'ಐಫೋನ್ 11 ಪ್ರೊ' ಲಾಂಚ್!..ಸಂಪೂರ್ಣ ಅಪ್‌ಗ್ರೇಡ್‌ ಫೀಚರ್ಸ್‌!

|

ಆಪಲ್ ಸಂಸ್ಥೆಯ ಬಹುನಿರೀಕ್ಷಿತ ಐಫೋನ್ 11 ಸರಣಿಯು ಬಿಡುಗಡೆ ಆಗಿದ್ದು, ಇದೀಗ ಇಡೀ ವಿಶ್ವವೇ ಆಪಲ್ ಸಂಸ್ಥೆಯತ್ತ ಮುಖಮಾಡಿದೆ. ಐಫೋನ್ 11 ಸರಣಿಯು ಐಫೋನ್ 11, ಐಫೋನ್ 11 ಪ್ರೊ ಮತ್ತು ಐಫೋನ್ 11 ಪ್ರೊ ಮ್ಯಾಕ್ಸ್‌ ಫೋನ್‌ಗಳನ್ನು ಒಳಗೊಂಡಿದೆ. A 13 ಬಯೋನಿಕ್‌ ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದ್ದು, ಮುಖ್ಯವಾಗಿ ಬ್ಯಾಟರಿ ಮತ್ತು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಸಾಕಷ್ಟು ಅಪ್‌ಗ್ರೇಡ್‌ ಅನ್ನು ಒಳಗೊಂಡಿವೆ.

ಆಪಲ್

ಹೌದು, ಆಪಲ್ ಸಂಸ್ಥೆಯು ಇದೇ ಸೆಪ್ಟಂಬರ್ 10ರಂದು ತನ್ನ ಐಫೋನ್‌ 11 ಸರಣಿಯನ್ನು ಲಾಂಚ್ ಮಾಡಿದ್ದು, ಅವುಗಳಲ್ಲಿ ಐಫೋನ್ 11 ಪ್ರೊ ಮತ್ತು ಐಫೋನ್ 11 ಪ್ರೊ ಮ್ಯಾಕ್ಸ್‌ ವಿಶೇಷ ಫೀಚರ್ಸ್‌ಗಳಿಂದ ಗಮನ ಸೆಳೆದಿವೆ. ಈ ಎರಡು ಫೋನ್‌ಗಳು 12ಎಂಪಿಯ ಮೂರು ಅಪ್‌ಗ್ರೇಡ್‌ ಕ್ಯಾಮೆರಾ ಸೆಟ್‌ಅಪ್‌ ಆಯ್ಕೆಗಳನ್ನು ಒಳಗೊಂಡಿವೆ. ಹಾಗಾದರೇ ಆಪಲ್ ಐಫೋನ್ 11 ಪ್ರೊ ಫೋನಿನ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡಿರಿ.

ಡಿಸ್‌ಪ್ಲೇ ಮತ್ತು ಡಿಸೈನ್

ಡಿಸ್‌ಪ್ಲೇ ಮತ್ತು ಡಿಸೈನ್

ಐಫೋನ್ 11 ಪ್ರೊ ಫೋನ್‌ 1,125×2,436 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 5.8 ಇಂಚಿನ ಸೂಪರ್ ರೇಟಿನಾ XDR ಡಿಸ್‌ಪ್ಲೇಯನ್ನು ಹೊಂದಿದೆ. OLED ಡಿಸ್‌ಪ್ಲೇಯಿದ್ದು, ಡಿಸ್‌ಪ್ಲೇಯಿಂದ ಬಾಹ್ಯ ಬಾಡಿ ನಡುವಿನ ಅನುಪಾತವು ಶೇ.82.1% ಆಗಿದೆ. ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 458-PPI ಆಗಿದೆ. ಹಾಗೂ ಡಿಸ್‌ಪ್ಲೇ ಸುತ್ತಲೂ ಕರ್ವ್ ಡಿಸೈನ್‌ ನೀಡಲಾಗಿದ್ದು, ಕಂಫರ್ಟ್‌ ಗ್ರೀಪ್ ಪಡೆದಿದೆ.

