ವಜ್ರಕ್ಕಿಂತಲೂ ಕಠಿಣವಾದುದು ಆಪಲ್ ವಾಚ್‌ನಲ್ಲಿ ಏನಿದೆ?

By Shwetha
|

ಆಪಲ್ ವಾಚ್ ಇಂದು ಅಧಿಕೃತವಾಗಿ ಜಾಗತಿಕ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ. ತನ್ನ ಐಫೋನ್‌ಗಳ ಮೋಡಿಯಿಂದ ಪ್ರಪಂಚದ ಗಮನ ಸೆಳೆದ ಆಪಲ್ ತನ್ನ ವೇರಿಯೇಬಲ್ ಮೂಲಕ ಯಾವ ಮೋಡಿಯನ್ನು ಮಾಡಲಿದೆ ಎಂಬುದು ಯಾರೂ ಅರಿಯದ ರಹಸ್ಯವಾಗಿದೆ. ಈ ವಾಚ್ ಅನ್ನು ಆನ್‌ಲೈನ್‌ನಲ್ಲಿ ಮಾತ್ರವೇ ಖರೀದಿಸಬಹುದಾಗಿದ್ದು ಮಳಿಗೆಗಳಿಗೆ ಜೂನ್‌ಗೆ ಆಗಮಿಸಲಿದೆ.

ಓದಿರಿ: ಟಿಮ್ ಕುಕ್: ಪೇಪರ್ ಮಾರುವ ಹುಡುಗ ಪ್ರಪಂಚವನ್ನು ಗೆದ್ದ ಕಥೆ

ಇಂದಿನ ಲೇಖನದಲ್ಲಿ ಆಪಲ್ ವಾಚ್ ಕುರಿತ 10 ರೋಚಕ ಅಂಶಗಳನ್ನು ನಾವು ತಿಳಿದುಕೊಳ್ಳಲಿದ್ದು ಜನಸಾಮಾನ್ಯರಿಗೆ ಇದು ಹೇಗೆ ಪ್ರಯೋಜನಕಾರಿಯಾಗಲಿದೆ ಎಂಬುದು ನಿಮ್ಮ ಗಮನಕ್ಕೆ ಬರಲಿದೆ.

ವಾಚ್ ವಿನ್ಯಾಸ

ವಾಚ್ ವಿನ್ಯಾಸ

ಅತ್ಯುತ್ತಮ ಗಾತ್ರದಲ್ಲಿ ಬಂದಿರುವ ಆಪಲ್ ವಾಚ್ ನಿಮ್ಮ ಕೈಗೆ ಹೊಸ ನೋಟವನ್ನು ನೀಡುವುದು ಖಂಡಿತ. ಇದನ್ನು ಕಸ್ಟಮೈಸ್ ಕೂಡ ಮಾಡಬಹುದಾಗಿದ್ದು, ನಿಮ್ಮ ಐಫೋನ್‌ನಲ್ಲೇ ನಿಯಂತ್ರಿಸಬಹುದಾಗಿದೆ.

ಸಂವಹನ

ಸಂವಹನ

ನಿಮ್ಮ ಕಮ್ಯೂನಿಕೇಶನ್‌ ಅನ್ನು ಇನ್ನಷ್ಟು ಆರಾಮಗೊಳಿಸಲಿದೆ ಆಪಲ್ ವಾಚ್. ಅಲರ್ಟ್‌ಗಳು ಮತ್ತು ನೋಟಿಫಿಕೇಶನ್‌ಗಳನ್ನು ವಾಚ್ ಹೊಂದಿದ್ದು ಬರೀ ತಟ್ಟುವಿಕೆಯ ಮೂಲಕ ಪ್ರತಿಯೊಂದನ್ನು ಅರಿಯಬಹುದು.

ಫಿಟ್‌ನೆಸ್

ಫಿಟ್‌ನೆಸ್

ನಿಮ್ಮ ಸಂಪೂರ್ಣ ದೈನಂದಿನ ಚಟುವಟಿಕೆಯ ಮಾಹಿತಿಯನ್ನು ಇದು ನೀಡುತ್ತದೆ. ನಿಮ್ಮನ್ನು ಚುರುಕು ಮಾಡುವ ಈ ವಾಚ್ ಹೆಚ್ಚು ಪ್ರಚಲಿತ ವರ್ಕ್ ಔಟ್‌ಗಳ ಮಾಹಿತಿಯನ್ನು ನೀಡುತ್ತದೆ.

ಲಂಡನ್ ಮ್ಯಾರಥಾನ್

ಲಂಡನ್ ಮ್ಯಾರಥಾನ್

ಲಂಡನ್ ಮ್ಯಾರಥಾನ್ ಓಟಗಾರರನ್ನು ತರಬೇತುಗೊಳಿಸುವ ಕ್ರಿಸ್ಟಿ ಟರ್ಲಿಂಗ್‌ಟನ್ ಬರ್ನ್‌ ಅನ್ನು ವಾಚ್ ಹೊಂದಿದೆ.

ಸುಲಭವಾಗಿ ಸಾಗಿಸಬಹುದು

ಸುಲಭವಾಗಿ ಸಾಗಿಸಬಹುದು

ನಿಮ್ಮ ಪಾಕೆಟ್‌ನಲ್ಲಿ ಬೆಚ್ಚಗೆ ಕುಳಿತುಕೊಳ್ಳಬಹುದಾದ ಈ ವಾಚ್ ನಿಮ್ಮ ಅಭಿರುಚಿಗೆ ಅನುಗುಣವಾಗಿ ಹೊರಬಂದಿದೆ. ವಿವಿಧ ಸ್ಟೈಲ್ ಅಂತೆಯೇ ವಿನ್ಯಾಸವನ್ನು ಈ ವಾಚ್‌ನಲ್ಲಿ ಕಾಣಬಹುದಾಗಿದ್ದು ನೀವು ಮೆಚ್ಚುವುದು ಖಂಡಿತ.

ಸ್ಟೀಲ್ ಟಚ್

ಸ್ಟೀಲ್ ಟಚ್

ಹೆಚ್ಚು ಪಾಲಿಶ್ ಮಾಡಲಾದ ಸ್ಟೈನ್‌ಲೆಸ್ ಸ್ಟೀಲ್ ಮತ್ತು ಹಿಂಭಾಗದ ನಯನಮನೋಹರ ಕೇಸ್‌ಗಳನ್ನು ವಾಚ್ ಹೊಂದಿದೆ. ಡಿಸ್‌ಪ್ಲೇಗೆ ಸಫಾಯರ್ ಕ್ರಿಸ್ಟಲ್ ರಕ್ಷಣೆ ಇದೆ.

ಗೆರೆ ಬೀಳದು

ಗೆರೆ ಬೀಳದು

ವಜ್ರದ ನಂತರ ದೃಢತೆಗೆ ಹೆಸರಾಗಿರುವ ಸಫಾಯರ್ ಮೆಟೀರಿಯಲ್ ಅನ್ನು ವಾಚ್‌ನಲ್ಲಿ ಬಳಸಲಾಗಿದ್ದು ವಾಚ್‌ಗೆ ಸ್ವಲ್ಪ ಗೀರು ಕೂಡ ಬೀಳದಂತೆ ಕಾಪಾಡುತ್ತದೆ.

ಡಚ್ ಲೆದರ್

ಡಚ್ ಲೆದರ್

ವಾಚ್ ತಯಾರಿಕೆಗೆ ಡಚ್ ಲೆದರ್ ಅನ್ನು ಬಳಸಿದ್ದು ಅತ್ಯಂತ ಸುಂದರ ವಿನ್ಯಾಸದಲ್ಲಿ ಮೂಡಿ ಬಂದಿದೆ.

ಸ್ಪೋರ್ಟ್ ಕಲೆಕ್ಷನ್

ಸ್ಪೋರ್ಟ್ ಕಲೆಕ್ಷನ್

ಸ್ಪೋರ್ಟ್ ಕಲೆಕ್ಷನ್ ಕೇಸ್‌ಗಳನ್ನು ಹಗುರ ಸಾಮಾಗ್ರಿಗಳಿಂದ ತಯಾರಿಸಲಾಗಿದ್ದು ಬೆಳ್ಳಿ ಮತ್ತು ಆಕಾಶ ನೀಲಿ ಬಣ್ಣದಲ್ಲಿ ಬಂದಿದೆ. ಡಿಸ್‌ಪ್ಲೇಯು ಐಯೋನ್ ಎಕ್ಸ್‌ ಗ್ಲಾಸ್‌ನ ರಕ್ಷಣೆಯನ್ನು ಪಡೆದುಕೊಂಡಿದೆ.

ಅಲ್ಯುಮಿನಿಯಮ್ ವಿನ್ಯಾಸ

ಅಲ್ಯುಮಿನಿಯಮ್ ವಿನ್ಯಾಸ

ಇತರ ಅಲ್ಯುಮಿನಿಯಮ್‌ಗಳಗಿಂತಲೂ 60 ಶೇಕಡಾ ಗಟ್ಟಿಯಾಗಿರುವ ಉತ್ತಮ ಗುಣಮಟ್ಟದ ಅಲ್ಯುಮಿನಿಯಮ್ ಬಳಕೆಯನ್ನು ವಾಚ್‌ನಲ್ಲಿ ಮಾಡಲಾಗಿದ್ದು ಐಯೋನ್ ಎಕ್ಸ್ ಗ್ಲಾಸ್ ವಾಚ್ ಡಿಸ್‌ಪ್ಲೇಗೆ ರಕ್ಷಣೆಯನ್ನು ನೀಡಿದೆ.

Most Read Articles
Best Mobiles in India

English summary
To make the best use of its size and location on your wrist, Apple Watch has all-new interactions and technologies. They let you do familiar things more quickly and conveniently. As well as some things that simply weren’t possible before.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more