2G, 4G ರೋಮಿಂಗ್ ಪ್ಯಾಕ್‌ಗೆ ಬಿಎಸ್‌ಎನ್‌ಎಲ್ ಮತ್ತು ರಿಲಾಯನ್ಸ್ ಜಿಯೋ ಒಪ್ಪಂದ
ರಿಲಾಯನ್ಸ್ ಜಿಯೋ ಮತ್ತು ರಾಜ್ಯ ಮಾಲೀಕತ್ವದ ಬಿಎಸ್‌ಎನ್‌ಎಲ್ ಆಂತರಿಕ ವಲಯಗಳ 2G, 4G ರೋಮಿಂಗ್ ಪ್ಯಾಕ್ ಸೇವೆಗಳ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಪ್ರಕಾರ ಬಿಎಸ್‌ಎನ್‌ಎಲ್ ಗ್ರಾಹಕರು ರೋಮಿಂಗ್ ಸಮಯದಲ್ಲಿ ರಿಲಾಯನ್ಸ್ ಜಿಯೋ 4G ಸೇವೆ ಬಳಸಬಹುದು. ಹಾಗೂ ರಿಲಾಯನ್ಸ್ ಜಿಯೋ ಚಂದಾದಾರರು ರಾಜ್ಯ ಮಾಲೀಕತ್ವದ ಬಿಎಸ್‌ಎನ್‌ಎಲ್ 2G ಅನ್ನು ವಾಯ್ಸ್ ಕರೆ ಮಾಡಲು ಬಳಸಿಕೊಳ್ಳಬಹುದು.
ರಿಲಾಯನ್ಸ್ ಜಿಯೋ ಮತ್ತು ಬಿಎಸ್‌ಎನ್‌ಎಲ್ ಪರಸ್ಪರ ಸಹಿ ಹಾಕಿರುವ 2G, 4G ರೋಮಿಂಗ್ ಪ್ಯಾಕ್‌ಗಳ ಒಪ್ಪಂದದಿಂದ ಗ್ರಾಹಕರಿಗೆ ಆಗುವ ಅನುಕೂಲಗಳು ಯಾವುವು ಎಂದು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ನೆಟ್‌ವರ್ಕ್ ಸಾಮರ್ಥ್ಯ ಹೆಚ್ಚಳ
ರಿಲಾಯನ್ಸ್ ಜಿಯೋ ಮತ್ತು ಬಿಎಸ್‌ಎನ್‌ಎಲ್ ಟೆಲಿಕಾಂಗಳು ತಮ್ಮ ಗ್ರಾಹಕರ ಮೌಲ್ಯದ ಮೇಲೆ ಗಮನಹಿರಿಸಿದ್ದು, ಉತ್ತಮ ಗುಣಮಟ್ಟದ ಸೇವೆ ನೀಡಲು ಉತ್ತಮ ನೆಟ್‌ವರ್ಕ್ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಂಡಿವೆ.

ಗ್ರಾಹಕರಿಗೆ ಉತ್ತಮ ನೆಟ್‌ವರ್ಕ್ ಸೌಲಭ್ಯ
ರಿಲಾಯನ್ಸ್ ಜಿಯೋ ಮತ್ತು ಬಿಎಸ್‌ಎನ್‌ಎಲ್ ಮಾಡಿಕೊಂಡಿರುವ ಒಪ್ಪಂದದಿಂದ ಗ್ರಾಹಕರಿಗೆ ಉತ್ತಮ ನೆಟ್‌ವರ್ಕ್ ಸೇವೆ ಎರಡು ಟೆಲಿಕಾಂಗಳ ಗ್ರಾಹಕರಿಗೆ ಸಿಗಲಿದೆ ಎಂದು ಬಿಎಸ್‌ಎನ್‌ಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ 'ಅನುಪಮ್ ಶ್ರಿವತ್ಸವ' ಹೇಳಿದ್ದಾರೆ. ರಿಲಾಯನ್ಸ್ ಜಿಯೋ ನೆಟ್‌ವರ್ಕ್ ಟವರ್ ಇಲ್ಲದ ಪ್ರದೇಶಗಳಲ್ಲಿ ಬಿಎಸ್‌ಎನ್‌ಎಲ್ ರಿಲಾಯನ್ಸ್ ಜಿಯೋ ಗ್ರಾಹಕರಿಗೆ ನೆಟ್‌ವರ್ಕ್ ನೀಡುತ್ತದೆ. ಹಾಗೆ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಇಲ್ಲದ ಪ್ರದೇಶಗಳಲ್ಲಿ ರಿಲಾಯನ್ಸ್ ಜಿಯೋ, ಬಿಎಸ್‌ಎನ್‌ಎಲ್ ಗ್ರಾಹಕರಿಗೆ ನೆಟ್‌ವರ್ಕ್ ಸೌಲಭ್ಯ ನೀಡುತ್ತದೆ.

