ಫೋನ್ ಅಸಲಿಯೇ ನಕಲಿಯೇ ಪತ್ತೆಹಚ್ಚುವುದು ಹೇಗೆ?

Posted By:

ಸ್ಮಾರ್ಟ್‌ಫೋನ್ ಮಾರುಕಟ್ಟೆ ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂದರೆ ಅಸಲಿ ಮತ್ತು ನಕಲಿಗಳ ಆಯ್ಕೆಯೇ ಬಳಕೆದಾರರಿಗೆ ದೊಡ್ಡ ಸಿಕ್ಕಾಗಿದೆ. ಹೌದು ಒಂದು ಅಧ್ಯಯನದ ಪ್ರಕಾರ ಅಸಲಿ ಫೋನ್‌ಗಳಿಗಿಂತ ನಕಲಿ ಫೋನ್‌ಗಳೇ ಹೆಚ್ಚು ಕಾರುಬಾರನ್ನು ಮಾಡುತ್ತಿವೆಯಂತೆ!. ಈ ನಕಲಿ ಫೋನ್‌ಗಳು ಎಷ್ಟು ಕರಾರುವಾಕ್ಕಾಗಿ ಬರುತ್ತಿವೆ ಎಂದರೆ ಇದು ಅಸಲಿಯೋ ನಕಲಿಯೋ ಎಂಬ ಗೊಂದಲವನ್ನು ನಮ್ಮಲ್ಲಿ ಉಂಟುಮಾಡುತ್ತದೆ.

ಓದಿರಿ: ಅದ್ಭುತ ದರಕಡಿತ ಕೊಡುಗೆ: ಖರೀದಿ ಮಾಡಲು ಮರೆಯದಿರಿ

ಹಾಗಿದ್ದರೆ ಇದಕ್ಕೆ ಪರಿಹಾರವೇ ಇಲ್ಲವೇ. ನಾವು ಖರೀದಿಸಿರುವ ಫೋನ್ ಅಸಲಿಯೇ ನಕಲಿಯೇ ಎಂಬುದನ್ನು ಪತ್ತೆಹಚ್ಚುವುದು ಹೇಗೆ? ಎಂಬುದು ನಿಮ್ಮ ತಲೆತಿನ್ನುತ್ತಿದೆ ಎಂದಾದಲ್ಲಿ ಇಂದಿನ ಲೇಖನದಲ್ಲಿ ಅದಕ್ಕೆ ಪರಿಹಾರವನ್ನು ನಾವು ನೀಡುತ್ತಿದ್ದೇವೆ. ನಕಲಿ ಫೋನ್‌ಗಳನ್ನು ಪತ್ತೆಹಚ್ಚುವುದು ಹೇಗೆ ಎಂಬುದನ್ನು ಕುರಿತಾದ ಮಾಹಿತಿಯನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಬಣ್ಣ ಮತ್ತು ಆಕಾರ

ಬಣ್ಣ ಮತ್ತು ಆಕಾರ

ಬಣ್ಣ ಮತ್ತು ಆಕಾರ

ಫೋನ್‌ನ ಲಾಂಚ್ ಅನ್ನು ಯಾವ ಬಣ್ಣದಲ್ಲಿ ಮಾಡಲಾಗಿದೆ ಎಂಬುದನ್ನು ಅರಿತುಕೊಳ್ಳಿ. ಲಾಂಚ್ ಆಗಿರುವ ಫೋನ್‌ನ ಆಕಾರ, ಬಣ್ಣ ಮತ್ತು ಸ್ಟೈಲ್ ಅನ್ನು ನೀವು ಖರೀದಿಸಿರುವ ಫೋನ್ ಹೊಂದಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಫೋನ್‌ನ ವೆಬ್‌ಸೈಟ್‌ಗೆ ಹೋಗಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ.

ಹಾರ್ಡ್‌ವೇರ್ ಬಟನ್

ಹಾರ್ಡ್‌ವೇರ್ ಬಟನ್

ಹಾರ್ಡ್‌ವೇರ್ ಬಟನ್

ಅಸಲಿ ಮತ್ತು ನಕಲಿ ಫೋನ್‌ನಲ್ಲಿ ಹಾರ್ಡ್‌ವೇರ್ ಬಟನ್‌ನಲ್ಲಿ ಕೂಡ ವ್ಯತ್ಯಾಸಗಳನ್ನು ನಿಮಗೆ ಕಾಣಬಹುದು. ಚಿತ್ರದಲ್ಲಿ ಅಸಲಿ ಫೋನ್ ಹೊಂದಿರುವಲ್ಲಿಯೇ ಹಾರ್ಡ್‌ವೇರ್ ಬಟನ್ ಇದೆಯೇ ಎಂಬುದನ್ನು ಪರಿಶೀಲಿಸಿ.

ಲೋಗೋ ಅಥವಾ ಪ್ಯಾಕೇಜ್

ಲೋಗೋ ಅಥವಾ ಪ್ಯಾಕೇಜ್

ಲೋಗೋ ಅಥವಾ ಪ್ಯಾಕೇಜ್

ಫೋನ್ ಖರೀದಿಯ ಮುನ್ನ ಕಂಪೆನಿಯ ಲೋಗೋ, ಮಾಡೆಲ್ ಹೆಸರು ಮತ್ತು ಪ್ಯಾಕೇಜಿಂಗ್ ನೋಡಿಕೊಳ್ಳಿ. ಅಸಲಿ ಫೋನ್‌ನ ಪ್ಯಾಕೇಜಿಂಗ್ ಉತ್ತಮ ಮಟ್ಟದಲ್ಲಿದ್ದು ನಕಲಿ ಫೋನ್ ಪ್ಯಾಕೇಜಿಂಗ್ ಕಳಪೆ ಮಾದರಿಯಲ್ಲಿರುತ್ತದೆ.

ಭಾರ

ಭಾರ

ಭಾರ

ಆನ್‌ಲೈನ್ ಮಳಿಗೆಗಳಲ್ಲಿ ನೀವು ಖರೀದಿಸುವ ಫೋನ್‌ನ ತೂಕವನ್ನು ಅರಿಯಲಾಗುವುದಿಲ್ಲ. ಆದರೆ ಆಫ್‌ಲೈನ್ ಮಳಿಗೆಗಳಲ್ಲಿ ಫೋನ್‌ನ ತೂಕವನ್ನು ಪತ್ತೆಹಚ್ಚಬಹುದಾಗಿದೆ. ಇದರಿಂದ ಫೋನ್‌ನ ಗುಣಮಟ್ಟವನ್ನು ನಿಮಗೆ ಅರಿತುಕೊಳ್ಳಬಹುದು.

ದರ ಕಡಿತ ಮಾರಾಟ

ದರ ಕಡಿತ ಮಾರಾಟ

ದರ ಕಡಿತ ಮಾರಾಟ

ಯಾವುದೇ ಆನ್‌ಲೈನ್ ರೀಟೈಲ್ ತಾಣಗಳು ದರಕಡಿತ ಆಫರ್ ಅನ್ನು ನೀಡುತ್ತಿವೆ ಎಂದಾದಲ್ಲಿ ಪರಿಶೀಲನೆ ಅತ್ಯಗತ್ಯವಾದುದು. ಬೇರೆ ಸೈಟ್‌ನಲ್ಲಿ ಕೂಡ ಬೆಲೆಯನ್ನು ಖಾತ್ರಿಪಡಿಸಿಕೊಳ್ಳಿ.

ಫೀಚರ್ಸ್ ಪರಿಶೀಲಿಸಿ

ಫೀಚರ್ಸ್ ಪರಿಶೀಲಿಸಿ

ಫೀಚರ್ಸ್ ಪರಿಶೀಲಿಸಿ

ನೀವು ಯಾವ ಫೋನ್ ಅನ್ನು ಖರೀದಿಸುತ್ತಿದ್ದೀರೋ ಅದರ ಫೀಚರ್ಸ್ ಅನ್ನು ಪರಿಶೀಲಿಸಿಕೊಳ್ಳಿ. ಕಂಪೆನಿ ಪ್ರಸ್ತುತಪಡಿಸಿರುವ ಎಲ್ಲಾ ಫೀಚರ್ಸ್‌ಗಳು ಫೋನ್‌ನಲ್ಲಿವೆಯೇ ಎಂಬುದನ್ನು ಪರಿಶೀಲಿಸಿ.

ಗ್ಯಾರಂಟಿ ಅಥವಾ ವಾರೆಂಟಿ

ಗ್ಯಾರಂಟಿ ಅಥವಾ ವಾರೆಂಟಿ

ಗ್ಯಾರಂಟಿ ಅಥವಾ ವಾರೆಂಟಿ

ಇದು ಹೆಚ್ಚು ಮಹತ್ಪಪೂರ್ಣವಾದುದು. ಫೋನ್ ಗ್ಯಾರಂಟಿ ಅಥವಾ ವಾರಂಟಿಯನ್ನು ನೀಡುತ್ತಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ.

ವೆಂಡೋರ್ ಹೆಸರು ಅಥವಾ ರೇಟಿಂಗ್

ವೆಂಡೋರ್ ಹೆಸರು ಅಥವಾ ರೇಟಿಂಗ್

ವೆಂಡೋರ್ ಹೆಸರು ಅಥವಾ ರೇಟಿಂಗ್

ವೆಂಡೋರ್‌ನ ಹೆಸರು ಮತ್ತು ಹಿನ್ನಲೆಯನ್ನು ತಿಳಿದುಕೊಳ್ಳಿ. ಮತ್ತು ಇಲ್ಲಿಂದ ಖರೀದಿ ಮಾಡಿರುವವರು ನಮೂದಿಸಿರುವ ರೇಟಿಂಗ್ ಅನ್ನು ತಿಳಿದುಕೊಳ್ಳಿ.

ಐಎಮ್ಇಐ ಸಂಖ್ಯೆ

ಐಎಮ್ಇಐ ಸಂಖ್ಯೆ

ಐಎಮ್ಇಐ ಸಂಖ್ಯೆ

ಪ್ರತೀ ಫೋನ್‌ನಲ್ಲಿ ಐಎಮ್ಇಐ ಸಂಖ್ಯೆ ಇರುತ್ತದೆ. ಇದನ್ನು ಸೂಕ್ತವಾಗಿ ಪರಿಶೀಲನೆ ಮಾಡಿಕೊಳ್ಳಿ.

ಅಪ್ಲಿಕೇಶನ್ ನೆರವು

ಅಪ್ಲಿಕೇಶನ್ ನೆರವು

ಅಪ್ಲಿಕೇಶನ್ ನೆರವು

ಆಂಡ್ರಾಯ್ಡ್ ಅಪ್ಲಿಕೇಶನ್‌ಗಾಗಿಯೇ ಕೆಲವೊಂದು ಅಪ್ಲಿಕೇಶನ್‌ಗಳಿದ್ದು ಫೋನ್ ಸಂಬಂಧಿತ ಎಲ್ಲಾ ಮಾಹಿತಿ ಇಲ್ಲಿ ದೊರೆಯುತ್ತದೆ. ನಕಲಿ ಫೋನ್‌ನ ಪತ್ತೆಹಚ್ಚುವಿಕೆಗೆ ಕೂಡ ಇದು ಹೆಚ್ಚು ಸಹಾಯಕವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here we are listing out some procedures to identify a fake smartphone. These are considered as very easy steps to point out a fake phone.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot