ಕರ್ನಾಟಕಕ್ಕೆ ಮಾತ್ರ ಬಿಎಸ್ಎನ್ಎಲ್‌ನಿಂದ ಭರ್ಜರಿ ಕೊಡುಗೆ...!!!

Written By:

ಗ್ರಾಹಕರನ್ನು ಸೆಳೆಯುವ ತಂತ್ರಗಳನ್ನು ಅನುಸರಿಸಲು ಮುಂದಾಗಿರುವ ಭಾರತೀಯ ಸಂಚಾರ ನಿಗಮ ನಿಯಮಿತ (ಬಿಎಸ್ಎನ್ಎಲ್) ಈ ಬಾರಿ ಕರ್ನಾಟಕ ಸರ್ಕಲ್ ನಲ್ಲಿ ಬರುವ ಗ್ರಾಹಕರಿಗೆ ಉಚಿತ ಕೊಡುಗೆಗಳ ಸುರಿ ಮಳೆಯನ್ನು ಸುರಿಸಿದೆ.

ಕರ್ನಾಟಕಕ್ಕೆ ಮಾತ್ರ ಬಿಎಸ್ಎನ್ಎಲ್‌ನಿಂದ ಭರ್ಜರಿ ಕೊಡುಗೆ...!!!

ಓದಿರಿ: ಮಾರುಕಟ್ಟೆಗೆ ಬಂದಿದೆ ನೀರಿನಲ್ಲಿ ತೊಳೆಯಬಹುದಾದ ಸ್ಮಾರ್ಟ್‌ಪೋನ್...!

ಕರ್ನಾಟಕ ಸರ್ಕಲ್‌ಗಾಗಿಯೇ 'ನ್ಯೂ ಪ್ಲಾನ್ ವೋಚರ್' ವೊಂದನ್ನು ಪ್ರಮೋಷನ್ ಗಾಗಿ ಬಿಡುಗಡೆ ಮಾಡಿದ್ದು, 144 ರೂಗಳಿಗೆ ಒಂದು ತಿಂಗಳ ಕಾಲ ಉಚಿತ ಕರೆ ಮಾಡುವ ಸೇವೆಯನ್ನು ನೀಡಲು ಮುಂದಾಗಿದೆ.

ಈ ಕೊಡುಗೆ ಅನ್ವಯ ಗ್ರಾಹಕರು ಮೊದಲ 30 ದಿನಗಳ ಕಾಲ ಯಾವುದೇ ಮಿತಿ ಇಲ್ಲದೇ ಲೋಕಲ್ ಮತ್ತು ಎಸ್‌ಟಿಡಿ ಕರೆಗಳನ್ನು ಉಚಿತವಾಗಿ ಮಾಡಬಹುದಾಗಿದೆ, ಇದಲ್ಲದೇ ಬೆಂಗಳೂರಿಗರಿಗೆ ಇನ್ನು ಹೆಚ್ಚಿನ ಕೊಡಗೆ ನೀಡಿರುವ ಬಿಎಸ್ಎನ್ಎಲ್ ರೂ. 439 ಪಾವತಿಸಿ ಮೂರು ತಿಂಗಳ ಕಾಲ ಉಚಿತ ಕರೆ ಮಾಡುವ ಅವಕಾಶ ಪಡೆಯಬಹುದು ಎಂದು ಬಿಎಸ್ಎನ್ಎಲ್ ತಿಳಿಸಿದೆ.ಬರುತ್ತಿದೆ

ಕರ್ನಾಟಕಕ್ಕೆ ಮಾತ್ರ ಬಿಎಸ್ಎನ್ಎಲ್‌ನಿಂದ ಭರ್ಜರಿ ಕೊಡುಗೆ...!!!

ಓದಿರಿ: 5000mAh ಬ್ಯಾಟರಿ ಸಾಮಾರ್ಥ್ಯದ ಬ್ಲೇಡ್ ಸ್ಮಾರ್ಟ್‌ಪೋನು..!

ಈ ಕೊಡುಗೆ ಪಡೆಯುವ ಗ್ರಾಹಕರು ಪ್ರತಿ ನಿತ್ಯ ಬಿಎಸ್ಎನ್ಎಲ್ ನಿಂದ ಬಿಎಸ್ಎನ್ಎಲ್‌ಗೆ ಮಾಡುವ ಕರೆಗಳೆಲ್ಲವೂ ಉಚಿತವಾಗಿರಲಿದ್ದು, ಬೇರೆ ನೆಟ್‌ವರ್ಕ್ ಗೆ ಅರ್ಧ ಗಂಟೆಗಳ ಕಾಲ ಉಚಿತವಾಗಿ ಕರೆ ಮಾಡಬಹುದಾಗಿದೆ. ಇದಲ್ಲದೇ ಬಿಎಸ್ಎನ್ಎಲ್‌ಗೆ ಪೋರ್ಟ್‌ ಮಾಡಿಕೊಳ್ಳುವ ಗ್ರಾಹಕರು ಈ ಸೇವೆಯನ್ನು ಪಡೆಯಲು ಅರ್ಹರಾಗಲಿದ್ದಾರೆ.

Read more about:
English summary
BSNL Karnataka Circle on Friday introduced 'New Plan Voucher' for Rs. 144 as a promotional offer under prepaid mobile services. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot