ಚೀನಾ ಮಾರುಕಟ್ಟೆಯಲ್ಲಿ ಮುಖಭಂಗ ಅನುಭವಿಸಿದ ಆಪಲ್..!!

Written By:

ಜಾಗತೀಕ ಮಾರುಕಟ್ಟೆಯಲ್ಲಿ ತನ್ನದೇ ಅಭಿಮಾನಿ ಬಳಗವನ್ನು ಹೊಂದಿರುವ ಆಪಲ್ ಈ ಬಾರಿ ಚೀನಾ ಮಾರುಕಟ್ಟೆಯಲ್ಲಿ ಭಾರೀ ಮುಖಭಂಗ ಅನುಭವಿಸಿದೆ. ಸುಮಾರು 5 ವರ್ಷಗಳಿಂದ ಚೀನಾದಲ್ಲಿ ನಂ.ಒನ್ ಮೊಬೈಲ್ ಮಾರಾಟಗಾರ ಕಂಪನಿ ಎನ್ನಿಸಿಕೊಂಡಿದ್ದ ಆಪಲ್ ಈ ಬಾರಿ ಆ ಸ್ಥಾನವನ್ನ ಕಳೆದುಕೊಂಡಿದೆ.

ಚೀನಾ ಮಾರುಕಟ್ಟೆಯಲ್ಲಿ ಮುಖಭಂಗ ಅನುಭವಿಸಿದ ಆಪಲ್..!!

ಓದಿರಿ: ಮಾರುಕಟ್ಟೆಗೆ ಬಂದಿದೆ ನೀರಿನಲ್ಲಿ ತೊಳೆಯಬಹುದಾದ ಸ್ಮಾರ್ಟ್‌ಪೋನ್...!

ಆಪಲ್ ಪಾಲಿಗೆ ಚೀನಾ ಅತೀ ದೊಡ್ಡ ಮಾರುಕಟ್ಟೆಯಾಗಿದ್ದು, 2012 ನಂತರದಿಂದ ಚೀನಾ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಪೋನು ಮಾಡಿದ ಕಂಪನಿಗಳ ಪಟ್ಟಿಯಲ್ಲಿ ಆಪಲ್ ಮೊದಲನೇ ಸ್ಥಾನವನ್ನು ಅಲಂಕರಿಸುತ್ತಿತ್ತು. ಆದರೆ ಈ ಬಾರಿ ಆಪಲ್ ಹಿಂದಿಕ್ಕಿರುವ ಚೀನಾ ಮೂಲದ ಮೊಬೈಲ್‌ ತಯಾರಕ ಕಂಪನಿಗಳೂ ಆಸ್ಥಾನವನ್ನು ಅಲಂಕರಿಸಿವೆ.

2016ರಲ್ಲಿ ಚೀನಾ ಮಾರುಕಟ್ಟೆಯಲ್ಲಿ 12 ಮಿಲಿಯನ್ ಐಪೋನ್ ಗಳನ್ನು ಮಾರಾಟ ಮಾಡಿದರೆ ಇದೇ ಸಮಯದಲ್ಲಿ ಚೀನಾ ಮೂಲಕ ಓಪೋ ಮತ್ತು ವಿವೋ ಕಂಪನಿಗಳು 17 ಮಿಲಿಯನ್ ಹ್ಯಾಂಡ್‌ಸೆಟ್ಟುಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿವೆ.

ಚೀನಾ ಮಾರುಕಟ್ಟೆಯಲ್ಲಿ ಮುಖಭಂಗ ಅನುಭವಿಸಿದ ಆಪಲ್..!!

ಓದಿರಿ: ಕರ್ನಾಟಕಕ್ಕೆ ಮಾತ್ರ ಬಿಎಸ್ಎನ್ಎಲ್‌ನಿಂದ ಭರ್ಜರಿ ಕೊಡುಗೆ...!!!

ಆಪಲ್ ಕೇವಲ ಟಾಪ್‌ ಎಂಡ್‌ ಪೋನುಗಳನ್ನು ಮಾತ್ರ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದು, ಈ ಹಿನ್ನಲೆಯಲ್ಲಿ ಕಡಿಮೆ ಬೆಲೆಗೆ ಗುಣಮಟ್ಟದ ಪೋನುಗಳನ್ನು ನೀಡುತ್ತಿರುವ ಇತರೆ ಕಂಪನಿಗಳೊಂದಿಗೆ ಸ್ಪರ್ಧೆಯೊಡ್ಡದೆ ತನ್ನ ಸ್ಥಾನವನ್ನು ಬಿಟ್ಟುಕೊಟ್ಟಿದೆ.

ಈಗ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ವಿವೋ ಮತ್ತು ಓಪೋ ಕಂಪನಿಗಳು ಎಂಟ್ರಿ ಲೆವೆಲ್ ಸ್ಮಾರ್ಟ್‌ಪೋನಿಗಳಿಂದ ಹಿಡಿದು, ಮಾಧ್ಯಮ ಬೆಲೆಯ ಸ್ಮಾರ್ಟ್‌ಪೋನುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಈ ಹಿನ್ನಲೆಯಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಪೋನುಗಳನ್ನು ಖರೀದಿಸಿದ್ದಾರೆ.

Read more about:
English summary
The world’s largest smartphone market hasn’t been so fond of iPhones lately. It was a close fight, but Apple has finally been overtaken by China’s very own brands. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot