ಏರ್‌ಟೆಲ್‌ನ 'Wynk Tube' ಆಪ್‌ ಲಾಂಚ್!.40ಲಕ್ಷ ಹಾಡುಗಳ ಸಂಗಮ!

|

ಜನಪ್ರಿಯ ಏರ್‌ಟೆಲ್‌ ಟೆಲಿಕಾಂ ಸಂಸ್ಥೆಯು ಗ್ರಾಹಕರನ್ನು ಸೆಳೆಯಲು ಹೊಸದೊಂದು ಹೆಜ್ಜೆ ಇರಿಸಿದ್ದು, ಆ ಮೂಲಕ ತನ್ನ ಸೇವೆಗಳ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಕಂಪನಿಯು ಇದೀಗ ಗ್ರಾಹಕರಿಗೆ ಮ್ಯೂಸಿಕ್ ಮತ್ತು ವಿಡಿಯೊಗಳ ಮನರಂಜನೆ ಒದಗಿಸಲು ಸಜ್ಜಾಗಿದ್ದು, ಅದಕ್ಕಾಗಿ 'ವೈಂಕ್‌ ಟ್ಯೂಬ್'(Wynk Tube app) ಮ್ಯೂಸಿಕ್ ಮತ್ತು ವಿಡಿಯೊ ಸ್ಟ್ರೀಮಿಂಗ್ ಸೇವೆಯ ಆಪ್‌ ಅನ್ನು ಪರಿಚಯಿಸಿದೆ.

 ಏರ್‌ಟೆಲ್‌ನ  'Wynk Tube' ಆಪ್‌ ಲಾಂಚ್!.40ಲಕ್ಷ ಹಾಡುಗಳ ಸಂಗಮ!

ಹೌದು, ಏರ್‌ಟೆಲ್ ಸಂಸ್ಥೆಯು ಇತ್ತೀಚಿಗೆ ವೈಂಕ್‌ ಟ್ಯೂಬ್ ಆಪ್‌ ಅನ್ನು ಲಾಂಚ್‌ ಮಾಡಿದ್ದು, ಈ ಆಪ್‌ನಲ್ಲಿ ಸುಮಾರು 40ಲಕ್ಷ ಹಾಡುಗಳ ಕಲೆಕ್ಷನ್‌ ಇದೆ. ಹಾಗೇ ಹಾಡುಗಳೊಂದಿಗೆ ವಿಡಿಯೊ ಸಹ ವೀಕ್ಷಿಸಬಹುದಾಗಿದ್ದು, ಯೂಟ್ಯೂಬ್‌ ತರಹವೇ ಈ ವೈಂಕ್‌ ಟ್ಯೂಬ್‌ ಕೆಲಸ ಮಾಡಲಿದೆ. ಹಾಗಾದರೇ ಏರ್‌ಟೆಲ್‌ನ ವೈಂಕ್‌ ಟ್ಯೂಬ್‌ ಮ್ಯೂಸಿಕ್‌ ಸ್ಟ್ರೀಮಿಂಗ್‌ ವಿಶೇಷ ಅಂಶಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಹಾಡು ಮತ್ತು ವಿಡಿಯೊ

ಹಾಡು ಮತ್ತು ವಿಡಿಯೊ

ಏರ್‌ಟೆಲ್‌ ಸಂಸ್ಥೆಯ ವೈಂಕ್‌ ಟ್ಯೂಬ್‌ ಮ್ಯೂಸಿಕ್ ಸ್ಟ್ರೀಮಿಂಗ್ ಸೇವೆಯು ಯೂಟ್ಯೂಬ್ ಮ್ಯೂಸಿಕ್‌ ಹಾಗೂ ಸ್ಪಾಟಿಫೈ ಮ್ಯೂಸಿಕ್‌ನಂತೆ ಇರಲಿದ್ದು, ಜನಪ್ರಿಯ ಹಾಡುಗಳನ್ನು ಕೇಳಬಹುದಾಗಿದ್ದು, ಅದರೊಂದಿಗೆ ವಿಡಿಯೊಗಳನ್ನು ಸಹ ವೀಕ್ಷಸಬಹುದಾದ ಆಯ್ಕೆ ಗ್ರಾಹಕರಿಗೆ ದೊರೆಯಲಿದೆ.

ನಗರ ಪ್ರದೇಶಗಳತ್ತ ಹೆಚ್ಚಿನ ಒಲವು

ನಗರ ಪ್ರದೇಶಗಳತ್ತ ಹೆಚ್ಚಿನ ಒಲವು

ಈಗಾಗಲೇ ಮೆಟ್ರೊ ಸಿಟಿಗಳಲ್ಲಿ ಮ್ಯೂಸಿಕ್‌ ಹವಾ ಜೋರಾಗಿದ್ದು, ಜನಪ್ರಿಯ ಮ್ಯೂಸಿಕ್‌ ಸ್ಟ್ರೀಮಿಂಗ್‌ ಆಪ್‌ಗಳನ್ನು ಗ್ರಾಹಕರು ಬಳಸುತ್ತಿದ್ದಾರೆ. ಏರ್‌ಟೆಲ್‌ ಮೆಟ್ರೊ ಸಿಟಿಗಳೊಂದಿಗೆ, ದೇಶದ ಸಣ್ಣ ನಗರಗಳ ಮತ್ತು ಪಟ್ಟಣ ಪ್ರದೇಶಗಳತ್ತ ಹೆಚ್ಚಿನ ಒಲವು ತೋರಲಿದ್ದು, ಆ ಭಾಗದ ಗ್ರಾಹಕರನ್ನು ಸೆಳೆಯಲು ಉದ್ದೇಶಿಸಿದೆ ಎನ್ನಲಾಗಿದೆ.

