ಜಿಯೋ ಆರಂಭದಿಂದ ಇಲ್ಲಿವರೆಗೆ ಕೊಟ್ಟಿದ್ದೇನು..? ಮುಂದೆ ಕೊಡುವುದೇನು..?

ಬೇರೆ ಎಲ್ಲಾ ಕಂಪನಿಗಳ ಗ್ರಾಹಕರನ್ನು ತನ್ನೆಡೆಗೆ ಸೆಳೆಯುವ ಪ್ರಯತ್ನವನ್ನು ಯಶಸ್ವಿಯಾಗಿ ಜಿಯೋ ಮಾಡಿತು. ಆರಂಭದಲ್ಲಿ ಉಚಿತ ಸೇವೆಯನ್ನು ನೀಡಿ ನಂತರ ಗ್ರಾಹಕರಿಗೆ ಯಾಮಾರಿಸಲಿದೆ ಎನ್ನುವ ಮಾತು ಕೇಳಿ ಬಂದಿತ್ತು.

|

ಜಿಯೋ ಆರಂಭವಾದ ನಂತರದಲ್ಲಿ ಇತರೆ ಟೆಲಿಕಾಂ ಕಂಪನಿಗಳ ಪತನ ಆರಂಭವಾಯಿತು ಎಂದರೆ ತಪ್ಪಾಗುವುದಿಲ್ಲ ಎಂದು ಎನ್ನಿಸುತ್ತದೆ. ಕಾರಣ ಜಿಯೋ ನೀಡಿದ ಉಚಿತ ಆಫರ್‌ಗಳು ಬೇರೆ ಎಲ್ಲಾ ಕಂಪನಿಗಳ ಗ್ರಾಹಕರನ್ನು ತನ್ನೆಡೆಗೆ ಸೆಳೆಯುವ ಪ್ರಯತ್ನವನ್ನು ಯಶಸ್ವಿಯಾಗಿ ಮಾಡಿತು. ಆರಂಭದಲ್ಲಿ ಉಚಿತ ಸೇವೆಯನ್ನು ನೀಡಿ ನಂತರ ಗ್ರಾಹಕರಿಗೆ ಯಾಮಾರಿಸಲಿದೆ ಎನ್ನುವ ಮಾತು ಕೇಳಿ ಬಂದಿತ್ತು ಆದರೆ ಇದನ್ನು ಸುಳ್ಳು ಮಾಡಿದ ಜಿಯೋ ಗ್ರಾಹಕರನ್ನು ನಂಬಿಕೆಯನ್ನು ಉಳಿಸಿಕೊಂಡು ಇಲ್ಲಿಯವರೆಗೂ ಉಚಿತ ಸೇವೆಯನ್ನು ಮುಂದುವರೆಸಿದೆ.

ಜಿಯೋ ಆರಂಭದಿಂದ ಇಲ್ಲಿವರೆಗೆ ಕೊಟ್ಟಿದ್ದೇನು..? ಮುಂದೆ ಕೊಡುವುದೇನು..?

ಓದಿರಿ: ಜಿಯೋ ಗ್ರಾಹಕರೇ ನೀವು ಈಗಾಗಲೇ 303 ರೂ, ರೀಚಾರ್ಜ್ ಮಾಡಿಸಿದ್ದೀರಾ..? ಹಾಗಿದ್ರೇ ಈ ಸ್ಟೋರಿ ಓದಲೇಬೇಕು..!!

