ಬೆಂಗಳೂರು ಪೋಲಿಗಳು ಫೇಸ್‌ಬುಕ್‌ನಲ್ಲಿ ಸೆರೆ
ಒಂದು ತಿಂಗಳ ಹಿಂದೆಯಷ್ಟೇ ಫೇಸ್‌ಬುಕ್‌ನಿಂದಾಗಿ ಮುಂಬೈಯಲ್ಲಿ ಪೊಲೀಸರು ಕಳ್ಳನನ್ನು ಸೆರೆಹಿಡಿದಿದ್ದರು.ಈಗ ಫೇಸ್‌ಬುಕ್‌ನಿಂದಾಗಿ ಪೋಲಿ ಪುಂಡರ ವಿರುದ್ಧ ಪೊಲೀಸರು ದಂಡಪ್ರಯೋಗ ಮಾಡಿದ್ದಾರೆ.
ಯುವತಿಯರನ್ನು ಅಸಭ್ಯವಾಗಿ ಚುಡಾಯಿಸಿದ ಪುಂಡರ ವಿರುದ್ದ ಫೇಸ್‌ಬುಕ್‌ನಲ್ಲಿ ವ್ಯಕ್ತವಾದ ಪ್ರತಿಕ್ರಿಯೆಗೆ ಎಚ್ಚೆತ್ತು ಬೆಂಗಳೂರು ಪೊಲೀಸರು ತಪ್ಪಿತಸ್ಥರನ್ನು ಪತ್ತೆಹಚ್ಚಿ ದಂಡಪ್ರಯೋಗ ಮಾಡಿದ್ದಾರೆ.

ಆಗಿದ್ದೇನು?
ಕೋರಮಂಗಲದ ಮೂರನೇ ಬ್ಲಾಕ್‌ನಲ್ಲಿ ಕಳೆದ ಶನಿವಾರ ಯುವತಿಯರು ರಸ್ತೆ ದಾಟುವ ವೇಳೆ ಬೈಕ್‌ನಲ್ಲಿ ಇಬ್ಬರು ಯುವಕರು ಅಸಭ್ಯವಾಗಿ ವರ್ತಿಸಿ ಕೈಸನ್ನೆ ಮಾಡಿದ್ದರು. ಈ ವೇಳೆ ಯುವಕರ ವರ್ತನೆಯನ್ನು ಆಕ್ಷೇಪಿಸಿದ ಸ್ನೇಹಿತ ಅಕ್ಷಯ್ ಎಂಬವರನ್ನು ಈ ಪುಂಡರು ತೆಗಳಿ ಪರಾರಿಯಾಗಿದ್ದರು. ಈ ಸಂದರ್ಭದಲ್ಲಿ ಅಕ್ಷಯ್ ಅವರು ಪರಾರಿಯಗುತ್ತಿದ್ದ ಈ ಪುಂಡರ ಫೋಟೋವನ್ನು ತೆಗೆದು ಫೇಸ್‌ಬುಕ್‌ನಲ್ಲಿರುವ ಬೆಂಗಳೂರು ಪೊಲೀಸರ ಪೇಜ್‌ಗೆ ಪೋಸ್ಟ್ ಮಾಡಿದ್ದರು.
ಸೋಶಿಯಲ್ ನೆಟ್‌ವರ್ಕ್‌ನಲ್ಲೇ ಪೋಸ್ಟ್ ಆಗಿದ್ದೇ ತಡ ಜನರು ಖಂಡಿಸಿ ಪ್ರತಿಕ್ರಿಯಿಸಿದರು. ಪ್ರತಿಕ್ರಿಯೆ ನೀಡಿದ್ದು ಅಲ್ಲದೇ ಅದನ್ನು ಶೇರ್ ಸಹ ಮಾಡತೊಡಗಿದರು. ಜನರ ಪ್ರತಿಕ್ರಿಯೆಯ ಸುರಿಮಳೆಗೆ ಎಚ್ಚೆತ್ತ ಪೊಲೀಸರು ಈ ಪೋಲಿ ಪುಂಡರನ್ನು ಬಂಧಿಸಿ ದಂಡಪ್ರಯೋಗ ಮಾಡಿದ್ದಾರೆ.
ಲಿಂಕ್ : ಈ ರೀತಿಯೂ ಫೋಟೋ ತೆಗೆಯಬಹುದಾ ?
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications