BSNL ನೀಡಿರುವ ಭರ್ಜರಿ IPL ಆಫರ್ ಬಗ್ಗೆ ತಿಳಿದುಕೊಳ್ಳಬೇಕಾದ 5 ವಿಷಯಗಳಿವು!!
ದೇಶದಾದ್ಯಂತ ಕಿಚ್ಚುಹಚ್ಚಿಸಿರುವ ಜನಪ್ರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಪಂದ್ಯಾವಳಿಗಳಿಗೆ ಹೆಚ್ಚು ಡೇಟಾ ನೀಡುವಲ್ಲಿ ಭಾರತದ ಎಲ್ಲಾ ಟೆಲಿಕಾಂ ಕಂಪೆನಿಗಳು ಪೈಪೋಟಿಗೆ ಬಿದ್ದಿವೆ.
ದೇಶದಾದ್ಯಂತ ಕಿಚ್ಚುಹಚ್ಚಿಸಿರುವ ಜನಪ್ರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಪಂದ್ಯಾವಳಿಗಳಿಗೆ ಹೆಚ್ಚು ಡೇಟಾ ನೀಡುವಲ್ಲಿ ಭಾರತದ ಎಲ್ಲಾ ಟೆಲಿಕಾಂ ಕಂಪೆನಿಗಳು ಪೈಪೋಟಿಗೆ ಬಿದ್ದಿವೆ. ರಿಲಾಯನ್ಸ್ ಜಿಯೋ ಕೇವಲ 2.5 ರೂಪಾಯಿಗೆ 1 GB ಡೇಟಾ ಆಫರ್ ಪ್ರಕಟಿಸಿದ ನಂತರ ಇದೀಗ ಬಿಎಸ್‌ಎನ್‌ಎಲ್ ಕೂಡ ಭರ್ಜರಿ ಆಫರ್ ನೀಡಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಪಂದ್ಯಗಳ ಲೈವ್ ಸ್ಟ್ರೀಮಿಂಗ್ಗಾಗಿ ಕೇವಲ 258 ರೂಪಾಯಿಗಳಿಗೆ 51 ದಿನಗಳ ವ್ಯಾಲಿಡಿಟಿ ಹೊಂದಿರುವ ನೂತನ ಆಫರ್ ಅನ್ನು ಬಿಎಸ್‌ಎನ್‌ಎಲ್ ಬಿಡುಗಡೆ ಮಾಡಿದೆ. ಹಾಗಾಗಿ, ಬಿಎಸ್ಎನ್ಎಲ್ ಹೊಸ ಐಪಿಎಲ್ ಆಫರ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ವಿಷಯಗಳು ಯಾವುವು ಎಂಬುದನ್ನು ನಾವು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ.
1. ಬಿಎಸ್ಎನ್ಎಲ್ ನೀಡಿರುವ ನೂತನ ರೂ. 258 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಐಪಿಎಲ್ 2018 ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಜೊತೆಗೆ ದೈನಂದಿನ 3 ಜಿಬಿ ಡೇಟಾವನ್ನು ನೀಡಿದೆ. ಒಟ್ಟು 51 ದಿನಗಳ ಕಾಲ ಒಟ್ಟು 153 ಜಿಬಿಯ ಡೇಟಾವನ್ನು ಬಿಎಸ್ಎನ್ಎಲ್ ಒದಗಿಸುತ್ತಿದೆ.
2. ಬಿಎಸ್ಎನ್ಎಲ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶೇಷ ಕೊಡುಗೆ ಎಪ್ರಿಲ್ 30, 2018 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ, ಇದು ಐಪಿಎಲ್ 11 ರ ಕೊನೆಯ ದಿನವಾಗಿದೆ.
3. ಬಿಎಸ್ಎನ್ಎಲ್ ರೂ. 258 ಯೋಜನೆಯನ್ನು ಸೀಮಿತ ಅವಧಿಯ ಕೊಡುಗೆಯಾಗಿದೆ, ಇದು ಚಂದಾದಾರರಿಗೆ ನೇರ ಐಪಿಎಲ್ ಪಂದ್ಯಗಳನ್ನು ಅತ್ಯಂತ ಆರ್ಥಿಕ ಮಟ್ಟದಲ್ಲಿ ಸ್ಟ್ರೀಮ್ ಮಾಡಲು ಅವಕಾಶ ನೀಡುತ್ತದೆ ಎಂದು ಬಿಎಸ್ಎನ್ಎಲ್ ಹೇಳಿಕೆಯಲ್ಲಿ ತಿಳಿಸಿದೆ.
4 ದೇಶದಾದ್ಯಂತ ಬಿಎಸ್ಎನ್ಎಲ್‌ನ ಎಲ್ಲಾ ಪ್ರಿಪೇಯ್ಡ್ ಚಂದಾದಾರರಿಗೆ ಈ ನೂತನ 248 ರೂಪಾಯಿಗಳ ಬಿಎಸ್ಎನ್ಎಲ್ ಯೋಜನೆ ಲಭ್ಯವಿದೆ.
5. " # IPL2018ರ ಮಾಯಾ ಕ್ಷಣವನ್ನು ಎಂದಿಗೂ ತಪ್ಪಿಸಿಕೊಳ್ಳಬೇಡಿ". ಹೆಚ್ಚು ಡೇಟಾವನ್ನು ಪಡೆದುಕೊಳ್ಳಿ ಮತ್ತು ಈಗ ಕ್ರಿಕೆಟ್ ಜ್ವರವನ್ನು ಅನುಭವಿಸಿ" ಎಂದು ಬಿಎಸ್ಎನ್ಎಲ್ ತನ್ನ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ತಿಳಿಸಿದೆ.

ಓದಿರಿ: ಏರ್‌ಟೆಲ್‌ನ ಹೊಸ ''ಭರ್ಜರಿ ಆಫರ್'': ಉಚಿತವಾಗಿ ವೀಕ್ಷಿಸಿ 'ಐಪಿಎಲ್'!!
ಓದಿರಿ: IMEI ಸಂಖ್ಯೆ ಸಹಾಯದಿಂದ ಕಳೆದುಹೋದ ಮೊಬೈಲ್ ಟ್ರ್ಯಾಕ್ ಮಾಡುವುದು ಹೇಗೆ?


Click it and Unblock the Notifications