ತೊಡಕಿಲ್ಲದ ಇಂಟರ್ನೆಟ್ ಸೇವೆಗಾಗಿ ಟಾಪ್ ಬ್ರಾಡ್‌ಬ್ಯಾಂಡ್ಸ್

By Shwetha
|

ಇಂದಿನ ಆಧುನಿಕ ಯುಗದಲ್ಲಿ ಇಂಟರ್ನೆಟ್ ಬಳಕೆಯನ್ನು ಯಾರು ಮಾಡುವುದಿಲ್ಲ ಹೇಳಿ. ತಾಂತ್ರಿಕ ಜಗದಲ್ಲಿ ನೀವು ಮುಂದೆ ಇದ್ದೀರಿ ಎಂಬುದನ್ನು ತೋರಿಸಲು ಇಂಟರ್ನೆಟ್ ಅತ್ಯವಶ್ಯಕವಾಗಿದೆ. ಇಂದು ಹಳ್ಳಿಗಳಲ್ಲೂ ಇಂಟರ್ನೆಟ್ ತನ್ನ ಕಾರುಬಾರನ್ನು ಮಾಡುತ್ತಿದ್ದು ನಗರ ಪ್ರದೇಶಕ್ಕೂ ಹಳ್ಳಿಗೂ ಅವಿನಾಭಾವ ಸಂಬಂಧವನ್ನು ಇದು ಏರ್ಪಡಿಸುತ್ತಿದೆ.

ಓದಿರಿ: ಭಾರತದಲ್ಲಿ ವಿಫುಲ ಉದ್ಯೋಗವಕಾಶ: ಸ್ವರ್ಗಕ್ಕೆ ಮೂರೇ ಗೇಣು

ಹೊರದೇಶದೊಂದಿಗೆ ಸಂಪರ್ಕ ಸಾಧಿಸಲು, ಕರೆಮಾಡಲು, ಸಂಭಾಷಿಸಲು, ಮಾಹಿತಿ ಹುಡುಕಲು ಹೀಗೆ ಹಲವಾರು ಬಗೆಯಲ್ಲಿ ಇಂಟರ್ನೆಟ್ ನಮಗೆ ಸಹಾಯವನ್ನೊದಗಿಸುತ್ತಿದೆ. ಇನ್ನು ಯಾವುದೇ ತೊಂದರೆಯಿಲ್ಲದೆ ಇಂಟರ್ನೆಟ್‌ನ ಪ್ರಯೋಜನವನ್ನು ನೀವು ಬಳಸಬೇಕು ಎಂಬುದಾದಲ್ಲಿ ಅದಕ್ಕೂ ಹಲವಾರು ಪರಿಹಾರಗಳಿವೆ.

ಓದಿರಿ: ಏನು ಫೋನ್ ಚಾರ್ಜ್ ಮಾಡಲು ಇನ್ನು ಚಾರ್ಜರ್ ಬೇಕಾಗಿಯೇ ಇಲ್ಲವೇ?

ಇಂದಿನ ಲೇಖನದಲ್ಲಿ ನಿಮಗೆ ತೊಡಕಿಲ್ಲದೆ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುವ ಟಾಪ್ ಸರ್ವೀಸ್ ಪ್ರೊವೈಡರ್‌ಗಳ ಮಾಹಿತಿಯನ್ನು ನೀಡುತ್ತಿದ್ದು ಸ್ಲೈಡರ್‌ಗಳಲ್ಲಿ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಬಹುದಾಗಿದೆ.

ಬಿಎಸ್‌ಎನ್‌ಎಲ್

ಬಿಎಸ್‌ಎನ್‌ಎಲ್

ದೇಶದ ಅತಿದೊಡ್ಡದಾದ ಮತ್ತು ಉತ್ತಮ ಸೇವೆಯನ್ನು ಒದಗಿಸುವ ಟೆಲಿಕಾಮ್ ಪ್ರೊವೈಡರ್ ಆಗಿದೆ ಬಿಎಸ್‌ಎನ್‌ಎಲ್. ಇದು 2000 ರಲ್ಲಿ ತನ್ನ ಸೇವೆಯನ್ನು ಆರಂಭಿಸಿತು.

ಎಮ್‌ಟಿಎನ್‌ಎಲ್

ಎಮ್‌ಟಿಎನ್‌ಎಲ್

ನವದೆಹಲಿ ಮತ್ತು ಮುಂಬೈನಲ್ಲಿ 1986 ರಲ್ಲೇ ಆರಂಭವಾದ ಎಮ್‌ಟಿಎನ್‌ಎಲ್ ದೇಶದ ಸೇವಾ ನೀಡುಗರಲ್ಲಿ ಒಂದಾಗಿದೆ. ಲ್ಯಾಂಡ್‌ಲೈನ್ ಸೇವೆ, ಜಿಎಸ್‌ಎಮ್ ಸೇವೆಗಳು ಮತ್ತು ಇತರ ಸೇವೆಗಳನ್ನು ಇದು ಒದಗಿಸುತ್ತಿದೆ.

ಏರ್‌ಟೆಲ್

ಏರ್‌ಟೆಲ್

ಹೆಚ್ಚು ವೇಗದ ಇಂಟರ್ನೆಟ್ ಸೇವೆಯನ್ನು ಒದಗಿಸುವ ಏರ್‌ಟೆಲ್, ಹೆಚ್ಚಿನ ಗ್ರಾಹಕರನ್ನು ಹೊಂದಿದೆ. ಇದು ದೇಶದಲ್ಲಿ 269 ಮಿಲಿಯನ್ ಚಂದಾದಾರರನ್ನು ಹೊಂದಿದೆ.

ಹಾತ್‌ವೇ ಕೇಬಲ್

ಹಾತ್‌ವೇ ಕೇಬಲ್

ದೇಶದಲ್ಲಿ ಲಭ್ಯವಿರುವ ಜನಪ್ರಿಯ ಬ್ರಾಡ್‌ಬ್ಯಾಂಡ್ ಸೇವೆಯಾಗಿದೆ ಹಾತ್‌ವೇ. ದೇಶದ ಹಲವಾರು ಭಾಗಗಳಲ್ಲಿ ಹಾತ್‌ವೇ ಸೇವೆ ಲಭ್ಯವಿದೆ.

ಟಾಟಾ

ಟಾಟಾ

ಉತ್ತಮ ಕಾರ್ಯಕ್ಷಮತೆ ಮತ್ತು ಹೆಚ್ಚಿನ ಗ್ರಾಹಕರನ್ನು ಹೊಂದಿರುವ ಇಂಟರ್ನೆಟ್ ಸರ್ವೀಸ್ ಪ್ರೊವೈಡರ್ಸ್ ಟಾಟಾ ಸಂಸ್ಥೆ ಹಲವಾರು ಕೊಡುಗೆಗಳು ಮತ್ತು ಪ್ಯಾಕೇಜ್‌ಗಳ ಮೂಲಕ ತನ್ನ ಸೇವೆಯನ್ನು ಹೆಚ್ಚು ಜನಪ್ರಿಯಗೊಳಿಸಿದೆ.

ರಿಲಾಯನ್ಸ್

ರಿಲಾಯನ್ಸ್

ದೇಶದಲ್ಲೇ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಸೇವಾ ಕೇಂದ್ರವಾಗಿದೆ ರಿಲಾಯನ್ಸ್. ಉತ್ತಮ ಕಾರ್ಯಕ್ಷಮತೆಯುಳ್ಳ ಇಂಟರ್ನೆಟ್, ಉತ್ತಮ ಸೇವೆ ಮತ್ತು ಹೆಚ್ಚು ವೇಗ ಇದು ಮೂಲ ಗುಟ್ಟಾಗಿದೆ.

ಯು

ಯು

ಮುಂಬೈನಲ್ಲಿರುವ ಈ ಸಂಸ್ಥೆ ದೇಶಾದ್ಯಂತ ಹೆಚ್ಚಿನ ಗ್ರಾಹಕರನ್ನು ಹೊಂದಿದೆ. ವಾಲ್ಯು ಏಡೆಡ್ ಸರ್ವೀಸ್, ಗ್ರಾಹಕ ಬೆಂಬಲ ಮತ್ತು ವೇಗ ಇದರ ಮೂಲ ಅಂಗವಾಗಿದೆ.

ಸಿಫ್ಟಿ

ಸಿಫ್ಟಿ

ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿರುವ ಇಂಟರ್ನೆಟ್ ಸಂಸ್ಥೆಯಾಗಿದೆ ಸಿಫ್ಟಿ. ಉತ್ತಮ ಸೇವೆ ಅಂತೆಯೇ ಹೆಚ್ಚು ಗ್ರಾಹಕ ಬೆಂಬಲ ಇದಕ್ಕಿದೆ.

ಏಷ್ಯಾನೆಟ್ ಡೇಟಾಲೈನ್

ಏಷ್ಯಾನೆಟ್ ಡೇಟಾಲೈನ್

ಕೇರಳದಲ್ಲಿ ಲಭ್ಯವಿರುವ ಇಂಟರ್ನೆಟ್ ಸರ್ವೀಸ್ ಪ್ರೊವೈಡರ್ ಆಗಿದೆ. ರಾಜ್ಯದಲ್ಲೇ ಇದು 115,000 ಚಂದಾದಾರರನ್ನು ಹೊಂದಿದೆ.

ಎಚ್‌ಎಫ್‌ಸಿಎಲ್

ಎಚ್‌ಎಫ್‌ಸಿಎಲ್

ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡ ಇಂಟರ್ನೆಟ್ ಸಂಸ್ಥೆ. ನವ ದೆಹಲಿಗೆ ಮಾತ್ರವೇ ಸಂಸ್ಥೆ ಇಂಟರ್ನೆಟ್ ಪೂರೈಕೆಯನ್ನು ಮಾಡುತ್ತಿದೆ.

Most Read Articles
Best Mobiles in India

English summary
Internet has become the need of the hour and necessity for everyone. Here are the top 10 best internet service providers in India 2015.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more