ನೆಟ್‌ವರ್ಕ್ ಅಪ್‌ಗ್ರೇಡಿಂಗ್
ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಅಪ್‌ಗ್ರೇಡ್ ಮಾಡಲು 3 ತಿಂಗಳು ಕಾಲಾವಕಾಶ ತೆಗೆದುಕೊಳ್ಳುತ್ತದೆ. ಬಿಎಸ್‌ಎನ್‌ಎಲ್ ಗ್ರಾಹಕರು 4G ಡಿವೈಸ್‌ಗಳನ್ನು ಹೊಂದುವ ಮೂಲಕ ರಿಲಾಯನ್ಸ್ ಜಿಯೋ 4G ದರದಲ್ಲೇ ಬಿಎಸ್‌ಎನ್‌ಎಲ್ ಸೇವೆಯನ್ನು ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶ್ರಿವತ್ಸವ ಹೇಳಿದ್ದಾರೆ.

ಬಿಎಸ್‌ಎನ್‌ಎಲ್ ನೆಟ್‌ವರ್ಕ್
ರಿಲಾಯನ್ಸ್ ಜಿಯೋ ಎಲ್ಲಾ ಐಪಿ, ಎಂಡ್ ಟು ಎಂಡ್ 4G LTE(4th generation) ನೆಟ್‌ವರ್ಕ್ ಹೊಂದಿರುವ ಮುಂಬೈ ಮತ್ತು ದೆಹಲಿ ಹೊರತುಪಡಿಸಿ, ಬಿಎಸ್‌ಎನ್‌ಎಲ್ ದೇಶದ ಉದ್ದಗಲಕ್ಕೂ ಹೆಚ್ಚಿನದಾಗಿ ವ್ಯಾಪಿಸಿದೆ. ಜಿಯೋ ಗ್ರಾಹಕರು ವಾಯ್ಸ್ ಕರೆಗಾಗಿ ಬಿಎಸ್‌ಎನ್‌ಎಲ್ 2G ನೆಟ್‌ವರ್ಕ್ ಅನ್ನು ಉಪಯೋಗಿಸಬಹುದು. ಇದರಿಂದ ಎರಡು ಟೆಲಿಕಾಂಗಳ ಗ್ರಾಹಕರು ರೋಮಿಂಗ್ ಸಮಯದಲ್ಲೂ ಸಂಪರ್ಕ ಹೊಂದಬಹುದಾಗಿದೆ.

ರಿಲಾಯನ್ಸ್ ಜಿಯೋ
ರಿಲಾಯನ್ಸ್ ಜಿಯೋ 4G LTE ಉನ್ನತ ವೇಗದ ನೆಟ್‌ವರ್ಕ್ ನೀಡುವ ಮೂಲಕ ಭಾರತೀಯರನ್ನು ಡಿಜಿಟಲ್ ತಂತ್ರಜ್ಞಾನದಲ್ಲಿ ಉತ್ತಮವಾಗಿ ತೊಡಗಿಕೊಳ್ಳುವಂತೆ ಮಾಡುವ ಉದ್ದೇಶ ಹೊಂದಿದೆ ಎಂದು ರಿಲಾಯನ್ಸ ಜಿಯೋ ವ್ಯವಸ್ಥಾಪಕ ನಿರ್ದೇಶಕ 'ಸಂಜಯ್ ಮರ್ಶುವಾಲಾ' ಹೇಳಿದ್ದಾರೆ.

ಬಿಎಸ್‌ಎನ್‌ಎಲ್ ಗ್ರಾಹಕರು
ರಾಜ್ಯ ಮಾಲೀಕತ್ವದ ಬಿಎಸ್‌ಎನ್‌ಎಲ್ ಅತಿ ಹೆಚ್ಚು ಮೊಬೈಲ್ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿರುವ ಐದನೇ ದೊಡ್ಡ ಟೆಲಿಕಾಂ ಆಗಿದೆ. ಗ್ರಾಮೀಣ ಪ್ರದೇಶಗಳು ಸೇರಿದಂತೆ 1,14,000 ಸೈಟ್‌ಗಳನ್ನು ಹೊಂದಿದೆ.


Click it and Unblock the Notifications








