ಆಪಲ್ ಉತ್ಪನ್ನ: ಚೀನಾವನ್ನು ಹಿಂದಿಕ್ಕಿ ಭಾರತಕ್ಕೆ ಮೇಲುಗೈ

Written By:

ಆಪಲ್ ಕಂಪೆನಿಯ ದೃಢ ಅಭಿವೃದ್ಧಿಗೆ ಭಾರತವು ಪ್ರಧಾನವಾಗಿದ್ದು ಜಗತ್ತಿನ ಹೆಚ್ಚು ಮಾನ್ಯ ಕಂಪೆನಿ ಎಂದೇ ಪ್ರಸಿದ್ಧವಾಗಿರುವ ಐಫೋನ್ ಸ್ಮಾರ್ಟ್‌ಫೋನ್, ಐಪ್ಯಾಡ್ ಡಿವೈಸ್ ಮತ್ತು ಮ್ಯಾಕ್ ಕಂಪ್ಯೂಟರ್‌ಗಳ ಮಾರಾಟ ದಿಗ್ಗಜ ಭಾರತದಲ್ಲಿ ತನ್ನ ಉತ್ಪನ್ನದ ಹೆಚ್ಚುವರಿ ಲಾಭವನ್ನು ಗಳಿಸಿಕೊಂಡಿದೆ.

ಓದಿರಿ: ಐಫೋನ್ 7: ಆಪಲ್‌ಗೆ ಶುಕ್ರದೆಸೆ ಸ್ಯಾಮ್‌ಸಂಗ್‌ಗೆ ಶನಿದೆಸೆ

ಆಪಲ್ ಉತ್ಪನ್ನ: ಚೀನಾವನ್ನು ಹಿಂದಿಕ್ಕಿ ಭಾರತಕ್ಕೆ ಮೇಲುಗೈ

ಚೀನಾ ಮಾರುಕಟ್ಟೆಗಿಂತಲೂ ಆಪಲ್ ಕಂಪೆನಿ ಭಾರತದಲ್ಲಿ ತನ್ನ ಮಾರಾಟ ಪ್ರಮಾಣವನ್ನು ಹೆಚ್ಚಿಸಿಕೊಂಡಿದೆ. ಏಪ್ರಿಲ್ ಜೂನ್‌ನಲ್ಲಿ ಮಾರಾಟವು 93% ಇದ್ದು ಚೀನಾದಲ್ಲಿ ಬೆಳವಣಿಗೆಯು 83% ಆಗಿದೆ. ಮೂಲದ ಪ್ರಕಾರ ಪ್ರಮಾಣ ಮತ್ತು ಆದಾಯವನ್ನು ಹೋಲಿಸಿದಾಗ ಚೀನಾದಲ್ಲಿ ಮಾರಾಟವು ಹೆಚ್ಚುವರಿಯಾಗಿದ್ದು $49.6 ಬಿಲಿಯನ್ ಆದಾಯವನ್ನು ಇದು ಕಂಡುಕೊಂಡಿದೆ. ಇನ್ನು ಭಾರತ ಆಪಲ್‌ಗಾಗಿ ಬಿಲಿಯನ್ ಡಾಲರ್ ಮಾರುಕಟ್ಟೆಯಾಗಿ ಹೊರಹೊಮ್ಮಿದೆ

ಓದಿರಿ: ವೈಫೈ ಕುರಿತು ನೀವು ಅರಿಯದ 10 ಸಂಗತಿಗಳು

ಆದರೆ ಭಾರತವು ಹೆಚ್ಚು ವೇಗವಾಗಿ ಬೆಳೆಯುತ್ತಿದ್ದು, ಕಳೆದ ವರ್ಷ ಪ್ರಾಯೋಜಿಸಿರುವ ಐಫೋನ್ 6 ನ ನಂತರ ಆಪಲ್ ಉತ್ಪನ್ನ ಬೇಡಿಕೆ ಇನ್ನಷ್ಟು ಬಲಗೊಂಡಿದೆ. ಆಪಲ್ ಉತ್ಪನ್ನಗಳು ಬಿಸಿ ದೋಸೆಯಂತೆ ಮಾರಾಟವಾಗುತ್ತಿದೆ ಎಂಬುದು ಮುಂಬೈನಲ್ಲಿ ಮಲ್ಟಿ ಬ್ರ್ಯಾಂಡ್ ರೀಟೈಲ್ ಸ್ಟೋರ್ ನಡೆಸುತ್ತಿರುವ ಮನೀಶ್ ಖಾತ್ರಿ ಮಾತಾಗಿದೆ.

ಆಪಲ್ ಉತ್ಪನ್ನ: ಚೀನಾವನ್ನು ಹಿಂದಿಕ್ಕಿ ಭಾರತಕ್ಕೆ ಮೇಲುಗೈ

2018 ರ ಹೊತ್ತಿಗೆ 7 ಮಿಲಿಯನ್ ಯೂನಿಟ್‌ಗಳನ್ನು ಆಪಲ್ ಮಾರಾಟ ಮಾಡುವ ನಂಬಿಕೆಯನ್ನಿಟ್ಟುಕೊಂಡಿದ್ದು ಕಳೆದ ವರ್ಷ 1 ಮಿಲಿಯನ್ ಯೂನಿಟ್‌ಗಳನ್ನು ಭಾರತದಲ್ಲಿ ಕಂಪೆನಿ ಮಾರಾಟ ಮಾಡಿದೆ.

English summary
India is proving to be quite a strong growth engine for Apple, the world's most valuable company that sells the iPhone smartphones, iPad devices and Mac line of computers.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot