Subscribe to Gizbot

ನಿಮ್ಮ ಫೋನ್‌ನಲ್ಲಿ ಈ ಟಿಪ್ಸ್‌ಗಳು ಇರುವುದು ನಿಮಗೆ ಗೊತ್ತೇ?

Written By:

ಆಂಡ್ರಾಯ್ಡ್ ಫೋನ್‌ನ ಒಡೆಯರು ನೀವಾಗಿದ್ದೀರಾ ಎಂದಾದಲ್ಲಿ ನೀವು ಗೂಗಲ್ ಖಾತೆಯನ್ನು ಹೊಂದಿದ್ದೀರಿ ಎಂದಾಗಿದೆ. ಈ ಖಾತೆ ಬರಿಯ ತೋರಿಕೆಗೆ ಮಾತ್ರವಲ್ಲ ಬದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನ ಭದ್ರತೆಗಾಗಿ ಎಂಬುದು ನಿಮಗೆ ಗೊತ್ತೇ? ಆಂಡ್ರಾಯ್ಡ್ ವೆಬ್‌ಸೈಟ್‌ಗಳ ಸಹಾಯಕ್ಕಾಗಿ, ಗೂಗಲ್ ಹಲವಾರು ಪ್ರಗತಿಗಳನ್ನು ಮಾಡುತ್ತಲೇ ಬರುತ್ತಿದೆ.

ಇದನ್ನೂ ಓದಿ: ಇಂಟರ್ನೆಟ್ ಸೌಲಭ್ಯವಿಲ್ಲದೆ ಅಪಾಯದಿಂದ ಪಾರಾಗುವುದು ಹೇಗೆ?

ಗೂಗಲ್ ಸೇವೆಗಳ ಸಂಪೂರ್ಣ ಲಾಭವನ್ನು ಬಳಕೆದಾರರಿಗೆ ಒದಗಿಸುವುದೇ ಕಂಪೆನಿಯ ಉದ್ದೇಶವಾಗಿದ್ದು ಅದಕ್ಕಾಗಿ ಸಂಸ್ಥೆ ದಿನಂಪ್ರತಿ ಹೊಸ ಹೊಸ ಪ್ರಗತಿಗಳನ್ನು ನಡೆಸುತ್ತಿದ್ದು ಆಂಡ್ರಾಯ್ಡ್ ಬಳಕೆದಾರರು ಇದರ ಪ್ರಯೋಜವನ್ನು ಪಡೆದುಕೊಳ್ಳುವುದು ಅತ್ಯವಶ್ಯಕವಾಗಿದೆ. ಬನ್ನಿ ಇಂದಿನ ಲೇಖನದಲ್ಲಿ ಆ ಟಿಪ್ಸ್‌ಗಳೇನು ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್ ಮ್ಯಾಪ್ಸ್‌

ಗೂಗಲ್ ಮ್ಯಾಪ್ಸ್‌ನಲ್ಲಿ ವೈಯಕ್ತಿಕ ಸ್ಥಳಗಳನ್ನು ಉಳಿಸುವುದು

ನೀವು ಉಳಿಸಲು ಬಯಸಿರುವ ಸ್ಥಾನದ ವಿಳಾಸವನ್ನು ನಮೂದಿಸಿ, ನಿಮ್ಮ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಮೇಲಿನಿಂದ ಕೆಳಕ್ಕೆ ಸ್ವೈಪ್ ಮಾಡಿ ಮತ್ತು ಸ್ಟಾರ್ ಐಕಾನ್ ಕ್ಲಿಕ್ಕಿಸಿ.

ಗೂಗಲ್ ನೌ

ಗೂಗಲ್ ನೌ ಬಳಸಿ ಸಾರ್ವಜನಿಕ ಟ್ರಾನ್ಸ್‌ಪೋರ್ಟೇಶನ್ ಎಚ್ಚರಿಕೆಗಳು

ನಿಮ್ಮ ಗೂಗಲ್ ಖಾತೆಗೆ ಸೈನ್ ಇನ್ ಮಾಡಿ ಮತ್ತು ಅಧಿಕೃತ ಗೂಗಲ್ ಅಪ್ಲಿಕೇಶನ್ ತೆರೆಯಿರಿ. ಮೇಲ್ಭಾಗದ ಎಡ ಮೂಲೆಯಲ್ಲಿರುವ ಮೆನು ಐಕಾನ್ ಸ್ಪರ್ಶಿಸಿ ನಂತರ ಸೆಟ್ಟಿಂಗ್ಸ್‌ಗೆ ಹೋಗಿ ಮತ್ತು ಗೂಗಲ್ ನೌ ಆನ್ ಆಗಿರುವುದನ್ನು ಖಾತ್ರಿಪಡಿಸಿಕೊಳ್ಳಿ.

ಗೂಗಲ್ ವಾಲೆಟ್

ಸ್ನೇಹಿತರಿಗೆ ನೇರವಾಗಿ ಹಣ ಕಳುಹಿಸಲು

ಜಿಮೇಲ್ ಮೂಲಕ ಗೂಗಲ್ ವಾಲೆಟ್ ಬಳಸಲು ನಿಮ್ಮನ್ನು ಅನುಮತಿಸುತ್ತದೆ. ಜಿಮೇಲ್‌ನಲ್ಲಿ "compose" ಅನ್ನು ನೀವು ಕ್ಲಿಕ್ ಮಾಡಿದಾಗ ಕಂಪೋಸ್ ವಿಂಡೋದ ಕೆಳಭಾಗದಲ್ಲಿ "$" ಐಕಾನ್‌ಗೆ ನೀವು ಕ್ಲಿಕ್ ಮಾಡಬಹುದು.

ಗೂಗಲ್ ಕ್ಯಾಲೆಂಡರ್

ಗ್ರೂಪ್ ಕ್ಯಾಲೆಂಡರ್ ರಚನೆ

ಗೂಗಲ್ ಕ್ಯಾಲೆಂಡರ್ ಅಪ್ಲಿಕೇಶನ್‌ಗೆ ಸೈನ್ ಇನ್ ಮಾಡಿ ಮತ್ತು ಮೈ ಕ್ಯಾಲೆಂಡರ್ಸ್ ಮೆನು ತೆರೆಯಿರಿ ಇಲ್ಲಿ ಹೊಸ ಕ್ಯಾಲೆಂಡರ್ ರಚಿಸುವ ಆಯ್ಕೆ ನಿಮಗೆ ದೊರೆಯುತ್ತದೆ.

ಗೂಗಲ್ ಕೀಪ್

ಗೂಗಲ್ ಕೀಪ್ ಬಳಕೆ

ಆಂಡ್ರಾಯ್ಡ್‌ನ ಬೆಸ್ಟ್ ರಹಸ್ಯ ಸಂಗ್ರಹ ಅಪ್ಲಿಕೇಶನ್ ಆಗಿದೆ. ನಿಮ್ಮ ಧ್ವನಿ ಆದೇಶಗಳನ್ನು ಬಳಸಿ ಇದರಲ್ಲಿ ಟಿಪ್ಪಣಿಗಳನ್ನು ನಿಮಗೆ ತೆಗೆದುಕೊಳ್ಳಬಹುದಾಗಿದೆ. ದಿನಾಂಕಕ್ಕೆ ಅನುಗುಣವಾಗಿ ಇದು ನಿಮ್ಮ ಕೆಲಸವನ್ನು ನೆನಪಿಸುತ್ತದೆ.

ಗೂಗಲ್ ಪ್ಲಸ್‌

ಗೂಗಲ್ ಪ್ಲಸ್‌ನೊಂದಿಗೆ ನಿಮ್ಮ ಫೋಟೋಗಳನ್ನು ಇನ್ನಷ್ಟು ಚಂದಗಾಣಿಸಲು

ಗೂಗಲ್ ಪ್ಲಸ್ ಅಪ್ಲಿಕೇಶನ್ ತೆರೆಯಿರಿ ನಿಮ್ಮ ಗೂಗಲ್ ಖಾತೆಯೊಂದಿಗೆ ಸೈನ್ ಇನ್ ಮಾಡಿ. ನಿಮ್ಮ ಪ್ರೊಫೈಲ್ ಹೊಂದಿಸಿ.

ಪಾಸ್‌ಕೋಡ್

ಎರಡು ಹಂತದ ದೃಢೀಕರಣ

ನೀವು ಎರಡು ಹಂತದ ದೃಢೀಕರಣವನ್ನು ಆನ್ ಮಾಡಿದ್ದೀರಿ ಎಂದಾದಲ್ಲಿ, ಬೇರೆಯಾರಾದೂ ಅಪರಿಚಿತ ಕಂಪ್ಯೂಟರ್‌ನಿಂದ ನಿಮ್ಮ ಖಾತೆಗೆ ಸೈನ್ ಇನ್ ಮಾಡಿದಾಗ ನಿಮ್ಮ ಮೊಬೈಲ್‌ಗೆ ಪಾಸ್‌ಕೋಡ್ ಅನ್ನು ಗೂಗಲ್ ಕಳುಹಿಸುತ್ತದೆ.

ಕ್ರೋಮ್‌

ಕ್ರೋಮ್‌ನಲ್ಲಿ ಬಹು ಬಳಕೆದಾರ ಪ್ರೊಫೈಲ್ ಹೊಂದಿಸುವುದು

chrome.google.com ನಲ್ಲಿ ಕ್ರೋಮ್ ಡೌನ್‌ಲೋಡ್ ಮಾಡಿ. ಕ್ರೋಮ್ ತೆರೆಯಿರಿ ಮತ್ತು ಮೆನು ಐಕಾನ್ ಕ್ಲಿಕ್ ಮಾಡಿ ನಿಮ್ಮ ಗೂಗಲ್ ಖಾತೆ ಬಳಸಿಕೊಂಡು "ಕ್ರೋಮ್‌ಗೆ ಸೈನ್ ಇನ್ ಮಾಡಿ".

ಆಂಡ್ರಾಯ್ಡ್ ಮುಖ್ಯ ಪರದೆ

ದೊಡ್ಡ ಪರದೆಯಲ್ಲಿ ಆಂಡ್ರಾಯ್ಡ್ ಮುಖ್ಯ ಪರದೆಯನ್ನು ನೋಡುವುದು

ನಿಮ್ಮ ಟಿವಿಯಲ್ಲೇ ನಿಮ್ಮ ಫೋನ್ ಅನ್ನು ನೋಡಬಹುದಾಗಿದೆ.

ಪಾಸ್‌ವರ್ಡ್

ಉತ್ತಮ ಪಾಸ್‌ವರ್ಡ್ ರಚನೆ

ರಿಕವರಿ ಆಯ್ಕೆಯನ್ನು ಹೊಂದಿಸುವ ಮೂಲಕ, ನಿಮ್ಮ ಪಾಸ್‌ವರ್ಡ್ ಅನ್ನು ಸುರಕ್ಷಿತವಾಗಿರಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
If you own an Android phone, that also means you have a Google account. Google would like you to know that this account isn’t just there for show — it’s there to unlock a bunch of cool services on your smartphone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot