Subscribe to Gizbot

ಫೇಸ್‌ಬುಕ್‌ನಿಂದ ಕಳ್ಳನ ಸೆರೆ

Posted By:

ತನಗೆ ಉದ್ಯೋಗ ನೀಡಿದವನಿಗೆ ಪಂಗನಾಮ ಹಾಕಿ ಪರಾರಿಯಾದ ಅಕೌಂಟೆಟ್‌ನನ್ನು ಪೊಲೀಸರು ಫೇಸ್‌ಬುಕ್‌ನಿಂದ ಬಂಧಿಸಿದ್ದಾರೆ.ಮುಂಬೈ ಎಲೆಕ್ಟ್ರಾನಿಕ್‌ ಅಂಗಡಿಯೊಂದರ ಕೆಲಸಗಾರನಾಗಿದ್ದ ವಿಜಯ್‌ ಚೌಧರಿ ಕಳೆದ ಡಿಸೆಂಬರ್‌ನಲ್ಲಿ ಬ್ಯಾಂಕಿನಲ್ಲಿ ಠೇವಣಿ ಇಡಲು ಅಂಗಡಿ ಮಾಲೀಕ ನೀಡಿದ್ದ 20 ಸಾವಿರ ಹಣದೊಂದಿಗೆ ಪರಾರಿಯಾಗಿದ್ದ.


ಜಿಪಿಎಸ್‌ ಮೂಲಕ ಇವನನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನ ಪಟ್ಟರೂ ಈ ಖದೀಮ ಮೊಬೈಲ್‌ನ್ನು ಸ್ವಿಚ್ ಆಫ್‌ ಮಾಡಿಬಿಟ್ಟಿದ್ದ.ಹಾಗಾಗಿ ಪೊಲೀಸರ ಈ ಪ್ರಯತ್ನವು ವಿಫಲವಾಯ್ತು.

ಫೇಸ್‌ಬುಕ್‌ನಿಂದ ಕಳ್ಳನ ಸೆರೆ

ಆದ್ರೆ ಈ ಖತರ್ನಾಕ್ ಕಳ್ಳ ಮಾತ್ರ ಪ್ರತಿದಿನ ಫೇಸ್‌ಬುಕ್‌ನಲ್ಲಿ ಲೈಕ್‌ ಮತ್ತು ಫೋಟೋಗಳನ್ನು ಶೇರ್‌ ಮಾಡ್ತಿದ್ದ. ಪೊಲೀಸರಿಗೆ ಈ ವಿಷ್ಯ ಗೊತ್ತಾಗಿದ್ದೇ ತಡ  ಸುಂದರ ಹುಡುಗಿಯ ಫೋಟೋ ಇರುವ ಅಕೌಂಟ್‌ ಕ್ರಿಯೆಟ್‌ ಮಾಡಿ ಕಳ್ಳನ ಅಕೌಂಟಿಗೆ ಫ್ರೆಂಡ್‌ ವಿನಂತಿಯನ್ನು ಕಳುಹಿಸಿದ್ದರು.
ಫ್ರೆಂಡ್‌ ವಿನಂತಿಯನ್ನು ಸ್ವೀಕರಿಸಿದ ನಂತ್ರ ಮಾತುಕತೆ ಜಾಸ್ತಿಯಾಗಿ ಒಂದು ದಿನ ಮೊಬೈಲ್ ನಂ ಪಡೆದು ಮುಂಬೈಯಲ್ಲಿರುವ ಲೋವರ್‌ ಪರೇಲ್‌ನಲ್ಲಿ ಭೇಟಿಯಾಗುವಂತೆ ಆತನಿಗೆ ಹೇಳಿದರು. ಪೊಲೀಸರು ಮೊದಲೇ ನಿಗದಿ ಮಾಡಿದ್ದ ಸ್ಥಳಕ್ಕೆ ಬಂದದ್ದೇ ತಡ ಈ ಕಳ್ಳನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.


ಒಟ್ಟಿನಲ್ಲಿ ಫೇಸ್‌ಬುಕ್‌ನಿಂದ ಹೀಗೂ ಕಳ್ಳರನ್ನು ಅರೆಸ್ಟ್‌ ಮಾಡಬಹುದು ಎಂದು ಮುಂಬೈ ಪೊಲೀಸರು ಸಾಧಿಸಿ ತೋರಿಸಿದ್ದಾರೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot