Home
ಸುದ್ದಿಜಾಲ

ಗೂಗಲ್ ಜೊತೆ ಸೇರಿದ ಜಿಯೋ: ಮುಂದಿನ ಪ್ಲಾನ್‌ ಕೇಳಿದ್ರೆ ಶಾಕ್ ಆಗ್ತಿರಾ..!!

ಕಡಿಮೆ ಬೆಲೆಗೆ ಗುಣಮಟ್ಟದ 4G ಸಫೋರ್ಟ್ ಮಾಡುವ ಸ್ಮಾರ್ಟ್‌ಪೋನು ಮತ್ತು ಕಡಿಮೆ ಬೆಲೆಗೆ ಸ್ಮಾರ್ಟ್‌ ಟಿವಿಯನ್ನು ಅಭಿವೃದ್ಧಿಪಡಿಸಲು ಮುಂದಾಗಲಿವೆ ಎನ್ನಲಾಗಿದೆ.

By Srinidhi

ವಿಶ್ವದ ಸರ್ಚ್ ಇಂಜಿನ್ ದೈತ್ಯ ಗೂಗಲ್, ಭಾರತದಲ್ಲಿ ದೈತ್ಯಾಕಾರವಾಗಿ ಬೆಳೆಯುತ್ತಿರುವ ಟೆಲಿಕಾಂ ಸಂಸ್ಥೆ ರಿಲಯನ್ಸ್ ಮಾಲೀಕತ್ವದ ಜಿಯೋದೊಂದಿಗೆ ಒಪ್ಪಂದವೊಂದನ್ನು ಮಾಡಿಕೊಂಡಿದ್ದು, ಈ ಮೂಲಕ ಕಡಿಮೆ ಬೆಲೆಗೆ ಗುಣಮಟ್ಟದ 4G ಸಫೋರ್ಟ್ ಮಾಡುವ ಸ್ಮಾರ್ಟ್‌ಪೋನು ಮತ್ತು ಕಡಿಮೆ ಬೆಲೆಗೆ ಸ್ಮಾರ್ಟ್‌ ಟಿವಿಯನ್ನು ಅಭಿವೃದ್ಧಿಪಡಿಸಲು ಮುಂದಾಗಲಿವೆ ಎನ್ನಲಾಗಿದೆ.

ಗೂಗಲ್ ಜೊತೆ ಸೇರಿದ ಜಿಯೋ: ಮುಂದಿನ ಪ್ಲಾನ್‌ ಕೇಳಿದ್ರೆ ಶಾಕ್ ಆಗ್ತಿರಾ..!!

ಓದಿರಿ: ಸ್ಮಾರ್ಟ್‌ಪೋನಿನಲ್ಲಿ ಡಿಲೀಟ್ ಮಾಡಿದ ಫೈಲ್‌ಗಳನ್ನು ಮತ್ತೆ ಪಡೆಯುವುದು ಹೇಗೆ...?

ಸದ್ಯ ಭಾರತೀಯ ಟೆಲಿಕಾಮ್ ವಲಯದಲ್ಲಿ ಹೊಸದೊಂದು ಅಲೆಯನ್ನು ಸೃಷ್ಟಿಸಿರುವ ಜಿಯೋ, ಇನ್ನು ಅನೇಕ ಹೊಸ ಹೊಸ ಯೋಜನೆಗಳನ್ನು ರೂಪಿಸಿಕೊಂಡಿದ್ದು, ಇದಕ್ಕೆ ನೆರವಾಗುವ ಸಲುವಾಗಿ ಗೂಗಲ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸ್ಮಾರ್ಟ್‌ಪೋನು ಮತ್ತು ಸ್ಮಾರ್ಟ್‌ಟಿವಿ ಸಾಫ್ಟ್‌ವೇರ್‌ ಅಭಿವೃದ್ಧಿ ಪಡಿಸಲಿವೆ ಎನ್ನಲಾಗಿದೆ.

ಓದಿರಿ: ಜಿಯೋ, ಏರ್‌ಟೆಲ್, ವೋಡೋಪೋನ್‌ಗಳ ಉಚಿತ ಡೇಟಾ ಪ್ಲಾನ್‌ಗಳ ಹಿಂದಿನ ಮರ್ಮ.?!

ಸ್ಮಾರ್ಟ್ ಸಾಫ್ಟ್‌ವೇರ್:

ಸ್ಮಾರ್ಟ್ ಸಾಫ್ಟ್‌ವೇರ್:

ಇದೇ ಏಪ್ರೀಲ್‌ನಲ್ಲಿ ಜಿಯೋ ಕಡಿಮೆ ವೆಚ್ಚದಲ್ಲಿ ಅತೀ ಹೆಚ್ಚಿನ ಲಾಭ ನೀಡುವಂತಹ ಡಿಟಿಹೆಚ್ ಸೇವೆಯನ್ನು ಆರಂಭಿಸುವ ತವಕದಲ್ಲಿದ್ದು, ಈ ಹಿನ್ನಲೆಯಲ್ಲಿ ಸಾಮಾನ್ಯ ಟಿವಿಗಳನ್ನು ಸ್ಮಾರ್ಟ್ ಆಗುವಂತೆ ಮಾಡಲು ಸಾಫ್ಟ್‌ವೇರ್‌ವೊಂದನ್ನು ಗೂಗಲ್ ನೊಂದಿಗೆ ಸೇರಿ ತಯಾರಿಸಲಿದೆ ಎನ್ನುವ ಮಾತುಗಳು ಕೇಳಿಬಂದಿದೆ.

ಸ್ಮಾರ್ಟ್‌ ಸೆಟಪ್‌ಬಾಕ್ಸ್:

ಸ್ಮಾರ್ಟ್‌ ಸೆಟಪ್‌ಬಾಕ್ಸ್:

ಜಿಯೋ ಆರಂಭಿಸಲಿರುವ ಡಿಟಿಹೆಚ್ ಸೇವೆಗೆ ಗೂಗಲ್ ಹೊಸದೊಂದು ಸಾಫ್ಟ್‌ವೇರ್ ನಿರ್ಮಿಸಿಕೊಡಲಿದ್ದು, ಇದರ ಸಹಾಯದಿಂದ ಜಿಯೋ ಸ್ಮಾರ್ಟ್‌ ಸೆಟಪ್‌ಬಾಕ್ಸ್ ಅನ್ನು ಚೀನಾ ಮೂಲದ ಕಂಪನಿಯ ಸಹಭಾಗಿತ್ವದಲ್ಲಿ ತಯಾರಿಸಲಿದೆ ಎನ್ನಲಾಗಿದ್ದು, ಡಿಟಿಹೆಚ್‌ ಲೋಕದಲ್ಲಿಯೂ ಹೊಸದೊಂದು ಕ್ರಾಂತಿಯನ್ನು ನಡೆಸಲಿದೆ ಎನ್ನಲಾಗಿದೆ.

ಜಿಯೋ ಆಪ್‌ ಅಭಿವೃದ್ಧಿ:

ಜಿಯೋ ಆಪ್‌ ಅಭಿವೃದ್ಧಿ:

ಗೂಗಲ್ ಸಂಸ್ಥೆಯೂ ದೇಶದಲ್ಲಿ ಜಿಯೋ ಸೇವೆಯನ್ನು ಮತ್ತಷ್ಟು ಹೆಚ್ಚಿಸಲು ಮುಂದಾಗಲಿದ್ದು, ಜನರು ಹೆಚ್ಚಿನ ಡೇಟಾ ಬಳಕೆ ಮಾಡಿದಷ್ಟು ಗೂಗಲ್ ಗೆ ಲಾಭವಾಗುವ ಹಿನ್ನಲೆಯನ್ನ ಜಿಯೋ ಹೆಚ್ಚಿನ ಡೇಟಾವನ್ನು ಜನರಿಗೆ ತಲುಪಿಸುವಲ್ಲಿ ಗೂಗಲ್ ನೆರವಾಗಲಿದೆ. ಈ ಹಿನ್ನಲೆಯಲ್ಲಿ ಆಂಡ್ರಾಯ್ಡ್ ಪಾಟ್‌ಫಾರ್ಮ್‌ನಲ್ಲಿ ಜಿಯೋ ಆಪ್‌ ಅನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಗೂಗಲ್ ನೆರವಾಗಲಿದೆ.

 4G VoLTE ಅಭಿವೃದ್ಧಿ:

4G VoLTE ಅಭಿವೃದ್ಧಿ:

ಜಿಯೋ ಜೊತೆಗೂಡಲಿರುವ ಗೂಗಲ್, 4G VoLTE ಸಫೋರ್ಟ್ ಮಾಡುವ ಸ್ಮಾರ್ಟ್‌ಪೋನುಗಳನ್ನು ಅಭಿವೃದ್ಧಿಪಡಿಸಲಿದೆ. ಇದಲ್ಲದೇ ಗೂಗಲ್ ಭಾರತೀಯ ಮಾರುಕಟ್ಟೆಯನ್ನು ಟಾರ್ಗೆಟ್ ಮಾಡಿಕೊಂಡು ಕಡಿಮೆ ಬೆಲೆಯ ಸ್ಮಾರ್ಟ್‌ಪೋನು ಬಿಡುಗಡೆ ಮಾಡುವ ಗುರಿಯನ್ನು ಇಟ್ಟುಕೊಂಡಿದೆ. ಈ ಹಿನ್ನಲೆಯಲ್ಲಿ ಜಿಯೋ ಜೊತೆಗೆ ಸೇರಿ ಹೊಸ ಪೋನುಗಳನ್ನು ಅಭಿವೃದ್ಧಿಪಡಿಸಲಿವೆ.

Best Mobiles in India

English summary
The report said that Google branding will help Reliance Jio reach a larger market, besides ensuring deep integration of the latter's applications into Android platform. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+