ಮತ್ತೊಂದು ಶಾಕಿಂಗ್‌ ಸುದ್ದಿ: ಆಂಡ್ರಾಯ್ಡ್ ಬಳಕೆದಾರರ ಸಂಫೂರ್ಣ ಮಾಹಿತಿ ಕದಿಯುತ್ತಿದೆ ಫೇಸ್‌ಬುಕ್‌..!

|

ನಿಜಕ್ಕೂ ಇದು ಫೇಸ್‌ಬುಕ್‌ ಬಳಕೆದಾರರಿಗೆ ಇದು ಶಾಕಿಂಗ್‌ ಸುದ್ದ. ಇಷ್ಟು ದಿನ ನಿಮ್ಮ ಸಂಭ್ರಮವನ್ನು ಹಂಚಿಕೊಳ್ಳಲು, ಸಮಯವನ್ನು ಕಳೆಯಲು, ಸುದ್ದಿಯನ್ನು ಪಡೆಯಲು ಬಳಕೆ ಮಾಡುತ್ತಿದ್ದ ಫೇಸ್‌ಬುಕ್‌ ಸದ್ದಿಲ್ಲದೇ ನಿಮ್ಮ ಫೋನ್‌ನಿಂದ ಎಲ್ಲಾ ಮಾಹಿತಿಯನ್ನು ಕದಿಯುತ್ತಿದೆ ಎಂದರೆ ನೀವು ನಂಬಲೇ ಬೇಕು‌. ನಿಮ್ಮ ಫೋನಿನಲ್ಲಿ ಫೇಸ್‌ಬುಕ್‌, ಮೇಸೆಂಜರ್, ಫೇಸ್‌ಬುಕ್ ಲೈಟ್ ಆಪ್‌ ಹಾಕಿಕೊಂಡಿದ್ದರೇ ಖಂಡಿತವಾಗಿ ವರ್ಷಗಳಿಂದ ನೀವು ಯಾರೊಂದಿಗೆ ಮಾತನಾಡಿದ್ದೀರಿ, ಯಾರಿಗೆ SMS ಮಾಡಿದ್ದೀರಿ ಎಂಬುದರ ಸಂಪೂರ್ಣ ವಿವರವನ್ನು ಫೇಸ್‌ಬುಕ್ ನಿಮ್ಮ ಅರಿವಿಲ್ಲದಂತೆ ಸಂಗ್ರಹಿಸುತ್ತಿದೆ ಎನ್ನಲಾಗಿದೆ.

ಶಾಕಿಂಗ್‌ ಸುದ್ದಿ:  ನಿಮ್ಮ ಕಾಲ್ ಹಿಸ್ಟರಿ ಮತ್ತು SMSಗಳನ್ನು ಕದಿಯುತ್ತಿದೆ FB..!

ಅದುವೇ ಆಂಡ್ರಾಯ್ಡ್ ಫೋನಿನಲ್ಲಿ ಮಾತ್ರವೇ ಎನ್ನಲಾಗಿದ್ದು, iOS ಬಳಕೆದಾರರು ಇದರಿಂದ ಸೇಫ್‌ ಆಗಿದ್ದಾರೆ. ಆಪಲ್ ಬಳಕೆದಾರರ ಮಾಹಿತಿಯನ್ನು ಫೇಸ್‌ಬುಕ್‌ಗೆ ಖದೀಯಲು ಅವಕಾಶವನ್ನು ಮಾಡಿಕೊಟ್ಟಿಲ್ಲ ಎನ್ನಲಾಗಿದೆ. ಆದರೆ ಆಂಡ್ರಾಯ್ಡ್ ಬಳಕೆದಾರರು ಫೇಸ್‌ಬುಕ್‌ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳುವ ಸಂದರ್ಭದಲ್ಲಿ ಮಾಹಿತಿಯನ್ನು ಪಡೆಯಲು ಅನುಮತಿಯನ್ನು ನೀಡಿದ್ದರೇ ಮಾತ್ರ ನಿಮ್ಮ ಸಂಪೂರ್ಣ ಜಾತಕವನ್ನು ಫೇಸ್‌ಬುಕ್‌ಗೆ ನೀಡಿದಂತೆಯೇ ಸರಿ.

arstechnica ಬಿಚ್ಚಿಟ್ಟಿರುವ ಮಾಹಿತಿ ಇದು:

arstechnica ಬಿಚ್ಚಿಟ್ಟಿರುವ ಮಾಹಿತಿ ಇದು:

5 ಕೋಟಿ ಬಳಕೆದಾರರ ಮಾಹಿತಿಯನ್ನು ಲೀಕ್ ಮಾಡಿದ ಪ್ರಕರಣ ಕಾವು ಪಡೆದುಕೊಂಡಿರುವ ವೇಳೆಯಲ್ಲಿ ಫೇಸ್‌ಬುಕ್ ಬಳಕೆದಾರರ ಕಾಲ್ ಹಿಸ್ಟರಿ ಮತ್ತು SMS ಹಿಸ್ಟರಿಯನ್ನು ವರ್ಷಗಳಿಂದ ಸಂಗ್ರಹಿಸುತ್ತಿದೆ ಎನ್ನಲಾಗಿದೆ. ಈ ಕುರಿತು ARS ಟೆಕ್ನಿಕಾ ಎನ್ನುವ ವೆಬ್‌ಸೈಟ್‌ವೊಂದು ವರದಿ ಮಾಡಿದ್ದು, ಆಂಡ್ರಾಯ್ಡ್‌ ಫೋನಿನಲ್ಲಿ ಫೇಸ್‌ಬುಕ್ ಆಪ್‌ ಬಳಕೆ ಮಾಡಿಕೊಳ್ಳುತ್ತಿರುವ ಬಳಕೆದಾರರ ಕಾಂಟೆಕ್ಟ್ ನೇಮ್‌ಗಳು, ಟೆಲಿಫೋನ್‌ ನಂಬರ್‌ಗಳು, ಟೆಕ್ಸ್ಟ್ ಮೇಸೆಜ್‌ಗಳನ್ನ ಸ್ಟೋರ್ ಮಾಡಿಕೊಂಡಿದೆ ಎನ್ನುವ ಆತಂಕಕಾರಿ ವಿಷಯವನ್ನು ಬಯಲಿಗೆ ತಂದಿದೆ.

ಮೇಸೆಂಜರ್ ಲೈಟ್ ಆಪ್:

ಮೇಸೆಂಜರ್ ಲೈಟ್ ಆಪ್:

ಫೇಸ್‌ಬುಕ್ ಆಪ್ ಬಳಕೆ ಮಾಡಿಕೊಳ್ಳುವವರಿಗಿಂತಲೂ ಹೆಚ್ಚಾಗಿ ಮೇಸೆಂಜರ್ ಮತ್ತು ಫೇಸ್‌ಬುಕ್‌ ಲೈಟ್ ಆಪ್‌ ಗಳನ್ನು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್‌ಸ್ಟಾಲ್ ಮಾಡಿಕೊಂಡಿರುವವ ಸಂಫೂರ್ಣ ಮಾಹಿತಿಯನ್ನು ಫೇಸ್‌ಬುಕ್ ಸಂಗ್ರಹಿಸಿದೆ ಎನ್ನಲಾಗಿದೆ. ಇದಲ್ಲದೇ ನಿಮ್ಮಿಂದ ಫೇಸ್‌ಬುಕ್‌ ಸಂಗ್ರಹಿಸಿದ ಮಾಹಿತಿಯೂ ಯಾವುವು ಎಂಬುದನ್ನು ನೀವೇ ತಿಳಿದುಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಸೋಶಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್ ಬಳಕೆದಾರ ಪ್ರೈವಸಿಯನ್ನು ಹಾಳುಮಾಡುತ್ತಿದೆ. ಇದಕ್ಕಾಗಿ ನೀವು ನಿಮ್ಮ ಫೇಸ್‌ಬುಕ್ ಆಕೌಂಟ್ ಜಿಫ್‌ ಫೈಲ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿದೆ.

ಜಾಹಿರಾತು ನೀಡಿದ ಮರು ದಿನವೇ:

ಜಾಹಿರಾತು ನೀಡಿದ ಮರು ದಿನವೇ:

ಇದಲ್ಲದೇ ಫೇಸ್‌ಬುಕ್‌ ದಿನ ಪತ್ರಿಕೆಗಳಲ್ಲಿ ಕೇಂಬ್ರಿಡ್ಜ್ ಅನಾಲಿಟಿಕಾ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಪುಟದ ಜಾಹಿರಾತು ನೀಡಿದ್ದು, ಬಳಕೆದಾರರ ಮಾಹಿತಿಯನ್ನು ಸುರಕ್ಷಿತವಾಗಿ ಇಡುವ ಭರವಸೆಯನ್ನು ನೀಡಿತ್ತು. ಆದರೆ ಈ ಜಾಹಿರಾತು ನೀಡಿದ ಕೆಲವೇ ಗಂಟೆಗಳಲ್ಲಿ ಈ ಮಾಹಿತಿಯೂ ಲೀಕ್ ಆಗಿದ್ದು, ನೀವು ಬೇಕಿದ್ದಲ್ಲಿ ನಿಮ್ಮ ಫೇಸ್‌ಬುಕ್‌ನ ಸಂಫೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಫೇಸ್‌ಬುಕ್‌ ಬಳಕೆಯೂ ಸುಕ್ಷಿತವಲ್ಲ ಎಂಬುದು ಮತ್ತೊಮ್ಮೆ ಸಾಭೀತಾಗಿದೆ.

ಸಂಪೂರ್ಣ ಮಾಹಿತಿ:

ಸಂಪೂರ್ಣ ಮಾಹಿತಿ:

ನೀವು ಫೇಸ್‌ಬುಕ್‌ನಲ್ಲಿ ಏನೇನು ಮಾಡಿದ್ದಿರಿ ಎಂಬುದರ ಸಂಪೂರ್ಣ ಮಾಹಿತಿಯೂ ಇಲ್ಲಿ ದೊರೆಯಲಿದೆ ಎನ್ನಲಾಗಿದೆ. ಯಾವ ಫೋಸ್ಟ್, ಯಾವ ವಿಡಿಯೋ, ಎಷ್ಟು ಮೇಸೆಜ್, ಎಷ್ಟು ಕಾಲ್, ಎಷ್ಟು ನಿಮಿಷ ಮಾತನಾಡಿದ್ದೀರಾ, ಯಾರೊಂದಿಗೆ ಮಾತನಾಡಿದ್ದೀರಾ, ಫೋನಿನಲ್ಲಿ ಯಾರ ಯಾರ ಹೆಸರುಗಳನ್ನು ಸೇವ್ ಮಾಡಿಕೊಂಡಿದ್ದೀರಾ ಎಂಬುದರ ಸಂಪೂರ್ಣ ಮಾಹಿತಿಯನ್ನು ಫೇಸ್‌ಬುಕ್‌ ಹೊಂದಿದೆ.

ಇನ್‌ಸ್ಟಾಲ್‌ ಮಾಡುವಾಗ ನೀವೆ ಕೊಟ್ಟಿರುವ ಸ್ವಾತಂತ್ರ:

ಇನ್‌ಸ್ಟಾಲ್‌ ಮಾಡುವಾಗ ನೀವೆ ಕೊಟ್ಟಿರುವ ಸ್ವಾತಂತ್ರ:

ದಿನ ಕಳೆದಂತೆ ಅಭಿವೃದ್ಧಿ ಹೊಂದುತ್ತಾ ಸಾಗಿರುವ ಫೇಸ್‌ಬುಕ್‌, ಹಂತ ಹಂತವಾಗಿ ಬಿಡುಗಡೆ ಮಾಡಿದ್ದ ಆಪ್‌ಗಳು ಈ ಮಾಹಿತಿಗಳನ್ನು ಸಂಗ್ರಹಿಸುತ್ತಿವೆ ಎನ್ನಲಾಗಿದೆ. ಒಮ್ಮೆ ಆಪ್ ಇನ್‌ಸ್ಟಾಲ್ ಮಾಡಿಕೊಂಡ ಸಂದರ್ಭದಲ್ಲಿ ಅಲ್ಲಿ ಪ್ರತಿ ಪರ್ಮಿಷನ್ ಗಳಿಗೂ ಆಲೋ ಕೊಟ್ಟ ನಂತರದಲ್ಲಿ ನಿಮ್ಮ ಮಾಹಿತಿಗಳು ಫೇಸ್‌ಬುಕ್ ಖಜಾನೆಯನ್ನು ತುಂಬುತ್ತಿದೆ.

Best Mobiles in India

English summary
Facebook has been collecting call history and SMS data from Android devices. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X