ಮೇ 1 ರಿಂದ ಬಿಎಸ್ಎನ್‌ಎಲ್‌ನಲ್ಲಿ ಉಚಿತವಾಗಿ ಕರೆಮಾಡಿ

Written By:

ಲ್ಯಾಂಡ್ ಲೈನ್ ವ್ಯವಹಾರವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ, ರಾಜ್ಯ ಆಡಳಿತಕ್ಕೊಳಪಟ್ಟ ಬಿಎಸ್‌ಎನ್‌ಎಲ್ ತನ್ನ ಅನಿಯಮಿತ ಉಚಿತ ಕರೆ ಸ್ಕೀಮ್ ಅನ್ನು ರಾತ್ರಿ ವೇಳೆಯಲ್ಲಿ ನಿರ್ದಿಷ್ಟ ಫೋನ್‌ಗಳಿಗೆ ಯಾವುದೇ ಆಪರೇಟರ್‌ಗಳಿಂದ ಮೊಬೈಲ್ ಫೋನ್‌ಗಳೂ ಸೇರಿದಂತೆ ಕರೆ ಮಾಡುವ ಯೋಜನೆಯನ್ನು ಮೇ 1 ರಿಂದ ಆರಂಭಿಸುತ್ತಿದೆ.

ಮೇ 1 ರಿಂದ ಬಿಎಸ್ಎನ್‌ಎಲ್‌ನಲ್ಲಿ ಉಚಿತವಾಗಿ ಕರೆಮಾಡಿ

ರಾತ್ರಿ 9 ರಿಂದ ಬೆಳಗ್ಗೆ 7 ರವರೆಗೆ ಕರೆ ಮಾಡುವ ಸೌಲಭ್ಯ ಜಾರಿಯಲ್ಲಿರುತ್ತದೆ ಎಂದು ಬಿಎಸ್‌ಎನ್‌ಎಲ್ ತಿಳಿಸಿದೆ. ತನ್ನ ಲ್ಯಾಂಡ್‌ಲೈನ್ ಪೋನ್‌ಗಳಿಂದ ಎಲ್ಲಾ ಲ್ಯಾಂಡ್‌ಲೈನ್ ಫೋನ್‌ಗಳಿಗೆ ಮತ್ತು ಮೊಬೈಲ್ ಫೋನ್‌ಗಳಿಗೆ ಎಲ್ಲಾ ಸೇವೆ ಒದಗಿಸುವವರ ನೆಟ್‌ವರ್ಕ್‌ಗಳಿಂದ ರಾತ್ರಿ ವೇಳೆಯಲ್ಲಿ ಉಚಿತ ಕರೆಮಾಡುವ ಸೌಲಭ್ಯವನ್ನು ಪ್ರಸ್ತುಪಡಿಸುತ್ತಿದೆ ಎಂದು ಬಿಎಸ್‌ಎನ್ಎಲ್ ತಿಳಿಸಿದೆ.

ಓದಿರಿ: ಖರೀದಿಸಿ ಸ್ಕ್ರಾಚೇ ಆಗದ ಟಾಪ್ 10 ಗೋರಿಲ್ಲಾ ಗ್ಲಾಸ್ ಫೋನ್ಸ್

ಈ ಯೋಜನೆಯಡಿಯಲ್ಲಿ, ಗ್ರಾಮೀಣ ಮತ್ತು ನಗರ ಪ್ರದೇಶಗಳು ಸೇರಿದಂತೆ, ಲ್ಯಾಂಡ್‌ಲೈನ್ ವಿಶೇಷ ಯೋಜನೆಗಳು ಎಲ್ಲಾ ಪ್ರಮುಖ ಕೋಂಬೋ ( ಬ್ರಾಡ್‌ಬ್ಯಾಂಡ್‌ನೊಂದಿಗೆ ಲ್ಯಾಂಡ್‌ಲೈನ್) ಯೋಜನೆಗಳು ಒಳಗೊಂಡಂತೆ ಎಲ್ಲಾ ಪ್ರಮುಖ ಲ್ಯಾಂಡ್‌ಲೈನ್ ಸಾಮಾನ್ಯ ಯೋಜನೆಗಳನ್ನು ಇದು ಆವರಿಸುತ್ತದೆ.

ಓದಿರಿ: ನಷ್ಟದ ಸುಳಿಯಲ್ಲಿ ನಲುಗುತ್ತಿರುವ ಟಾಪ್ ಕಂಪೆನಿಗಳು

ಮೇ 1 ರಿಂದ ಬಿಎಸ್ಎನ್‌ಎಲ್‌ನಲ್ಲಿ ಉಚಿತವಾಗಿ ಕರೆಮಾಡಿ

ಇನ್ನು ಇತ್ತೀಚಿನ TRAI ಡೇಟಾ ಪ್ರಕಾರ, ಏರ್‌ಟೆಲ್ ಪ್ರಾಬಲ್ಯದಲ್ಲಿರುವ ಲ್ಯಾಂಡ್‌ಲೈನ್ ಮಾರುಕಟ್ಟೆಯಿಂದ ಬಿಎಸ್‌ಎನ್‌ಎಲ್ ತುಸು ನಷ್ಟವನ್ನು ಅನುಭವಿಸಿತ್ತು. ಹೊಸ ಯೋಜನೆ ಬಿಎಸ್‌ಎನ್‌ಎಲ್‌ಗೆ ಮರುಜೀವ ಕೊಡುವುದು ನಿಜವಾಗಿದೆ.

ಫೆಬ್ರವರಿಯ ಕೊನೆಯಲ್ಲಿ 1.66 ಕೋಟಿ ಲ್ಯಾಂಡ್‌ಲೈನ್‌ಗಳನ್ನು ಹೊಂದಿತ್ತು. ಕಂಪೆನಿಯ ಮಾರುಕಟ್ಟೆ ಷೇರು 62.26 ಶೇಕಡ ಆಗಿದೆ.

English summary
To boost landline business, the state-run BSNL today announced unlimited free calling scheme during night hours from its fixed line phones to any operator including mobile phones anywhere in the country from May 1.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot