Subscribe to Gizbot

ಜನತೆಯ ದನಿ ಆಲಿಸಲು ಬಿಬಿಎಮ್‌ಪಿ ಹೈಟೆಕ್ ಕಾಲ್‌ಸೆಂಟರ್

Posted By:

ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಯು ಹೊಸ ಕಾಲ್ ಸೆಂಟರ್ ವ್ಯವಸ್ಥೆಯಡಿಯಲ್ಲಿ ಇನ್ನು ಜನರ ಮೊರೆಯನ್ನು ಆಲಿಸಲಿದೆ. ಜನರು ತಮ್ಮ ಸಮಸ್ಯೆಗಳನ್ನು ಇಮೇಲ್, ಫೋನ್ ಕರೆಗಳು, ಎಸ್‌ಎಮ್‌ಎಸ್, ಮೆಸೇಜಿಂಗ್ ಅಪ್ಲಿಕೇಶನ್ ಮತ್ತು ಸಾಮಾಜಿಕ ಮಾಧ್ಯಮ ಮೊದಲಾದ ವಿಧಾನಗಳನ್ನು ಬಳಸಿ ಪಾಲಿಕೆಗೆ ತಿಳಿಸಬಹುದಾಗಿದೆ.

ಓದಿರಿ: ಬೆಂಕಿಯೂ ಸೋಕದ ಬಿದ್ದರೂ ಒಡೆಯದ ಸುಭದ್ರ ಫೋನ್‌ಗಳು

ಜನತೆಯ ದನಿ ಆಲಿಸಲು ಬಿಬಿಎಮ್‌ಪಿ ಹೈಟೆಕ್ ಕಾಲ್‌ಸೆಂಟರ್

ಬೆಸ್ಕಾಮ್ ಇದನ್ನು ಹೊಂದಿಸಿದ್ದು, ಇನ್ನು ಒಂದೂವರೆ ತಿಂಗಳಲ್ಲಿ ಇದು ತನ್ನ ಕಾರ್ಯವನ್ನು ನಡೆಸಲಿದೆ. ಇದು ಮಹು ಭಾಷಾ ಗ್ರಾಹಕ ಬೆಂಬಲ ಪ್ರತಿನಿಧಿಗಳನ್ನು ಹೊಂದಿದ್ದು ಐವಿಆರ್‌ಎಸ್ ಅನ್ನು ಇದು ಹೊಂದಿದೆ.

ಓದಿರಿ: ಗೂಗಲ್ ಫಿ: ತೊಡಕಿಲ್ಲದ ಇಂಟರ್ನೆಟ್ ಸೇವೆಗಾಗಿ

ಬೆಸ್ಕಾಮ್ ಕಾಲ್ ಸೆಂಟರ್ ಹೈ ಟೆಕ್ ಆಗಿದೆ. ಇನ್ನುಷ್ಟು ಆಧುನೀಕವಾಗಿ ನಾವು ಇದನ್ನು ಹೊಂದಿಸುವ ನಿಟ್ಟಿನಲ್ಲಿದ್ದು ಜನರ ಸಮಸ್ಯೆಗೆ ದನಿಯಾಗುವುದೇ ಮತ್ತು ಅವರ ಸಮಸ್ಯೆಗಳಿಗೆ ನಿರಂತರ ಪರಿಹಾರವನ್ನೊದಗಿಸುವುದೇ ನಮ್ಮ ಗುರಿಯಾಗಿದೆ ಎಂಬುದು ಬಿಬಿಎಮ್‌ಪಿ ನಿರ್ವಾಹಕರಾದ ಟಿಎಮ್ ವಿಜಯ್ ಭಾಸ್ಕರ್ ತಿಳಿಸಿದ್ದಾರೆ.

ಜನತೆಯ ದನಿ ಆಲಿಸಲು ಬಿಬಿಎಮ್‌ಪಿ ಹೈಟೆಕ್ ಕಾಲ್‌ಸೆಂಟರ್

ದಿನದಲ್ಲಿ ಕಾಲ್ ಸೆಂಟರ್ ಮೂರು ಶಿಫ್ಟ್‌ಗಳಲ್ಲಿ 24x7 ಸಮಯವೂ ಕಾರ್ಯನಿರ್ವಹಿಸಲಿದೆ. ಅಗತ್ಯಗಳಿಗೆ ಅನುಗುಣವಾಗಿ ಸಮಯವನ್ನು ಬದಲಾಯಿಸಲಾಗುತ್ತದೆ ಎಂದು ವಿಜಯ್ ತಿಳಿಸಿದ್ದಾರೆ.

English summary
Bruhat Bangalore Mahanagara Palike’s proposed new call centre will address citizen’s issues received through various channels — email, phone calls, SMS, messaging apps and social media.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot