ಸ್ಮಾರ್ಟ್‌ಫೋನ್‌ ನಿಮ್ಮ ಗುಣದ ಬಗ್ಗೆ ಸಂಪೂರ್ಣ ಮಾಹಿತಿ ಹೇಳುತ್ತದೆ!

By Suneel
|

ಐಫೋನ್ ಬಳಸುವವರಿಗಿಂತ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಬಳಸುವವರೇ ತುಂಬಾ ಲಕ್ಕಿ. ಯಾಕಂದ್ರೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ನಿಮ್ಮ ಗುಣಗಳು ಮತ್ತು ವ್ಯಕ್ತಿತ್ವವನ್ನು ಹೇಳುತ್ತದೆ. ಸ್ಮಾರ್ಟ್‌ಫೋನ್ ಬಳಸುವವರಿಗೆ ಇದೊಂದು ಕುತೂಹಲ ಮಾಹಿತಿಯೂ ಹೌದು, ಹಾಗೆ ಒಳ್ಳೆಯ ಸುದ್ದಿಯೂ ಹೌದು,

ಇನ್ನೊಂದು ವಿಶೇಷತೆ ಎಂದರೆ ಮಹಿಳೆಯರು ಐಫೋನ್‌ಗಿಂತ ಹೆಚ್ಚಾಗಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಬಳಸಲು ಇಚ್ಛಿಸುತ್ತಾರೆ ಎಂದು ಸಂಶೋಧಕರು ಹೇಳಿದ್ದಾರೆ. ಸಂಶೋಧಕರ ತಂಡವೊಂದು ನಡೆಸಿದ ಅಧ್ಯಯನದಿಂದ " ವ್ಯಕ್ತಿತ್ವವು ವಿವಿಧ ಸ್ಮಾರ್ಟ್‌ಫೋನ್‌ಗಳನ್ನು ಬಳಸುವವರ ನಡುವೆ ವಿವಿಧ ರೀತಿಯ ವ್ಯಕ್ತಿತ್ವ ಇರುತ್ತದೆ" ಎಂಬುದನ್ನು ತಿಳಿಯಲಾಗಿದೆ. ನೀವು ಸ್ಮಾರ್ಟ್‌ಫೋನ್‌ ಬಳಕೆದಾರರೇ ಆಗಿದ್ದಲ್ಲಿ, ಲೇಖನದ ಸ್ಲೈಡರ್‌ನಲ್ಲಿನ ವಿಶೇಷ ಮಾಹಿತಿ ತಿಳಿಯಿರಿ.

'ಮಹಿಳೆಯರ ಸ್ತನಗಳ' ಗಾತ್ರ ಅಳತೆಗೆ ಜಪಾನಿಯರ ಸ್ಮಾರ್ಟ್‌ಫೋನ್‌ ಆಪ್‌!

ವ್ಯಕ್ತಿತ್ವ ಚಿತ್ರಣ

ವ್ಯಕ್ತಿತ್ವ ಚಿತ್ರಣ

'ಸ್ಮಾರ್ಟ್‌ಫೋನ್‌ ಆಯ್ಕೆ ಮಾಡುವುದೇ ಸ್ಮಾರ್ಟ್‌ಫೋನ್‌ ವ್ಯಕ್ತಿತ್ವದ ಪ್ರಾಥಮಿಕ ಹಂತ, ಈ ಪ್ರಕ್ರಿಯೆಯೇ ಹಲವು ಗುಣಗಳನ್ನು ವ್ಯಕ್ತಿಯ ಬಗ್ಗೆ ನೀಡುತ್ತದೆ", ಎಂದು ಅಮೆರಿಕದ ಲಿಂಕಾನ್‌ ವಿಶ್ವವಿದ್ಯಾಲಯದ ಸಂಶೋಧಕಿ 'ಹೀದರ್ ಷಾ' ಹೇಳಿದ್ದಾರೆ.

ಸಂಶೋಧನೆ

ಸಂಶೋಧನೆ

ಅಮೆರಿಕದ ಲಿಂಕಾನ್‌ ವಿಶ್ವವಿದ್ಯಾಲಯದ ಸಂಶೋಧಕರು ಎರಡು ಪ್ರಮುಖ ಅಧ್ಯಯನಗಳನ್ನು ನಡೆಸಿದ್ದಾರೆ. ಐಫೋನ್ ಬಳಕೆದಾರರು ಮತ್ತು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರ ನಡುವಿನ ವ್ಯಕ್ತಿತ್ವದ ವ್ಯತ್ಯಾಸಗಳ ಕುರಿತು ಅಧ್ಯಯನ ನಡೆಸಿದ್ದಾರೆ.

ಮೊದಲನೇ ಅಧ್ಯಯನ

ಮೊದಲನೇ ಅಧ್ಯಯನ

ಮೊದಲನೇ ಅಧ್ಯಯನದಲ್ಲಿ ಸಂಶೋಧಕರು 240 ಅಭ್ಯರ್ಥಿಗಳಿಗೆ ಪ್ರತಿಯೊಂದು ಸ್ಮಾರ್ಟ್‌ಫೋನ್‌ ಬ್ರ್ಯಾಂಡ್ ಜೊತೆಗಿನ ಸಂಯೋಜಿತ ಗುಣಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಎರಡನೇ ಅಧ್ಯಯನದಲ್ಲಿ 530 ಐಫೋನ್‌ ಮತ್ತು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಬಳಕೆದಾರರಲ್ಲಿ ನಿಜವಾದ ವ್ಯಕ್ತಿತ್ವ ಚಹರೆಗಳ ವಿರುದ್ಧ ಪರಿಶೀಲನೆ ನಡೆಸಿದ್ದಾರೆ.

ಫಲಿತಾಂಶ

ಫಲಿತಾಂಶ

ಮೊದಲನೇ ಅಧ್ಯಯನದಿಂದ ಆಂಡ್ರಾಯ್ಡ್ ಬಳಕೆದಾರರು ಹೆಚ್ಚು ಪ್ರಮಾಣಿಕತೆ ಮತ್ತು ನಮ್ರತೆ, ಒಪ್ಪಿಕೊಳ್ಳುವಿಕೆ ಮತ್ತು ಮುಕ್ತತೆ ವ್ಯಕ್ತಿತ್ವವನ್ನು ಹೊಂದಿರುವ ಬಗ್ಗೆ ತಿಳಿಯಲಾಗಿದೆ. ಆದರೆ ಅವರು ಐಫೋನ್‌ ಬಳಕೆದಾರರಿಗಿಂತ ಕಡಿಮೆ ಬಹಿರ್ಮುಖಿಗಳಾಗಿ ಕಾಣಿಸಿಕೊಂಡಿದ್ದಾರೆ.

 ಫಲಿತಾಂಶ

ಫಲಿತಾಂಶ

ಎರಡನೇ ಅಧ್ಯಯನದಿಂದ ವ್ಯಕ್ತಿತ್ವ ಚಹರೆಯಲ್ಲಿ ಏಕಪ್ರಕಾರ ವಾಸ್ತವದಲ್ಲಿ ಇರಲಿಲ್ಲ. ಪ್ರಮಾಣಿಕತೆ ಮತ್ತು ನಮ್ರತೆಯು ಆಂಡ್ರಾಯ್ಡ್‌ ಬಳಕೆದಾರರಲ್ಲಿ ಹೆಚ್ಚಾಗಿ ಕಂಡಬಂದಿದೆ. ಮಹಿಳೆಯರು ಐಫೋನ್‌ ಬಳಸುವುದಕ್ಕಿಂತ ಎರಡು ಪಟ್ಟು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಸಲು ಆಸಕ್ತಿ ಹೊಂದಿದ್ದಾರೆ ಎಂಬುದನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ.

ಉನ್ನತ ಸ್ಥಿತಿ

ಉನ್ನತ ಸ್ಥಿತಿ

ಹೋಲಿಕೆ ತಪ್ಪಿಸಿಕೊಳ್ಳುವಿಕೆಯಲ್ಲಿ ಗುಣಗಳನ್ನು ಪರಿಶೀಲಿಸಿದಾಗ, ಒಂದೇ ರೀತಿಯ ಪ್ರಾಡಕ್ಟ್‌ಗಳನ್ನು ಇತರರಂತೆ ಹೊಂದಿದ್ದಲ್ಲಿ, ಐಫೋನ್‌ ಬಳಕೆದಾರರಿಗಿಂತ ಆಂಡ್ರಾಯ್ಡ್ ಬಳಕೆದಾರರು ಹೆಚ್ಚು ಹೋಲಿಕೆಗಳನ್ನು ತಪ್ಪಿಸುತ್ತಾರೆ.

ಐಫೋನ್‌ ಬಳಕೆದಾರರ ಅಲೋಚನೆ

ಐಫೋನ್‌ ಬಳಕೆದಾರರ ಅಲೋಚನೆ

ಐಫೋನ್‌ ಬಳಕೆದಾರರು ಉನ್ನತ ಮಟ್ಟದ ಫೋನ್‌ ಹೊಂದುವುದು ಹೆಚ್ಚು ಮುಖ್ಯ ಎಂದು ಅಲೋಚಿಸುತ್ತಾರೆ. ಆಂಡ್ರಾಯ್ಡ್ ಬಳಕೆದಾರರು ಇದಕ್ಕೆ ವಿರುದ್ಧವಾದ ಅಲೋಚನೆ ವ್ಯಕ್ತಪಡಿಸುತ್ತಾರೆ.

ಸ್ಮಾರ್ಟ್‌ಫೋನ್‌ಗಳು

ಸ್ಮಾರ್ಟ್‌ಫೋನ್‌ಗಳು

ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಅವರ ಡಿವೈಸ್‌ ಒಂದು ಮಿನಿ ಡಿಜಿಟಲ್‌ ಆವೃತ್ತಿ ಆಗುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ಹಲವರು ತಮ್ಮ ಬ್ರ್ಯಾಂಡ್‌ಗಳನ್ನು ಇತರರು ಬಳಸುತ್ತಿದ್ದಲ್ಲಿ, ತಮ್ಮ ಬಗ್ಗೆ ಹಲವು ಮಾಹಿತಿಗಳು ತಿಳಿಯುತ್ತದೆ ಎಂದು ಇಷ್ಟಪಡುವುದಿಲ್ಲ ಎಂದು 'ಹೀದರ್ ಷಾ' ಹೇಳಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

'ಮಹಿಳೆಯರ ಸ್ತನಗಳ' ಗಾತ್ರ ಅಳತೆಗೆ ಜಪಾನಿಯರ ಸ್ಮಾರ್ಟ್‌ಫೋನ್‌ ಆಪ್‌!'ಮಹಿಳೆಯರ ಸ್ತನಗಳ' ಗಾತ್ರ ಅಳತೆಗೆ ಜಪಾನಿಯರ ಸ್ಮಾರ್ಟ್‌ಫೋನ್‌ ಆಪ್‌!

'ಒಪೊ ಎಫ್‌1ಎಸ್‌' ಸ್ಮಾರ್ಟ್‌ಫೋನ್‌ ಭಾರತದಲ್ಲಿ ಲಾಂಚ್‌: ವಿಶೇಷತೆಗಳೇನು?'ಒಪೊ ಎಫ್‌1ಎಸ್‌' ಸ್ಮಾರ್ಟ್‌ಫೋನ್‌ ಭಾರತದಲ್ಲಿ ಲಾಂಚ್‌: ವಿಶೇಷತೆಗಳೇನು?

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Android smartphone users are more humble, honest than iPhone owners: Study. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X