Subscribe to Gizbot

ಮಣಿಪಾಲ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಅಸಾಮಾನ್ಯ ಸಾಧನೆ

Written By:

ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಇಬ್ಬರು ವಿದ್ಯಾರ್ಥಿಗಳಾದ ಆಕಾಶ್ ಬುಧಿಯಾ ಮತ್ತು ಮೋನು ಕುಮಾರ್ ಕ್ರೋನ್ ಜೆ ಎಂಬ ಸ್ಟಾರ್ಟಪ್ ಮೂಲಕ ಮೀನ್ ಸ್ಟಾಕ್ ಅಭಿವೃದ್ಧಿಯನ್ನು ಮಾಡಿದ್ದು ಇದೊಂದು ಜಾವಾ ಸ್ಕ್ರಿಪ್ಟ್ ಸಂಗ್ರಹಣೆ ತಂತ್ರಜ್ಞಾನವಾಗಿದ್ದು ಇದನ್ನು ವೆಬ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳ ಅಭಿವೃದ್ಧಿಗಾಗಿ ಬಳಸಲಾಗುತ್ತದೆ.

ಮಣಿಪಾಲ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಅಸಾಮಾನ್ಯ ಸಾಧನೆ

ನೆಟ್‌ಫ್ಲಿಕ್ಸ್, ಪೇಪಾಲ್, ಲಿಂಕ್‌ಡ್‌ಇನ್ ಮೊದಲಾದ ಕಂಪೆನಿಗಳು ಇದೇ ತಂತ್ರಜ್ಞಾನದ ಮೂಲಕ ಆರಂಭವನ್ನು ಕಂಡಿದ್ದರೂ ಈ ತಂತ್ರಜ್ಞಾನ ಇನ್ನೂ ಪ್ರಗತಿಯನ್ನು ಕಾಣುತ್ತಿದೆ. ಪ್ರಸ್ತುತ ಕಂಪೆನಿಯು ಹೈದ್ರಾಬಾದ್‌ನಲ್ಲಿದ್ದು, ಬೆಂಗಳೂರಿನಲ್ಲಿ ಇದನ್ನು ಆರಂಭಿಸುವ ಇರಾದೆಯನ್ನು ಆಕಾಶ್ ಬುಧಿಯಾ ಹೊಂದಿದ್ದಾರೆ.

ಓದಿರಿ: ಭಾರತದಲ್ಲಿ ವಿಫುಲ ಉದ್ಯೋಗವಕಾಶ: ಸ್ವರ್ಗಕ್ಕೆ ಮೂರೇ ಗೇಣು

ನಮ್ಮ ಇಂಟರ್ನ್‌ಶಿಪ್ ಸಂದರ್ಭದಲ್ಲಿ ಈ ಯೋಜನೆ ನಮ್ಮ ಮನದಲ್ಲಿ ರೂಪಿತವಾಗಿತ್ತು ನನ್ನ ಗೆಳೆಯ ಮೋನು ಕುಮಾರ್‌ನ ಸಹಾಯದೊಂದಿಗೆ ಇಂತಹ ತಂತ್ರಜ್ಞಾನದ ಅಭಿವೃದ್ಧಿಯನ್ನು ಮಾಡಲಾಗಿದೆ. ನಾವು ಮೊದಲು ಜಾವಾ ಸ್ಕ್ರಿಪ್ಟ್‌ನಲ್ಲಿ ಗೇಮ್ ಅನ್ನು ಅಭಿವೃದ್ಧಿಪಡಿಸಿದ್ದೆವು. ನಂತರ 2013 ರಲ್ಲಿ ಕ್ರೋನ್ - ಜೆಯನ್ನು ನಾವು ಆರಂಭಿಸಿದ್ದು ಯುವಕರನ್ನು ಇದಕ್ಕಾಗಿ ತರಬೇತುಗೊಳಿಸಿದೆವು. 15 ದೇಶಗಳಲ್ಲಿ ವ್ಯವಹಾರವನ್ನು ನಾವು ಮಾಡಿದ್ದು ಕಳೆದ ಒಂದು ವರ್ಷದಿಂದ ನಾವು 0.5 ಮಿಲಿಯನ್ ಅನ್ನು ಗಳಿಸಿದ್ದೇವೆ ಎಂದು ಆಕಾಶ್ ತಿಳಿಸಿದ್ದಾರೆ.

ಓದಿರಿ: ತೊಡಕಿಲ್ಲದ ಇಂಟರ್ನೆಟ್ ಸೇವೆಗಾಗಿ ಟಾಪ್ ಬ್ರಾಡ್‌ಬ್ಯಾಂಡ್ಸ್

ಆಕಾಶ್ ಮತ್ತು ಮೋನು ಯುಎಸ್‌ಎ ಟುಡೇಯಂತಹ ಬ್ರ್ಯಾಂಡ್‌ಗಳೊಂದಿಗೆ ವ್ಯವಹಾರವನ್ನು ಮಾಡಿದ್ದಾರೆ. ಭಾರತದ ಪ್ರಥಮ ಕ್ಲೈಂಟ್ ಅಪೋಲೊ ಹಾಸ್ಪಿಟಲ್ ಗ್ರೂಪ್ ಆಗಿದೆ.

English summary
Akash Budhia and Monu Kumar, both 24-year-old graduates from Manipal Institute of Technology (2012), are building a talent house on MEAN stack development through their start-up Cron-J, which is a collection of JavaScript based technologies used to develop web and mobile applications.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot