Subscribe to Gizbot

ಬಂದಿದೆ ಹೊಸ ತಂತ್ರಜ್ಞಾನ: ಕ್ಷಣ ಮಾತ್ರದಲ್ಲಿ ಚಾರ್ಜ್ ಆಗಲಿದೆ ಮೊಬೈಲ್ ಬ್ಯಾಟರಿ..!!

Written By:

ದಿನೇ ದಿನೇ ಬ್ಯಾಟರಿ ಆಧಾರಿತ ಎಲೆಕ್ಟ್ರಾನಿಕ್ ವಸ್ತುಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಬ್ಯಾಟರಿ ಚಾಲಿತ ಕಾರುಗಳು, ಸ್ಮಾರ್ಟ್‌ಫೋನ್ ಗಳು, ಲ್ಯಾಪ್‌ಟಾಪ್, ಕ್ಯಾಮೆರಾಗಳು ಹೀಗೆ ಅನೇಕ ವಸ್ತುಗಳು ಬ್ಯಾಟರಿ ಶಕ್ತಿಯನ್ನು ನಂಬಿಕೊಂಡೆ ಕಾರ್ಯನಿರ್ವಹಿಸುತ್ತಿವೆ. ಈ ಹಿನ್ನಲೆಯಲ್ಲಿ ಬ್ಯಾಟರಿ ಕುರಿತ ಸಂಶೋಧನೆಗಳು ಇತ್ತೀಚಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ಓದಿರಿ: ಗೂಗಲ್‌ನಿಂದ 2 ಕೋಟಿ ಸೊಳ್ಳೆ ಬಿಡುಗಡೆ: ನೀವು ಕಾರಣ ತಿಳಿಯಬೇಕು.!!

ಅದರಲ್ಲೂ ಬ್ಯಾಟರಿ ಚಾಲಿತ ಕಾರುಗಳು, ಬೈಕ್ ಮತ್ತು ಸ್ಮಾರ್ಟ್‌ಫೋನ್ ಗಳು ಖ್ಯಾತಿಯನ್ನು ಪಡೆದುಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ವೇಗವಾಗಿ ಚಾರ್ಜ್ ಆಗುವ ಬ್ಯಾಟರಿ ಮತ್ತು ದೀರ್ಘಕಾಲ ಬಾಳಿಕೆ ಬರುವ ಬ್ಯಾಟರಿಗಳ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆಯನ್ನು ನೀಡಲಾಗಿದೆ. ಇದೇ ಸಂದರ್ಭದಲ್ಲಿ ಅವಿಷ್ಕಾರಗೊಂಡಿರುವುದೇ ಸೆಕೆಂಡಿನಲ್ಲಿ ಚಾರ್ಜ್ ಆಗುವ ಬ್ಯಾಟರಿ.

ಓದಿರಿ: ವಾಟ್ಸ್‌ಆಪ್ ಬಿಟ್ಟು ಟೆಲಿಗ್ರಾಂ ಬಳಕೆ ಶುರು ಮಾಡಲು ಇದೊಂದೆ ಕಾರಣ ಸಾಕು..!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇನ್‌ಸ್ಟೆಂಟ್ ಬ್ಯಾಟರಿ ಚಾರ್ಜ್:

ಇನ್‌ಸ್ಟೆಂಟ್ ಬ್ಯಾಟರಿ ಚಾರ್ಜ್:

ಇಂದಿನ ದಿನದಲ್ಲಿ ಪ್ರತಿಯೊಂದು ಕಾರ್ಯವೇ ಬೇಗನೆ ಆಗಬೇಕೆಂದು ಜನರು ಬಯಸುತ್ತಾರೆ. ಇದೇ ಮಾದರಿಯಲ್ಲಿ ಬ್ಯಾಟರಿಯನ್ನು ಇನ್‌ಸ್ಟೆಂಟ್ ಆಗಿ ಚಾರ್ಜ್ ಮಾಡಲು ಈ ವಿಧಾನವು ಸಹಾಯಕಾರಿಯಾಗಲಿದೆ. ಇದರಲ್ಲಿ MXene ಅನ್ನು ಹೈಡ್ರೂಜಲ್ ನೊಂದಿಗೆ ಮಿಕ್ಸ್ ಮಾಡಿ ಪ್ರಯೋಗ ನಡೆಸಲಾಗಿದೆ.

ಸೆಕೆಂಡ್ ನಲ್ಲಿ ಬ್ಯಾಟರಿ ಚಾರ್ಜ್:

ಸೆಕೆಂಡ್ ನಲ್ಲಿ ಬ್ಯಾಟರಿ ಚಾರ್ಜ್:

ಡಿರೆಕ್ಸಲ್ ಇಂಜಿನಿಯರಿಂಗ್ ಕಾಲೇಜಿನ ಸಂಶೋಧಕರು ಹೊಸ ಮಾದರಿಯ ತಂತ್ರಜ್ಞಾನವನ್ನು ಕಂಡುಹಿಡಿದಿದ್ದು, ಇದು ಸಂಪೂರ್ಣ ಬ್ಯಾಟರಿಯನ್ನು ಕ್ಷಣ ಮಾತ್ರದಲ್ಲಿ ಚಾರ್ಜ್ ಮಾಡಲಿದೆ ಎನ್ನಲಾಗಿದೆ. ಇದನ್ನು ನ್ಯಾನೊಮೀಟರಿಯಲ್ MXene ಎಂಬ ವಸ್ತುವಿನಿಂದ ನಿರ್ಮಿಸಲಾಗಿದೆ.

ಸ್ಮಾರ್ಟ್‌ಫೋನ್ - ಎಲೆಕ್ಟ್ರಿಕ್ ಕಾರ್ ಗಳಲ್ಲಿ ಹೆಚ್ಚು ಬಳಕೆ:

ಸ್ಮಾರ್ಟ್‌ಫೋನ್ - ಎಲೆಕ್ಟ್ರಿಕ್ ಕಾರ್ ಗಳಲ್ಲಿ ಹೆಚ್ಚು ಬಳಕೆ:

ಈ ತಂತ್ರಜ್ಞಾನವನ್ನು ಎಲೆಕ್ಟ್ರಿಕ್ ಕಾರ್‌ಗಳನ್ನು ಚಾರ್ಜ್ ಮಾಡಿಕೊಳ್ಳುವಲ್ಲಿ ಮತ್ತು ಸ್ಮಾರ್ಟ್‌ಫೋನ್ ಗಳನ್ನು ಚಾರ್ಜ್ ಮಾಡಿಕೊಳ್ಳಲು ಬಳಕೆ ಮಾಡಿಕೊಳ್ಳಬಹುದಾಗಿದ್ದು, ಬ್ಯಾಟರಿ ಚಾರ್ಜಿಂಗ್ ಸಮಸ್ಯೆಗೆ ಹೆಚ್ಚಿನ ಪರಿಹಾರವನ್ನು ನೀಡಲಿದೆ.

ಸುಪರ್ ಫಾಸ್ಟ್ ಚಾರ್ಜಿಂಗ್:

ಸುಪರ್ ಫಾಸ್ಟ್ ಚಾರ್ಜಿಂಗ್:

ಈಗಾಗಲೇ ಮಾರುಕಟ್ಟೆಯಲ್ಲಿ ಫಾಸ್ಟ್ ಚಾರ್ಜಿಂಗ್, ರಾಪಿಡ್ ಚಾರ್ಜಂಗ್ ಎನ್ನುವುದನ್ನು ಕೇಳುತ್ತಿದ್ದೇವೆ. ಇದು ಅದಲ್ಲವನ್ನು ಮೀರಿಸಿ ವೇಗವಾಗಿ ಚಾರ್ಜ್ ಮಾಡಲಿದ್ದು, ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಇದು ಹೆಚ್ಚಿನ ಸದ್ದು ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
discovered a way to make modern batteries a whole lot better by reducing recharge times to mere seconds. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot