ಜಿಯೋ ಜೊತೆ ಜಿದ್ದಿಗೆ ಇಳಿದ ಏರ್‌ಟೆಲ್: ಆರಂಭಿಸಿದೆ ರೋಮಿಂಗ್ ವಾರ್..!!
ಏರ್‌ಟೆಲ್ ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ಭಾರತದಾದ್ಯಂತ ಉಚಿತ ರೋಮಿಂಗ್ ಸೇವೆಯನ್ನು ನೀಡುವುದಾಗಿ ಘೋಷಣೆ ಮಾಡಿದೆ.
ದೇಶಿಯ ಟೆಲಿಕಾಂ ವಲಯದಲ್ಲಿ ದರ ಸಮರ ಹಿಂದೆಂದೂ ಕಾಣದಷ್ಟು ಜೋರಾಗಿ ನಡೆಯುತ್ತಿದ್ದು, ಜಿಯೋ ಜೊತೆ ಜಿದ್ದಿಗೆ ಇಳಿದ ಏರ್‌ಟೆಲ್ ತನ್ನ ಗ್ರಾಹಕರಿಗೆ ಉಚಿತ ಕೊಡುಗೆಗಳ ಮಹಾಪೂರವನ್ನೇ ಹರಿಸುತ್ತಿದ್ದು, ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ಭಾರತದಾದ್ಯಂತ ಉಚಿತ ರೋಮಿಂಗ್ ಸೇವೆಯನ್ನು ನೀಡುವುದಾಗಿ ಘೋಷಣೆ ಮಾಡಿದೆ.

ಓದಿರಿ: ಲಾಂಚ್ ಆಯ್ತು ಮೊಟೊ G5, ಮೊಟೊ G5 ಪ್ಲಸ್: ಮಾರ್ಚ್‌ನಲ್ಲಿ ಮಾರುಕಟ್ಟೆಗೆ..!!
ಇದೇ ಏಪ್ರಿಲ್ 1 ರಿಂದ ಈ ಉಚಿತ ರೋಮಿಂಗ್ ಸೇವೆ ಆರಂಭವಾಗಲಿದ್ದು, ದೇಶಾದ್ಯಂತ ರೋಮಿಂಗ್ ಉಚಿತವಿದ್ದು, ಆದರೆ ಕರೆ ಮೇಲೆ ಸ್ವಲ್ಪ ಹೆಚ್ಚಿನ ದರವನ್ನು ವಿಧಿಸಲಿದೆ ಎನ್ನಲಾಗಿದೆ. ಕೇವಲ ದೇಶಿಯ ರೋಮಿಂಗ್ ಮಾತ್ರವಲ್ಲದೇ ವಿದೇಶಿಯ ಕರೆಗಳ ರೋಮಿಂಗ್, ಇಂಟರ್ನ್ಯಾಷನಲ್ ರೋಮಿಂಗ್ ಮೇಲೆಯೂ ರಿಯಾಯಿತಿಯನ್ನು ಏರ್‌ಟೆಲ್ ಘೋಷಣೆ ಮಾಡಿದೆ.
ಸದ್ಯ ಏರ್‌ಟೆಲ್ ಇಂಟರ್ನ್ಯಾಷನಲ್ ರೋಮಿಂಗ್ ದರವನ್ನು ಶೇ.90 ರಷ್ಟು ಕಡಿಮೆ ಮಾಡಿದ್ದುಮ ನಿಮಿಷಕ್ಕೆ 3 ರೂ. ದರವನ್ನು ನಿಗಧಿ ಮಾಡಿದೆ. ಅಲ್ಲದೇ ಇಂಟರ್ನ್ಯಾಷನಲ್ ಡೇಟಾ ರೋಮಿಂಗ್ ದರವನ್ನು ಶೇ. 90ರಷ್ಟು ಕಡಿಮೆ ಮಾಡಿದ್ದು, ಪ್ರತಿ MB ಗೆ 3 ರೂ, ನಿಗಧಿ ಮಾಡಿದೆ.
ದೇಥ್ ಆಫ್ ನ್ಯಾಷಿನಲ್ ರೋಮಿಂಗ್ ಎಂದು ಕರೆದಿರುವ ಏರ್‌ಟೆಲ್, ರೋಮಿಂಗ್ ನಲ್ಲಿ ಸ್ವೀಕರಿಸುವ ಕರೆಗಳು ಮತ್ತು ಮೇಸೆಜ್ ಗಳು ಉಚಿತವಾಗಿರಲಿದ್ದು, ಇದರಿಂದ ಗ್ರಾಹಕರಿಗೆ ಹೆಚ್ಚಿನ ಲಾಭವಾಗಲಿದೆ. ಅಲ್ಲದೇ ರೋಮಿಂಗ್ ಸಂದರ್ಭದಲ್ಲಿ ಕರೆಗಳನ್ನು ಸ್ವೀಕರಿಸಲು ಯಾವುದೇ ಪ್ಯಾಕ್ ಹಾಕಿಸಿಕೊಳ್ಳುವ ಅಗತ್ಯತೆ ಇರುವುದಿಲ್ಲ ಎನ್ನಲಾಗಿದೆ.

ಓದಿರಿ: 2 GB RAM, 8 MP ಸೆಲ್ಫಿ ಕ್ಯಾಮೆರಾ ಇರುವ ನೋಕಿಯಾ 3 ಸ್ಮಾರ್ಟ್‌ಪೋನ್ ಬೆಲೆ 9,800 ಮಾತ್ರ..!!
ಇದರೊಂದಿಗೆ ಇಂಟರ್ನ್ಯಾಷನಲ್ ರೋಮಿಂಗ್ ಪ್ಯಾಕ್‌ಗಳನ್ನು ಪರಿಚಯ ಮಾಡಿದ್ದು, ಅಮೇರಿಕಾಗೆ ತೆರಳುವವರಿಗೆ ಆಕರ್ಷಕ ಪ್ಯಾಕ್‌ಗಳನ್ನು ಘೋಷಣೆ ಮಾಡಿದೆ. ಒಟ್ಟಿನಲ್ಲಿ ಜಿಯೋ ಮುಂದೆ ಯುದ್ದಕ್ಕೆ ನಿಂತಿರುವ ಏರ್‌ಟೆಲ್ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಕಳೆದುಕೊಳ್ಳದೇ ಹೊಸ ಗ್ರಾಹಕರನ್ನು ತನ್ನ ಕುಟುಂಬಕ್ಕೆ ಸೇರಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.


Click it and Unblock the Notifications



