ಬಿಎಸ್‌ಎನ್‌ಎಲ್‌ನಿಂದ ರೂ.149 ಕ್ಕೆ ಅನ್‌ಲಿಮಿಟೆಡ್ ವಾಯ್ಸ್ ಕರೆ ಆಫರ್, 300MB ಡೇಟಾ!

By Suneel
|

ಬಹುಶಃ ಜನರಿಗೆ ಈ ಟೆಲಿಕಾಂ ಆಫರ್‌ಗಳ ಮೇಲೆ ಬೇಜಾರಾಗಿಬಿಟ್ಟಿದೆ. ಯಾವನಿಗೆ ಬೇಕು ಗುರು ಈ ಆಫರ್, ನೆನ್ನೆ ತಾನೆ ಯಾವುದೋ ಒಂದು ಆಫರ್ ಹಾಕಿಸಿದ್ದೀನಿ. ಅದೇ ಇನ್ನೂ ಮುಗಿದಿಲ್ಲ. ಈಗಾಗಲೇ ಅದಕ್ಕಿಂತ ಕಡಿಮೆ ಬೆಲೆಯ ಆಫರ್ ಕೊಟ್ಟಿದ್ದಾರೆ.. ಹೀಗೆ ಹಲವರು ನಮ್ಮ, ನಿಮ್ಮ ಸುತ್ತಮುತ್ತಲ ಬಿಎಸ್‌ಎನ್‌ಎಲ್‌, ವೊಡಾಫೋನ್, ಏರ್‌ಟೆಲ್‌ ಬಳಕೆದಾರರು ಮಾತಾಡಿಕೊಳ್ಳುತ್ತಿರುತ್ತಾರೆ

ಇನ್ನೂ ಜಿಯೋ ಬಳಕೆದಾರರು ಬಿಡಿ. ನಾನೇ ಬೇರೆ ನನ್ನ ಸ್ಟೈಲೇ ಬೇರೆ ಅಂತಾ ಹೇಳಿಕೊಂಡು, ಪಕ್ಕದಲ್ಲಿ ಯಾರೇ ಜೋರಾಗಿ ಮಾತಾಡುತ್ತಿದ್ದರು, ಅವರಂತು ಉಚಿತ ಡೇಟಾ ಸೇವೆಯಿಂದ, ಉಚಿತ ಕರೆ ಸೇವೆಯಿಂದ ಮಾರ್ಚ್‌ 31 ರವರೆಗೆ ಹೊರಗೆ ಬರುವುದಿಲ್ಲ. ಹೋಗ್ಲಿ ಬಿಡಿ. ಈಗ ಬಿಎಸ್‌ಎನ್‌ಎಲ್‌ ಒಂದು ಹೊಸ ಕಾಂಬೊ ಪ್ಯಾಕ್‌ ಆಫರ್ ಅನ್ನು ಹೆಚ್ಚುವರಿ ಬೆನಿಫಿಟ್‌ಗಳಿಂದ ಲಾಂಚ್‌ ಮಾಡಿದೆ. ಈ ಬಗ್ಗೆ ಮಾಹಿತಿ ಹೇಳ್ತಿವಿ ಕೇಳಿ.

BSNL ನಲ್ಲಿ ಮ್ಯಾನೆಜರ್ ಹುದ್ದೆಗೆ ಅರ್ಜಿ ಆಹ್ವಾನ, 80,000/m ವೇತನ

BSNL ನಿಂದ ರೂ.149 ಕ್ಕೆ ಅನ್‌ಲಿಮಿಟೆಡ್ ವಾಯ್ಸ್ ಕರೆ ಆಫರ್, 300MB ಡೇಟಾ!

ಬಿಎಸ್‌ಎನ್‌ಎಲ್‌ ತನ್ನ ಗ್ರಾಹಕರಿಗಾಗಿ ರೂ.149 ಬೆಲೆಯ ತಿಂಗಳ ಪ್ಲಾನ್ ಒಂದನ್ನು ತಂದಿದೆ. ಬಿಎಸ್‌ಎನ್‌ಎಲ್‌ ಗ್ರಾಹಕರು ಈ ಪ್ಲಾನ್‌ಗೆ ಚಂದಾದಾರರಾಗುವುದರಿಂದ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ವಾಯ್ಸ್ ಕರೆ ಮತ್ತು ಹೆಚ್ಚುವರಿ ಡೇಟಾ ಬೆನಿಫಿಟ್ ಪಡೆಯಬಹುದು. ಈ ಪ್ಲಾನ್‌ ರಿಲಾಯನ್ಸ್ ಕಂಮ್ಯೂನಿಕೇಷನ್'ನ ರೂ.149 ಪ್ಲಾನ್‌ಗೆ ಸಮನಾಗಿದೆ. ಅಲ್ಲದೇ ರಿಲಾಯನಸ್ ಜಿಯೋ ಪ್ಲಾನ್‌ ಸಹ ರೂ.149 ಆಗಿದೆ. ಆದರೆ ಈಗ ಉಚಿತವಿರಬಹುದು.

ಸಂಚಲನ ಉಂಟುಮಾಡಿದ ಬಿಎಸ್‌ಎನ್‌ಎಲ್‌ 'Experience LL-49' ಪ್ಲಾನ್ ಆಫರ್!

