Subscribe to Gizbot

ಏರ್‌ಟೆಲ್ 4G VolTE ಸೇವೆ ಆರಂಭ: ಗ್ರಾಹಕರಿಗೆ ಭರ್ಜರಿ ಆರಂಭಿಕ ಕೊಡುಗೆ..!!

Written By:

ದೇಶಿಯ ಟೆಲಿಕಾಂ ವಲಯದಲ್ಲಿ ರಿಲಯನ್ಸ್ ಮಾಲೀಕತ್ವದ ಜಿಯೋ 4G VoLTE ಸೇವೆಯನ್ನು ಲಾಂಚ್ ಮಾಡಿ ಡೊಡ್ಡ ಮಟ್ಟದ ಕ್ರಾಂತಿಕಾರ ಬದಲಾವಣೆಯನ್ನು ತಂದ ಮಾದರಿಯಲ್ಲಿ ಏರ್‌ಟೆಲ್ ಸಹ 4G VolTE ಸೇವೆಯನ್ನು ಆರಂಭಿಸಲು ಮುಂದಾಗಿದ್ದು, ಈ ಮೂಲಕ ಜಿಯೋ ಸೇವೆಗೆ ಭರ್ಜರಿ ಹೊಡೆತವನ್ನು ನೀಡಲು ತಯಾರಿ ನಡೆಸಿದೆ.

ಓದಿರಿ: ಧನ್ ಧನಾ ಧನ್ ಆಫರ್ ಮುಗಿತಾ..? ಚಿಂತೆ ಬೇಡ ಇಲ್ಲಿದೆ ಜಿಯೋ ಹೊಸ ಆಫರ್...!

ಈ ಕುರಿತು ವರದಿ ಪ್ರಕಟಿಸಿರುವ ET ಟೆಲಿಕಾಂಮ್ ಜೂನ್ 10 ರಿಂದ ಏರ್‌ಟೆಲ್ 4G VolTE ಸೇವೆಯನ್ನು ಆರಂಭಿಸಲಿದೆ ಎಂದು ತಿಳಿಸಿದೆ. ಇದಕ್ಕಾಗಿ ದೆಹಲಿಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ತನ್ನ ನೂತನ ಸೇವೆಯನ್ನು ಪರಿಚಯಿಸಲಿದೆ.

ಓದಿರಿ: ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಆನ್ ಮ್ಯಾಕ್ಸ್ ಲಾಂಚ್: ಅಚ್ಚರಿ ಬೆಲೆಗೆ ಬೊಂಬಾಟ್ ಫೋನ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏನೀದು VoLTE ಸೇವೆ.?:

ಏನೀದು VoLTE ಸೇವೆ.?:

ಭಾರತದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಿರುವ ಏರ್‌ಟೆಲ್ ಸದ್ಯ ವಾಯ್ಸ್ ಓವರ್ ಲಾಂಗ್ ಟರ್ಮ್ ಎವಲ್ಯೂಷನ್ (VolTE) ಸೇವೆಯನ್ನು ಆರಂಭಿಸಲು ಮುಂದಾಗಿದ್ದು, ಇದು ಮೊಬೈಲ್ ಗಳಿಗೆ ಹೈ ಸ್ಪೀಡ್ ವೈರ್ ಲೇಸ್ ಕಮ್ಯುನಿಕೇಶನ್ ಕಲ್ಪಿಸಲು ಸಹಾಯಕಾರಿಯಾಗಿದೆ.

VoLTE ಲಾಭವೇನು..?

VoLTE ಲಾಭವೇನು..?

VoLTE ಡೇಟಾ ಮತ್ತು ಕರೆಗಳನ್ನು ಒಂದೇ ಬ್ಯಾಂಡಿ ನಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿರುತ್ತದೆ. ಕರೆಗಾಗಿ ಬೇರೆ ಬ್ಯಾಂಡ ಮತ್ತು ಡೇಟಾಗಾಗಿ ಮತ್ತೊಂದು ಬ್ಯಾಂಡ್ ಅನ್ನು ಬದಲಿಸುವ ಅವಶ್ಯಕತೆ ಇರುವುದಿಲ್ಲ ಎನ್ನಲಾಗಿದೆ.

