Subscribe to Gizbot

ಜಿಯೋ ಗ್ರಾಹಕರೇ ನೀವು ಈಗಾಗಲೇ 303 ರೂ, ರೀಚಾರ್ಜ್ ಮಾಡಿಸಿದ್ದೀರಾ..? ಹಾಗಿದ್ರೇ ಈ ಸ್ಟೋರಿ ಓದಲೇಬೇಕು..!!

Written By:

ಜಿಯೋ ಟ್ರಾಯ್ ಆದೇಶದಂತೆ ಈಗಾಗಲೇ ಸಮ್ಮರ್ ಸರ್ಪ್ರೈಸ್ ಆಫರ್ ಅನ್ನು ಹಿಂಪಡೆದು ತನ್ನ ಗ್ರಾಹಕರಿಗೆ ಹೊಸದಾಗಿ ಧನ್ ಧನಾ ಧನ್ ಹೆಸರಿನಲ್ಲಿ ಹೊಸದೊಂದು ಆಫರ್ ಅನ್ನು ನೀಡಿದೆ. ಆದರೆ ಈ ಹಿಂದೆ ನೀಡಿದ್ದ ಸಮ್ಮರ್ ಸರ್ಪ್ರೈಸ್ ಆಫರ್ ರಿಚಾರ್ಜ್ ಮಾಡಿಸಿಕೊಂಡಿದ್ದ ಹಲವು ಮಂದಿಯನ್ನು ಕಾಡುತ್ತಿರುವ ಪ್ರಶ್ನೇ ಎಂದರೆ ತಾವು ಮತ್ತೇ 309 ರೂ. ನೀಡಿ ಹೊಸದಾಗಿ ರೀಚಾರ್ಜ್ ಮಾಡಿಸಬೇಕೆ ಎಂದು.

ಓದಿರಿ: ಆನ್‌ಲೈನ್‌ನಲ್ಲಿ ಪ್ಯಾನ್‌ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡುವುದು ಹೇಗೆ..? ಇಲ್ಲಿದೇ ಸರಳ ವಿಧಾನ.!

ಜಿಯೋ ಗ್ರಾಹಕರೇ ನೀವು ಈಗಾಗಲೇ 303 ರೂ, ರೀಚಾರ್ಜ್ ಮಾಡಿಸಿದ್ದೀರಾ..?

ಈ ಪ್ರಶ್ನೆಗೆ ಉತ್ತರ ನೀಡುವ ಸಲುವಾಗಿಯೇ, ನಿಮ್ಮ ಸಮಸ್ಯೆಯನ್ನು ಪರಿಹರಿಸಲು ಈ ಲೇಖನ ಸಹಾಯಕಾರಿಯಾಗಲಿದೆ. ಜಿಯೋ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಂಡ ನಂತರ ಒಂದು ತಿಂಗಳಿಗೆ ಹ್ಯಾಪಿ ನ್ಯೂ ಯಿಯರ್ ಆಫರ್ ಅಂದರೇ ದಿನವೊಂದಕ್ಕೆ 1 GB 4G ಡೇಟಾ ಮತ್ತು ಉಚಿತ ಕರೆ ಮಾಡುವ ಅವಕಾಶವನ್ನು ಪಡೆಯುವ ಸಲುವಾಗಿ 303 ರೂಗಳನ್ನು ಪಾವತಿ ಮಾಡಬೇಕಾಗಿತ್ತು.

ಓದಿರಿ: ಜಿಯೋ ವಿರುದ್ಧ ಸೋಲೋಪ್ಪಿಕೊಂಡ ಏರ್‌ಟೆಲ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಂದು ಕೊಂಡರೆ ಮೂರು ಉಚಿತ

ಒಂದು ಕೊಂಡರೆ ಮೂರು ಉಚಿತ

ಇದೇ ಸಂದರ್ಭದಲ್ಲಿ ಜಿಯೋ ನಿರೀಕ್ಷೆಗೂ ಮೀರಿದಂತೆ ಸುಮಾರು 72 ಮಿಲಿಯನ್‌ಗೂ ಅಧಿಕ ಮಂದಿ ಜಿಯೊ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಂಡ ಕಾರಣ, ಮುಖೇಶ್ ಅಂಬಾನಿ ತಮ್ಮನ್ನು ನಂಬಿ ಬಂದ ಗ್ರಾಹಕರಿಗಾಗಿ ಸಮ್ಮರ್ ಸರ್ಪ್ರೈಸ್ ಆಫರ್ ಹೆಸರಿನಲ್ಲಿ ಒಂದನ್ನು ಆಫರ್ ಕೊಂಡರೆ ಮೂರು ಉಚಿತವಾಗಿ ನೀಡುವುದಾಗಿ ಹೇಳಿ ಸಮ್ಮರ್ ಸರ್ಪ್ರೈಸ್ ಆಫರ್ ಘೋಷಣೆ ಮಾಡಿದರು.

ಸಮ್ಮರ್ ಸರ್ಪ್ರೈಸ್ ಆಫರ್ ರೀಚಾರ್ಜ್ ಮಾಡಿಸಿದವರು:

ಸಮ್ಮರ್ ಸರ್ಪ್ರೈಸ್ ಆಫರ್ ರೀಚಾರ್ಜ್ ಮಾಡಿಸಿದವರು:

ಈ ಹೊಸ ಆಫರ್ ನಿಂತ ಹೆಚ್ಚಿನ ನಷ್ಟಕ್ಕೆ ಗುರಿಯಾದ ಕಂಪನಿಗಳು ಜಿಯೋ ವಿರುದ್ಧ ಟ್ರಾಯ್‌ಗೆ ದೂರು ನೀಡಿದ್ದಲ್ಲದೇ ಜಿಯೋ ನೀಡಲು ಮುಂದಾಗಿದ್ದ ಸಮ್ಮರ್ ಸರ್ಪ್ರೈಸ್ ಆಫರ್ ಗೆ ಕತ್ತರಿ ಹಾಕುವಲ್ಲಿ ಯಶಸ್ವಿಯಾದವು. ಟ್ರಾಯ್ ಆದೇಶಕ್ಕೆ ತಲೆಭಾಗಿದ ಜಿಯೋ ತನ್ನ ಸಮ್ಮರ್ ಸರ್ಪ್ರೈಸ್ ಆಫರ್ ಹಿಂಪಡೆಯಿತು. ಆದರೇ ಅಷ್ಟೋತ್ತಿಗೆ 72 ಮಿಲಿಯನ್ ಪ್ರೈಮ್ ಸದಸ್ಯರಲ್ಲಿ ಅನೇಕ ಮಂದಿ ಸಮ್ಮರ್ ಸರ್ಪ್ರೈಸ್ ಆಫರ್ ರೀಚಾರ್ಜ್ ಮಾಡಿಸಿಕೊಂಡಿದ್ದರು.

ಉತ್ತರ ನೀಡಿದ ಜಿಯೋ

ಉತ್ತರ ನೀಡಿದ ಜಿಯೋ

ಟ್ರಾಯ್ ಆದೇಶದಂತೆ ಸಮ್ಮರ್ ಸರ್ಪ್ರೈಸ್ ಆಫರ್ ಹಿಂಪಡೆದ ಜಿಯೋ, ತನ್ನ ಗ್ರಾಹಕರಿಗಾಗಿಯೇ ಹೊಸದಾಗಿ ಧನ್ ಧನಾ ಧನ್ ಆಫರ್ ನೀಡಿತು. ಹೊಸ ಆಫರ್ ಬಂದಿತು ಸರಿ ಆದರೆ ಈ ಹಿಂದೆ ರಿಚಾರ್ಜ್ ಮಾಡಿಸಿದವರು ಏನು ಮಾಡುವುದು ಎನ್ನುವ ಹೊಸ ದೊಂದು ಪ್ರಶ್ನೆಯನ್ನು ಹುಟ್ಟಿಹಾಕಿತು. ಈ ಪ್ರಶ್ನೆಗೆ ಜಿಯೋ ವೆಬ್ ಸೈಟ್‌ನಲ್ಲಿ ಉತ್ತರ ದೊರೆಕಿದೆ.

ಹೊಸದಾಗಿ ರೀಚಾರ್ಜ್ ಮಾಡಿಸಿಕೊಳ್ಳುವ ಅಗತ್ಯವಿಲ್ಲ:

ಹೊಸದಾಗಿ ರೀಚಾರ್ಜ್ ಮಾಡಿಸಿಕೊಳ್ಳುವ ಅಗತ್ಯವಿಲ್ಲ:

ಈಗಾಗಲೇ 303 ರೂ. ನೀಡಿ ಜಿಯೋ ಸಮ್ಮರ್ ಸರ್ಪ್ರೈಸ್ ಆಫರ್ ಪಡೆದವರು ಹೊಸದಾಗಿ ರೀಚಾರ್ಜ್ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ಈ ಹಿಂದಿನಂತೆ ಅವರು ಮೂರು ತಿಂಗಳ ಉಚಿತ ಸೇವೆಯನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಜಿಯೋ ಈಗಾಗಲೇ ರೀಚಾರ್ಜ್ ಮಾಡಿಸಿಕೊಂಡವರಿಗೆ ಮೂರು ತಿಂಗಳ ಉಚಿತ ಸೇವೆಯನ್ನು ಖಂಡಿತವಾಗಿಯೂ ನೀಡಲಿದೆ.

ಯಾರು ಮಾಡಿಸಿಲ್ಲ ಅವರು ಮಾತ್ರ:

ಯಾರು ಮಾಡಿಸಿಲ್ಲ ಅವರು ಮಾತ್ರ:

ಯಾರು ಈ ಸಮ್ಮರ್ ಸರ್ಪ್ರೈಸ್ ಆಫರ್ ರಿಚಾರ್ಜ್ ಮಾಡಿಸಿಕೊಂಡಿಲ್ಲ ಅವರು ಮಾತ್ರ ಹೊಸದಾಗಿ 309 ರೂ. ನೀಡಿ ಧನ್ ಧನಾ ಧನ್ ಆಫರ್ ಗೆ ಪಡೆದುಕೊಳ್ಳಬೇಕಾಗಿದೆ. ಹೊಸ ಆಫರ್ ಲಾಭ ಪಡೆಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Reliance Jio withdrew the popular Summer Surprise offer that was introduced on March 31. The service provider revealed that it will soon be announcing new tariff plans. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot