 ದಿನಕ್ಕೆ 70 GB 4G ಡೇಟಾವನ್ನು ಜೊತೆಗೆ ಉಚಿತ ಕರೆ ಮಾಡುವ ಸೇವೆಯನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ.

By Srinidhi

ದೇಶಿಯ ಟೆಲಿಕಾಂ ವಲಯದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದ ರಿಲಯನ್ಸ್ ಮಾಲೀಕತ್ವದ ಜಿಯೋ ಬೇರೆ ಎಲ್ಲಾ ಟೆಲಿಕಾಂ ಕಂಪನಿಗಳ ಗ್ರಾಹಕರನ್ನು ಹೊಸ ಹೊಸ ಆಫರ್ ಮೂಲಕ ಸೆಳೆಯಲು ಮುಂದಾದ ಸಂದರ್ಭದಲ್ಲಿ ದರ ಸಮರಕ್ಕೆ ಮುಂದಾಗಿ ಅದನ್ನು ಇನ್ನು ಜಾರಿಯಲ್ಲಿ ಇಟ್ಟುಕೊಂಡಿರುವ ಏರ್‌ಟೆಲ್ ಜಿಯೋ ವಿರುದ್ಧ ಮತ್ತೊಂದು ಸಮರ ಶುರು ಮಾಡಿದೆ.

ಜಿಯೋ ಧನ್ ಧನಾ ಧನ್ ಗೆ ಎದಿರೇಟು ನೀಡಿದ ಏರ್‌ಟೆಲ್: 399 ರೂ.ಗೆ 70GB 4G..!!

ಓದಿರಿ: ಜಿಯೋ ಆರಂಭದಿಂದ ಇಲ್ಲಿವರೆಗೆ ಕೊಟ್ಟಿದ್ದೇನು..? ಮುಂದೆ ಕೊಡುವುದೇನು..?

ಮೊನ್ನೆ ತಾನೇ ಜಿಯೋ 'ಧನ್ ಧನಾ ಧನ್' ಆಫರ್ ನೀಡಿದ ಬದಲಾಗಿ ಏರ್‌ಟೆಲ್ ಮತ್ತೊಂದು ಬೊಂಬಾಟ್ ಆಫರ್ ನೀಡಿದೆ. ಜಿಯೋ ಮಾದರಿಯಲ್ಲೇ 70 ದಿನಕ್ಕೆ 70 GB 4G ಡೇಟಾವನ್ನು ಜೊತೆಗೆ ಉಚಿತ ಕರೆ ಮಾಡುವ ಸೇವೆಯನ್ನು ತನ್ನ ಗ್ರಾಹಕರಿಗೆ ಮುಕ್ತಗೊಳಿಸಿದೆ.

ಓದಿರಿ: ಜಿಯೋ ಗ್ರಾಹಕರೇ ನೀವು ಈಗಾಗಲೇ 303 ರೂ. ರೀಚಾರ್ಜ್ ಮಾಡಿಸಿದ್ದೀರಾ..? ಹಾಗಿದ್ರೇ ಈ ಸ್ಟೋರಿ ಓದಲೇಬೇಕು..!!

ಏನೀದು ಏರ್‌ಟೆಲ್ ಹೊಸ ಆಫರ್‌:

ಏನೀದು ಏರ್‌ಟೆಲ್ ಹೊಸ ಆಫರ್‌:

ಜಿಯೋ ಮೂರು ತಿಂಗಳಿಗೆ (84 ದಿನಗಳು) ನೀಡಿರುವ ಆಫರ್ ಮಾದರಿಯಲ್ಲೇ ಏರ್‌ಟೆಲ್ ಹೊಸ ಆಫರ್‌ ನೀಡಲು ಮುಂದಾಗಿದೆ. ಏರ್‌ಟೆಲ್ 70 ದಿನಗಳ ಅವಧಿಗೆ 70 GB 4G ಡೇಟಾವನ್ನು ಅಂದರೆ ದಿನಕ್ಕೆ 1 GB ಯಂತೆ ನೀಡಲು ಮುಂದಾಗಿದೆ. ಇದಕ್ಕಾಗಿ 399 ರೂ. ವಿಧಿಸಲಿದೆ. ಅದರೊಂದಿಗೆ ಉಚಿತ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

 ಜಿಯೋ ವಿರುದ್ಧ ಮುಂದುವರೆದಿದೆ ಯುದ್ಧ:

ಜಿಯೋ ವಿರುದ್ಧ ಮುಂದುವರೆದಿದೆ ಯುದ್ಧ:

ಏರ್‌ಟೆಲ್ ಈ ಹಿಂದೆಯೂ ಜಿಯೋ ವಿರುದ್ಧ ದರ ಸಮರವನ್ನು ನಡೆಸಿತ್ತು. ಇದು ಮತ್ತು ಮುಂದುವರೆದಿದ್ದು, 'ಧನ್ ಧನಾ ಧನ್' ಆಫರ್ ವಿರುದ್ಧವಾಗಿ 70 GB ಡೇಟಾ ಆಫರ್ ನೀಡುವ ಮೂಲಕ ತನ್ನ ಗ್ರಾಹಕರನ್ನು ಸಂತುಷ್ಟಗೊಳಿಸುವುದರೊಂದಿಗೆ ತಾನು ಸಹ ಜಿಯೋ ವಿರುದ್ಧ ನಿಲ್ಲುವ ತಾಕತ್ತು ಹೊಂದಿರುವುದಾಗಿ ತೋರಿಸಲು ಮುಂದಾಗಿದೆ.

ಡಿಟಿಹೆಚ್ ಕ್ಷೇತ್ರದಲ್ಲೂ ನಡೆದಿದೆ ಸಮರ:

ಡಿಟಿಹೆಚ್ ಕ್ಷೇತ್ರದಲ್ಲೂ ನಡೆದಿದೆ ಸಮರ:

ಜಿಯೋ ಡಿಟಿಹೆಚ್ ಲಾಂಚ್ ಮಾಡಲಿದೆ ಎನ್ನುವ ಸುದ್ದಿ ತಿಳಿದ ಏರ್‌ಟೆಲ್ ಈಗಾಗಲೇ ಆಂಡ್ರಾಯ್ಡ್ ಕಾರ್ಯಚರಣೆಯನ್ನು ಹೊಂದಿರುವ ಹೈಬ್ರಿಡ್ ಸೆಟಪ್ ಬಾಕ್ಸ್ ಇರುವ ಇಂಟರ್ನೆಟ್ ಟಿವಿಯನ್ನು ಮಾರುಕಟ್ಟೆಗೆ ಪರಿಚಿಯಿಸಿದ್ದು, ಜಿಯೋ ವಿರುದ್ಧದ ಸಮರಕ್ಕೆ ಮೊದಲೇ ರಣ ಕಹಳೆಯನ್ನು ಊದಿದೆ.

Best Mobiles in India

English summary
Airtel is planning to take its war against Jio to a next level. According to a tweet by telecom blogger Sanjay Bafna, the company may soon launch a new prepaid plan at Rs 399. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+