ಸದ್ಯ ಎಲ್ಲಿ ಸೇವೆ ಲಭ್ಯ..?:

ಸದ್ಯ ಎಲ್ಲಿ ಸೇವೆ ಲಭ್ಯ..?:

ಏರ್‌ಟೆಲ್ 4G VolTE ಸೇವೆಯನ್ನು ಮೊದಲಿಗೆ ಪರೀಕ್ಷಾರ್ಥವಾಗಿ ದೆಹಲಿ ಮತ್ತು ಮುಂಬೈ ಸೇರಿದಂತೆ ಪ್ರಮುಖ ಮೆಟ್ರೋ ಸಿಟಿಗಳಲ್ಲಿ ಆರಂಭಿಸಲಿದ್ದು, ಅಲ್ಲಿ ಯಶಸ್ವಿಯಾದ ನಂತರದಲ್ಲಿ ಈ ಸೇವೆಯನ್ನು ಬೇರೆ ಕಡೆಗೆ ವಿಸ್ತರಿಸಲಿದೆ ಎನ್ನಲಾಗಿದೆ.

ಸದ್ಯ ಜಿಯೋ ಮಾತ್ರವೇ VoLTE ಸೇವೆ ನೀಡುತ್ತಿದೆ:

ಸದ್ಯ ಜಿಯೋ ಮಾತ್ರವೇ VoLTE ಸೇವೆ ನೀಡುತ್ತಿದೆ:

ದೇಶದಲ್ಲಿ VoLTE ಸೇವೆಯನ್ನು ಸಂಪೂರ್ಣವಾಗಿ ನೀಡುತ್ತಿರುವ ನೆಟ್‌ವರ್ಕ್ ಎಂದರೆ ಅದು ರಿಲಯನ್ಸ್ ಮಾಲೀಕತ್ವದ ಜಿಯೋ ಮಾತ್ರವೇ. ಜಿಯೋ ಸಂಪೂರ್ಣ ಸೇವೆ VoLTE ನಲ್ಲಿ ಮಾತ್ರ ಲಭ್ಯವಿದ್ದು, 2G-3G ಮೊಬೈಲ್ ಗಳಲ್ಲಿ ಜಿಯೋ ವರ್ಕ್ ಆಗುವುದಿಲ್ಲ.

ಏರ್‌ಟೆಲ್‌ನಿಂದ ಭರ್ಜರಿ ಕೊಡುಗೆ:

ಏರ್‌ಟೆಲ್‌ನಿಂದ ಭರ್ಜರಿ ಕೊಡುಗೆ:

ಜಿಯೋ VoLTE ಸೇವೆಯನ್ನು ಆರಂಭಿಸಿ ಉಚಿತ ಸೇವೆ ಮತ್ತು ಉಚಿತ ಕರೆ ಮಾಡುವ ಕೊಡುಗೆಯನ್ನು ನೀಡಿದ ಮಾದರಿಯಲ್ಲಿ ಏರ್‌ಟೆಲ್ ಸಹ ಆಫರ್ ನೀಡಲಿದೆ. ಮೂಲಗಳ ಪ್ರಕಾರ ಜಿಯೋ ಗಿಂತಲೂ ಭರ್ಜರಿ ಕೊಡುಗೆಯೊಂದು ರೆಡಿಯಾಗಿದೆ ಎಂದು ತಿಳಿದು ಬಂದಿದೆ. ಆದರೆ ಈ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.

2022ರಲ್ಲಿ 370 ಮಿಲಿಯನ್ VoLTE ಬಳಕೆದಾರರು:

2022ರಲ್ಲಿ 370 ಮಿಲಿಯನ್ VoLTE ಬಳಕೆದಾರರು:

ಸ್ವೀಡಿಶ್ ಕಂಪನಿಯಂದರ ಸಮೀಕ್ಷೆಯ ಪ್ರಕಾರ ಭಾರತದಲ್ಲಿ 2022ರಲ್ಲಿ 370 ಮಿಲಿಯನ್ VoLTE ಬಳಕೆದಾರರು ಇರಲಿದ್ದಾರೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
A few handsets have already started receiving Airtel carrier update with support for VoLTE technology. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot