Subscribe to Gizbot

ಮಾರುಕಟ್ಟೆಯೇ ತಲ್ಲಣಿಸುವ ಆಫರ್ ಕೊಟ್ಟ ಏರ್‌ಟೆಲ್‌: ರೂ.29ಕ್ಕೆ ತಿಂಗಳ ವ್ಯಾಲಿಡಿಟಿ..!

Written By:

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ದರ ಸಮರವೂ ಜೋರಾಗಿದ್ದು, ಎಲ್ಲಾ ಟೆಲಿಕಾಂ ಕಂಪನಿಗಳು ಜಿಯೋವನ್ನು ಟಾರ್ಗೆಟ್ ಮಾಡುತ್ತಿದೆ. ಹೊಸ ಹೊಸ ಆಫರ್ ಗಳನ್ನು ಲಾಂಚ್ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಲು ಮುಂದಾಗಿವೆ. ಇದೇ ಮಾದರಿಯಲ್ಲಿ ಏರ್‌ಟೆಲ್ ಮಾರುಕಟ್ಟೆಯೇ ತಲ್ಲಣಿಸುವ ಆಫರ್ ವೊಂದನ್ನು ಲಾಂಚ್ ಮಾಡಿದೆ. ಅತೀ ಕಡಿಮೆ ಬೆಲೆಗೆ ಒಂದು ತಿಂಗಳ ಆಫರ್ ಅನ್ನು ಘೋಷಣೆಯನ್ನು ಮಾಡಿದೆ.

ಮಾರುಕಟ್ಟೆಯೇ ತಲ್ಲಣಿಸುವ ಆಫರ್ ಕೊಟ್ಟ ಏರ್‌ಟೆಲ್‌: ರೂ.29ಕ್ಕೆ ತಿಂಗಳ ವ್ಯಾಲಿಡಿಟಿ

ಓದಿರಿ: ಜಿಯೋ ಹಾದಿಯಲ್ಲಿ ಏರ್‌ಟೆಲ್: VoLTE ಬಳಕೆದಾರರಿಗೆ ಉಚಿತ ಡೇಟಾ..! ಪಡೆಯುವುದು ಹೇಗೆ..?

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ಏರ್‌ಟೆಲ್ ತನ್ನ ಬಳಕೆದಾರರಿಗೆ ರೂ.29ಕ್ಕೆ ಒಂದು ತಿಂಗಳ ವ್ಯಾಡಿಲಿಡಿಯನ್ನು ನೀಡಲಿದೆ. ಇಷ್ಟು ಕಡಿಮೆ ಬೆಲೆಗೆ ಕೊಟ್ಟ ಮೇಲೆ ಇದರಲ್ಲಿ ಗ್ರಾಹಕರ ಬಳಕೆಗೆ ಇರುವ ಆಯ್ಕೆಗಳು ಕಡಿಮೆ ಇದೆ ಎನ್ನಲಾಗಿದೆ. ಆದರೆ ಈ ಆಫರ್ ಪ್ಲಸ್ ಪಾಯಿಂಟ್ ಎಂದರೆ ಎಲ್ಲಾ ಮಾದರಿಯ ಬಳಕೆದಾರರು ಅಂದರೆ 2G/3G/4G ಬಳಕೆದಾರರು ಈ ಆಫರ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಆದರೆ ಹೆಚ್ಚು ಡೇಟಾ ಅವಶ್ಯವಿರುವ ಬಳಕೆದಾರರು ಈ ಆಫರ್ ಲಾಭವನ್ನು ಪಡೆದುಕೊಳ್ಳುವ ಸಾಧ್ಯತೆ ಇಲ್ಲ.

