Subscribe to Gizbot

ಟೆಲಿಕಾಂ ವಾರ್‌ಗೆ ಬಹುದೊಡ್ಡ ಟ್ವಿಸ್ಟ್!..ಜಿಯೋ ಕೈ ಜೋಡಿಸಿದ ಏರ್‌ಟೆಲ್!! ಏನಿದು ಶಾಕಿಂಗ್ ಸುದ್ದಿ??

Written By:

ಟೆಲಿಕಾಂ ಸುದ್ದಿಗಳೆ ಹಾಗೆ ಯಾರೂ ಊಹಿಸದ ಹಾಗೆ ಇರುತ್ತವೆ. ಅಚ್ಚರಿಯ ಹೊಸ ಹೊಸ ಸುದ್ದಿಗಳು ಜನರನ್ನು ತಲುಪುತ್ತವೆ.! ಯಾವುದೋ ಟೆಲಿಕಾಂ ಒಂದು ದಿನ ಉಚಿತ ಡೇಟಾ ನೀಡಿ ಗಮನ ಸೆಳೆಯುತ್ತದೆ.!! ಇವೆಲ್ಲವನ್ನು ಈಗ ಹೇಳುತ್ತಿರುವ ಉದ್ದೇಶ ಇಷ್ಟೆ. ಟೆಲಿಕಾಂ ಪ್ರಪಂಚದಲ್ಲಿ ಇಷ್ಟು ದಿನ ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದ ಜಿಯೋ ಮತ್ತು ಏರ್‌ಟೆಲ್ ಈಗ ಗೆಳೆಯರಾಗಿ ಬದಲಾಗಿವೆ.!!

ಹೌದು, ಇದನ್ನು ನೀವು ನಂಬಲೇಬೇಕು! ಜಿಯೋ ಮತ್ತು ಏರ್‌ಟೆಲ್ ಒಂದಾಗಿವೆ.!! ದೇಶದ ಯಾವೊಬ್ಬ ಪ್ರಜೆಯೂ ಊಹಿಸಲಾಗದ ಮತ್ತೊಂದು ಸಮ್ಮಿಲನ ಟೆಲಿಕಾಂನಲ್ಲಿ ನಡೆದಿದ್ದು, ಏರ್‌ಟೆಲ್ ಜಿಯೋವಿನ ಬೆಂಬಲಕ್ಕೆ ನಿಂತಿದೆ. ಇಷ್ಟು ದಿನ ಏರ್‌ಟೆಲ್ ವರ್ಸಸ್ ಜಿಯೋ ಎಂಬ ಹಣೆಪಟ್ಟಿ ಟೆಲಿಕಾಂನಲ್ಲಿ ಇತ್ತು. ಆದರೆ, ಜಿಯೋ ಮತ್ತು ಏರ್‌ಟೆಲ್ ಇದೀಗ ಒಂದಾಗುತ್ತಿದ್ದು, ಇನ್ನು ಟೆಲಿಕಾಂ ಮಾರುಕಟ್ಟೆಯಲ್ಲಿ 'ಏರ್‌ಟೆಲ್ ಪ್ಲಸ್ ಜಿಯೋ' ಎಂಬಾಗಿದೆ.

ಓದಿರಿ: ಭಾರತದ ಮೊದಲ ಹೈಟೆಕ್ ರೈಲು 'ತೇಜಸ್' ಹೊಂದಿರುವ ತಂತ್ರಜ್ಞಾನಗಳೇನು ಗೊತ್ತಾ?

ಈ ಮಹತ್ವದ ಬೆಳವಣಿಗೆಯಿಂದಾಗಿ ಇತರ ಟೆಲಿಕಾಂ ಗಳಿಗೆ ಈಗಾಗಲೇ ನಡುಕ ಉಂಟಾಗಿದೆ.!! ಹಾಗಾದರೆ, ಏರ್ಟೆಲ್ ಮತ್ತು ಜಿಯೋ ಒಂದಾಗಿದ್ದು ಹೇಗೆ? ಇದರಿಂದ ಟೆಲಿಕಾಂನಲ್ಲಿ ಆಗಬಹುದಾದ ದೊಡ್ಡ ಬದಲಾವಣೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋಗೆ ಉತ್ತಮ ಸಂಪರ್ಕ ನೀಡಲು ಏರ್‌ಟೆಲ್ ಒಪ್ಪಿಗೆ!!

ಜಿಯೋಗೆ ಉತ್ತಮ ಸಂಪರ್ಕ ನೀಡಲು ಏರ್‌ಟೆಲ್ ಒಪ್ಪಿಗೆ!!

ಜಿಯೋ ಶುರುವಾಗಿನಿಂದ ಹಿಡಿದು ಇಲ್ಲಿಯವರೆಗೂ ಕಾಲ್‌ಡ್ರಾಪ್ ಸಮಸ್ಯೆಯನ್ನು ಅನುಭವಿಸುತ್ತಲೇ ಇದೆ. ಟೆಲಿಕಾಂನ ಇತರ ಎಲ್ಲಾ ಕಂಪೆನಿಗಳೇ ಈ ಕಾಲ್‌ಡ್ರಾಪ್ ಸಮಸ್ಯೆಗೆ ಕಾರಣ ಎನ್ನಲಾಗುತ್ತಿತ್ತು. ಆದರೆ, ಈಗ ಜಿಯೋಗೆ ಉತ್ತಮ ಸಂಪರ್ಕ ನೀಡಲು ಏರ್‌ಟೆಲ್ ಒಪ್ಪಿಗೆ ನೀಡಿದ್ದು, ಇನ್ನು ಜಿಯೋ ಕಾಲ್‌ಡ್ರಾಪ್ ಸಮಸ್ಯೆ ಕಡಿಮೆಯಾಗಬಹುದು.!!

ಇದರಿಂದ ಏರ್‌ಟೆಲ್‌ಗೆ ಏನು ಲಾಭ?

ಇದರಿಂದ ಏರ್‌ಟೆಲ್‌ಗೆ ಏನು ಲಾಭ?

ದೇಶದಲ್ಲಿಯೇ ಅತ್ಯಧಿಕ ಗ್ರಾಹಕರನ್ನು ಹೊಂದಿರುವ ಏರ್‌ಟೆಲ್ ಜಿಯೋ ಜೊತೆ ಕೈ ಜೋಡಿಸುವ ಮೂಲಕ ಲಾಭ ಮಾಡಿಕೊಳ್ಳು ಮುಂದಾಗಿದೆ.!! ಜಿಯೋವಿನ ಉತ್ತಮ ಸೇವೆಗೆ ಸಹಕಾರ ನೀಡಿ ಇಂಟರ್‌ಕನೆಕ್ಟ್‌ ಚಾರ್ಜ್ ಅನ್ನು ಹೆಚ್ಚು ಪಡೆದು ಲಾಭ ಮಾಡಿಕೊಳ್ಳುವ ಯೋಚನೆಯಲ್ಲಿದೆ ಏರ್‌ಟೆಲ್.!!

ಏನಿದು ಇಂಟರ್‌ಕನೆಕ್ಟ್ ಚಾರ್ಜ್!!

ಏನಿದು ಇಂಟರ್‌ಕನೆಕ್ಟ್ ಚಾರ್ಜ್!!

ಒಂದು ಟೆಲಿಕಾಂ ಕಂಪೆನಿಯಿಂದ ಮತ್ತೊಂದು ಕಂಪೆನಿಗೆ ಗ್ರಾಹಕರು ಕರೆ ಮಾಡಿದರೆ, ಗ್ರಾಹಕನ ಕಂಪೆನಿ ಇತರ ಕಂಪೆನಿಗೆ ಒಂದು ಕರೆಗೆ 14 ಪೈಸೆ ಹಣವನ್ನು ನೀಡಬೇಕು ಇದನ್ನು ಇಂಟರ್‌ಕನೆಕ್ಟ್ ಚಾರ್ಜ್ ಎಂದು ಕರೆಯುತ್ತಾರೆ.!!

ಇತರ ಟೆಲಿಕಾಂ ಕಂಪೆನಿಗಳಿಗೆ ನಡುಕ ಏಕೆ?

ಇತರ ಟೆಲಿಕಾಂ ಕಂಪೆನಿಗಳಿಗೆ ನಡುಕ ಏಕೆ?

