ಹೃದಯಾಘಾತದಿಂದ ಮುಕ್ತಿ ನೀಡುವ ಸ್ಮಾರ್ಟ್ ಅಪ್ಲಿಕೇಶನ್
ಹೃದಯಾಘಾತದಿಂದ ಬಳಲುತ್ತಿರುವ ರೋಗಿಗಳು ಶೀಘ್ರ ಚೇತರಿಕೆ ಹೊಂದಲು ಸಹಾಯವಾಗುವ ಅಪ್ಲಿಕೇಶನ್ ಅನ್ನು ಕಂಡುಹಿಡಿಯಲಾಗಿದೆ.
ಓದಿರಿ: ಫೋನ್ ಇಂಟರ್ನೆಟ್ ಬಿಲ್ ಮಿತಿಮೀರಿದೆಯೇ? ಇಲ್ಲಿದೆ ಪರಿಹಾರ

'ಡೇ ಬೈ ಡೇ' ಎಂಬ ಹೆಸರಿನ ಅಪ್ಲಿಕೇಶನ್ ಇದಾಗಿದ್ದು ಡಿಜಿಟಲ್ ಕೋಚ್, ವೀಡಿಯೊ ಮತ್ತು ಲೇಖನಗಳನ್ನು ಬಳಸಿಕೊಂಡು ಹಂತ ಹಂತದ ಚೇತರಿಕೆ ಪ್ರಕ್ರಿಯೆ ಮೂಲಕ ರೋಗಿಗಳಿಗೆ ಸಹಾಯ ಮಾಡುತ್ತದೆ. ತಮ್ಮ ಜೀವನ ಶೈಲಿಯನ್ನು ಇದರಿಂದ ರೋಗಿಗಳು ಬದಲಾಯಿಸಿಕೊಂಡು ಶೀಘ್ರ ಗುಣಮುಖರಾಗಬಹುದು.

ಪ್ರಥಮ ಹೃದಯಾಘಾತವನ್ನು ಅನುಭವಿಸಿದವರು ತಮ್ಮ ಜೀವನ ಶೈಲಿಯನ್ನು ಬಳಸಿಕೊಂಡು ಎರಡನೇ ಹೃದಯಾಘಾತದಿಂದ ಚೇತರಿಕೆಯನ್ನು ಪಡೆದುಕೊಳ್ಳಬೇಕು. ಆತಂಕ, ಖಿನ್ನತೆ ಮತ್ತು ಮಿತಿಮೀರಿದ ಮಾಹಿತಿ ಹೃದಯಾಘಾತಕ್ಕೆ ಕಾರಣವಾಗಿದೆ.
ಓದಿರಿ: ಫೋನ್ ಅಸಲಿಯೇ ನಕಲಿಯೇ ಪತ್ತೆಹಚ್ಚುವುದು ಹೇಗೆ?
ಈ ಸಂದರ್ಭದಲ್ಲಿ ರೋಗಿಗಳೇ ಕೆಲವೊಂದು ಉತ್ತಮ ಅಭ್ಯಾಸಗಳನ್ನು ಅನುಸರಿಸುವ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಬೇಕು. ಯಾವಾಗ ಯಾವ ವಿಧವಾದ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು, ಆಹಾರ ಅಭ್ಯಾಸಗಳನ್ನು ಹೇಗೆ ಬದಲಾಯಿಸಿಕೊಳ್ಳಬೇಕು, ಧೂಮಪಾನ ತ್ಯಜಿಸುವುದು, ವ್ಯಾಯಾಮವನ್ನು ಪಾಲಿಸುವುದು ಮೊದಲಾದ ಪದ್ಧತಿಗಳನ್ನು ತಮ್ಮದಾಗಿಸಿಕೊಳ್ಳಬೇಕು.


Click it and Unblock the Notifications