ಭಾರತದಲ್ಲಿ ಆಪಲ್ ಗಳಿಸಿದೆ ಬರೋಬ್ಬರಿ 1 ಬಿಲಿಯನ್ ಆದಾಯ
ಯುಎಸ್ ಟೆಕ್ ದೈತ್ಯ ಆಪಲ್ ಇಂಕ್ ಇತ್ತೀಚೆಗೆ ವರದಿಯೊಂದನ್ನು ಮಂಡಿಸಿದ್ದು ಇದರ ಪ್ರಕಾರ ಭಾರತದಲ್ಲಿ ಕಂಪೆನಿ ಯುಎಸ್‌ಡಿ 1 ಬಿಲಿಯನ್ ಆದಾಯವನ್ನು ಗಳಿಸಿದ್ದು ಇದು ಮಾರ್ಚ್ 31, 2015 ರ ಎಣಿಕೆಯಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ನಿಮ್ಮ ಫೋನ್‌ನಲ್ಲಿ ಈ ಟಿಪ್ಸ್‌ಗಳು ಇರುವುದು ನಿಮಗೆ ಗೊತ್ತೇ?

ವರದಿಯ ಪ್ರಕಾರ, 40 ಶೇಕಡಾ ಏರಿಕೆಯನ್ನು ಅಂದಾಜಿಸಲಾಗಿದೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಾಯಕ್ಕೆ ತನ್ನ ಫಲಿತಾಂಶವನ್ನು ಕಂಪೆನಿ ಇನ್ನೂ ಮಂಡಿಸಬೇಕಾಗಿದೆ. ಇನ್ನೂ ಇದೇ ಸಂದರ್ಭದಲ್ಲಿ ಕಂಪೆನಿ ಈಗಾಗಲೇ 1.3 ಮಿಲಿಯನ್ ಫೋನ್‌ಗಳನ್ನು 2014-15 ರಲ್ಲಿ ಮಾರಾಟ ಮಾಡಿದೆ ಎಂಬ ಸುದ್ದಿ ಕೂಡ ತಿಳಿದು ಬಂದಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಆಪಲ್ ಭಾರತದಲ್ಲಿ ಐಫೋನ್ 6 ಹಾಗೂ ಐಫೋನ್ 6 ಪ್ಲಸ್ ಫೋನ್‌ಗಳನ್ನು ಲಾಂಚ್ ಮಾಡಿತ್ತು.

4.7 ಇಂಚಿನ ಐಫೋನ್ 6 ಭಾರತದಲ್ಲಿ 16 ಜಿಬಿ ಆವೃತ್ತಿ ರೂ 53,500 ಕ್ಕೆ ಲಭ್ಯವಾಗುತ್ತಿದ್ದು, 64 ಜಿಬಿ ಆವೃತ್ತಿ ಬೆಲೆ ರೂ 62,500 ಆಗಿದೆ ಅಂತೆಯೇ 128 ಜಿಬಿ ಬೆಲೆ ರೂ 71,500 ಎಂದು ಅಂದಾಜಿಸಲಾಗಿದೆ. ಇನ್ನು 5.5 ಇಂಚಿನ ಐಫೋನ್ 6 ಪ್ಲಸ್ 16 ಜಿಬಿ ಆವೃತ್ತಿ ರೂ 62,500 ಕ್ಕೆ ಲಭ್ಯವಾಗುತ್ತಿದ್ದು 64 ಜಿಬಿ ಆವೃತ್ತಿ 71,500 ಅಂತೆಯೇ 128 ಜಿಬಿ ಆವೃತ್ತಿಗೆ ರೂ 80,500 ಎಂದು ನಿರ್ಧರಿಸಲಾಗಿದೆ.
ಇದನ್ನೂ ಓದಿ: ಟಿಮ್ ಕುಕ್: ಪೇಪರ್ ಮಾರುವ ಹುಡುಗ ಪ್ರಪಂಚವನ್ನು ಗೆದ್ದ ಕಥೆ
ಐಫೋನ್ 6, 4.7 ಇಂಚಿನ 750x1334 ಪಿಕ್ಸೆಲ್ ಸ್ಕ್ರೀನ್ ಅನ್ನು ಹೊಂದಿದ್ದು, ಐಫೋನ್ 6 ಪ್ಲಸ್ 5.5 ಇಂಚುಗಳ 1080x1920 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಪಡೆದುಕೊಂಡಿದೆ. ಐಫೋನ್ 6 ಮತ್ತು ಐಫೋನ್ 6 ಪ್ಲಸ್ 6.9 ಮತ್ತು 7.1 ಎಮ್‌ಎಮ್ ದಪ್ಪವನ್ನು ಹೊಂದಿದೆ. ಎರಡೂ ಫೋನ್‌ಗಳನ್ನು ಹೆಚ್ಚು ವೇಗದ ವೈಫೈ 802.11ac ಯೊಂದಿಗೆ ಅಪ್‌ಗ್ರೇಡ್ ಮಾಡಬಹುದಾಗಿದೆ.

ಐಫೋನ್ 6 ಮತ್ತು 6 ಪ್ಲಸ್, 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾವನ್ನು ಹೊಂದಿದ್ದು ಮುಂಭಾಗದಲ್ಲಿ 1.2 ಮೆಗಾಪಿಕ್ಸೆಲ್ ಒಳಗೊಂಡಿದೆ. ಐಫೋನ್ 5ಎಸ್‌ನೊಂದಿಗೆ ಇವುಗಳನ್ನು ಹೋಲಿಸಿದಾಗ ಸುಧಾರಿತ ಸೆನ್ಸಾರ್ ಅನ್ನು ನಮಗೆ ಕಾಣಬಹುದಾಗಿದೆ. ಐಫೋನ್ 5 ಎಸ್‌ಗಿಂತಲೂ ಉತ್ತಮ ಬ್ಯಾಟರಿ ಜೀವನವನ್ನು ಎರಡೂ ಫೋನ್‌ಗಳು ಒದಗಿಸಲಿವೆ ಎಂದು ಆಪಲ್ ತಿಳಿಸಿದೆ.



Click it and Unblock the Notifications