12 ಭಾಷೆಗಳ ಆಯ್ಕೆ

12 ಭಾಷೆಗಳ ಆಯ್ಕೆ

ಏರ್‌ಟೆಲ್‌ ವೈಂಕ್ ಮ್ಯೂಸಿಕ್‌ ಸ್ಟ್ರೀಮಿಂಗ್ ಸೇವೆಯು 12 ಭಾಷೆಗಳ ಆಯ್ಕೆಯನ್ನು ಹೊಂದಿರಲಿದ್ದು, ಸದ್ಯ ಭೋಜ್‌ಪೂರಿ, ಪಂಜಾಬಿ ಮತ್ತು ಹಿಂದಿಯಲ್ಲಿ ಲಭ್ಯವಿದೆ. ಹಾಗೇ ಕನ್ನಡ, ಮರಾಠಿ, ತೆಮಿಳ, ತೆಲಗು, ಮತ್ತು ಇಂಗ್ಲೀಷ ಭಾಷೆ ಸೇರಿದಂತೆ ಒಟ್ಟು 12 ಭಾಷೆಗಳ ಆಯ್ಕೆಗಳಲ್ಲಿ ದೊರೆಯಲಿದೆ.

ಮೂರು ಪ್ಲ್ಯಾಟ್‌ಫಾರ್ಮ್‌ನಲ್ಲಿ ಲಭ್ಯ

ಮೂರು ಪ್ಲ್ಯಾಟ್‌ಫಾರ್ಮ್‌ನಲ್ಲಿ ಲಭ್ಯ

ಏರ್‌ಟೆಲ್‌ ವೈಂಕ್ ಮ್ಯೂಸಿಕ್ ಆಪ್‌ ಪ್ರಸ್ತುತ ಆಂಡ್ರಾಯ್ಡ್‌ ಓಎಸ್‌ ಡಿವೈಸ್‌ಗಳಲ್ಲಿ ದೊರೆಯಲಿದ್ದು, ನಂತರದಲ್ಲಿ ಈ ಆಪ್‌ ವೆಬ್‌ ವರ್ಷನ್‌ ಮತ್ತು ಐಓಎಸ್‌ ಬಳಕೆದಾರರಿಗೂ ಸಹ ಲಭ್ಯವಾಗಲಿದೆ. ಆಪ್‌ನಲ್ಲಿ ವಾಯಿಸ್‌ ಸರ್ಚ್‌ ಆಯ್ಕೆ ಮತ್ತು ಪಿಚ್ಚರ್‌ ಟು ಪಿಚ್ಚರ್ ಆಯ್ಕೆ ಸಹ ನೀಡಲಾಗುತ್ತದೆ.

ಒಂದು ತಿಂಗಳು ಉಚಿತ

ಒಂದು ತಿಂಗಳು ಉಚಿತ

ಏರ್‌ಟೆಲ್‌ ವೈಂಕ್ ಟ್ಯೂಬ್‌ ಆಪ್‌ ಏರ್‌ಟೆಲ್‌ ಬಳಕೆದಾರರಿಗೆ ಉಚಿತವಾಗಿ ಲಭ್ಯವಾಗಲಿದೆ. ಇನ್ನು ಇತರೆ ಟೆಲಿಕಾಂ ಬಳಕೆದಾರರಿಗೆ ಆರಂಭದಲ್ಲಿ ಒಂದು ತಿಂಗಳು ಉಚಿತವಾಗಿ ದೊರೆಯಲಿದ್ದು, ಮುಂದೆ ಮಾಸಿಕ ಚಂದಾ ಶುಲ್ಕ 99ರೂ.ಗಳನ್ನು ವಿಧಿಸಲಾಗುತ್ತದೆ.

ಓದಿರಿ : ಮತ್ತೆ ಬೆಲೆ ಇಳಿಕೆ ಕಂಡ ಶಿಯೋಮಿ 'ಪೊಕೊ ಎಫ್‌ 1' ಸ್ಮಾರ್ಟ್‌ಫೋನ್!ಓದಿರಿ : ಮತ್ತೆ ಬೆಲೆ ಇಳಿಕೆ ಕಂಡ ಶಿಯೋಮಿ 'ಪೊಕೊ ಎಫ್‌ 1' ಸ್ಮಾರ್ಟ್‌ಫೋನ್!

Best Mobiles in India

English summary
Airtel Wynk Tube launched offering music and video streaming service.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X