ಗ್ಯಾಜೆಟ್ಸ್‌ ಚಾರ್ಜ್‌ ಮಾಡುವ ಸೋಲಾರ್‌ ಶರ್ಟ್‌

Written By:

ಕೆಲವು ವರ್ಷಗಳ ಹಿಂದೆ ಫ್ಯಾಶನ್‌ ಅನ್ನೋ ಸಂಸ್ಕೃತಿ ಕೇವಲ ಸುಂದರವಾಗಿ ಕಾಣಬೇಕು ಅನ್ನೋ ಉದ್ದೇಶದಿಂದ ಹಲವರು ಅಳವಡಿಸಿ ಕೊಂಡರು. ಹಾಗೆ ಇನ್ನು ಕೆಲವರು ತಮ್ಮ ತನವನ್ನು ತೋರಿಸಿಕೊಳ್ಳಲು ತಮಗೆ ಗೊತ್ತಿಲ್ಲದೆಯೇ ಫ್ಯಾಶನ್‌ ಟ್ರೆಂಡ್‌ ಅಳವಡಿಸಿಕೊಂಡರು. ಆದರೆ ಈಗ ಫ್ಯಾಷನ್ ಅನ್ನೋ ಪದಕ್ಕೆ ಹೊಸ ಅರ್ಥಕೊಡುತ್ತಾ ಹೋಗುತ್ತಿರುವುದು ಹಲವರಿಗೆ ತಿಳಿಯುತ್ತಿದೆ. ಆದರೆ ಆ ಅರ್ಥದ ಹಿಂದಿನ ಕಾರಣಗಳನ್ನು ಕೆದಕುವ ಕೆಲಸಕ್ಕೆ ಮಾತ್ರ ಕೈ ಹಾಕಿಲ್ಲ.

ಓದಿರಿ: ಎಲ್ಲಾ ಕಾಲಕ್ಕೂ ಅನ್ವಯಿಸುವ ಜೀನಿಯಸ್‌ ಸಂಶೋಧನೆಗಳು

ಫ್ಯಾಶನ್‌ ಅಂದ ತಕ್ಷಣ ನೆನಪಾಗೋದು ಹೆಚ್ಚಿನ ರೀತಿಯಲ್ಲಿ ಮಹಿಳೆಯರೇ. ಆದರೇ ಇತ್ತೀಚಿನ ದಿನಗಳಲ್ಲಿ ಪುರಷರು ಸಹ ಹಲವು ರೀತಿಯ ಫ್ಯಾಶನ್‌ ಸಂಸ್ಕೃತಿಗಳನ್ನು ಅಳವಡಿಸಿಕೊಂಡಿದ್ದಾರೆ. ವಿವಿಧ ರೀತಿಯಲ್ಲಿ ಪ್ರಪಂಚದ ಸಂಸ್ಕೃತಿಗಳೆಲ್ಲವೂ ಒಂದು ಕಡೆ ಸೇರುವ ಅವಕಾಶಗಳು ಬಂದರೂ ಬರಬಹುದು ಎನಿಸುತ್ತಿದೆ.

ಓದಿರಿ: ಫೋನ್ ಸ್ಲೋ ಆಗಿದೆಯೇ? ಚಿಂತೆ ಬಿಡಿ ಇಲ್ಲಿದೆ ಟಿಪ್ಸ್

ಇತ್ತೀಚಿನ ದಿನಗಳಲ್ಲಿ ಫ್ಯಾಶನ್‌ನೊಂದಿಗೆ ಟೆಕ್ನಾಲಜಿ ವಿಲೀನಗೊಳ್ಳುತ್ತಿರುವುದು ಬಹುಸಂಖ್ಯಾತರಿಗೆ ಹೊಸ ವಿಷಯ. ಅದು ಕುತೂಹಲವು ಹೌದು. ಈಗ ನಾವು ಧರಿಸುವ ಉಡುಪುಗಳೇ ನಮ್ಮ ಗ್ಯಾಜೆಟ್ಸ್‌ಗಳನ್ನು ಚಾರ್ಜ್‌ ಮಾಡಿಕೊಡಲಿವೆ. ಅದು ಫ್ಯಾಶನ್‌ ಸಾಲಿನ ಕುಟುಂಬಕ್ಕೆ ಸೇರಲಿರುವ ಸೋಲಾರ್‌ ಶರ್ಟ್‌. ಇದು ಹಲವು ರೀತಿಯಲ್ಲಿ ನಮ್ಮಲ್ಲಿನ ಗ್ಯಾಜೆಟ್ಸ್‌ಗಳನ್ನು ಚಾರ್ಜ್‌ ಮಾಡಿಕೊಡಲಿದೆ. ಫ್ಯಾಶನ್‌ ವಿನ್ಯಾಸಗಾರ ಪಾಲಿನ್ ವನ್‌ಡಾನ್‌ಜೆನ್, ಸಂಶೋಧನೆ ಮತ್ತು ಟೆಕ್ನಾಲಜಿ ಅಭಿವೃದ್ಧಿ ಸಂಸ್ಥೆಗಳಾದ TNO ಮತ್ತು ಹಾಲ್ಸ್ಟ್ ಸಂಸ್ಥೆಗಳ ಸಹಯೋಗದಲ್ಲಿ ಈ ಸೋಲಾರ್‌ ಶರ್ಟ್‌ ತಯಾರಿಸಿದ್ದಾರೆ.


ಸೋಲಾರ್‌ ಶರ್ಟ್‌ನ ಉಪಯೋಗ ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಮ್ಮೆ ಬಿಸಿಲಿಗೆ ಪ್ರದರ್ಶಿಸಿದರೆ ಒಂದು ವ್ಯಾಟ್‌ ಸೌರಶಕ್ತಿ

ಒಮ್ಮೆ ಬಿಸಿಲಿಗೆ ಪ್ರದರ್ಶಿಸಿದರೆ ಒಂದು ವ್ಯಾಟ್‌ ಸೌರಶಕ್ತಿ

ಒಮ್ಮೆ ಬಿಸಿಲಿಗೆ ಪ್ರದರ್ಶಿಸಿದರೆ ಒಂದು ವ್ಯಾಟ್‌ ಸೌರಶಕ್ತಿ

ಉದ್ದೇಶ ಪೂರ್ವಕವಾಗಿ ತಯಾರಿಸಿರುವ ಈ ಶರ್ಟಿಗೆ 120 ತೆಳುವಾದ ಸೋಲಾರ್‌ಫಲಕಗಳನ್ನು ಅಳವಡಿಸಿದ್ದು, ಒಮ್ಮೆ ಬಿಸಿಲಿಗೆ ಪ್ರದರ್ಶಿಸಿದರೆ ಒಂದು ವ್ಯಾಟ್‌ ಸೌರಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ.

ಹಲವು ಗಂಟೆಗಳ ಕಾಲ ಫೋನ್‌ ಚಾರ್ಜ್‌ ಮಾಡಿ

ಹಲವು ಗಂಟೆಗಳ ಕಾಲ ಫೋನ್‌ ಚಾರ್ಜ್‌ ಮಾಡಿ

ಹಲವು ಗಂಟೆಗಳ ಕಾಲ ಫೋನ್‌ ಚಾರ್ಜ್‌ ಮಾಡಿ

ಒಮ್ಮೆ ಬಿಸಿಲಿಗೆ ಪ್ರದರ್ಶಿಸುವುದರಿಂದ ಸೋಲಾರ್‌ ಶರ್ಟ್‌ ಒಂದು ವ್ಯಾಟ್‌ ಸೌರಶಕ್ತಿ ಉತ್ಪತ್ತಿ ಮಾಡುತ್ತದೆ. ಇದರಿಂದ ಮೊಬೈಲ್‌ಗಳನ್ನು ಹಲವು ಗಂಟೆಗಳಕಾಲ ಚಾರ್ಜ್‌ ಮಾಡಬಹುದಾಗಿದೆ.

MP3 ಹಾಗೂ ಕ್ಯಾಮೆರಾ

MP3 ಹಾಗೂ ಕ್ಯಾಮೆರಾ

MP3 ಹಾಗೂ ಕ್ಯಾಮೆರಾ

ಯುಎಸ್‌ಬಿ ಕನೆಕ್ಷನ್‌ ಉಪಯೋಗಿಸಿ MP3 ಹಾಗೂ ಕ್ಯಾಮೆರಾಗಳನ್ನು ಚಾರ್ಜ್‌ ಮಾಡಬಹುದಾಗಿದೆ.

ಪೊರ್‌ಟೆಬಲ್‌ ಸಾಧನಗಳಿಗೂ ಲಭ್ಯ

ಪೊರ್‌ಟೆಬಲ್‌ ಸಾಧನಗಳಿಗೂ ಲಭ್ಯ

ಪೊರ್‌ಟೆಬಲ್‌ ಸಾಧನಗಳಿಗೂ ಲಭ್ಯ

ಸೋಲಾರ್‌ ಶರ್ಟ್‌, 'ಸೋಲಾರ್‌ ಪ್ಯಾನೆಲ್ಸ್‌ ಹಾಗೂ ತೆಳುವಾದ ಇಲೆಕ್ಟ್ರಾನಿಕ್ಸ್‌ಗಳನ್ನು ಒಳಗೊಂಡಿದ್ದು' ದಿನನಿತ್ಯ ಧರಿಸುವುದರಿಂದ ಸ್ಮಾರ್ಟ್‌ಫೋನ್‌ ಮತ್ತು ಪೊರ್‌ಟೆಬಲ್‌ ಸಾಧನಗಳನ್ನು ಚಾರ್ಜ್‌ ಮಾಡಬಹುದು ಎಂದು ಶರ್ಟ್‌ನ ಅಫೀಸಿಯಲ್‌ ಸೈಟ್‌ ಹೇಳಿದೆ.

ಬಟ್ಟೆಗಳಂತೆಯೇ ಕ್ಲೀನ್‌ಮಾಡಿ

ಬಟ್ಟೆಗಳಂತೆಯೇ ಕ್ಲೀನ್‌ಮಾಡಿ

ಬಟ್ಟೆಗಳಂತೆಯೇ ಕ್ಲೀನ್‌ಮಾಡಿ

ಈ ಶರ್ಟ್‌ಅನ್ನು ವಾಷಿಂಗ್‌ಮಷಿನ್‌ನಲ್ಲಿ ಇತರ ಬಟ್ಟೆಗಳಂತೆಯೇ ಯಾವುದೇ ವಿಶೇಷ ಸೌಲಭ್ಯ ಅಳವಡಿಸದೇ ಕ್ಲೀನ್ ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Go a few years back and fashion entailed only looking beautiful and being expressive about your style. However, lately the meanings are being re-defined and the paradigm is shifting towards functionality.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot