ಉಗ್ರರನ್ನು ಪತ್ತೆ ಮಾಡುವ ಆಧುನಿಕ ಸಾಧನಗಳು

By Ashwath
|

ಭಾರತದಲ್ಲಿ ಉಗ್ರಗಾಮಿ ಚಟುವಟಿಕೆ ಹೆಚ್ಚಾಗುತ್ತಿದೆ. ಫೆಬ್ರವರಿ ತಿಂಗಳಿನಲ್ಲಿ ಹೈದರಾಬಾದಿನ ದಿಲ್‌ಸುಕ್‌ ನಗರದಲ್ಲಿ ಬಾಂಬ್‌ ಸ್ಟೋಟಿಸಿದ್ರು. ಈಗ ಬೆಂಗಳೂರಿನಲ್ಲಿ ಬಾಂಬ್‌ ಸ್ಪೋಟಿಸಿದ್ದಾರೆ.ಆದರೆ ಉಗ್ರರ ಚಟುವಟಿಕೆ ಮೆಟ್ಟಿ ಹಾಕಲು ವಿಶ್ವದ ಅನೇಕ ದೇಶಗಳಲ್ಲಿ ತಂತ್ರಜ್ಞಾನಗಳ ಪ್ರಯೋಗ ನಡೆಯುತ್ತಲೇ ಇದೆ. ಹೀಗಾಗಿ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ವಿಶ್ವದ ಪ್ರಭಲ ದೇಶಗಳು ಉಪಯೋಗಿಸುವ 5 ಪ್ರಮುಖ ಸಾಧನಗಳ ಪಟ್ಟಿಯನ್ನು ಗಿಜ್ಬಾಟ್‌ ತಂದಿದೆ. ಒಂದೊಂದೆ ಪುಟ ತಿರುಗಿಸಿ ಮಾಹಿತಿ ಓದಿಕೊಂಡು ಹೋಗಿ.

ಇದನ್ನೂ ಓದಿ : ಅಂತರಿಕ್ಷ ಯಾನಿಗಳ ಆಹಾರವನ್ನು ನೋಡಿದ್ದೀರಾ ?

ಉಗ್ರರನ್ನು ಪತ್ತೆ ಹಚ್ಚುವ ಆಧುನಿಕ ಸಾಧನಗಳು

ಉಗ್ರರನ್ನು ಪತ್ತೆ ಹಚ್ಚುವ ಆಧುನಿಕ ಸಾಧನಗಳು

ಅಮೆರಿಕದ ಜನರಲ್‌ ಅಟಾಮಿಕ್ಸ್ ಅರೋನಾಟಿಕಲ್‌ ಸಿಸ್ಟಮ್ಸ್ ನವರು 2007ರಲ್ಲಿ ಸೈನ್ಯಕ್ಕೆಂದೆ ತಯಾರಿಸಿದ ವಿಶೇಷ ವಿಮಾನ. 50,000ಅಡಿಗಿಂತಲೂ ಎತ್ತರದಲ್ಲಿ ಹಾರಬಲ್ಲದು ಮತ್ತು ಎತ್ತರದಿಂದಲೇ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯ ಈ ಹಂಟರ್‌ ಕಿಲ್ಲರ್‌ ಡ್ರೋನ್‌ ವಿಮಾನಕ್ಕಿದೆ.

ಉಗ್ರರನ್ನು ಪತ್ತೆ ಹಚ್ಚುವ ಆಧುನಿಕ ಸಾಧನಗಳು

ಉಗ್ರರನ್ನು ಪತ್ತೆ ಹಚ್ಚುವ ಆಧುನಿಕ ಸಾಧನಗಳು

ಸ್ನೇಕ್‌ ರೋಬೋಟ್‌ ಹೇಗೆ ಕೆಲಸ ಮಾಡುತ್ತದೋ ಅದೇ ರೀತಿಯಲ್ಲಿ ಈ ರೋಬೋಟ್ ಕೆಲಸ ಮಾಡುತ್ತದೆ. ಸೈನಿಕರಿಗೆ ಯಾವ ಪ್ರದೇಶದ ಒಳಗೆ ನುಸುಳಲಾಗುವುದಿಲ್ಲವೋ ಆ ಪ್ರದೇಶದ ಒಳಗೆ ನುಸುಳಿ ಅಲ್ಲಿನ ಫೋಟೋ ಮತ್ತು ಆ ಪ್ರದೇಶದ ಮಾಹಿತಿಯನ್ನು ಈ ರೋಬೋಟ್‌ ಕಳುಹಿಸುತ್ತದೆ.

ಉಗ್ರರನ್ನು ಪತ್ತೆ ಹಚ್ಚುವ ಆಧುನಿಕ ಸಾಧನಗಳು

ಉಗ್ರರನ್ನು ಪತ್ತೆ ಹಚ್ಚುವ ಆಧುನಿಕ ಸಾಧನಗಳು

ಉಗ್ರಗಾಮಿ ಚಟುವಟಿಕೆಗಳನ್ನು ನಿಯಂತ್ರಿಸಲು ಗೂಢಾಚಾರ ಉಪಗ್ರಹವನ್ನು ಕೆಲ ದೇಶಗಳು ಉಡಾವಣೆ ಮಾಡಿವೆ. ಈ ಉಪಗ್ರಹಗಳು ಗೂಗಲ್ ಅರ್ಥ್‌ ಹೇಗೆ ಕೆಲಸ ಮಾಡುತ್ತದೋ ಅದೇ ರೀತಿಯ ಕೆಲಸ ಮಾಡುತ್ತಿದ್ದರೂ ಅದಕ್ಕಿಂತ ಲಕ್ಷ ಪಟ್ಟು ನಿಖರವಾಗಿ ಚಿತ್ರಗಳನ್ನು ಸೆರೆ ಹಿಡಿಯುತ್ತವೆ. ಮುಂಬೈ ದಾಳಿಯ ಒಂದು ವರ್ಷದ ನಂತರ 2009 ಏಪ್ರಿಲ್‌ನಲ್ಲಿ ಭಾರತ ಗೂಢಾಚಾರ ಉಪಗ್ರಹ ರಿಸ್ಯಾಟ್‌- 2(RISAT-2) ಉಡಾವಣೆ ಮಾಡಿದೆ.

ಉಗ್ರರನ್ನು ಪತ್ತೆ ಹಚ್ಚುವ ಆಧುನಿಕ ಸಾಧನಗಳು

ಉಗ್ರರನ್ನು ಪತ್ತೆ ಹಚ್ಚುವ ಆಧುನಿಕ ಸಾಧನಗಳು

ರಿಮೋಟ್‌ ಕಂಟ್ರೋಲ್‌ ಮೂಲಕ ನಿಯಂತ್ರಿಸಬಹುದಾದ ಈ ರೋಬೋಟ್‌ ಯಂತ್ರವನ್ನು ಬಾಂಬ್‌ ಪತ್ತೆ ಹಚ್ಚಲು ಬಳಸಲಾಗುತ್ತದೆ. ಈ ರೋಬೋಟ್‌ ಯಂತ್ರದಲ್ಲಿ ಸೆನ್ಸಾರ್‌ ಇದ್ದು ಬಾಂಬ್‌ನ್ನು ಪತ್ತೆ ಹಚ್ಚಿ ಕೂಡಲೇ ಮಾಹಿತಿ ರವಾನಿಸುತ್ತದೆ.ಅಮೆರಿಕ ಅಫ್ಘಾನಿಸ್ತಾನದ ಮೇಲೆ ನಡೆಸಿದ ಯುದ್ದ ವೇಳೆ ಪ್ರಥಮವಾಗಿ ಈ ರೋಬೋಟ್‌ನ್ನು ಬಳಸಲಾಯಿತು.

ಉಗ್ರರನ್ನು ಪತ್ತೆ ಹಚ್ಚುವ ಆಧುನಿಕ ಸಾಧನಗಳು

ಉಗ್ರರನ್ನು ಪತ್ತೆ ಹಚ್ಚುವ ಆಧುನಿಕ ಸಾಧನಗಳು

ಭಯೋತ್ಪಾದಕರನ್ನು ಮೆಟ್ಟಿಹಾಕಲು ಅಮೆರಿಕದ ಸೈನಿಕರಲ್ಲಿ ಮಾತ್ರ ಈ ಮದ್ದು ಗುಂಡುಗಳು ಇವೆ. ಟಂಗ್‌ಸ್ಟಾನ್- ನೈ ಟ್ರಿಲಿಯನ್‌ನಿಂದ ಬಳಸಿ ಈ ಮಾರಕ ಗುಂಡುಗಳನ್ನು ತಯಾರಿಸಲಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X