ಏರ್‌ಟೆಲ್ ಬಿಡುಗಡೆ ಮಾಡಿರುವ ರೂ.29ಗಳ ಆಫರ್‌ನಲ್ಲಿ ಬಳಕೆದಾರರಿಗೆ ಹೆಚ್ಚಿನ ಡೇಟಾ ಸಿಗುವುದಿಲ್ಲ ಎನ್ನಲಾಗಿದ್ದು, ಕೇವಲ ರೂ.150 MB ಡೇಟಾವನ್ನು ಮಾತ್ರವೇ ಬಳಕೆ ಮಾಡಿಕೊಳ್ಳಬಹುದಾಗಿದ್ದು, ಆದರೆ ನಮಗೆ ಡೇಟಾ ಅವಶ್ಯಕತೆ ಇಲ್ಲ ಎನ್ನುವವರು ಈ ಪ್ಲಾನ್‌ ಅನ್ನು ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ದರ ಸಮರದಲ್ಲಿ ಕೇವಲ ಡೇಟಾ ಪ್ಲಾನ್‌ಗಳನ್ನು ಮಾತ್ರವೇ ಕಾಣುವ ದಿನಗಳಲ್ಲಿ ಈ ಪ್ಲಾನ್ ಹೊಸದಾಗಿ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಮಾರುಕಟ್ಟೆಯೇ ತಲ್ಲಣಿಸುವ ಆಫರ್ ಕೊಟ್ಟ ಏರ್‌ಟೆಲ್‌: ರೂ.29ಕ್ಕೆ ತಿಂಗಳ ವ್ಯಾಲಿಡಿಟಿ

ಓದಿರಿ: ಮತ್ತೊಂದು ಶಾಕಿಂಗ್‌ ಸುದ್ದಿ: ಆಂಡ್ರಾಯ್ಡ್ ಬಳಕೆದಾರರ ಸಂಫೂರ್ಣ ಮಾಹಿತಿ ಕದಿಯುತ್ತಿದೆ ಫೇಸ್‌ಬುಕ್‌..!

ಇದೇ ಮಾದರಿಯಲ್ಲಿ ಜಿಯೊದಲ್ಲಿಯೂ ಆಫರ್ ಕಾಣಬಹುದಾಗಿದ್ದು, ಆದರೆ ಅದಕ್ಕಾಗಿ ಬಳಕೆದಾರರು ರೂ.98ಕ್ಕೆ ರಿಚಾರ್ಜ್ ಮಾಡಿಸಿಕೊಳ್ಳಬೇಕಾಗಿದೆ. ಈ ಪ್ಲಾನ್‌ ನಲ್ಲಿ ಬಳಕೆದಾರರು ಹೆಚ್ಚಿನ ಡೇಟಾವನ್ನು ಬಳಕೆಗೆ ಪಡೆದುಕೊಳ್ಳಲಿದ್ದಾರೆ. ಜಿಯೋ ಆಫರ್‌ಗೆ ಹೋಲಿಕೆ ಮಾಡಿಕೊಂಡರೆ ಏರ್‌ಟೆಲ್ ಪ್ಲಾನ್‌ ಬೆಲೆಯಲ್ಲಿ ತೀರಾ ಇಳಿಕೆಯನ್ನು ಕಾಣಬಹುದಾಗಿದೆ.

ಇದೇ ಹಿನ್ನಲೆಯಲ್ಲಿ ಏರ್‌ಟೆಲ್ ದೇಶದಲ್ಲಿ ಅತೀ ಹೆಚ್ಚು ವೇಗದ ಇಂಟರ್ನೆಟ್ ಸೇವೆಯನ್ನು ನೀಡುವ ಟೆಲಿಕಾಂ ಸಂಸ್ಥೆ ಎನ್ನುವ ಖ್ಯಾತಿಗೆ ಪಾತ್ರವಾಗಿದ್ದು, ಜಿಯೋ ಮತ್ತು ವೊಡಾಫೋನ್ ಅನ್ನು ಹಿಂದಿಕ್ಕಿ ಮೊದಲ ಸ್ಥಾನವನ್ನು ಅಲಂಕರಿಸಿದೆ ಎನ್ನಲಾಗಿದ್ದು, ಇದೇ ಹಿನ್ನಲೆಯಲ್ಲಿ ಹೊಸ ಆಡ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಬಳಕೆದಾರರನ್ನು ಸೆಳೆಯಲು ಮುಂದಾಗಿದೆ.

English summary
Airtel Dhamaka Offer! Now Pay Less Than Rs 30 For One Month Data. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot