ಏರ್‌ಟೆಲ್‌ನಿಂದ ಗ್ರಾಹಕರಿಗೆ ಪ್ರತಿ ಸೆಕೆಂಡ್ ಬಿಲ್ ಯೋಜನೆ

Posted By:

ತನ್ನ ಎಲ್ಲಾ ಪ್ರಿಪೈಡ್ ಮೊಬೈಲ್ ಗ್ರಾಹಕರನ್ನು ಪ್ರತೀ ಸೆಕುಂಡ್ ಬಿಲ್ ಯೋಜನೆಗೆ ಸರಿಸುವುದಾಗಿ ಏರ್‌ಟೆಲ್ ಘೋಷಿಸಿದೆ. ಕಂಪೆನಿಯ ಪ್ರಕಾರ, "ಪೇ ಫಾರ್ ವಾಟ್ ಯು ಯೂಸ್" ಆರಂಭದ ಭಾಗವಾಗಿ ಈ ಬದಲಾವಣೆಯನ್ನು ಮಾಡಿದ್ದು, ಏರ್‌ಟೆಲ್ ನೆಟ್‌ವರ್ಕ್ ಅನ್ನು ಬಳಸಿದಾಗ ಮಾತ್ರವೇ ಗ್ರಾಹಕರು ಪಾವತಿಸುವಂತೆ ಈ ಯೋಜನೆ ಖಾತ್ರಿಪಡಿಸುತ್ತದೆ.

ಏರ್‌ಟೆಲ್‌ನಿಂದ ಗ್ರಾಹಕರಿಗೆ ಪ್ರತಿ ಸೆಕೆಂಡ್ ಬಿಲ್ ಯೋಜನೆ

ಪ್ರತೀ ಸೆಕೆಂಡ್ ಬಿಲ್ಲಿಂಗ್ ಯೋಜನೆಯ ಅಡಿಯಲ್ಲಿ ಹೆಚ್ಚಿನ ಏರ್‌ಟೆಲ್ ಪ್ರಿಪೈಡ್ ಮೊಬೈಲ್ ಗ್ರಾಹಕರು ಇದ್ದು ಈ ಹೊಸ ಆರಂಭದೊಂದಿಗೆ ಎಲ್ಲಾ ಪ್ರಿಪೈಡ್ ಆಧಾರಿತವು ಪ್ರತಿ ಸೆಕುಂಡು ಯೋಜನೆಗೆ ಸರಿಯಲಿದೆ ಎಂದು ಖಾತ್ರಿಪಡಿಸಿದೆ.

ಓದಿರಿ: ಬಡ ಹುಡುಗನ ಬದುಕನ್ನೇ ಬದಲಾಯಿಸಿದ ಫೇಸ್‌ಬುಕ್ ತಾಣ

ಇನ್ನು ಗ್ರಾಹಕರ ಪ್ರಮಾಣಿತ ದರ ಯೋಜನೆಗಳು ಪ್ರತಿ ಸೆಕುಂಡ್‌ನ ಪಲ್ಸ್ ದರಕ್ಕೆ ವರ್ಗಾವಣೆಗೊಳ್ಳಲಿದೆ ಮತ್ತು ತಮ್ಮ ಆಯ್ಕೆಯ ಪ್ರತಿ ಸೆಕೆಂಡ್ ಅಥವಾ ಪ್ರತಿ ನಿಮಿಷಗಳ ಯೋಜನೆಗಳಿಗೆ ಬದಲಾಯಿಸಿಕೊಳ್ಳುವ ಸಾಮರ್ಥ್ಯವನ್ನು ಅವರು ಪಡೆದುಕೊಂಡಿದ್ದಾರೆ.

ಓದಿರಿ: ಅಮೆಜಾನ್‌ ತಾಣದಲ್ಲಿ ಖರೀದಿಗಾಗಿ ಅತ್ಯುತ್ತಮ ಸಲಹೆಗಳು

ಇನ್ನು ಈ ಯೋಜನೆಯನ್ನು ಆರಂಭಿಸಿರುವ ಭಾರತಿ ಏರ್‌ಟೆಲ್‌ನ (ಭಾರತ ಮತ್ತು ದಕ್ಷಿಣ ಏಷ್ಯಾ) ಮಾರುಕಟ್ಟೆ ಕಾರ್ಯಾಚರಣೆಗಳ ಡೈರೆಕ್ಟರ್ ಅಜಯ್ ಪುರಿ, ವ್ಯವಹಾರದಲ್ಲಿ ನಮ್ಮ ಗ್ರಾಹಕರು ನಮಗೆ ಅತ್ಯಂತ ಮಹತ್ವದವರಾಗಿದ್ದಾರೆ.

ಅದಕ್ಕಾಗಿ ಅವರಿಗೆ ವಿಶ್ವದಲ್ಲಿಯೇ ಅತ್ಯುತ್ತಮವಾದ ಆರಂಭ ಯೋಜನೆಗಳನ್ನು ಪರಿಚಯಿಸುತ್ತಿದ್ದೇವೆ. ನಮ್ಮ ನೆಟ್‌ವರ್ಕ್ ಗುಣಮಟ್ಟದಲ್ಲಿ ಹೂಡಿಕೆ ಮಾಡಲು ನಾವು ಕಾತರರಾಗಿದ್ದು ನೆಟ್‌ವರ್ಕ್ ಯೋಜನೆಯನ್ನು ಇನ್ನಷ್ಟು ಮುಂದಕ್ಕೆ ವಿಸ್ತರಿಸುವ ಆಸೆ ನಮ್ಮದಾಗಿದೆ. ಇನ್ನು ಪ್ರತಿ ಸೆಕೆಂಡ್ ಯೋಜನೆಯು ಅವರು ಬಳಸುತ್ತಿರುವುದಕ್ಕೆ ಮಾತ್ರವೇ ಪಾವತಿಸುವುದನ್ನು ಖಾತ್ರಿಪಡಿಸುತ್ತದೆ.

English summary
Airtel has announced that it will move all its prepaid mobile customers to the per second bill plan.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot