Subscribe to Gizbot

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಆನ್ ಮ್ಯಾಕ್ಸ್ ಲಾಂಚ್: ಅಚ್ಚರಿ ಬೆಲೆಗೆ ಬೊಂಬಾಟ್ ಫೋನ್

Written By:

ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಅಭಿಮಾನಿಗಳನ್ನು ಹೊಂದಿರುವ ಸ್ಯಾಮ್ ಸಂಗ್ ಮಧ್ಯಮ ಸರಣಿಯಲ್ಲಿ ಸ್ಮಾರ್ಟ್‌ಫೋನ್ ವೊಂದನ್ನು ಬಿಡುಗಡೆ ಮಾಡಿದೆ. ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಆನ್ ಮ್ಯಾಕ್ಸ್ ಲಾಂಚ್ ಆಗಿದ್ದು, ಮಾಧ್ಯಮ ಬೆಲೆಯಲ್ಲಿ ಮಾರಾಟವಾಗುತ್ತಿರುವ ಸ್ಮಾರ್ಟ್‌ಫೋನ್ ಗಳಿಗೆ ಭರ್ಜರಿ ಸ್ಪರ್ಧೇಯನ್ನು ನೀಡಲಿದೆ.

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಆನ್ ಮ್ಯಾಕ್ಸ್ ಲಾಂಚ್: ಅಚ್ಚರಿ ಬೆಲೆಗೆ ಬೊಂಬಾಟ್ ಫೋನ್

ಓದಿರಿ: ಶುರುವಾಗಿದೆ ನೋಕಿಯಾ 5 ಪ್ರೀ ಬುಕಿಂಗ್: ವೊಡಾಫೋನ್ ಆಫರ್ ಸಹ ಜೊತೆಗಿದೆ..!!

ಜುಲೈ 10 ರಿಂದ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಆನ್ ಮ್ಯಾಕ್ಸ್ ಫ್ಲಿಪ್ ಕಾರ್ಟಿನಲ್ಲಿ ಮಾತ್ರವೇ ಲಾಂಚ್ ಆಗಲಿದ್ದು, ಲಾಂಚಿಂಗ್ ಆಫರ್ ಆಗಿ ಆಯ್ದ ಕೆಲವು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೇಲೆ ರೂ.2000 ಕಡಿತವನ್ನು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಆನ್ ಮ್ಯಾಕ್ಸ್ ವಿಶೇಷತೆಗಳೇನು ಎಂಬುದನ್ನು ತಿಳಿಯುವ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಿಂಭಾಗ & ಮುಂಭಾಗದಲ್ಲಿ 13 MP ಕ್ಯಾಮೆರಾ:

ಹಿಂಭಾಗ & ಮುಂಭಾಗದಲ್ಲಿ 13 MP ಕ್ಯಾಮೆರಾ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಆನ್ ಮ್ಯಾಕ್ಸ್ ಸ್ಮಾರ್ಟ್‌ಫೋನಿನ ಪ್ರಮುಖ ವಿಶೇಷತೆಗಳಲ್ಲಿ ಒಂದು ಎಂದರೆ ಹಿಂಭಾಗ & ಮುಂಭಾಗದಲ್ಲಿ 13 MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದಲ್ಲದೇ ಎರಡು ಕಡೆಗಳಲ್ಲಿ LED ಫ್ಲಾಷ್ ಲೈಟ್ ಇದ್ದು, ಅಲ್ಲದೇ ಕ್ಯಾಮೆರಾದೊಂದಿಗೆ ಅನೇಕ ಫಿಲ್ಟರ್ ಗಳನ್ನು ಅಳವಡಿಸಲಾಗಿದೆ.

5.7 ಇಂಚಿನ FHD ಡಿಸ್ ಪ್ಲೆ:

5.7 ಇಂಚಿನ FHD ಡಿಸ್ ಪ್ಲೆ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಆನ್ ಮ್ಯಾಕ್ಸ್ ಸ್ಮಾರ್ಟ್‌ಫೋನಿನಲ್ಲಿ 5.7 ಇಂಚಿನ FHD ಡಿಸ್‌ಪ್ಲೇ ಇದ್ದು, ಇದರ ಮೇಲೆ 2.5D ಕರ್ವಡ್ ಗ್ಲಾಸ್ ಅಳವಡಿಸಲಾಗಿದೆ. ಇದು ದೊಡ್ಡ ಗಾತ್ರದಲ್ಲಿ ಇರುವುದರಿಂದ ವಿಡಿಯೋ ವೀಕ್ಷಣೆ ಉತ್ತಮವಾಗಿರಲಿದೆ.

4GB RAM ಮತ್ತು 32 GB ROM:

4GB RAM ಮತ್ತು 32 GB ROM:

ಇದಲ್ಲದೇ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಆನ್ ಮ್ಯಾಕ್ಸ್ ಸ್ಮಾರ್ಟ್‌ಫೋನಿನಲ್ಲಿ 4GB RAM ಕಾಣಬಹುದಾಗಿದೆ. ಇದರೊಂದಿಗೆ 32 GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಹೊಂದಿದೆ ಎನ್ನಲಾಗಿದೆ.

ಆಂಡ್ರಾಯ್ಡ್ ನ್ಯಾಗಾ:

ಆಂಡ್ರಾಯ್ಡ್ ನ್ಯಾಗಾ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಆನ್ ಮ್ಯಾಕ್ಸ್ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ನ್ಯಾಗದಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಡ್ಯುಯಲ್ ಆಪ್ ಗಳನ್ನು ಬಳಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

3,300mAh ಬ್ಯಾಟರಿ ಇದೆ:

3,300mAh ಬ್ಯಾಟರಿ ಇದೆ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಆನ್ ಮ್ಯಾಕ್ಸ್ ಸ್ಮಾರ್ಟ್‌ಫೋನಿನಲ್ಲಿ 3,300mAh ಬ್ಯಾಟರಿ ಕಾಣಬಹುದಾಗಿದೆ. ಇದಲ್ಲದೇ 4G VoLTE HD ವಿಡಿಯೋ ಕಾಲಿಂಗ್ ಸಫೋರ್ಟ್ ಮಾಡಲಿದೆ.

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಆನ್ ಮ್ಯಾಕ್ಸ್ ಪ್ರತಿ ಸ್ಪರ್ಧಿ ಫೋನ್ ಗಳು:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಆನ್ ಮ್ಯಾಕ್ಸ್ ಪ್ರತಿ ಸ್ಪರ್ಧಿ ಫೋನ್ ಗಳು:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಆನ್ ಮ್ಯಾಕ್ಸ್ ಸ್ಮಾರ್ಟ್‌ಫೋನ್ ಎದುರಾಗಿ ಅದೇ ಬೆಲೆಯಲ್ಲಿ ನೋಕಿಯಾ 6, ನುಬಿಯಾ N2, ಹಾನರ್ 8, ಆಸುಸ್ ಜೆನ್ ಫೋನ್ 3 ಲಭ್ಯವಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The highlight of the Samsung Galaxy On Max is the 13-megapixel rear camera with aperture f/1.7 for better low-light photography. to more know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot