ಆನ್‌ಲೈನ್ ವಂಚಕರೇ ಎಚ್ಚರ..! ಬೆಂಗಳೂರಿನಲ್ಲಿ ಶುರುವಾಗಲಿದೆ ಸೈಬರ್ ಕ್ರೈಂ ಪೊಲೀಸ್‌ ಠಾಣೆ..!!

ಬೆಳೆಯುತ್ತಿರುವ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೂ ಸೈಬರ್‌ ಕ್ರೈಂ ಹೆಚ್ಚಾದ ಹಿನ್ನಲೆಯಲ್ಲಿ ಶುರುವಾಗಲಿದೆ ಸೈಬರ್ ಕ್ರೈಂ ಪೊಲೀಸ್‌ ಠಾಣೆ..!!

|

ದೇಶದಲ್ಲಿ ನೋಟು ನಿಷೇಧದ ನಂತರ ಡಿಜಿಟಲ್ ಬ್ಯಾಂಕಿಗ್ ಹೆಚ್ಚಾದ ಹಿನ್ನಲೆಯಲ್ಲಿ ಆನ್‌ಲೈನ್ ವಂಚನೆ ಹೆಚ್ಚಾಗಿದ್ದು, ಇದನ್ನು ತಡೆಯಲುವಲ್ಲಿ ಸರಕಾರಗಳು ಮುಂದಾಗಿವೆ, ಈ ಹಿನ್ನಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೂ ಸೈಬರ್‌ ಕ್ರೈಂ ಹೆಚ್ಚಾದ ಹಿನ್ನಲೆಯಲ್ಲಿ ಶುರುವಾಗಲಿದೆ ಸೈಬರ್ ಕ್ರೈಂ ಪೊಲೀಸ್‌ ಠಾಣೆ..!!

ಆನ್‌ಲೈನ್ ವಂಚಕರೇ ಎಚ್ಚರ..! ಬೆಂಗಳೂರಿನಲ್ಲಿ ಶುರುವಾಗಲಿದೆ ಸೈಬರ್ ಕ್ರೈಂ ಪೊಲೀಸ್‌

ಓದಿರಿ: ಗೂಗಲ್ ಜೊತೆ ಸೇರಿದ ಜಿಯೋ: ಮುಂದಿನ ಪ್ಲಾನ್‌ ಕೇಳಿದ್ರೆ ಶಾಕ್ ಆಗ್ತಿರಾ..!!

ಸೈಬರ್ ಕ್ರೈಂ ತಡೆಯಲು ಹೊಸದೊಂದು ಠಾಣೆಯನ್ನು ಆರಂಭಿಸಲು ಚಿಂತಿಸಲಾಗಿದ್ದು, ಈ ಠಾಣೆಯಲ್ಲಿ ಒಬ್ಬ ಇನ್‌ಪೆಕ್ಟರ್ ಸೇರಿದಂತೆ ಮೂವರು ಸಬ್‌ ಇನ್‌ಪೆಕ್ಟರ್, 20 ಮಂದಿ ಮುಖ್ಯ ಪೇದೆಗಳು ಹಾಗೂ 40 ಮಂದಿ ಪೇದೆಗಳು ಈ ಸೈಬರ್‌ ಠಾಣೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಇವರೆಲ್ಲರಿಗೆ ವಿಶೇಷ ತರಬೇತಿಯನ್ನು ನೀಡುವುದಲ್ಲದೇ, ಕಂಪ್ಯೂಟರ್ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು ಎಂದು ತಿಳಿದುಬಂದಿದೆ.

ಸಿಲಿಕಾನ್ ಸಿಟಿ ಜಾಗತಿಕವಾಗಿ ಗುರುತಿಸಿಕೊಂಡ ಬೆನ್ನಲೇ ಆನ್‌ಲೈನ್ ವಂಚನೆಗಳು ಹೆಚ್ಚಾಗುತ್ತಿದೆ. ಇಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ನಂಬಿಸಿ ವಂಚನೆ ಮಾಡುವುದು. ಅಲ್ಲದೇ ಬೇರೆ ವ್ಯಕ್ತಗಳನ್ನು ನಿಂದಿಸುವುದು ಸೇರಿದಂತೆ ಬೇರೆ ಕೃತ್ಯಗಳು ನಡೆಯುತ್ತಿದೆ ಈ ಹಿನ್ನಲೆಯಲ್ಲಿ ನಗರದಲ್ಲಿ ಸೈಬರ್ ಕ್ರೈಂ ಠಾಣೆಯನ್ನು ತೆರೆಯಲಾಗುತ್ತಿದೆ.

ಆನ್‌ಲೈನ್ ವಂಚಕರೇ ಎಚ್ಚರ..! ಬೆಂಗಳೂರಿನಲ್ಲಿ ಶುರುವಾಗಲಿದೆ ಸೈಬರ್ ಕ್ರೈಂ ಪೊಲೀಸ್‌

ಓದಿರಿ: ಸ್ಮಾರ್ಟ್‌ಪೋನಿನಲ್ಲಿ ಡಿಲೀಟ್ ಮಾಡಿದ ಫೈಲ್‌ಗಳನ್ನು ಮತ್ತೆ ಪಡೆಯುವುದು ಹೇಗೆ...?

ಬೆಂಗಳೂರಿನಲ್ಲಿ ನಡೆಯುವ ಡೆಬಿಟ್ ಕಾರ್ಡ್‌ ಮತ್ತು ಕ್ರೆಡಿಟ್ ಕಾರ್ಟ್‌ ವಂಚನೆಗಳು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯಲಿರುವ ಎಲ್ಲಾ ಅಪರಾಧಗಳನ್ನು ತಡೆಯಲು ಈ ಠಾಣೆ ಮುಂದಾಗಲಿದೆ, ಅಲ್ಲದೇ ಸಾರ್ವಜನಿಕರು ಇಲ್ಲಿ ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ದೂರು ನೀಡಬಹುದಾಗಿದೆ.

Best Mobiles in India

Read more about:
English summary
The capital city could soon have a cyber police station to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X