ಪ್ರೊಸೆಸರ್‌ ಹೇಗಿದೆ

ಪ್ರೊಸೆಸರ್‌ ಹೇಗಿದೆ

ಐಫೋನ್ 11 ಪ್ರೊ ಫೋನ್‌ ಇತ್ತೀಚಿನ ಹೊಸ A 13 ಬಯೋನಿಕ್‌ ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದೆ. ಇದಕ್ಕೆ ಹೊಸ iOS 13 ಪ್ರೊಸೆಸರ್‌ಗೆ ಬೆಂಬಲ ನೀಡಲಿದೆ. ಹಾಗೆಯೇ ಎಲ್ಲ ವೇರಿಯಂಟ್‌ಗಳು 6GB RAM ಹೊಂದಿದ್ದು, 128GB ಸ್ಟೋರೆಜ್‌ ಆಯ್ಕೆಯನ್ನು ಒಳಗೊಂಡಿದೆ. ಐಫೋನ್‌ ಎಕ್ಸ್‌ಎಸ್‌ಗೆ ಹೋಲಿಸಿದರೇ ಐಫೋನ್ 11 ಪ್ರೊ ಅಪ್‌ಡೇಟ್‌ ಕಂಡಿದೆ ಎನ್ನಬಹುದು.

ಕ್ಯಾಮೆರಾ ಕಮಾಲ್

ಕ್ಯಾಮೆರಾ ಕಮಾಲ್

ಹಿಂಬದಿಯಲ್ಲಿ ಮೂರು ಕ್ಯಾಮೆರಾ ಸೆಟ್‌ಅಪ್‌ ಆಯ್ಕೆಯನ್ನು ನೀಡಲಾಗಿದ್ದು, ಈ ಮೂರು ಕ್ಯಾಮೆರಾಗಳು 12ಎಂಪಿ ಸೆನ್ಸಾರ್‌ ಸಾಮರ್ಥ್ಯ ಪಡೆದಿವೆ. ಮುಖ್ಯ ಕ್ಯಾಮೆರಾ ವೈಲ್ಡ್‌ ಆಂಗಲ್, ಸೆಕೆಂಡರಿ ಕ್ಯಾಮೆರಾವು ಅಲ್ಟ್ರಾ ವೈಲ್ಡ್‌ ಆಂಗಲ್ ಮತ್ತು ತೃತೀಯ ಕ್ಯಾಮೆರಾವು ಟೆಲಿಫೋಟೊ ಲೆನ್ಸ್‌ ಸಾಮರ್ಥ್ಯವನ್ನು ಹೊಂದಿವೆ. ನೈಟ್‌ಮೋಡ್‌ ಮತ್ತು ಎಚ್‌ಆರ್‌ಡಿ ಸೌಲಭ್ಯಗಳನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಐಫೋನ್‌ 11 ಪ್ರೊ ಫೋನ್ ಅದ್ದೂರಿಯಾಗಿ ಲಾಂಚ್ ಆಗಿದ್ದು, ಬೆಲೆಯು $999 ಆಗಿದ್ದು, ಭಾರತದಲ್ಲಿ 99,900ರೂ.ಗಳು. ಇದೇ ಸೆಪ್ಟಂಬರ್ 12ರಿಂದ ಪ್ರಿ ಆರ್ಡರ್‌ ಸೌಲಭ್ಯವು ಲಭ್ಯವಾಗಲಿದ್ದು, ಮಾರಾಟ ಇದೇ ಸೆಪ್ಟೆಂಬರ್ 20ರಿಂದ ಆರಂಭವಾಗಲಿದೆ ಎನ್ನಲಾಗಿದೆ. ಹಾಗೆಯೇ ಹಲವು ಹೊಸ ಬಣ್ಣಗಳೊಂದಿಗೆ ರೆಡ್‌, ಬ್ಲೂ, ಗ್ರೀನ್, ವೈಟ್‌ ಬಣ್ಣಗಳ ಆಯ್ಕೆಗಳಲ್ಲಿ ದೊರೆಯಲಿದೆ.

ಓದಿರಿ : ಬಹುನಿರೀಕ್ಷಿತ 'ಐಫೋನ್ 11' ಸರಣಿ ಬಿಡುಗಡೆ!ಓದಿರಿ : ಬಹುನಿರೀಕ್ಷಿತ 'ಐಫೋನ್ 11' ಸರಣಿ ಬಿಡುಗಡೆ!

Best Mobiles in India

English summary
iPhone 11 Pro comes with a 5.8-inch OLED display, triple cameras. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X