ದುಬೈ ಮಾದರಿ ವ್ಯವಸ್ಥೆ ಬೆಂಗಳೂರು ಏರ್‌ಪೋರ್ಟ್‌ನಲ್ಲೂ!
ಬೆಂಗಳೂರು ಏರ್‌ಪೋರ್ಟ್ ಹಳೆಯ ವ್ಯವಸ್ಥೆಗಳಲ್ಲಿ ಬದಲಾವಣೆಯನ್ನು ತರುವುದರ ಮೂಲಕ ನಿತ್ಯವೂ ವಿಮಾನದಲ್ಲಿ ಪ್ರಯಾಣಿಸುವ ಟೆಕ್ ಜನರಿಗಾಗಿ ಹಲವಾರು ಮಾರ್ಪಾಡುಗಳನ್ನು ಹೊರತಂದಿದೆ.

ಕೆಲವೊಂದು ಆಯ್ಕೆಮಾಡಿದ ಫ್ಲೈಟ್‌ಗಳಲ್ಲಿ ಮೊಬೈಲ್ ಬೋರ್ಡಿಂಗ್ ಪಾಸ್‌ಗಳನ್ನು ಪರಿಚಯಿಸಿದ ನಂತರ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ವಯಂಚಾಲಿತ ಇ ಗೇಟ್‌ಗಳನ್ನು ಅಳವಡಿಸಿದೆ. ಇದರಿಂದ ಪ್ರಯಾಣಿಕರ ಸ್ಕ್ರೀನಿಂಗ್ ಅನ್ನು ಇನ್ನಷ್ಟು ವೇಗವಾಗಿ ಮಾಡುತ್ತಿದೆ.

ಓದಿರಿ: ಭಾರತದಲ್ಲಿ ವಿಫುಲ ಉದ್ಯೋಗವಕಾಶ: ಸ್ವರ್ಗಕ್ಕೆ ಮೂರೇ ಗೇಣು
ಇದೀಗ ಇ ಗೇಟ್‌ಗಳಲ್ಲಿ ಪ್ರಯಾಣಿಕರು ತಮ್ಮ 2ಡಿ ಬಾರ್‌ಕೋಡ್ ಪೇಪರ್ ಅನ್ನು ಫ್ಲ್ಯಾಶ್ ಮಾಡಬಹುದು. ಗುರುತನ್ನು ಪರಿಶೀಲಿಸುವ ಮೂಲಕ ಗೇಟ್ ಸ್ವಯಂಚಾಲಿತವಾಗಿ ತೆರೆಯುತ್ತದೆ ಮತ್ತು ಪ್ರಯಾಣಿಕರ ವಿವರ ಇ ಗೇಟ್‌ನಲ್ಲಿ ಬಿಲ್ಟ್ ಇನ್ ಆಗಿರುವ ಸ್ಕ್ರೀನ್‌ಗಳಲ್ಲಿ ಡಿಸ್‌ಪ್ಲೇಯಾಗುತ್ತದೆ.

ಓದಿರಿ: ಫೋನ್ ಕ್ಷೇತ್ರದಲ್ಲೇ ನಮ್ಮ ದೇಶದಿಂದ ಹೊಸ ಇತಿಹಾಸ ಸೃಷ್ಟಿ
ನಂತರ ಪ್ರಯಾಣಿಕರು ಕಡ್ಡಾಯವಾಗಿರುವ ಭದ್ರತಾ ಪರಿಶೀಲನೆಗೆ ತಮ್ಮನ್ನು ಒಳಪಡಿಸಿಕೊಳ್ಳಬಹುದು. ಇ ಗೇಟ್ ಅನ್ನು ಒಮ್ಮೆ ಪ್ರಯಾಣಿಕ ದಾಟಿದ ನಂತರ, ನಿಜವಾದ ಬೋರ್ಡಿಂಗ್ ಆರಂಭವಾಗುವ ಸಮಯದವರೆಗೆ ಬೋರ್ಡಿಂಗ್ ಪಾಸ್ ಅನ್ನು ಪುನಃ ತೋರಿಸಬೇಕಾಗಿಲ್ಲ.


Click it and Unblock the Notifications








