ಕಾರಿಗೂ ಬಂತು ವೈಫೈ

By Ashwath
|

ಕಂಪ್ಯೂಟರ್‌,ಲ್ಯಾಪ್‌ಟಾಪ್‌,ಸ್ಮಾರ್ಟ್‌ಫೋನ್‌ನಲ್ಲಿ ವೈಫೈ ಬಂದಾಯ್ತು,ಈಗ ಕಾರಿನ ಸರದಿ. ದೇಶದಲ್ಲಿ ಪ್ರಪ್ರಥಮ ಭಾರಿಗೆ ಬಿಎಸ್‌ಎನ್‌ಎಲ್‌ ಕಾರಿನಲ್ಲಿ ವೈಫೈ ಬಳಸುವ ಸೇವೆಯನ್ನು ಆರಂಭಿಸಿದೆ.ಹೀಗಾಗಿ ಇನ್ನು ಮುಂದೆ ನೀವು ಕಾರಿನಲ್ಲೇ ವೈಫೈ ಮುಖಾಂತರ ಸುಲಭವಾಗಿ ಇಂಟರ್‌ನೆಟ್‌ ಬಳಸಬಹುದು.

ಮೊನ್ನೆಯಷ್ಟೇ ರೈಲ್ವೆ ಇಲಾಖೆ ದೆಹಲಿ- ಹೌರಾ ನಡುವೆ ಸಂಚರಿಸುವ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ವೈಫೈ ಸೇವೆ ಚಾಲನೆ ನೀಡಿತ್ತು.ಈಗ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಈ ಸೇವೆಯನ್ನು ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಆರಂಭಿಸಿದ್ದು, ಈ ಮೂಲಕ ಕಾರಿನಲ್ಲಿ ವೈಫೈ ತಂತ್ರಜ್ಞಾನ ಅಳವಡಿಸಿದ ಪ್ರಥಮ ನಗರವಾಗಿ ಇಂದೋರ್‌ ಹೊರಹೊಮ್ಮಿದೆ.

ಕಾರಿಗೂ ಬಂತು ವೈಫೈ

ಕಾರಿನಲ್ಲಿರುವ ವೈಫೈ ಅಳವಡಿಸಲು ಒಂದು ಸಣ್ಣ ಅಂಟೆನಾವಿದ್ದು, ಈ ಅಂಟೆನಾದ ಮೂಲಕ 3.5 mbps ವೇಗದಲ್ಲಿ ಗ್ರಾಹಕರು ಇಂಟರ್‌ನೆಟ್‌ ಬಳಸಬಹುದು. ಈ ತಂತ್ರಜ್ಞಾನವನ್ನು ಆರಂಭಿಕವಾಗಿ ಇಂದೋರ್‌ನಲ್ಲಿ ಆರಂಭಿಸಿದ್ದು. ಸಧ್ಯದಲ್ಲೇ ಉಳಿದ ಮಹಾನಗರಗಳಿಗೆ ಬಿಎಸ್‌ಎನ್‌ಎಲ್‌ ಈ ವೈಫೈ ಸೇವೆಯನ್ನು ವಿಸ್ತರಿಸಲಿದೆ. ಕಾರಿನಲ್ಲಿ ಬಳಸುವ ವೈಫೈ ಅಂಟೆನಾ ಬೆಲೆ ಆರು ಸಾವಿರ ರೂಪಾಯಿ ಇದ್ದು, ವೈಫೈ ಬಳಸುವ ಗ್ರಾಹಕರ ಸಂಖ್ಯೆ ಹೆಚ್ಚಾದಂತೆ ಇದರ ಬೆಲೆ ಇಳಿಯಲಿದೆ ಎಂದು ಬಿಎಸ್‌ಎನ್‌ಎಲ್ ತಿಳಿಸಿದೆ.

ಲಿಂಕ್‌: ಯಾವ ಕಂಪೆನಿಯಲ್ಲಿ ಯಾವ 3ಜಿ ಪ್ಲ್ಯಾನ್‌ ಇದೆ ಗೊತ್ತಾ ?

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X