ರಿಲಯನ್ಸ್ ಮಾಲೀಕತ್ವದ ಜಿಯೋ ತನ್ನ ಗ್ರಾಹಕರಿಗೆ ಹೊಸದೊಂದು ಆಫರ್ ನೀಡಿದೆ. ಧನ್ ಧನಾ ಧನ್ ಕೊಡುಗೆ ಮತ್ತೆ ಜಿಯೋ ಬಳಕೆದಾರರಿಗೆ ಮುಕ್ತಗೊಳಿಸುವ ಮೂಲಕ ಪ್ರಾರಂಭದಿಂದ ಇಲ್ಲಿಯವರೆಗೂ ತನ್ನ ಗ್ರಾಹಕರಿಗೆ ಉಚಿತ ಸೇವೆ ಇಲ್ಲವೇ ಕಡಿಮೆ ಬೆಲೆಗೆ ಅತೀ ಉತ್ತಮವಾದ ಆಫರ್‌ಗಳನ್ನು ನೀಡುತ್ತಲೇ ಬಂದಿದೆ ಈ ಹಿನ್ನಲೆಯಲ್ಲಿ ದೇಶದಲ್ಲಿ 4G ಸೇವೆಯನ್ನು ಆರಂಭಿಸಿ ಹೊಸ ಕ್ರಾಂತಿಯನ್ನು ಹುಟ್ಟುಹಾಕಿದ ಜಿಯೋ ತನ್ನ ಗ್ರಾಹಕರಿಗೆ ಇಷ್ಟು ದಿನ ನೀಡಿದ್ದೇನು..? ಮುಂದೆ ನೀಡುವುದೇನು..? ಎಂಬುದನ್ನು ನಾವಿಲ್ಲಿ ತಿಳಿಸಿಕೊಡುವ ಪ್ರಯತ್ನವನ್ನು ಮಾಡಲಾಗಿದೆ.

ಓದಿರಿ: ಜಿಯೋ ವಿರುದ್ಧ ಸೋಲೋಪ್ಪಿಕೊಂಡ ಏರ್‌ಟೆಲ್

ರಿಲಯನ್ಸ್ ಜಿಯೋ ವೆಲ್‌ಕಮ್ ಆಫರ್‌: ಸೆ.15 2016

ರಿಲಯನ್ಸ್ ಜಿಯೋ ವೆಲ್‌ಕಮ್ ಆಫರ್‌: ಸೆ.15 2016

ಜಿಯೋ ಮೊದಲ ಬಾರಿಗೆ ಲಾಂಚ್ ಮಾಡಿದ ಸಂದರ್ಭದಲ್ಲಿ 'ವೆಲ್‌ಕಮ್ ಆಫರ್' ಘೋಷಣೆ ಮಾಡಿತು. ಸೆಪ್ಟೆಂಬರ್ 15ರಿಂದ ಮೂರು ತಿಂಗಳು ತನ್ನ ಗ್ರಾಹಕರಿಗೆ ಪ್ರತಿ ನಿತ್ಯ 4GB 4G ಡೇಟಾವನ್ನು ನೀಡುವುದಲ್ಲದೇ ಪ್ರತಿ ನಿತ್ಯ 100 ಎಸ್‌ಎಂಎಸ್‌ ಮತ್ತು ಉಚಿತ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿತು. ಇದು ದೇಶಿಯ ಟೆಲಿಕಾಂ ವಲಯದಲ್ಲಿ ಹೊಸ ಕ್ರಾಂತಿಯನ್ನು ಹುಟ್ಟಿಹಾಕಿತು ಎಂದರೆ ತಪ್ಪಾಗುವುದಿಲ್ಲ.

ರಿಲಯನ್ಸ್ ಜಿಯೋ ಹ್ಯಾಪಿ ನ್ಯೂಯಿಯರ್: ಡಿ.1 2016

ರಿಲಯನ್ಸ್ ಜಿಯೋ ಹ್ಯಾಪಿ ನ್ಯೂಯಿಯರ್: ಡಿ.1 2016

ಜಿಯೋ ಮೊದಲ ಮೂರು ತಿಂಗಳು ನೀಡಿದ ವೆಲ್‌ಕಮ್ ಆಫರ್ ಕೊನೆಯಗುತ್ತಿದ್ದ ವೇಳೆಯಲ್ಲಿ ತನ್ನ ಗ್ರಾಹಕರಿಗೆ ಎರಡನೇ ಬಾರಿಗೆ ಮತ್ತೆ ಮೂರು ತಿಂಗಳು ಕೊಡಗೆ 'ಹ್ಯಾಪಿ ನ್ಯೂ ಯಿಯರ್' ಆಫರ್ ಘೋಷಣೆ ಮಾಡಿತು. ಇದರಲ್ಲಿ ಮೂರು ತಿಂಗಳ ಅವಧಿಗೆ ಪ್ರತಿ ನಿತ್ಯ 1GB 4G ಡೇಟಾವನ್ನು ಹಾಗೂ ಪ್ರತಿ ನಿತ್ಯ 100 ಎಸ್‌ಎಂಎಸ್‌ ಮತ್ತು ಉಚಿತ ಕರೆ ಮಾಡುವ ಅವಕಾಶವನ್ನು ನೀಡಲಾಯಿತು.

ಅಲ್ಲದೇ ಹೆಚ್ಚಿನ ಡೇಟಾ ಬೇಕಾದರೆ ಹಣವನ್ನು ಪಾವತಿ ಮಾಡುವ ಅವಕಾಶ ಮಾಡಿಕೊಡಲಾಯಿತು. ಇದೇ ಸಂದರ್ಭದಲ್ಲಿ ಇತರೆ ಕಂಪನಿಗಳು ಕಣ್ಣು ಕೆಂಪಗೆ ಮಾಡಿಕೊಂಡಿದ್ದಲ್ಲದೇ ಜಿಯೋ ವಿರುದ್ಧ ಟ್ರಾಯ್ ನಲ್ಲಿ ದೂರು ನೀಡಿದವು. ಈ ಸೇವೆ ಮಾರ್ಚ್ 31 ರವರೆಗೆ ಜಾರಿಯಲ್ಲಿತ್ತು.

ಜಿಯೋ ಪ್ರೈಮ್ ಸದಸ್ಯತ್ವ:

ಜಿಯೋ ಪ್ರೈಮ್ ಸದಸ್ಯತ್ವ:

ಜಿಯೋ ಮಾರ್ಚ್ 31ಕ್ಕೆ ತನ್ನ ಉಚಿತ ಸೇವೆಯನ್ನು ಕೊನೆ ಮಾಡುವುದಾಗಿ ತಿಳಿಸಿದಲ್ಲದೇ ಜಿಯೋ ಪ್ರೈಮ್ ಸದಸ್ಯತ್ವ ಪಡೆಯುವಂತೆ ಘೋಷಣೆ ಮಾಡಿತ್ತು. 99 ರೂ. ನೀಡಿ ಸದಸ್ಯತ್ವವನ್ನು ಸ್ವೀಕರಿಸಬೇಕಿತ್ತು. ಇದರೊಂದಿಗೆ ಪ್ರತಿ ತಿಂಗಳು 303 ರೂ. ನೀಡಿದ್ದರೆ ಒಂದು ವರ್ಷಗಳ ಕಾಲ ಹ್ಯಾಪಿ ನ್ಯೂಯಿರ್ ಸೇವೆಯನ್ನು ನೀಡುವುದಾಗಿ ಘೋಷಣೆ ಮಾಡಿತ್ತು.

ನಂತರ ಜಿಯೋ ಸಮ್ಮರ್ ಸರ್ಪೈಸ್ ಆಫರ್‌:

ನಂತರ ಜಿಯೋ ಸಮ್ಮರ್ ಸರ್ಪೈಸ್ ಆಫರ್‌:

ತನ್ನ ನಿರೀಕ್ಷೆಗೆ ಮೀರಿದಂತೆ 72 ಮಿಲಿಯನ್ ಮಂದಿ ಜಿಯೋ ಪ್ರೈಮ್ ಸದಸ್ಯತ್ವವನ್ನು ಸ್ವೀಕರಿಸಿದ ಬೆನ್ನಲೇ ಜಿಯೋ 303 ರೂ.ಗಳಿಗೆ ಸಮ್ಮರ್ ಸರ್ಪ್ರೈಸ್ ಆಫರ್ ನೀಡಲು ಮುಂದಾಯಿತು.

ಈ ಆಫರ್‌ನಲ್ಲಿ ಮತ್ತೆ ಮೂರು ತಿಂಗಳು ಉಚಿತ ಸೇವೆಯನ್ನು ನೀಡಿತು. ಆದರೆ ಇತರೆ ಟೆಲಿಕಾಂ ಈ ಆಫರ್ ವಿರುದ್ಧ ಟ್ರಾಯ್‌ಗೆ ದೂರು ನೀಡಿ, ಈ ಆಫರ್ ಹಿಂಪಡೆಯುವಂತೆ ಮಾಡಿದವು. ಜಿಯೋ ಈ ಆಫರ್ ಹಿಂಪಡೆದಂತೆ ಹೊಸದೊಂದು ಆಫರ್‌ ನೀಡಿತು.

ಜಿಯೋ 'ಧನ್ ಧನಾ ಧನ್' ಆಫರ್ ಏ.11 2017:

ಜಿಯೋ 'ಧನ್ ಧನಾ ಧನ್' ಆಫರ್ ಏ.11 2017:

ಜಿಯೋ ಇತರೆ ಟೆಲಿಕಾಂ ಕಂಪನಿಗಳ ಒತ್ತಡಕ್ಕೆ ಮಣಿದು ಸಮ್ಮರ್ ಸರ್ಪೈಸ್ ಆಫರ್ ಹಿಂಪಡೆದು, ತನ್ನ ಗ್ರಾಹಕರ ಹೊಸದಾಗಿ 'ಧನ್ ಧನಾ ಧನ್' ಕೊಡುಗೆಯನ್ನು ನೀಡಿತು. ಮತ್ತೇ ಮೂರು ತಿಂಗಳು ಉಚಿತ ಸೇವೆಯನ್ನು ನೀಡಲು ಮುಂದಾಯಿತು. 309 ರೂ. ನೀಡಿ ದಿನಕ್ಕೆ 1GB ಡೇಟಾ ಮತ್ತು ಉಚಿತ ಸೇವೆ, ಉಚಿತ ಕರೆ ಮಾಡುವ ಸೇವೆ ಹಾಗೂ ಎಸ್ಎಂಎಸ್‌ ಸೇವೆಯನ್ನು ಜೂನ್ ವರೆಗೂ ವಿಸ್ತರಿಸಿದೆ.

ಮುಂದೆ ಜಿಯೋ ನಡೆ ಏನು..?

ಮುಂದೆ ಜಿಯೋ ನಡೆ ಏನು..?

ಆರಂಭದಿಂದ ಇಲ್ಲಿಯವರೆಗೂ ಉಚಿತ ಸೇವೆ ಇಲ್ಲವೇ ಅಲ್ಪ ಪ್ರಮಾಣದ ದರವನ್ನು ವಿಧಿಸಿ ಸೇವೆಯನ್ನು ನೀಡುತ್ತಿರುವ ಜಿಯೋ ಮುಂದೆಯೂ ತನ್ನ ಗ್ರಾಹಕರಿಗೆ ಇದೇ ಮಾದರಿಯ ಸೇವೆಯನ್ನು ನೀಡಲು ಯೋಜನೆಯನ್ನು ರೂಪಿಸಲಿದೆ. ಬೇರೆ ಕಂಪನಿಗಳು ನೀಡುವ ಮಾದರಿಯಲ್ಲಿ ಗ್ರಾಹಕರನ್ನು ವಂಚಿಸಿ ಆಫರ್‌ಗಳನ್ನು ನೀಡಿದೆ, ಗ್ರಾಹಕರಿಗೆ ಮೋಸವಾಗದ ರೀತಿಯ ಕೊಡುಗೆಯನ್ನು ನೀಡುವ ವಾಗ್ದಾನ ಮಾಡಿದೆ.

Best Mobiles in India

Read more about:
English summary
Reliance Jio has a new offer - Jio Dhan Dhana Dhan - to continue providing users with free services for another 3 months. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X