Subscribe to Gizbot

ರೈಲಿಗೂ ಬಂತು ವೈಫೈ

Posted By:

ಪ್ರಯಾಣದ ವೇಳೆ ಇಂಟರ್‌ನೆಟ್‌ ಬಳಸುವವರಿಗೆ ಒಂದು ಗುಡ್‌ನ್ಯೂಸ್‌. ಇನ್ನು ಮುಂದೆ ನೀವು ರೈಲಿನಲ್ಲೂ ಇಂಟರ್‌ನೆಟ್‌ ಬಳಸಬಹದು. ಭಾರತೀಯ ರೈಲ್ವೆ ಇಲಾಖೆ ಮೊದಲ ಭಾರಿಗೆ ರೈಲಿನಲ್ಲಿ ವೈಫೈ ಸೇವೆ ಆರಂಭಿಸಿದ್ದು, ದೆಹಲಿ- ಹೌರಾ ನಡುವೆ ಸಂಚರಿಸುವ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ವೈಫೈ ಸೇವೆ ಆರಂಭವಾಗಿದೆ.

ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸದ್ಯಕ್ಕೆ 4 Mbps ಡೌನ್‌ಲೋಡ್‌ ಬ್ಯಾಂಡ್‌ವಿಡ್ತ್‌ ಮತ್ತು 512 Kbps ಅಪ್‌ಲೋಡ್‌ ಬ್ಯಾಂಡ್‌ವಿಡ್ತ್‌ನಲ್ಲಿ ಪ್ರಯಾಣಿಕರು ವೈಫೈ ಬಳಸಬಹುದಾಗಿದೆ. ಆದ್ರೆ ಈ ವೈಫೈ ಎಲ್ಲರಿಗೂ ಹಂಚಿಕೆಯಾಗುದ್ದರಿಂದ ಇಂಟರ್‌ನೆಟ್‌ ವೇಗ ಮತ್ತಷ್ಟು ಕಡಿಮೆಯಾಗಲಿದೆ. ಹೀಗಾಗಿ ಸದ್ಯಕ್ಕೆ ಈ ವೇಗದಲ್ಲಿ ಬ್ಯಾಂಡ್‌ವಿಡ್ತ್‌ ಸಂಪರ್ಕ ನೀಡಲಾಗಿದ್ದು, ಪ್ರಯಾಣಿಕರ ಇಂಟರ್‌ನೆಟ್‌ ಬಳಕೆ ಆಧಾರದ ಮೇಲೆ ಹೆಚ್ಚಿನ ವೇಗದ ಬ್ಯಾಂಡ್‌ವಿಡ್ತ್‌ ಸಂಪರ್ಕ ನೀಡಲಾಗುವುದು ಎಂದು ರೈಲಿನಲ್ಲಿ ವೈಫೈ ಅಳವಡಿಸಿದ ಟೆಕ್ನ್‌ ಸ್ಯಾಟ್‌ ಕಾಮ್ ಸಂಸ್ಥೆ(Techno Sat Comm) ತಿಳಿಸಿದೆ.

ರೈಲಿಗೂ ಬಂತು ವೈಫೈ

ಈ ವರ್ಷದ ರೈಲ್ವೆ ಬಜೆಟ್‌ನಲ್ಲಿ ಘೋಷಣೆಯಾದಂತೆ ಈ ಯೋಜನೆ ಆರಂಭಗೊಂಡಿದ್ದು, ಚಲಿಸುವ ರೈಲಿನಲ್ಲಿ ಇಂಟರ್‌ನೆಟ್ ಸಂಪರ್ಕ ನೀಡುವುದು ಕಷ್ಟ. ಈಗ ಇರುವ ತಂತ್ರಜ್ಞಾನದಲ್ಲಿ ಎಲ್ಲಾ ಹವಾಮಾನದಲ್ಲೂ ಇಂಟರ್‌ನೆಟ್ ಸಿಗುವಂತೆ ವ್ಯವಸ್ಥೆ ಕಲ್ಪಿಸುವುದು ಕಷ್ಟದ ಕೆಲಸ. ಹಾಗಾಗಿ ಈ ವೈಫೈ ಯೋಜನೆಗೆ ಸ್ಯಾಟಲೈಟ್‌ ಕಮ್ಯೂನಿಕೇಶನ್‌ ಬಳಸಲಾಗುತ್ತಿದ್ದು, ಭಾರತೀಯ ರೈಲ್ವೆ ಇದಕ್ಕಾಗಿ 6.30 ಕೋಟಿ ವೆಚ್ಛ ಮಾಡಿದೆ.

ರೈಲ್ವೆ ಸದ್ಯಕ್ಕೆ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಈ ಸೌಲಭ್ಯ ಅಳವಡಿಸಿದ್ದು, ಈ ಸೌಲಭ್ಯಕ್ಕೆ ಪ್ರಯಾಣಿಕರ ಪ್ರತಿಕ್ರಿಯೆ ಆಧಾರಿಸಿ ಶತಾಬ್ದಿ,ದುರಂತೋ ಎಕ್ಸ್‌ಪ್ರೆಸ್‌ನಲ್ಲಿ ಈ ಸೇವೆಯನ್ನು ವಿಸ್ತರಿಸಲಿದೆ.

ಲಿಂಕ್‌ : ಈ ರೀತಿಯ ವೈಫಿ ಗ್ಯಾಡ್ಜೆಟ್‌ಗಳು ನೋಡಿದ್ದೀರಾ ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot