Just In
- 33 min ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- 53 min ago
ಬೆಂಗಳೂರಿಗರೇ ಗಮನಿಸಿ... ಇನ್ನೇನು ಕೆಲವೇ ದಿನದಲ್ಲಿ NIMBUS ಆಪ್ ಲಾಂಚ್!
- 3 hrs ago
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್‌ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- 3 hrs ago
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
Don't Miss
- Finance
ಫೆಬ್ರವರಿ 1ರಿಂದ ಟಾಟಾ ಮೋಟರ್ಸ್ ಕಾರು ದುಬಾರಿ, ಯಾಕೆ, ಇಲ್ಲಿದೆ ಕಾರಣ?
- Movies
ಅತಿಹೆಚ್ಚು ಟಿವಿಆರ್ ಗಳಿಸಿದ ಕನ್ನಡದ 14 ಚಿತ್ರಗಳಿವು; ಆರನೇ ಸ್ಥಾನಕ್ಕೇರಿದ ಕಾಂತಾರ!
- News
ಹಾಸನ ಟಿಕೆಟ್ ಬಗ್ಗೆ ಮಾತನಾಡಲು ರೇವಣ್ಣ ಬಿಟ್ಟರೆ ಯಾರಿಗೂ ಅವಕಾಶವಿಲ್ಲ; HDKಗೆ ಸೂರಜ್ ಟಾಂಗ್
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Sports
Women's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜಿಯೋ 299ರೂ ಪ್ರೀಪೇಡ್ ಪ್ಲ್ಯಾನ್‌ಗೆ ಪೈಪೋಟಿ ನೀಡಲು ಏರ್‌ಟೆಲ್‌ನ ಹೊಸ ಅಸ್ತ್ರ!
ದೇಶಿಯ ಟೆಲಿಕಾಂ ವಲಯದಲ್ಲಿಗ ತೀವ್ರ ಪೈಪೋಟಿ ಇದ್ದು, ಟೆಲಿಕಾಂ ಕಂಪನಿಗಳು ಹೊಸ ಗ್ರಾಹಕರನ್ನು ಆಕರ್ಷಿಸಲು ಅಗ್ಗದ ಬೆಲೆಯಲ್ಲಿ ಭಾರಿ ಡೇಟಾ ಆಫರ್‌ಗಳನ್ನು ಪರಿಚಯಿಸುತ್ತಿವೆ. ಮುಖ್ಯವಾಗಿ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಭರ್ಜರಿ ರೀಚಾರ್ಜ್ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಆ ಪೈಕಿ ಏರ್‌ಟೆಲ್ ಈಗ ಹೊಸ ರೀಚಾರ್ಜ್ ಪ್ಯಾಕ್ ಬಿಡುಗಡೆ ಮಾಡಿದೆ.

ಹೌದು, ಏರ್‌ಟೆಲ್ ಇದೀಗ 299ರೂ ರೀಚಾರ್ಜ್ ಪ್ಲ್ಯಾನ್ ಅನ್ನು ಪರಿಚಯಿಸಿದ್ದು, ಈ ಪ್ಯಾಕ್‌ನಲ್ಲಿ ಗ್ರಾಹಕರು ಪ್ರತಿದಿನ 2.5GB ಡೇಟಾವನ್ನು ಉಚಿತವಾಗಿ ಬಳಕೆ ಮಾಡಬಹುದಾಗಿದೆ. 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ಪ್ಲ್ಯಾನ್‌ನಲ್ಲಿ ಗ್ರಾಹಕರು ಉಚಿತ ಕರೆಗಳನ್ನು ಸಹ ಮಾಡಬಹುದಾಗಿದೆ. ಜಿಯೋಗೆ ಟಫ್ ಪೈಪೋಟಿ ನೀಡಲು ಮುಂದಾಗಿ ಈ ರೀಚಾರ್ಜ್ ಪ್ಯಾಕ್ ಅನ್ನು ಹೊರತಂದಿದೆ.

ಪ್ರಸ್ತುತ ದೇಶದ ಟೆಲಿಕಾಂ ವಲಯದಲ್ಲಿ ಜಿಯೋ ಮೊದಲ ಸ್ಥಾನದಲ್ಲಿದ್ದು, ಏರ್‌ಟೆಲ್ ಜಿಯೋ ನೆಟವರ್ಕ್‌ಗೆ ಪ್ರಬಲ ಪ್ರತಿಸ್ಫರ್ಧಿ ಎನ್ನಬಹುದಾಗಿದೆ. ಉಳಿದಂತೆ ವೊಡಾಫೋನ್ ಸಹ ಅತ್ಯುತ್ತಮ ರೀಚಾರ್ಜ್ ಪ್ಲ್ಯಾನ್‌ಗಳನ್ನು ಪರಿಚಯಿಸಿ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಹಾಗಾದರೇ ಏರ್‌ಟೆಲ್‌ನ 299ರೂ ಪ್ಲ್ಯಾನ್ ವಿಶೇಷತೆ ಏನು ಮತ್ತು ಇತರೆ ಟೆಲಿಕಾಂ ಕಂಪನಿಗಳ ಸ್ಪೆಷಲ್ ಪ್ಲ್ಯಾನ್‌ಗಳು ಏನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಏರ್‌ಟೆಲ್ 299 ಪ್ರೀಪೇಡ್ ಪ್ಲ್ಯಾನ್
ಏರ್‌ಟೆಲ್ ಕಂಪನಿಯು ಹೊಸದಾಗಿ 299ರೂ ಪ್ರೀಪೇಡ್ ಪ್ಲ್ಯಾನ್ ಅನ್ನು ಪರಿಚಯಿಸಿದ್ದು, ಈ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಬಳಕೆದಾರರಿಗೆ ಪ್ರತಿದಿನ 2.5GB ಉಚಿತ ಡೇಟಾ ದೊರೆಯಲಿದ್ದು, ಉಚಿತ ರೋಮಿಂಗ್ ನೊಂದಿಗೆ ಅನಿಯಮಿತ ಉಚಿತ ಕರೆಗಳು ಲಭ್ಯವಾಗಲಿವೆ. ಇದರೊಂದಿಗೆ 100 ಉಚಿತ ರಾಷ್ಟ್ರೀಯ ಎಸ್‌ಎಮ್‌ಎಸ್‌ಗಳು ಸಹ ಇರಲಿವೆ.

299 ಪ್ಲ್ಯಾನಿನ ಇತರೆ ಪ್ರಯೋಜನಗಳು
ಏರ್‌ಟೆಲ್ 299ರೂ ಪ್ಲ್ಯಾನ್ ರೀಚಾರ್ಜ್ ಮಾಡಿಕೊಳ್ಳುವ ಮೂಲಕ ಉಚಿತ ಡೇಟಾ, ಕರೆ, ಎಸ್‌ಎಮ್‌ಎಸ್‌ಗಳ ಪ್ರಯೋಜನ ಲಭ್ಯ. ಹಾಗೂ ಅಮೆಜಾನ್ ಪ್ರೈಮ್ ವಿಡಿಯೊ, ಅಮೆಜಾನ್ ಮ್ಯೂಸಿಕ್, ಪ್ರೈಮ್ ರೀಡಿಂಗ್ ಜೊತೆಗೆ ಆಯ್ದ ಅಮೆಜಾನ್ ಉತ್ಪನ್ನಗಳ ಆನ್‌ಲೈನ್ ಖರೀದಿಗೆ ಅನಿಯಮಿತ ಉಚಿತ ಫಾಸ್ಟ್ ಶಿಪ್ಪಿಂಗ್ ಸೇವೆ ಸಹ ದೊರೆಯಲಿದೆ ಎನ್ನಲಾಗಿದೆ.

ಜಿಯೋ 299 ಪ್ಲ್ಯಾನ್
ಜಿಯೋ ಸಹ 299ರೂ ಪ್ಲ್ಯಾನ್ ಅನ್ನು ಪರಿಚಯಿಸಿದ್ದು, ಇದು ಸಹ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಅವಧಿಯಲ್ಲಿ ಬಳಕೆದಾರರಿಗೆ ಉಚಿತ 3G/4G ಡೇಟಾ ದೊರೆಯುವುದರೊಂದಿಗೆ ಉಚಿತ ಕರೆಗಳನ್ನು ಸಹ ಮಾಡಬಹುದಾಗಿದ್ದು, ಫ್ರೀ 100 ಎಸ್‌ಎಮ್‌ಎಸ್ ಸಹ ಇರಲಿವೆ. ಜಿಯೋ ಸಿನಿಮಾ, ಜಿಯೋ ಟಿವಿ ಆಯ್ಕೆಗಳ ಪ್ರಯೋಜನ ಸೀಗಲಿದೆ.

ವೊಡಾಫೋನ್ 255 ಪ್ಲ್ಯಾನ್
ಪೈಪೋಟಿಯಲ್ಲಿರುವ ವೊಡಾಫೋನ್ ಕಂಪನಿಯ 255ರೂ ಪ್ಲ್ಯಾನ್ ಗ್ರಾಹಕರಿಗೆ ಲಭ್ಯವಿದ್ದು, ಈ ಪ್ಯಾಕ್ ಸಹ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಪ್ರತಿದಿನ ಉಚಿತ 2GB ಡೇಟಾ ದೊರೆಯಲಿದ್ದು, ಉಚಿತ ಕರೆಗಳ ಸಹ ಬಳಕೆದಾರರಿಗೆ ಲಭ್ಯವಾಗಲಿವೆ. ವೊಡಾಫೋನ್ ಪ್ಲೇ ಆಪ್ ಆಕ್ಸ್‌ಸ್ ಆಯ್ಕೆಯು ಗ್ರಾಹಕರಿಗೆ ಉಚಿತವಾಗಿ ಸೀಗಲಿದೆ. ಈ ಆಪ್‌ನಲ್ಲಿ ಕಂಟೆಂಟ್ ಸ್ಟ್ರೀಮಿಂಗ್ ಸೌಲಭ್ಯವಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470