ಸೆಪ್ಟೆಂಬರ್‌ನಲ್ಲಿ ಬಿಎಸ್‌ಎನ್‌ಎಲ್‌ BB249 ಪ್ಲಾನ್‌ ಅನ್ನು ರಿಲಾಯನ್ಸ್ ಜಿಯೋಗೆ ಪ್ರತಿಸ್ಪರ್ಧಿಯಾಗಿ ನೀಡಿತ್ತು.ಆದರೆ ಈಗ ಬಿಎಸ್‌ಎನ್‌ಎಲ್‌ನ ರೂ.149 ಪ್ಲಾನ್‌ ಬಗೆಗಿನ ಪೂರ್ಣ ಡಿಟೇಲ್‌ ಅನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ತಿಂಗಳಿಗೆ ಕೇವಲ ರೂ.149 ಪಾವತಿಸಿ

ತಿಂಗಳಿಗೆ ಕೇವಲ ರೂ.149 ಪಾವತಿಸಿ

ಬಿಎಸ್ಎನ್ಎಲ್‌ ಚಂದಾದಾರರು ತಿಂಗಳಿಗೆ ಕೇವಲ ರೂ.149 ಪಾವತಿಸಿ ಈ ಲೇಟೆಸ್ಟ್‌ ಪ್ಲಾನ್‌ ಅನ್ನು ಜನವರಿ 1 2017 ರಿಂದ ಪಡೆಯಬಹುದು. ಬೆನಿಫಿಟ್‌ ಏನು ತಿಳಿಯಲು ಮುಂದೆ ಓದಿರಿ.

ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ವಾಯ್ಸ್ ಕರೆ

ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ವಾಯ್ಸ್ ಕರೆ

ರಿಲಾಯನ್ಸ್ ಜಿಯೋ ಮತ್ತು ಇತರೆ ಟೆಲಿಕಾಂಗಳಿಗೆ ಪ್ರತಿಸ್ಪರ್ಧೆ ನೀಡಲು ಇದೊಂದು ಉತ್ತಮ ಪ್ಲಾನ್ ಎಂದರೆ ತಪ್ಪಾಗಲಾರದು. ಹೌದು, ಬಿಎಸ್‌ಎನ್‌ಎಲ್‌ ಚಂದಾದಾರರು ರೂ.149 ಪಾವತಿಸಿ ತಿಂಗಳ ಪೂರ್ಣ ಯಾವುದೇ ನೆಟ್‌ವರ್ಕ್‌ಗೆ, ರಾಷ್ಟ್ರೀಯ ಕರೆಗಳನ್ನು ಸಹ ಅನ್‌ಲಿಮಿಟೆಡ್‌ ಆಗಿ ನಿರ್ವಹಿಸಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 300MB ಡೇಟಾ ಉಚಿತ

300MB ಡೇಟಾ ಉಚಿತ

ಬಿಎಸ್‌ಎನ್‌ಎಲ್‌'ನ ರೂ.149 ಪ್ಲಾನ್ ಸಬ್‌ಸ್ಕ್ರೈಬ್‌ ಮಾಡಿದರೆ, ಪ್ಲಾನ್ ಜೊತೆಗೆ ಉಚಿತವಾಗಿ 300MB ಡೇಟಾ ಕ್ರೆಡಿಟ್ ಆಗುತ್ತದೆ. ಇದೊಂದು ಉತ್ತಮ ಪ್ಲಾನ್‌ ಎಂಬುದಕ್ಕೆ ಈ ಸೇವೆಯು ಮುಖ್ಯ ಕಾರಣ.

28 ದಿನಗಳು ಮಾತ್ರವಲ್ಲದೇ 1 ತಿಂಗಳು ವ್ಯಾಲಿಡ್

28 ದಿನಗಳು ಮಾತ್ರವಲ್ಲದೇ 1 ತಿಂಗಳು ವ್ಯಾಲಿಡ್

ಬಿಎಸ್‌ಎನ್‌ಎಲ್‌'ನ ರೂ.149 ಪ್ಲಾನ್ 28 ದಿನಗಳು ಮಾತ್ರವಲ್ಲದೇ 1 ತಿಂಗಳು ವ್ಯಾಲಿಡಿಟಿ ಹೊಂದಿದೆ.

 ಕಡಿಮೆ ಮೌಲ್ಯದ ಎರಡನೇ ಸೇವೆ

ಕಡಿಮೆ ಮೌಲ್ಯದ ಎರಡನೇ ಸೇವೆ

ರಿಲಾಯನ್ಸ್ ಜಿಯೋ ನಂತರ ಅನ್‌ಲಿಮಿಟೆಡ್ ವಾಯ್ಸ್ ಕರೆ ಆಫರ್ ಅನ್ನು ಅತಿ ಕಡಿಮೆ ಬೆಲೆಯಲ್ಲಿ ಆಫರ್‌ ಮಾಡುತ್ತಿರುವುದು ಬಿಎಸ್‌ಎನ್‌ಎಲ್‌. ಇತರೆ ಟೆಲಿಕಾಂಗಳು ಹೆಚ್ಚು ಮೌಲ್ಯದ ಟ್ಯಾರಿಫ್ ಪ್ಲಾನ್‌ಗಳ ಮೇಲೆ ಗಮನಹರಿಸಿವೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
BSNL to launch unlimited mobile calls plan at Rs 149. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X