ಗೂಗಲ್‌ನಿಂದ 2 ಕೋಟಿ ಸೊಳ್ಳೆ ಬಿಡುಗಡೆ: ನೀವು ಕಾರಣ ತಿಳಿಯಬೇಕು.!!

ನೀವು ತಲೆಗೆ ಹುಳಬಿಟ್ಟುಕೊಳ್ಳಬೇಡಿ. ಹೇಗೆ ನೂತನ ತಂತ್ರಜ್ಞಾನದ ಮೂಲಕ ಜನರ ಜೀವನ ಶೈಲಿಯನ್ನು ಸುಲಭಗೊಳಿಸುತ್ತಿದೆಯೋ ಅದೇ ಮಾದರಿಯಲ್ಲಿ ಮನುಕುಲದ ಇತಿಹಾಸಕ್ಕೆ ಹೊಸ ಕೊಡುಗೆಯನ್ನು ನೀಡಲು ಮುಂದಾಗಿದೆ.

|

ಸರ್ಚ್ ಇಂಜಿನ್ ದೈತ್ಯ ಹೊಸ ಹೊಸ ಸಾಫ್ಟ್ ವೇರ್ ಅಭಿವೃದ್ಧಿ ಮಾಡುವುದನ್ನು ಬಿಟ್ಟು ಇದೇನು ಸೊಳ್ಳೆ ಅಭಿವೃದ್ಧಿ ಮಾಡಲು ಮುಂದಾಗಿದೆ ಎಂದು ನೀವು ತಲೆಗೆ ಹುಳಬಿಟ್ಟುಕೊಳ್ಳಬೇಡಿ. ಹೇಗೆ ನೂತನ ತಂತ್ರಜ್ಞಾನದ ಮೂಲಕ ಜನರ ಜೀವನ ಶೈಲಿಯನ್ನು ಸುಲಭಗೊಳಿಸುತ್ತಿದೆಯೋ ಅದೇ ಮಾದರಿಯಲ್ಲಿ ಮನುಕುಲದ ಇತಿಹಾಸಕ್ಕೆ ಹೊಸ ಕೊಡುಗೆಯನ್ನು ನೀಡಲು ಮುಂದಾಗಿದೆ.

ಓದಿರಿ: ಜಿಯೋದಲ್ಲೂ ನಮೋ ಜಪ : 4G ಮೊಬೈಲ್ ನಲ್ಲಿ 'ಏನಿದೆ-ಏನಿಲ್ಲ' ಕಂಪ್ಲಿಟ್ ರಿಪೋರ್ಟ್..!!!

ಗೂಗಲ್‌ನಿಂದ 2 ಕೋಟಿ ಸೊಳ್ಳೆ ಬಿಡುಗಡೆ: ನೀವು ಕಾರಣ ತಿಳಿಯಬೇಕು.!!

ಇಡೀ ಜಗತ್ತಿನ ಅತ್ಯಂತ ಭಯಂಕರ ಖಾಯಿಲೆಗಳನ್ನು ಹರಡುವುದರಲ್ಲಿ ಸೊಳ್ಳೆಗಳ ಪಾತ್ರವೇ ಅತ್ಯಂತ ಪ್ರಮುಖವಾಗಿದೆ. ಈ ಸೊಳ್ಳೆಗಳು ಕಚ್ಚುವುದರಿಂದ ಭಯಾನಕ ರೋಗಗಳು ಹರಡುವುದಲ್ಲೇ ಮನುಷ್ಯರ ಜೀವಕ್ಕೆ ಅಪಾಯವಿರುತ್ತಿದೆ. ಇಂತಹ ಸೊಳ್ಳೆಗಳ ನಿಯಂತ್ರಕ್ಕೆ ಗೂಗಲ್ ತನ್ನೇ ಸೊಳ್ಳೆ ಪಡೆಯನ್ನು ಕಟ್ಟಿದೆ. ಅವುಗಳನ್ನು ಸದ್ಯ ವಾತಾವರಣಕ್ಕೆ ಬಿಟ್ಟಿದೆ.

ಗೂಗಲ್ ಬಿಟ್ಟಿರುವುದು ಗಂಡು ಸೊಳ್ಳೆಗಳನ್ನು:

ಗೂಗಲ್ ಬಿಟ್ಟಿರುವುದು ಗಂಡು ಸೊಳ್ಳೆಗಳನ್ನು:

ಸದ್ಯ ಗೂಗಲ್ 2 ಕೋಟಿ ಗಂಡು ಸೊಳ್ಳೆಗಳನ್ನು ಬಿಡುಗಡೆ ಮಾಡಿದ್ದು, ಇದು ವಾತಾವರಣದಲ್ಲಿರುವ ಹೆಣ್ಣು ಸೊಳ್ಳೆಗಳನ್ನು ಆಕರ್ಷಿಸುವುದಲ್ಲದೇ ಅವುಗಳೊಂದಿಗೆ ಸಂಪರ್ಕವನ್ನು ಹೊಂದಿ ಹೆಣ್ಣು ಸೊಳ್ಳೆಗಳಿಗೆ ಗರ್ಭಧರಿಸುವಂತೆ ಮಾಡುತ್ತವೆ. ಹೆಣ್ಣು ಸೊಳ್ಳೆಗಳು ಇಡುವ ಮೊಟ್ಟೆಗಳು ಮರಿಯಾಗುವುದಿಲ್ಲ. ಈ ಮೂಲಕ ಅವುಗಳ ಸಂತನೋತ್ಪತಿಯನ್ನು ತಡೆಯಲಿವೆ.

ಈ ಸೊಳ್ಳೆಗಳು ಕಚ್ಚುವುದಿಲ್ಲ:

ಈ ಸೊಳ್ಳೆಗಳು ಕಚ್ಚುವುದಿಲ್ಲ:

ಗೂಗಲ್ ಬಿಟ್ಟಿರುವ ಸೊಳ್ಳೆಗಳು ಜನ ಸಾಮಾನ್ಯರಿಗೆ ಕಚ್ಚುವುದಿಲ್ಲ ಎನ್ನಲಾಗಿದೆ. ಇದು ಕೇವಲ ಸೊಳ್ಳೆಗಳೊಂದಿಗೆ ಮಾತ್ರವೇ ಸೇರಲಿದ್ದು, ಜನರಿಗೆ ತೊಂದರೆಯನ್ನು ನೀಡುವುದಿಲ್ಲ ಎಂದು ಈ ಸೊಳ್ಳೆಗಳನ್ನು ಅಭಿವೃದ್ಧಿ ಪಡಿಸಿರುವ ವಿಜ್ಞಾನಿಗಳ ಮಾತಾಗಿದೆ.

ಡೇಂಗ್ಯೂ-ಚಿಕೂನ್ ಗುನ್ಯ ತಡೆಯಲು ಸಹಾಯಕಾರಿ:

ಡೇಂಗ್ಯೂ-ಚಿಕೂನ್ ಗುನ್ಯ ತಡೆಯಲು ಸಹಾಯಕಾರಿ:

ಗೂಗಲ್ ಬಿಟ್ಟಿರುವ ಸೊಳ್ಳೆಗಳು ಸದ್ಯ ಜಾಗತಿಕವಾಗಿ ತೊಂದರೆಯನ್ನು ಉಂಟು ಮಾಡುತ್ತಿರುವ ಜೀಕಾ, ಚಿಕೂನ್ ಗುನ್ಯ, ಡೇಂಗ್ಯೂ ನಂತಹ ಖಾಯಿಲೆಗಳನ್ನು ಹರಡುತ್ತಿರುವ ಸೊಳ್ಳೆಗಳನ್ನು ನಿಯಂತ್ರಿಸಲು ಸಹಾಯಕವಾಗಿದೆ.

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು:

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು:

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎನ್ನುವ ಕ್ರಮವನ್ನು ಅರಿತಿರುವ ಗೂಗಲ್ ಸೊಳ್ಳೆಗಳನ್ನು ಸೊಳ್ಳೆಗಳಿಂದಲೇ ನಿರ್ಮೂಲನೆ ಮಾಡುವ ಕಾರ್ಯಕ್ಕೆ ಮುಂದಾಗಿದೆ. ಒಮ್ಮೆ ಈ ಪ್ರಯೋಗವು ಯಶಸ್ವಿಯಾಯಿತು ಎಂದದಾರೆ ಮುಂದಿನ ತಲೆಮಾರಿಗೆ ಸೊಳ್ಳೆಗಳು ಬರಿ ನೆನಪು ಮಾತ್ರ, ಅದರಿಂದ ಹರಡುವ ಕಾಯಿಲೆಗಳು ಸಹ.

ಸದ್ಯ ಅಮೆರಿಕಾದಲ್ಲಿ ಬಿಡುಗಡೆ:

ಸದ್ಯ ಅಮೆರಿಕಾದಲ್ಲಿ ಬಿಡುಗಡೆ:

ಗೂಗಲ್ ಅಂಗ ಸಂಸ್ಥೆಯಾದ ಆಲ್ಫಾಬೆಟ್ಸ್ ಈ ಸೊಳ್ಳೆಗಳನ್ನು ಅಭಿವೃದ್ಧಿಪಡಿಸಿದ್ದು, ಡಿಬಗ್ ಫ್ರೆಸ್ನೊ ಎಂದು ಈ ಕಾರ್ಯಕ್ಕೆ ಹೆಸರಿಟ್ಟಿದೆ ಎನ್ನಲಾಗಿದೆ. ಸದ್ಯ ಈ ಸೊಳ್ಳೆಗಳು ಅಮೆರಿಕಾದಲ್ಲಿ ಕಾರ್ಯಚರಣೆ ನಡೆಸಲಿದ್ದು, ನಂತರ ಅಲ್ಲಿ ಯಶಸ್ವಿಯಾದರೆ ವಿಶ್ವದೆಲ್ಲಡೆ ಕಾಣಿಸಿಕೊಳ್ಳಿಲಿದೆ.

Best Mobiles in India

Read more about:
English summary
Google's parent company Alphabet and scientists in the US have teamed up to release 20 million machine-raised mosquitoes to shrink the numbers of the disease-carrying ones. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X