ವಾಟ್ಸ್‌ಆಪ್ ಬಿಟ್ಟು ಟೆಲಿಗ್ರಾಂ ಬಳಕೆ ಶುರು ಮಾಡಲು ಇದೊಂದೆ ಕಾರಣ ಸಾಕು..!!

Written By:

ದಿನೇ ದಿನೇ ವಾಟ್ಸ್‌ಆಪ್ ಖ್ಯಾತಿಯೂ ಹೆಚ್ಚಾಗುತ್ತಿದ್ದು, ಬಳಕೆದಾರರ ಸಂಖ್ಯೆಯೂ ಏರುಗತಿಯಲ್ಲಿ ಸಾಗಿದೆ. ಅಲ್ಲದೇ ಹೊಸ ಹೊಸ ಅಪ್‌ಡೇಟ್‌ಗಳು ಲಭ್ಯವಾಗುತ್ತಿದೆ. ಇದೇ ವೇಳೆಗೆ ಪ್ರತಿ ಸ್ಪರ್ಧೆ ಆಪ್‌ಗಳು ಹೆಚ್ಚಿನ ಆಯ್ಕೆಗಳನ್ನು ಹೊಸ ಹೊಸ ವಿಷಯಗಳನ್ನು ಪರಿಚಯಿಸುತ್ತಿವೆ, ಬಹಳ ದಿನಗಳಿಂದ ವಾಟ್ಸ್‌ಆಪ್ ಬಳಸುತ್ತಿರುವವರಿಗೆ ಹೊಸ ಅನುಭವವನ್ನು ನೀಡಲು ಮುಂದಾಗಿವೆ.

ವಾಟ್ಸ್‌ಆಪ್ ಬಿಟ್ಟು ಟೆಲಿಗ್ರಾಂ ಬಳಕೆ ಶುರು ಮಾಡಲು ಇದೊಂದೆ ಕಾರಣ ಸಾಕು..!!

ಓದಿರಿ: ಜಿಯೋದಲ್ಲೂ ನಮೋ ಜಪ : 4G ಮೊಬೈಲ್ ನಲ್ಲಿ 'ಏನಿದೆ-ಏನಿಲ್ಲ' ಕಂಪ್ಲಿಟ್ ರಿಪೋರ್ಟ್..!!!

ವಾಟ್ಸ್‌ಆಪ್ ಬಳಸಿ ಬೋರ್ ಆಗಿದೆ ಎನ್ನುವವರಿಗಾಗಿಯೇ ಟೆಲಿಗ್ರಾಂ ಹೊಸದೊಂದು ಆಪ್ ಡೇಟ್ ಬಿಟ್ಟಿದೆ ಇಲ್ಲಿರುವ ಹೊಸ ಆಯ್ಕೆಗಳ ಬಳಕೆದಾರರನ್ನು ಸೆಳೆಯಲಿದೆ ಎಂದರೆ ತಪ್ಪಾಗುವುದಿಲ್ಲ ಎನ್ನಲಾಗಿದೆ.

ಓದಿರಿ: ಬೆಂಗಳೂರಲ್ಲಿ ಬ್ಲಾಸ್ಟ್ ಆಯ್ತು ಶಿಯೋಮಿ ರೆಡ್‌ಮಿ 4: ಇಲ್ಲಿದೇ ನೋಡಿ ಮೊಬೈಲ್ ಹತ್ತಿಉರಿದ ವಿಡಿಯೋ..!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೋಟೋ ಕಣ್ಮರೆ:

ಫೋಟೋ ಕಣ್ಮರೆ:

ಟೆಲಿಗ್ರಾಂ ಪ್ರೈವೆಟ್ ಚಾಟಿಂಗ್ ಮಾಡಲು ಹೇಳಿ ಮಾಡಿಸಿದಂತಿದ್ದು, ಇದರಲ್ಲಿ ನೀವು ಕಳುಹಿಸುವಂತಹ ಫೋಟೋಗಳನ್ನು ನಿರ್ದಿಷ್ಟ ಸಮಯ ಮಾತ್ರ ಕಾಣಿಸಿಕೊಂಡು ನಂತರದಲ್ಲಿ ತಾನಾಗಿಯೇ ಕಣ್ಮರೆಯಾಗಲಿದೆ. ಇದರಿಂದ ನಿಮ್ಮ ಚಾಟಿಂಗ್ ಮತ್ತಷ್ಟು ಸುರಕ್ಷಿತವಾಗಿರಲಿದೆ.

ಇದನ್ನು ಡೌನ್‌ಲೋಡ್ ಮಾಡಲು ಆಗಲ್ಲ:

ಇದನ್ನು ಡೌನ್‌ಲೋಡ್ ಮಾಡಲು ಆಗಲ್ಲ:

ಅಲ್ಲದೇ ಈ ರೀತಿಯಾಗಿ ಕಳುಹಿಸಿದ ಫೋಟೋವನ್ನು ಸ್ವೀಕರಿಸಿದವರು ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಿಲ್ಲ ಅಲ್ಲದೇ ಅದರ ಸ್ಕ್ರಿನ್ ಶಾಟ್ ಸಹ ತೆಗೆಯಲು ಆಗುವುದಿಲ್ಲ. ಸ್ಕ್ರಿನ್ ಶಾಟ್ ತೆಗೆದ ಸಂದರ್ಭದಲ್ಲಿ ಫೊಟೋ ಕಣ್ಮರೆಯಾಗಲಿದೆ.

ಫುಲ್ ಸೆಕ್ಯೂರಿಟಿ:

ಫುಲ್ ಸೆಕ್ಯೂರಿಟಿ:

ತನ್ನ ಬಳಕೆದಾರರ ಸುರಕ್ಷಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಟೆಲಿಗ್ರಾಂ ಗ್ರೂಪ್ ಚಾಟಿಂಗ್ ಮತ್ತು ಪ್ರೈವೆಟ್ ಚಾಟಿಂಗ್ ಎರಡನ್ನು ಎನ್ಸ್ಕ್ರಿಪ್ಟ್ ಮಾಡಿದ್ದು, ಮೂರನೇ ವ್ಯಕ್ತಿ ಇಲ್ಲವೇ ಸಂಸ್ಥೆಯೂ ನೋಡಲು ಸಾಧ್ಯವಾಗದೆ ಇರುವಂತೆ ಮಾಡಿದೆ.

ವಾಟ್ಸ್‌ಆಪ್ ನಲ್ಲಿಯೂ ಈ ಆಯ್ಕೆ ಇಲ್ಲ:

ವಾಟ್ಸ್‌ಆಪ್ ನಲ್ಲಿಯೂ ಈ ಆಯ್ಕೆ ಇಲ್ಲ:

ಟೆಲಿಗ್ರಾಂ ನೀಡಿರುವ ಈ ಹೊಸ ಆಯ್ಕೆಯೂ ಬೇರೆಯಾವುದೇ ಆಪ್ ಗಳಲ್ಲಿ ಇಲ್ಲ ಅದುವೇ ವಾಟ್ಸ್‌ಆಪ್ ನಲ್ಲಿ ಬರುವು ಸಾಧ್ಯತೆಯೂ ಕಡಿಮೆ ಇದೆ ಎನ್ನಲಾಗಿದೆ. ಇದಕ್ಕಾಗಿ ವಾಟ್ಸ್‌ಆಪ್ ಬಿಟ್ಟು ಬರಲು ಇದು ಒಳ್ಳೆಯ ಕಾಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
Telegram has updated its client to version 4.2, with a number of feature additions. The image editing tools have been improved for a more streamlined workflow. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot