2075ರಲ್ಲಿ ಡಾಕ್ಟರ್‌ಗಳೇ ಬೇಕಾಗಿಲ್ಲವಂತೆ, ವಿಶ್ವವನ್ನು ಈ ಮೂರೇ ಶಕ್ತಿಗಳು ನಿಯಂತ್ರಿಸಲಿವೆಯಂತೆ..!!!!
2075ರಲ್ಲಿ ಇಡೀ ಪ್ರಪಂಚದಲ್ಲೇ ದೈತ್ಯ ಶಕ್ತಿಗಳಾಗಿ ಬೆಳೆಯಲಿದ್ದು, ಇಡೀ ವಿಶ್ವವನ್ನೇ ನಿಯಂತ್ರಿಸುವ ಸಾಮಾರ್ಥ್ಯವನ್ನು ಪಡೆದುಕೊಳ್ಳಲಿ ಎಂದು ಆಪಲ್ ಸಹ ಸಂಸ್ಥಾಪಕ ಸ್ಟೀವ್ ವೋಜ್ನಿಯಾಕ್ ಅಭಿಪ್ರಾಯಪಟ್ಟಿದ್ಧಾರೆ.
ಯಾವುದೇ ಎಲ್ಲೇ ಇಲ್ಲದೇ ಇಡೀ ವಿಶ್ವದಲ್ಲೇ ತಮ್ಮ ಬಾಹುಗಳನ್ನು ಚಾಚಿಕೊಂಡಿರುವ ಆಪಲ್, ಗೂಗಲ್ ಮತ್ತು ಫೇಸ್‌ಬುಕ್ ಗಳು 2075ರಲ್ಲಿ ಇಡೀ ಪ್ರಪಂಚದಲ್ಲೇ ದೈತ್ಯ ಶಕ್ತಿಗಳಾಗಿ ಬೆಳೆಯಲಿದ್ದು, ಇಡೀ ವಿಶ್ವವನ್ನೇ ನಿಯಂತ್ರಿಸುವ ಸಾಮಾರ್ಥ್ಯವನ್ನು ಪಡೆದುಕೊಳ್ಳಲಿ ಎಂದು ಆಪಲ್ ಸಹ ಸಂಸ್ಥಾಪಕ ಸ್ಟೀವ್ ವೋಜ್ನಿಯಾಕ್ ಅಭಿಪ್ರಾಯಪಟ್ಟಿದ್ದಾರೆ.

ಓದಿರಿ: ಜಿಯೋ DTH ಮೂರು ತಿಂಗಳಲ್ಲ, 6 ತಿಂಗಳು ಫ್ರೀ...!!
ಸ್ವಿವ್ ಜಾಬ್ಸ್ ನೊಂದಿಗೆ ಸೇರಿ ಆಪಲ್ ಕಂಪನಿಯನ್ನು 1976ರಲ್ಲಿ ಸ್ಥಾಪಿಸಿದ್ದ ಸ್ಟೀವ್ ವೋಜ್ನಿಯಾಕ್, ಸಿಲಿಕಾನ್ ವ್ಯಾಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಈಗಾಗಲೇ ವಿಶ್ವದ ದೈತ್ಯ ಕಂಪನಿಗಳ ಪಟ್ಟಿಯ ಮುಂಚುಣಿಯಲ್ಲಿರುವ ಆಪಲ್ ಹಾಗೂ ಗೂಗಲ್ ಮತ್ತು ಫೇಸ್‌ಬುಕ್ ಉತ್ತಮ ಬಂಡವಾಳವನ್ನು ಹೊಂದಿದಲ್ಲದೇ ಇನ್ನು ಬೆಳೆಯುತ್ತಲೆ ಇವೇ, ಇದು ಹೀಗೆ ಸಾಗಿದರೆ ಮುಂದೆ 2075ರಲ್ಲಿ ವಿಶ್ವವನ್ನು ನಿಯಂತ್ರಿಸುವ ಮೂರು ಶಕ್ತಿಗಳಾಗಲಿದೆ ಎಂದಿದ್ದಾರೆ.
ಓದಿರಿ: ಜಿಯೋ ಪ್ರೈಮ್ ಸದಸ್ಯತ್ವ ಕೊನೆ ಆಯ್ತು: ಉಳಿದ ಜಿಯೋ ಗ್ರಾಹಕರ ಕಥೆ ಏನು..?

ಮರಳುಗಾಡುಗಳೇ ಮಂದಿನ ಸೂಪರ್ ಹೈಟೆಕ್ ಸಿಟಿ:
ಸಿಲಿಕಾನ್ ವ್ಯಾಲಿಯಲ್ಲಿ ನಡೆದ 'ದಿ ಫೀವೂಚರ್ ಆಫ್ ಹ್ಯೂಮಾನಿಟಿ, ವೆರ್ ವಿಲ್ ಬಿ ಇನ್ 2075' ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಟೀವ್ ವೋಜ್ನಿಯಾಕ್, ಮುಂದಿನ ದಿನಗಳಲ್ಲಿ ಜಗತ್ತೇ ಬದಲಾಗಲಿದ್ದು, ಸದ್ಯದ ಮರಳುಗಾಡುಗಳೇ ಮಂದಿನ ಸೂಪರ್ ಹೈಟೆಕ್ ನಗರಗಳಾಗಿ ರೂಪುಗೊಳ್ಳಲಿದೆ, ಇದಕ್ಕಾಗಿ ಈಗಾಗಲೇ ತಯಾರಿ ಆರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ.

2075ಕ್ಕೆ ಡಾಕ್ಟರ್ ಫ್ರೀ ವಾತಾವರಣ ನಿರ್ಮಾಣ:
ಅಲ್ಲೇ 2075ಕ್ಕೆ ಡಾಕ್ಟರ್ ಫ್ರೀ ವಾತಾವರಣವೂ ನಿರ್ಮಾಣಗೊಳ್ಳಲಿದ್ದು, ಮೆಡಿಕಲ್ ಡಿವೈಸ್‌ಗಳು ಈ ಸ್ಥಾನವನ್ನು ಅಲಂಕರಿಸಲಿವೆಯಂತೆ. ಇದಕ್ಕಾಗಿ ಟೆಕ್ನಾಲಜಿಯೇ ಪ್ರಮುಖ ಪಾತ್ರವಹಿಸಲಿದ್ದು, ಅದಕ್ಕಾಗಿ ಆಪಲ್, ಗೂಗಲ್ ಮತ್ತು ಫೇಸ್‌ಬುಕ್ ಗಳು ವಿಶ್ವವನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಲಿವೆ ಎಂದು.

ಮಂಗಳ ಗ್ರಹದಲ್ಲಿ ಕಾಲೋನಿ:
ಇದಲ್ಲದೇ 2075ರ ವೇಳೆಗೆ ಭೂಮಿಯಲ್ಲಿರುವ ಜನರು ಇತರೇ ಬಾಹ್ಯಕಾಶ ಜೀವಿಗಳೊಂದಿಗೆ ಸಂಪರ್ಕ ಸಾಧಿಸುವುದಲ್ಲದೇ ಅವರಿಗೆ ಸಂವಹನ ಸಹ ನಡೆಸಲಿದ್ದಾರೆಯಂತೆ. 2075ರಲ್ಲಿ ಮನೆಗಳ ಗೋಡೆಗಳು ಸ್ಮಾರ್ಟ್ ಆಗುವುದಲ್ಲದೇ ಮಾನವನು ಮಂಗಳ ಗ್ರಹದಲ್ಲಿ ಕಾಲೋನಿಯನ್ನೇ ಸೃಷ್ಟಿಸುದಲ್ಲದೇ ಅಲ್ಲಿಂದ ಇಲ್ಲಿಗೆ ಫೋನ್ ಕರೆ ಸಹ ಮಾಡುವನಂತೆ. ಒಟ್ಟಿನಲ್ಲಿ ಮಾನವ ಮಂಗಳದ ಆಸೆ ಕೊನೆಗೂ ಕೈಗೂಡಲಿದೆ.


Click it and Unblock the Notifications