ನಂಬರ್ ಒನ್ ಟೆಲಿಕಾಂ ಏರ್‌ಟೆಲ್ ಮತ್ತು ಜಿಯೋ ಒಂದಾದರೆ ಬೇರೆ ಕಂಪೆನಿಗಳು ಸಹ ಜಿಯೋ ಹಿಂದೆಯೇ ಓಡಬೇಕಾಗುತ್ತದೆ. ಹೆಚ್ಚು ಗ್ರಾಹಕರನ್ನು ಹೊಂದಿರುವ ಏರ್‌ಟೆಲ್ ಇದರಿಂದ ಹೆಚ್ಚು ಲಾಭ ಮಾಡಿಕೊಂಡರೆ, ಇತ್ತ ಆದಾಯವು ಇಲ್ಲ ಮತ್ತು ಶಕ್ತಿಯೂ ಇಲ್ಲ ಎಂಬ ಪರಿಸ್ಥಿತಿ ಇತರ ಟೆಲಿಕಾಂಗಳಿಗೆ ಎದುರಾಗುತ್ತದೆ.!!

ಜಿಯೋವಿನ ಮುಂದಿನ ಕಥೆ ಏನು?

ಜಿಯೋವಿನ ಮುಂದಿನ ಕಥೆ ಏನು?

ಕಾಲ್‌ಡ್ರಾಪ್ ಮತ್ತು ನೆಟ್‌ವರ್ಕ್ ಸಮಸ್ಯೆಯಿಂದ ಮುಕ್ತಿ ಪಡೆಯುವ ಜಿಯೋಗೆ ಭಾರಿ ಸಂಖ್ಯೆಯಲ್ಲಿ ಗ್ರಾಹಕರು ಒಳಬರುವ ನಿರೀಕ್ಷೆ ಹೆಚ್ಚಾಗುತ್ತಿದೆ.!! ಇದರಿಂದ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ಜಿಯೋಗೆ ಸಹಕಾರಿಯಾಗುತ್ತದೆ.!!

ಏರ್‌ಟೆಲ್ ಸೋಲೊಪ್ಪಿದ್ದು ಏಕೆ?

ಏರ್‌ಟೆಲ್ ಸೋಲೊಪ್ಪಿದ್ದು ಏಕೆ?

ಭಾರತದ ನಂಬರ್‌ ಒನ್ ಶ್ರೀಮಂತ ಅಂಬಾನಿ ಮುನ್ನಡೆಸುತ್ತಿರುವ ಜಿಯೋವನ್ನು ಕೊನೆಗಾಣಿಸಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಏರ್‌ಟೆಲ್‌ಗೆ ಮನದಟ್ಟಾಗಿದೆ. ಇದರ ಜೊತೆಯಲ್ಲಿಯೇ ಟ್ರಾಯ್ ಕೂಡ ಇಂಟರ್‌ಕನೆಕ್ಟ್ ಚಾರ್ಜ್ ತೆಗೆದುಹಾಕಲು ಯೋಚಿಸಿರುವುದು ಏರ್‌ಟೆಲ್‌ನ ಈ ನಿರ್ಧಾರಕ್ಕೆ ಕಾರಣವಾಗಿದೆ.!!

 ಇಂಟರ್‌ಕನೆಕ್ಟ್ ಚಾರ್ಜ್ ಕ್ಯಾನ್ಸಲ್ ಆದರೆ?

ಇಂಟರ್‌ಕನೆಕ್ಟ್ ಚಾರ್ಜ್ ಕ್ಯಾನ್ಸಲ್ ಆದರೆ?

ಟ್ರಾಯ್ ನಿರ್ಧರಿಸಿದಂತೆ ಟೆಲಿಕಾಂನಲ್ಲಿರುವ ಇಂಟರ್‌ಕನೆಕ್ಟ್‌ ದರವನ್ನು ಏನಾದರೂ ತೆಗೆದುಹಾಕಿದರೆ ಜಿಯೋವನ್ನು ಯಾವ ಟೆಲಿಕಾಂ ಕೂಡ ಏನೂ ಮಾಡಲು ಸಾಧ್ಯವಿಲ್ಲಾ. ಒಂದು ವೇಳೆ ಇಂಟರ್‌ಕನೆಕ್ಟ್‌ ದರ ತೆಗೆದರೆ ಜಿಯೋ ಇನ್ನೂ ಕಡಿಮೆ ಬೆಲೆಗೆ ಸೇವೆಯನ್ನು ನೀಡುತ್ತದೆ.!!

ಓದಿರಿ:ಜಿಯೋಗಾಗಿ ಮತ್ತೊಂದು ನಿಯಮ ಜಾರಿಗೆ ತಂದ ಟ್ರಾಯ್..ಸಕ್ಕತ್ತಾಗಿದೆ ಇದು ಗ್ರಾಹಕರಿಗೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
jio is offering the cheapest mobile data network and the mobile tariffs for the smartphone users in the world. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot