Just In
- 21 min ago
ಗೂಗಲ್ನ ಈ ತಪ್ಪನ್ನು ಪತ್ತೆ ಮಾಡಿದ್ದಕ್ಕೆ 18 ಲಕ್ಷ ಬಹುಮಾನ ಪಡೆದ ಭಾರತದ ಹ್ಯಾಕರ್ಸ್!
- 37 min ago
ಬಳಕೆದಾರರ ಬಹು ದಿನಗಳ ಕೋರಿಕೆಯನ್ನು ಈಡೇರಿಸಲು ಮುಂದಾದ ವಾಟ್ಸಾಪ್!
- 2 hrs ago
ಸ್ಯಾಮ್ಸಂಗ್ನ ಈ ದೈತ್ಯ 5G ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಮತ್ತೆ ಭಾರೀ ಇಳಿಕೆ!
- 16 hrs ago
ಐಟೆಲ್ನಿಂದ ಮತ್ತೊಂದು ಎಂಟ್ರಿ ಲೆವೆಲ್ ಫೋನ್ ಅನಾವರಣ! ಫೀಚರ್ಸ್ ಹೇಗಿದೆ?
Don't Miss
- News
Breaking; ಬೆಂಗಳೂರಿನಲ್ಲಿ ಪಾಕಿಸ್ತಾನ ಮೂಲದ ಯುವತಿ ಬಂಧನ
- Automobiles
320 ಕಿ.ಮೀ ಮೈಲೇಜ್ ನೀಡುವ ಸಿಟ್ರನ್ ಎಲೆಕ್ಟ್ರಿಕ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭ
- Movies
ಕರಣ್ ಜೋಹರ್ ಜೊತೆ ಜಗಳಕ್ಕೆ ಕಾರಣ ಬಿಚ್ಚಿಟ್ಟ ಕಾರ್ತಿಕ್ ಆರ್ಯನ್
- Finance
ಹೊಸ ಕುಟುಂಬ ಸದಸ್ಯರ ಹೆಸರು ರೇಷನ್ ಕಾರ್ಡ್ಗೆ ಹೀಗೆ ಅಪ್ಡೇಟ್ ಮಾಡಿ
- Sports
ILT20: 38 ಎಸೆತಗಳಲ್ಲಿ ಸ್ಫೋಟಕ 86 ರನ್ ಗಳಿಸಿ ಮಿಂಚಿದ ಕೀರನ್ ಪೊಲಾರ್ಡ್
- Lifestyle
Horoscope Today 23 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಿಎಸ್ಎನ್ಎಲ್ ಪ್ರೀಪೇಡ್ ಸಿಮ್ ಖರೀದಿಗೆ ಮುನ್ನ ಚೆಕ್ ಮಾಡಲೇಬೇಕಾದ 5 ಅಂಶಗಳು
ಭಾರತ್ ಸಂಚಾರ ನಿಗಮ ಲಿಮಿಟೆಡ್(ಬಿಎಸ್‌ಎನ್‌ಎಲ್) ರಾಜ್ಯ ಮಾಲೀಕತ್ದದ ಟೆಲಿಕಾಂ ನೆಟ್‌ವರ್ಕ್ ಕಂಪನಿ ಆಗಿದ್ದು, ದೆಹಲಿಯಲ್ಲಿ ತನ್ನ ಪ್ರಧಾನ ಕಚೇರಿ ಹೊಂದಿದೆ. 2015 ರ ವೇಳೆಗೆ 95 ದಶಲಕ್ಷ ಬಳಕೆದಾರರನ್ನು ಹೊಂದಿದ್ದು, ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಹಳೆಯ ಟೆಲಿಕಾಂ ಸರ್ವೀಸ್ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಂದಹಾಗೆ 2000 ಇಸವಿಯಲ್ಲಿ ಆರಂಭವಾದ ಬಿಎಸ್‌ಎನ್‌ಎಲ್, ಹಲವು ವರ್ಷಗಳು ಕಠಿಣ ಮಾರ್ಗವನ್ನು ಅನುಸರಿಸಿತು. ನಂತರದಲ್ಲಿ ಗ್ರಾಹಕರನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಆಕರ್ಷಕ ಆಫರ್‌ಗಳನ್ನು ನೀಡಲು ಆರಂಭಿಸಿತು. ಜಿಯೋ ಲಾಂಚ್‌ನಂತರ ಈಗ ಪ್ರತಿಯೊಂದು ಟೆಲಿಕಾಂಗಳು ಸಹ ನಾಮುಂದು ತಾಮುಂದು ಎಂದು ಹಲವು ಆಫರ್‌ಗಳನ್ನು ನೀಡುತ್ತಿರುವುದು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ತಿಳಿದಿರುವ ವಿಷಯ.
ಬಿಎಸ್ಎನ್‌ಎಲ್ ಹೊಸ ಆಫರ್ ವಿಶೇಷತೆ ಏನು?
ನೀವು ಬಿಎಸ್‌ಎನ್ಎಲ್ ಟೆಲಿಕಾಂ ನೆಟ್‌ವರ್ಕ್ ಪಡೆಯಲು ಪ್ಲಾನ್ ಮಾಡುತ್ತಿದ್ದೀರಾ? ಅಥವಾ ಹೊಸ ಬಿಎಸ್‌ಎನ್‌ಎಲ್ ಸಿಮ್ ಕಾರ್ಡ್ ಪಡೆಯುತ್ತಿದ್ದೀರಾ? ಹಾಗಿದ್ದಲ್ಲಿ ಬಿಎಸ್‌ಎನ್‌ಎಲ್(BSNL) ಟೆಲಿಕಾಂ ನೆಟ್‌ವರ್ಕ್ ಪಡೆಯುವ ಮುನ್ನ ನೀವು ಅಗತ್ಯವಾಗಿ ತಿಳಿಯಬೇಕಾದ 5 ಮುಖ್ಯ ಅಂಶಗಳಿವೆ. ಈ ಅಂಶಗಳನ್ನು ಲೇಖನದಲ್ಲಿ ಮಿಸ್ ಮಾಡದೇ ಓದಿ ತಿಳಿಯಿರಿ.
ಭಾರತದಾದ್ಯಂತ ಬಿಎಸ್‌ಎನ್‌ಎಲ್ ಉಚಿತ ಇಂಟರ್ನೆಟ್ ಬಳಕೆ ಹೇಗೆ?

ಸಿಮ್ ಕಾರ್ಡ್ ಬೆಲೆ ಜಸ್ಟ್ ರೂ.20
ಇತರೆ ಟೆಲಿಕಾಂಗಳು ಕೇವಲ ಸಿಮ್ ನೀಡಲು ಹೆಚ್ಚು ಹಣ ಪಡೆದು ನಿಮ್ಮ ಪಾಕೆಟ್ ಬರಿದಾಗಿಸುತ್ತವೆ. ಆದರೆ ಬಿಎಸ್‌ಎನ್‌ಎಲ್ ಸಿಮ್ ಕಾರ್ಡ್ ಬೆಲೆ ರೂ. 20 ಆಗಿದ್ದು, 24 ಗಂಟೆಗಳಲ್ಲಿ ಆಕ್ಟಿವೇಟ್ ಆಗುತ್ತದೆ. ನೀವು ಬಿಎಸ್‌ಎನ್‌ಎಲ್ ನ್ಯಾನೋ ಸಿಮ್ ಪಡೆಯಬೇಕಾದಲ್ಲಿ ಕಂಪನಿ ರೂ.59 ಚಾರ್ಜ್ ಮಾಡುತ್ತದೆ.

ನಿಮ್ಮ ನಂಬರ್ ಅನ್ನು ಆನ್‌ಲೈನ್‌ನಲ್ಲಿ ಆಯ್ಕೆ ಮಾಡಬಹುದು
ಬಿಎಸ್‌ಎನ್‌ಎಲ್ ಟೆಲಿಕಾಂ ಕಂಪನಿ ಆನ್‌ಲೈನ್‌ನಲ್ಲಿ ನಂಬರ್ ಆಯ್ಕೆ ಮಾಡಲು ಅವಕಾಶ ನೀಡಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಖರೀದಿಗೆ ಸಿಮ್ ಆಯ್ಕೆಯ ನಂಬರ್‌ನೊಂದಿಗೆ ಕಾಯ್ದಿರಿಸಬಹುದು. ಸಿಮ್ ಕಾರ್ಡ್ ಪಡೆಯಲು ನಿಮ್ಮ ಹತ್ತಿರದ ಬಿಎಸ್‌ಎನ್‌ಎಲ್ ಸ್ಟೋರ್‌ಗೆ ಭೇಟಿ ನೀಡಿ ಡಾಕ್ಯುಮೆಂಟ್ ನೀಡಿರಿ.

4G ಸೇವೆ ಕೇವಲ ಆಯ್ಕೆಗೊಂಡ ಪ್ರದೇಶಗಳಿಗೆ ಮಾತ್ರ
ಅಂದಹಾಗೆ ಬಿಎಸ್‌ಎನ್‌ಎಲ್ ದೇಶದಾದ್ಯಂತ 4G ಸೇವೆ ನೀಡುವ ಲೈಸೆನ್ಸ್ ಹೊಂದಿಲ್ಲ. ಆದ್ದರಿಂದ ಕೆಲವು ಪ್ರದೇಶಗಳಲ್ಲಿ ನೆಟ್‌ವರ್ಕ್ ಡ್ರಾಪ್, ಕರೆ ಸ್ಥಗಿತ, ಸಿಗ್ನಲ್ ಸಮಸ್ಯೆ ಎದುರಿಸಬೇಕಾಗುತ್ತದೆ.

ರಿಲಾಯನ್ಸ್ ಜಿಯೋದೊಂದಿಗೆ ಬಿಎಸ್‌ಎನ್‌ಎಲ್ 4G ಸಪೋರ್ಟ್ ಆಗುತ್ತದೆಯೇ?
ಇತ್ತೀಚೆಗಷ್ಟೆ ಬಿಎಸ್‌ಎನ್‌ಎಲ್ ರೋಮಿಂಗ್ ಪ್ರದೇಶಗಳಲ್ಲಿ, ರಿಲಾಯನ್ಸ್ ಜಿಯೋದ 4G ಸೇವೆಯನ್ನು ನೆಟ್‌ವರ್ಕ್‌ಗಾಗಿ ಉಪಯೋಗಿಸಿಕೊಳ್ಳಲಾಗುತ್ತದೆ. ಬಿಎಸ್‌ಎನ್‌ಎಲ್'ನ 2G ಡಾಟಾ ಸೇವೆಯನ್ನು ರಿಲಾಯನ್ಸ್ ಜಿಯೋ ವಾಯ್ಸ್ ಕರೆ ಸೇವೆ ನೀಡಲು ಬಳಸಿಕೊಳ್ಳುತ್ತದೆ ಎಂದು ಪ್ರಕಟಣೆ ಹೊರಡಿಸಿತ್ತು.

ಸಿಮ್ ಆಕ್ಟಿವೇಶನ್
ಬಿಎಸ್‌ಎನ್‌ಎಲ್ ಸಿಮ್ ಕಾರ್ಡ್ ಆಕ್ಟಿವೇಟ್ ಮಾಡುವುದು ಕಷ್ಟದ ಕೆಲಸವೇನು ಅಲ್ಲ. ಕೇವಲ 24 ಗಂಟೆಗಳ ಒಳಗಾಗಿ ಸಿಮ್ ಆಕ್ಟಿವೇಟ್ ಆಗುತ್ತದೆ. ಸಾಮಾನ್ಯವಾಗಿ ಟೆಲಿ ವೆರಿಫಿಕೇಶನ್ ಟ್ರಾಯ್ ನಿಯಮಗಳ ಪ್ರಕಾರ ಇದ್ದೇ ಇರುತ್ತದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470