ಬಹುನಿರೀಕ್ಷಿತ 'ಐಫೋನ್ 11' ಸರಣಿ ಬಿಡುಗಡೆ!

|

ಆಪಲ್ ಸಂಸ್ಥೆಯ ಬಹುನಿರೀಕ್ಷಿತ ಐಫೋನ್ 11 ಸರಣಿಯು ಬಿಡುಗಡೆ ಆಗಿದ್ದು, ಕಾತುರರಾಗಿ ಕಾಯುತ್ತಿದ್ದ ಗ್ರಾಹಕರ ನಿರೀಕ್ಷೆಗೆ ತೆರೆ ಬಿದ್ದಿದೆ. ಐಫೋನ್ 11 ಸರಣಿಯು ಐಫೋನ್‌ 11, ಐಫೋನ್ 11 ಪ್ರೊ ಮತ್ತು ಐಫೋನ್ 11 ಪ್ರೊ ಮ್ಯಾಕ್ಸ್‌ ಫೋನ್‌ಗಳನ್ನು ಒಳಗೊಂಡಿದೆ. ಈ ಐಫೋನ್‌ಗಳು ಬಿಗ್ ಬ್ಯಾಟರಿ, ಅಪ್‌ಗ್ರೇಡ್‌ ಕ್ಯಾಮೆರಾ ಫೀಚರ್ಸ್‌ಗಳನ್ನು ಹೊಂದಿದ್ದು, ಈಗಾಗಲೇ ಐಫೋನ್‌ ಪ್ರಿಯರ ಮನಸನ್ನು ಗೆದ್ದಿದೆ.

ಆಪಲ್

ಹೌದು, ಟೆಕ್ ದಿಗ್ಗಜ ಆಪಲ್ ಸಂಸ್ಥೆಯು ಇದೇ ಸೆಪ್ಟಂಬರ್ 10ರಂದು ತನ್ನ ಐಫೋನ್‌ 11 ಸರಣಿಯನ್ನು ಲಾಂಚ್ ಮಾಡಿದ್ದು, ಈ ಸರಣಿಯಲ್ಲಿ ಮೂರು ಐಫೋನ್‌ಗಳನ್ನು ಸೇರಿದಂತೆ ಆಪಲ್ ವಾಚ್ 5, ಆಪಲ್ ಐಪೊಡ್‌ ಡಿವೈಸ್‌ಗಳನ್ನು ಅನಾವರಣ ಮಾಡಿದೆ. ಹಾಗಾದರೇ ಆಪಲ್‌ ಸಂಸ್ಥೆಯು ಐಫೋನ್ 11 ಸರಣಿಯಲ್ಲಿ ಬಿಡುಗಡೆ ಮಾಡಿರುವ ಫೋನ್‌ ಮತ್ತು ಆಪಲ್ ವಾಚ್‌ ಡಿವೈಸ್‌ಗಳ ಫೀಚರ್ಸ್‌ಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಐಫೋನ್ 11

ಐಫೋನ್ 11

ಐಫೋನ್ 11, 6.1 ಇಂಚಿನ ಡಿಸ್‌ಪ್ಲೇ ಮತ್ತು ಡ್ಯುಯಲ್ ಕ್ಯಾಮೆರಾ ಆಯ್ಕೆಯನ್ನು ಒಳಗೊಂಡಿದೆ. ವೇಗದ ಚಿಪ್‌ಸೆಟ್‌ ಬೆಂಬಲದೊಂದಿಗೆ A13 ಬಯೋನಿಕ್ ಪ್ರೊಸೆಸರ್‌ ನೀಡಲಾಗಿದ್ದು, ಆಪಲ್‌ ಎಕ್ಸ್‌ಆರ್‌ಗಿಂತ ಬ್ಯಾಟರಿ ಲೈಫ್ ಅಧಿಕವಾಗಿದೆ. ಎರಡು ಕ್ಯಾಮೆರಾಗಳು 12ಎಂಪಿ ಸೆನ್ಸಾರ್‌ ಬೆಂಬಲವನ್ನು ಪಡೆದಿದ್ದು, ಇದರೊಂದಿಗೆ ನೈಟ್‌ಮೋಡ್‌, 4K ವಿಡಿಯೊ, ಸ್ಲೋ ಮೋಶನ್ ಫೀಚರ್ಸ್‌ಗಳನ್ನು ಪಡೆದಿದೆ. ಆರಂಭಿಕ ಬೆಲೆಯು 64,900ರೂ. ಆಗಿದ್ದು, ಇದೇ ಸೆಪ್ಟಂಬರ್ 13ರಿಂದ ಪ್ರಿ ಆರ್ಡರ್ ಶುರು.

ಐಫೋನ್ 11 ಪ್ರೊ

ಐಫೋನ್ 11 ಪ್ರೊ

ಐಫೋನ್ 11 ಪ್ರೊ, 5.8 ಇಂಚಿನ ಸೂಪರ್‌ ರೇಟಿನಾ XDR ಡಿಸ್‌ಪ್ಲೇ ಮತ್ತು ತ್ರಿವಳಿ ಕ್ಯಾಮೆರಾ ಆಯ್ಕೆಯನ್ನು ಒಳಗೊಂಡಿದೆ. A13 ಬಯೋನಿಕ್ ಪ್ರೊಸೆಸರ್‌ ನೀಡಲಾಗಿದ್ದು, ಮೂರು ಕ್ಯಾಮೆರಾಗಳು ಸಹ 12ಎಂಪಿ ಸೆನ್ಸಾರ್‌ ಬೆಂಬಲವನ್ನು ಪಡೆದಿವೆ. ಐಫೋನ್‌ ಎಕ್ಸ್‌ಎಸ್‌ಗಿಂತ ಬ್ಯಾಟರಿ ಉತ್ತಮವಾಗಿದ್ದು, ಜೊತೆಗೆ 18W ಸಾಮರ್ಥ್ಯ ಚಾರ್ಜರ್ ಬೆಂಬಲ ಹೊಂದಿದೆ. 64GB, 256GB ಮತ್ತು 512GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ. ಬೆಲೆಯು 99,900ರೂ. ಆಗಿದೆ.

ಐಫೋನ್ 11 ಪ್ರೊ ಮ್ಯಾಕ್ಸ್

ಐಫೋನ್ 11 ಪ್ರೊ ಮ್ಯಾಕ್ಸ್

ಈ ಐಫೋನ್ 6.5 ಇಂಚಿನ ಸೂಪರ್‌ ರೇಟಿನಾ XDR ಡಿಸ್‌ಪ್ಲೇ ಮತ್ತು ತ್ರಿವಳಿ ಕ್ಯಾಮೆರಾ ಆಯ್ಕೆಯನ್ನು ಒಳಗೊಂಡಿದೆ. A13 ಬಯೋನಿಕ್ ಪ್ರೊಸೆಸರ್‌ ನೀಡಲಾಗಿದ್ದು, ಈ ಫೋನ್‌ ಸಹ ಮೂರು ಕ್ಯಾಮೆರಾಗಳನ್ನು ಹೊಂದಿದ್ದು, ಅವುಗಳು 12ಎಂಪಿ ಸೆನ್ಸಾರ್‌ ಬೆಂಬಲವನ್ನು ಪಡೆದಿವೆ. 'ಐಫೋನ್‌ ಎಕ್ಸ್‌ಎಸ್‌ ಮ್ಯಾಕ್ಸ್‌'ಗಿಂತ ಬ್ಯಾಟರಿ ಉತ್ತಮವಾಗಿದ್ದು, ಜೊತೆಗೆ 18W ಸಾಮರ್ಥ್ಯ ಚಾರ್ಜರ್ ಬೆಂಬಲ ಹೊಂದಿದೆ. ಐಫೋನ್ ಮ್ಯಾಕ್ಸ್‌ ಸಹ 64GB, 256GB ಮತ್ತು 512GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ. ಬೆಲೆಯು 109,900ರೂ. ಆಗಿದೆ.

ಆಪಲ್ ವಾಚ್ ಸೀರಿಸ್ 5

ಆಪಲ್ ವಾಚ್ ಸೀರಿಸ್ 5

ಬಹುನಿರೀಕ್ಷಿತ ಆಪಲ್ ವಾಚ್ ಸೀರಿಸ್ 5 ಸಹ ಲಾಂಚ್ ಆಗಿದ್ದು, ಈ ವಾಚ್ ಮೊದಲ ಬಾರಿಗೆ ಆಲ್ವೆಸ್‌ ಆನ್ ಸ್ಕ್ರೀನ್ ಸೌಲಭ್ಯ ಪಡೆದಿದೆ. ಇದರಲ್ಲಿ LTPO ತಂತ್ರಜ್ಞಾನ ಪರಿಚಯಿಸಲಾಗಿದ್ದು, ವಿಶೇಷ ಸಂಗತಿ. ಜಿಪಿಎಸ್‌ ಓನ್ಲಿ ವೇರಿಯಂಟ್ ಮತ್ತು ಜಿಪಿಎಸ್‌ ಪ್ಲಸ್‌ ಸೆಲ್ಯೂಲರ್ ವೇರಿಯಂಟ್ ಮಾದರಿಗಳ ಆಯ್ಕೆಯನ್ನು ಪಡೆದಿದೆ. ಆರಂಭಿಕ ಬೆಲೆಯು 40,900ರೂ ಆಗಿದೆ.

ಹೊಸ ಆಪಲ್ ಐಫೊಡ್

ಹೊಸ ಆಪಲ್ ಐಫೊಡ್

ಆಪಲ್ ಸಂಸ್ಥೆಯು ಐಫೋನ್ 11 ಸರಣಿಯಲ್ಲಿ ಹೊಸದಾಗಿ ಐಫೊಡ್‌ ಒಂದನ್ನು ಲಾಂಚ್ ಮಾಡಿದ್ದು, 7ನೇ ತಲೆಮಾರಿನ ಐಪೊಡ್ ಆಗಿದ್ದು, ಜೊತೆಗೆ 10.2 ಇಂಚಿನ ರೇಟಿನಾ ಡಿಸ್‌ಪ್ಲೇಯನ್ನು ಪಡೆದುಕೊಂಡಿದೆ. ಡಿಸ್‌ಪ್ಲೇಯು 3.5 ಮಿಲಿಯನ್ ಪಿಕ್ಸಲ್‌ಗಳನ್ನು ಒಳಗೊಂಡಿದ್ದು, ಫ್ಯೂಸನ್ A10 ಪ್ರೊಸೆಸರ್‌ ಶಕ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಆರಂಭಿಕ ಬೆಲೆಯು 21,500ರೂ.ಗಳಾಗಿದೆ. ಭಾರತದಲ್ಲಿ ಇದೇ ಸೆಪ್ಟೆಂಬರ್ 30ರಿಂದ ಲಭ್ಯ.

ಓದಿರಿ : ಬಹುನಿರೀಕ್ಷಿತ 'ಐಫೋನ್ 11' ಸರಣಿ ಬಿಡುಗಡೆ!ಓದಿರಿ : ಬಹುನಿರೀಕ್ಷಿತ 'ಐಫೋನ್ 11' ಸರಣಿ ಬಿಡುಗಡೆ!

Best Mobiles in India

English summary
Apple iPhone 11, iPhone 11 Pro and iPhone 11 Pro Max smartphones are likely to go official. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X